For Quick Alerts
ALLOW NOTIFICATIONS  
For Daily Alerts

ಪುರುಷನಲ್ಲಿ ಪ್ರತಿ ಹೆಣ್ಣು ಬಯಸುವುದು ಈ ಗುಣಗಳನ್ನು!

|

ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮ. ಬಹಿರಂಗವಾಗಿ ಆಕೆ ಎಷ್ಟೇ ಒರಟು ಸ್ವಭಾವವನ್ನು ಹೊಂದಿದ್ದರೂ ಅಂತರ್ಮುಖಿಯಾಗಿ ಆಕೆ ಮೃದು ಮನಸ್ಸಿನವಳಾಗಿರುತ್ತಾಳೆ. ಆಕೆಯ ಪರಿಸರ, ಅವಳು ಬೆಳೆದು ಬಂದ ವಾತಾವರಣ ಆಕೆಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿರುತ್ತದೆಯಷ್ಟೇ.

ಅದರಲ್ಲೂ ಪ್ರಿಯಕರ, ಪತಿಯ ವಿಷಯದಲ್ಲಿ ಪ್ರತಿ ಹೆಣ್ಣು ಸಹ ನೂರೆಂಟು ಕನಸುಗಳನ್ನು ಕಂಡಿರುತ್ತಾಳೆ. ಮನಬಿಚ್ಚಿ ಏನನ್ನು ಹೇಳಲು ಇಚ್ಚಿಸದ ಆಕೆ, ತಾನು ಏನನ್ನು ಹೇಳದೆಯೇ ತನ್ನ ಮನಸ್ಥಿತಿಯನ್ನು ಅವನೇ ಅರಿಯಬೇಕು, ಅರಿತು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಬಯಸುತ್ತಾಳೆ.

What Women Expect From Their Boyfriend In Relationship

ಪುರುಷರು ಸಂಬಂಧದಲ್ಲಿ ಸಂಗಾತಿಯನ್ನು ಸಂತೋಷವಾಗಿಡುವುದು ಹೇಗೆ?, ಆಕೆ ಯಾವ ಸಂದರ್ಭಗಳಲ್ಲಿ ಏನನ್ನು ಬಯಸುತ್ತಾಳೆ, ನಿಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

1. ಭಾವನೆಗಳನ್ನು ಹಂಚಿಕೊಳ್ಳಬೇಕು

1. ಭಾವನೆಗಳನ್ನು ಹಂಚಿಕೊಳ್ಳಬೇಕು

ಯಾವುದೇ ಆರೋಗ್ಯಯುತವಾಗಿರುವ ಸಂಬಂಧಕ್ಕೆ ಮಾತುಕತೆ ಅಥವಾ ಸಂವಹನ ಅನ್ನೋದು ಬಹಳ ಮುಖ್ಯ.ಇದು ಸಂಬಂಧದ ಒಂದು ಪ್ರಬಲ ಅಂಶ. ನಾವು ಹೆಚ್ಚು ಮಾತನಾಡುವುದಿಲ್ಲ ಎಂಬುದಲ್ಲ ಆದರೆ ನಮ್ಮ ಮಾತುಕತೆ ನಮ್ಮ ದಿನನಿತ್ಯದ ಚಟುವಟಿಕೆ, ಸ್ನೇಹಿತರು ಮತ್ತು ಕುಟುಂಬವನ್ನು ಉತ್ತಮವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೆಲವೊಮ್ಮೆ ಹೆಣ್ಣು, ನನಗೆ ಆತನ ಭಾವನೆಗಳ ಬಗ್ಗೆ ನನಗೆ ತಿಳಿದೇ ಇರುವುದಿಲ್ಲ ಅಥವಾ ಆತನ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ಗೊತ್ತೇ ಆಗುವುದಿಲ್ಲ ಎನ್ನುವುದುಂಟು. ಆಕೆ ತನ್ನ ಸಂಗಾತಿ ಹೆಚ್ಚು ಭಾವನೆಗಳನ್ನು ನನ್ನೊಡನೆ ಹಂಚಿಕೊಳ್ಳಬೇಕು ಎಂದು ಬಯಸುತ್ತಾಳೆ. ಆತನ ಆಫೀಸಿನಲ್ಲಿ ಏನಾಯಿತು, ಆತನ ಆಲೋಚನೆ ಏನು? ಇತ್ಯಾದಿಗಳನ್ನು ತನ್ನೊಡನೆ ಹೇಳಿಕೊಳ್ಳಬೇಕು ಎಂದು ಇಚ್ಚಿಸುತ್ತಾಳೆ.

2. ಹೆಚ್ಚು ಕ್ಷಮಿಸಬೇಕು

2. ಹೆಚ್ಚು ಕ್ಷಮಿಸಬೇಕು

ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಜಗಳ ಕೂಡ ಇದ್ದೇ ಇರುತ್ತದೆ. ಅದಕ್ಕೆ ನಾವು ಕೂಡ ಹೊರತಾಗಿಲ್ಲ. ನಾನು ನಮ್ಮ ನಡುವಿನ ವಾದ-ವಿವಾದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನನಗೆ ಭಯವಾಗುವುದು ಜಗಳದ ನಂತರ ಆತ ಹೇಗೆ ನನ್ನೊಂದಿಗೆ ವರ್ತಿಸುತ್ತಾನೆ ಎಂಬುದು. ಪುರುಷ ಜಗಳದಿಂದ ಹೊರಬರುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾನೆ. ಇದರ ಪರಿಣಾಮವಾಗಿ ಸಾಕಷ್ಟು ಆತಂಕ ಮತ್ತು ಒತ್ತಡ ನಮ್ಮ ನಡುವೆ ಸೃಷ್ಟಿಯಾಗುತ್ತದೆ. ಹೆಚ್ಚು ಕ್ಷಮಿಸುವಿಕೆ ಮತ್ತು ಜಗಳವನ್ನು ಕೂಡಲೇ ಮರೆತು ಮುಂದುವರಿಯುವ ಸ್ವಭಾವವನ್ನು ಹೆಣ್ಣು ಸಂಗಾತಿಯಲ್ಲಿ ಬಯಸುತ್ತಾಳೆ .

3. ಆಗಾಗ ನಿನ್ನನ್ನು ಪ್ರೀತಿಸುತ್ತೇನೆ ಎನ್ನಬೇಕು

3. ಆಗಾಗ ನಿನ್ನನ್ನು ಪ್ರೀತಿಸುತ್ತೇನೆ ಎನ್ನಬೇಕು

"ನಾನು ನಿನ್ನನ್ನು ಪ್ರೀತಿಸುತ್ತೇನೆ" ಎನ್ನುವ ಮೂರು ಪದದ ಮಹತ್ವವನ್ನು ನಾವು ಬಹಳ ಕಡೆಗಣಿಸುತ್ತೇವೆ. ಪ್ರೀತಿಯ ಆರಂಭದಲ್ಲಿ ಐ ಲವ್ ಯು ಎಂದು ಹೇಳದ ದಿನಗಳಿರುವುದಿಲ್ಲ. ದಿನಗಳು ಕಳೆದಂತೆ ಆ ಪದವೇ ಇಬ್ಬರ ನಡುವೆ ಇಲ್ಲವಾಗುತ್ತದೆ. ತನ್ನ ಸಂಗಾತಿ ಆಗಾಗ ಐ ಲವ್ ಯು ಎಂದು ಹೇಳುತ್ತಿರಬೇಕು ಎಂದು ಹೆಣ್ಣು ಬಯಸುತ್ತಾಳೆ.

4. ಬಯಸುವ ಉಡುಗೆ ತೊಡಬೇಕು

4. ಬಯಸುವ ಉಡುಗೆ ತೊಡಬೇಕು

ಇದು ಸ್ವಲ್ಪ ವಿಚಿತ್ರ ಎಂದೆನಿಸಬಹುದು. ಆದರೆ ಕೆಲವೊಂದು ಸಂದರ್ಭದಲ್ಲಾದರೂ ಪುರುಷ ತಾನು ಬಯಸುವಂತೆ ಉಡುಗೆ ತೊಡಬೇಕು ಎಂದು ಬಯಸುತ್ತಾರೆ. ಕುಟುಂಬದ ಫಂಕ್ಷನ್, ಸ್ನೇಹಿತರನ್ನು ಭೇಟಿ ಮಾಡುವ ಸಂದರ್ಭ ಇತ್ಯಾದಿಗಳಲ್ಲಿ ಪುರುಷ ಇಚ್ಚಿಸುವಂತೆ ಮಹಿಳೆ ಉಡುಗೆ ತೊಡುತ್ತಾಳೆ. ಹಾಗೆಯೇ ಆತನೂ ಕೂಡ ತನಗೆ ಇಷ್ಟವಾಗುವಂತೆ ಬಟ್ಟೆ ಧರಿಸಲಿ ಎಂದು ಕೆಲವರು ಇಚ್ಚಿಸುತ್ತಾರೆ.

5. ಎಲ್ಲವನ್ನೂ ತಾಯಿಯ ಬಳಿ ಹೇಳುವುದನ್ನು ನಿಲ್ಲಿಸಬೇಕು

5. ಎಲ್ಲವನ್ನೂ ತಾಯಿಯ ಬಳಿ ಹೇಳುವುದನ್ನು ನಿಲ್ಲಿಸಬೇಕು

ಪುರುಷರು ತಾಯಿಯ ಮಗನಾಗಿರುವುದು ಬೇಡವೆಂದು ಯಾವ ಹೆಣ್ಣು ಬಯಸುವುದಿಲ್ಲ. ಆದರೆ ತನ್ನ ಸ್ಥಾನವನ್ನೂ ಅದಕ್ಕೆ ತಕ್ಕಂತೆ ತುಂಬಿದರೆ ಬೇಸರ ಎನಿಸದು. ಸಂಪೂರ್ಣ ತಾಯಿಯ ಮಗನಾದರೆ ಮತ್ತು ಪ್ರತಿಯೊಂದನ್ನು ಆತನ ತಾಯಿಯ ಬಳಿ ಚರ್ಚೆ ಮಾಡಿದರೆ ಹೆಣ್ಣಿಗೆ ಇಷ್ಟವಾಗುವುದಿಲ್ಲ. ಇದನ್ನು ಕೂಡಲೇ ನಿಲ್ಲಿಸಿ, ಅಗತ್ಯ ವಿಷಯ ಹೊರತು, ನಿಮ್ಮಿಬ್ಬರ ನಡುವಿನ ವಿಷಯ, ಇನ್ನಿತರೆ ವಿಷಯಗಳ ಚರ್ಚೆ ಪತ್ನಿ ಮುಂದೆ ಬೇಡವೇ ಬೇಡ.

6. ಆಗಾಗ ಹೊಗಳುತ್ತಿರಬೇಕು

6. ಆಗಾಗ ಹೊಗಳುತ್ತಿರಬೇಕು

ಇಬ್ಬರು ಪರಸ್ಪರ ಲಘುವಾಗಿ ತೆಗೆದುಕೊಳ್ಳುವುದು ಉತ್ತಮ ಬಾಂಧವ್ಯವಲ್ಲ. ಅದರಲ್ಲೂ ಹೆಣ್ಣನ್ನು ಪ್ರತಿ ಉತ್ತಮ ಕೆಲಸಗಳಿಗೆ, ಅಡಿಗೆ ಚೆನ್ನಗಿದ್ದರೆ, ಚೆನ್ನಾಗಿ ಕಂಡಾಗ, ಸೀರೆ, ಬಟ್ಟೆ ಚೆನ್ನಾಗಿ ಹಾಕಿದ್ದರೆ ಪುರುಷರು ಹೊಗಳಬೇಕು ಎಂದು ಪ್ರತಿ ಹೆಣ್ಣು ಬಯಸುತ್ತಾಳೆ. ಆರಂಭದಲ್ಲಿ ಇದ್ದ ಪ್ರೀತಿ, ಹೊಂದಾಣಿಕೆ ಕೊನೆಯವರೆಗೂ ಹಾಗೆಯೇ ಇರಬೇಕು, ಆತ ನ್ನನನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾಳೆ.

7. ನಂಬಿಕೆ ಇಡಬೇಕು

7. ನಂಬಿಕೆ ಇಡಬೇಕು

ಪುರುಷರು ಪೊಸೆಸ್ಸೀವ್ ಆಗಿರುವುದನ್ನು ಮಹಿಳೆ ಇಷ್ಟ ಪಡುತ್ತಾಳೆ. ಆದರೆ ಕೆಲವೊಮ್ಮೆ ಅದು ಕಿರಿಕಿರಿ ಸಹ ಎನಿಸುತ್ತದೆ. ಅತಿಯಾಗಿ ಪೊಸೆಸ್ಸೀವ್ ಆಗಿ ವರ್ತಿಸಿದಾಗ ಹಿಂಸೆ ಎನ್ನಿಸುತ್ತದೆ. ಆತ ತನ್ನನ್ನು ನಂಬಬೇಕು ಎಂದು ಹೆಣ್ಣು ಬಯಸುತ್ತಾಳೆ. ತಾನು ಇತರೆ ಹುಡುಗ, ಸಹೋದ್ಯೋಗಿಯೊಂದಿಗೆ ಇದ್ದಾಗ ಆತ ಕಿರಿಕಿರಿಗೆ ಒಳಗಾಗಬಾರದು ಎಂದು ಬಯಸುತ್ತಾಳೆ.

English summary

What Women Expect From Their Boyfriend In Relationship

Yes, sometimes a woman might want her partner to do certain things but due to many reasons, she might not be able to convey her thoughts. Communication is the key to a healthy relationship and unfortunately, it has not been our strongest factor. It’s not that we don’t talk much but mostly our conversation centers around our daily activities or friends and family.
X
Desktop Bottom Promotion