For Quick Alerts
ALLOW NOTIFICATIONS  
For Daily Alerts

ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ

By * ಎಚ್ಎಸ್ ರೋಹಿಣಿ
|
family-relations-versus-professionalism
ಬಿಎಸ್ಸಿ ಓದುತ್ತಿರುವ ಹುಡುಗಿಯೊಬ್ಬಳಿಗೆ ತಂದೆಯ ಹಣ ಖರ್ಚು ಮಾಡಲು ಮನಸ್ಸಿಲ್ಲ. ಅದಕ್ಕೆ ಅವಳು ಕೊಡುವ ಕಾರಣ ಅಮೆರಿಕದಲ್ಲಿ ತಮ್ಮ ವ್ಯಾಸಂಗಕ್ಕೆ ಬೇಕಾದ ಖರ್ಚಿಗೆ ತಾವೇ ದುಡಿಯುತ್ತಾರೆ.

16ನೇ ವಯಸ್ಸಿಗೆ ಅಲ್ಲಿನ ಯುವಜನ ಉದ್ಯೋಗ ಅರಸುತ್ತಾರೆ. ಅದರಿಂದ ನಮಗೆ ಆತ್ಮವಿಶ್ವಾಸ ಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಹೇಳುತ್ತಾ ಅವಳು ಕಾಲೇಜು, ವೃತ್ತಿ, ಓದು ಮೂರನ್ನೂ ನಿಭಾಯಿಸುವ ಕಸರತ್ತಿಗೆ ಒಡ್ಡಿಕೊಂಡಿದ್ದಾಳೆ.

ಅಪ್ಪ ಗಳಿಸಿದ ರಾಶಿ ಹಣವನ್ನು ಖರ್ಚು ಮಾಡುತ್ತಾ ಕಾಲ ಕಳೆಯುವ ಅತಿ ಶ್ರೀಮಂತ ಹುಡುಗರ ಕತೆ ಇದಲ್ಲ. ಮಧ್ಯಮ ವರ್ಗದ ಯುವಜನರ ಇಂದಿನ ಬದಲಾದ ಮನಸ್ಥಿತಿ. ಪಾಶ್ಚಿಮಾತ್ಯರ ಅನುಕರಣೆಗೆ ಒಳಗಾಗಿ ಇಂಥ ಮನಸ್ಥಿತಿ ತಾಳುತ್ತಿರುವ ಯುವಜನತೆ ಅದರೊಂದಿಗೆ ಅಪ್ಪನ ಪ್ರೀತಿ ಮತ್ತು ಸಲುಗೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?

'ಅಪ್ಪನ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ತಪ್ಪು' ಎನ್ನುವುದು ಎಷ್ಟು ಸರಿಯೋ 'ಅಪ್ಪನಿಂದ ಹಣವನ್ನೇ ಕೇಳಬಾರದು, ಅವರ ಹಣ ನಮ್ಮದಲ್ಲ' ಎನ್ನುವುದು ಅಷ್ಟೇ ತಪ್ಪು. ಇದರಿಂದ ಹಿರಿಯರಿಗೆ ನೋವುಂಟು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿಲ್ಲ.

ಅಪ್ಪ ಹೇಗಾದರೂ ಹಣ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದುಕೊಳ್ಳುವ ಮನಸ್ಸು ಇರುವುದು ಬೇಡ. ಆದರೆ ಮಕ್ಕಳು ತೀರಾ ವೃತ್ತಿಪರತೆ ಬೆಳೆಸಿಕೊಂಡು ಆತ್ಮೀಯ ಸಂಬಂಧಗಳನ್ನು ದೂರ ತಳ್ಳುವುದು ಸರಿಯೇ?

English summary

Family relations versus Professionalism, ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ

HS Rohini from Bangalore is sad about the Family relations versus Professionalism. Rohini questions the mentality of youth who wants to be finacially indepandent from their fathers. 
Story first published: Friday, October 7, 2011, 8:03 [IST]
X
Desktop Bottom Promotion