For Quick Alerts
ALLOW NOTIFICATIONS  
For Daily Alerts

ಲೋಕಾಯುಕ್ತ ಅಧಿಕಾರಿಗಳು v/s ಕೆಐಎಡಿಬಿ ಭ್ರಷ್ಟರು

By Srinath
|
katta-subramanya-case-officers-congratulated
ಬೆಂಗಳೂರು, ಆ.9: ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಅವರ ಕುಟುಂಬ ವರ್ಗಕ್ಕೆ ಚಾಟಿ ಬೀಸುವ ಮೂಲಕ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್, ರಾಜಕೀಯ ವಲಯದಲ್ಲಿ ನಿಜಕ್ಕೂ ಭಾರಿಸಂಚಲನ ಸೃಷ್ಟಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಯಾರಪ್ಪಾ ಅದು ಜಡ್ಜ್, ಕೊನೆಗೂ ಭ್ರಷ್ಟ ಮಂತ್ರಿಯನ್ನು ಜೈಲಿಗಟ್ಟಿದ್ದು? ಎಂದು ಸುಧೀಂದ್ರ ರಾವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಅಂದಹಾಗೆ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅವರು ಬಳ್ಳಾರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು. ಮೊನ್ನೆ ಏಪ್ರಿಲ್ ನಲ್ಲಿ ಲೋಕಾಯುಕ್ತ ವಿಶೇಷ ಕೋರ್ಟಿಗೆ ವರ್ಗವಾಗಿದ್ದರು. ಗಮನಾರ್ಹವೆಂದರೆ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲೇ ಮಾಜಿ ಸಚಿವರೊಬ್ಬರು ಜೈಲು ಪಾಲಾದ ಅಪರೂಪದ ಪ್ರಕರಣಕ್ಕೆ ಸುಧೀಂದ್ರ ಕಾರಣಕರ್ತರಾಗಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು v/s ಕೆಐಎಡಿಬಿ ಭ್ರಷ್ಟ ಅಧಿಕಾರಿಗಳು: ಇನ್ನು, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರನ್ನೂ ಅಭಿನಂದಿಸಬೇಕು. ಸಹಜವಾಗಿಯೇ ಅವರೂ ಅತೀವ ಸಮಾಧಾನ ವ್ಯಕ್ತಪಡಿಸಿದ್ದಾರೆ: ತನಿಖಾ ಸಂಸ್ಥೆಗಳಿಗೆ ಇಂತಹ ತೀರ್ಪುಗಳು ಪ್ರೋತ್ಸಾಹ, ಉತ್ತೇಜನಕಾರಿಯಾಗಿವೆ. ಬಲಿಷ್ಠ ಕಾನೂನಿನಿಂದ ತಪ್ಪಿಸಿಕೊಳ್ಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ ಎಂದು ಹೆಗ್ಡೆ ಹೇಳಿದ್ದಾರೆ. ಲೋಕಾಯುಕ್ತ ಪರ ಸಮರ್ಥವಾಗಿ ವಾದಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್. ಪ್ರಮೋದ್‌ಚಂದ್ರ ಸಹ ಅಭಿನಂದನೀಯರು.

ಈ ಸಂದರ್ಭದಲ್ಲಿ ಲೋಕಾಯುಕ್ತದಲ್ಲಿ ಅಧಿಕಾರಿಯಾಗಿದ್ದುಕೊಂಡು ಕಟ್ಟಾದ್ವಯರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಸಾಕಷ್ಟು ಶ್ರಮವಹಿಸಿರುವ ಎಸ್ಪಿ ಮಧುಕರ ಶೆಟ್ಟಿ ಅವರನ್ನು ಕೊಂಡಾಡಲೇಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿರುವ ಮಧುಕರ ಅವರನ್ನು ಇಡೀ ಕರ್ನಾಟಕದ ಜನತೆ ಇಲ್ಲಿಂದಲೇ ಅಭಿನಂದಿಸಿದ್ದಾರೆ.

ಹಾಗೆಯೇ, ಸಚಿವರ ವಿರುದ್ಧವೇ ದೂರು ದಾಖಲಿಸಿ ಇಡೀ ಕಟ್ಟೆ ಪುರಾಣಕ್ಕೆ ನಾಂದಿ ಹಾಡಿದ್ದ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ಗೆ ಸಲಾಂ ಹಾಗೂ ಅವರ ಇಡೀ ಪಟಾಲಂಗೆ ನಮೋನಮಃ. ಕನ್ನಡದ ಇಂತಹ ಕಟ್ಟಾಳುಗಳ ಮಧ್ಯೆ ಕೆಟ್ಟಾ ಪ್ರಹಸನಕ್ಕೆ ಹೇತುವಾಗಿರುವ ಕೆಐಎಡಿಬಿ ಭ್ರಷ್ಟ ಅಧಿಕಾರಿಗಳನ್ನು ನೋಡಿ ನಗುವುದೋ, ಅಳುವುದೋ ತೋಚುತ್ತಿಲ್ಲ...

English summary

Katta Subramanya Case- officers congratulated, Katta Day out in Jail, Katta no bail only jail, ಸುಧೀಂದ್ರ, ಹೆಗ್ಡೆ, ಮಂಜುನಾಥ್, ಮಧುಕರ ಶೆಟ್ಟಿಗೆ ಉಘೇ ಉಘೇ...

Katta Subramanya Case- officers congratulated, Katta Day out in Jail, Katta no bail only jail,
Story first published: Tuesday, August 9, 2011, 11:26 [IST]
X
Desktop Bottom Promotion