For Quick Alerts
ALLOW NOTIFICATIONS  
For Daily Alerts

ಯಶಸ್ವಿ ದಾಂಪತ್ಯಕ್ಕೆ ಹುಡುಗ-ಹುಡುಗಿಯ ವಯಸ್ಸಿನ ಅಂತರ ಎಷ್ಟಿದ್ದರೆ ಉತ್ತಮ?

|

ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ವಯಸ್ಸಿನ ಅಂತರವೂ ಒಂದು. ಇದು ಪ್ರತಿಯೊಂದು ದಂಪತಿಗೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಕೆಲವರಿಗೆ ಕಡಿಮೆ ವಯಸ್ಸಿ ಅಂತರ ಸರಿಯೆನಿಸಿದರೆ, ಇನ್ನೂ ಕೆಲವರಿಗೆ ಹೆಚ್ಚಿನ ವಯಸ್ಸಿನ ಅಂತರ ಚೆನ್ನ ಎಂದು ಅನಿಸುವುದುಂಟು. ಆದರೆ, ದಂಪತಿಗಳ ನಡುವೆ ಹೊಂದಾಣಿಕೆ, ಪ್ರೀತಿ ಹಾಗೂ ಅರ್ಥ ಮಾಡಿಕೊಳ್ಳುವ ಗುಣದ ಆಧಾರದ ಮೇಲೆ ವೈವಾಹಿಕ ಜೀವನದ ಸಾರ ನಿಂತಿದೆ ಎಂಬುದನ್ನು ಮರೆಯಬಾರದು.

ಆದರೆ, ಯಶಸ್ವಿ ದಾಂಪತ್ಯಕ್ಕೆ ವಯಸ್ಸಿನ ಅಂತರ ಎಷ್ಟಿರಬೇಕು? ಎಷ್ಟಿದ್ದರೆ, ಸಮಸ್ಯೆಗಳು ಕಡಿಮೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಯಶಸ್ವಿ ದಾಂಪತ್ಯಕ್ಕೆ ದಂಪತಿಗಳ ನಡುವಿನ ವಯಸ್ಸಿನ ಅಂತರ ಎಷ್ಟಿದ್ದರೆ ಉತ್ತಮ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

20 ವರ್ಷಗಳ ವಯಸ್ಸಿನ ಅಂತರ:

20 ವರ್ಷಗಳ ವಯಸ್ಸಿನ ಅಂತರ:

ಇದು ದಂಪತಿಗಳಾಗುವುದಕ್ಕೆ ಉತ್ತಮ ವಯಸ್ಸಿನ ಅಂತರವಿಲ್ಲ. 20 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಂತರವಿರುವ ಅನೇಕ ಪ್ರಸಿದ್ಧ ಜೋಡಿಗಳು ಇದ್ದರೂ, ಅವರ ನಡುವೆ ವ್ಯತ್ಯಾಸಗಳು ತುಂಬಾ ಹೆಚ್ಚಿರುತ್ತವೆ. ಗುರಿಗಳು, ಮಹತ್ವಾಕಾಂಕ್ಷೆಗಳು ಮತ್ತು ಅಭಿಪ್ರಾಯಗಳಲ್ಲಿ ದೊಡ್ಡ ಬದಲಾವಣೆ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಕ್ಕಳನ್ನು ಪಡೆಯುವ ಅವಶ್ಯಕತೆ; ಹಿರಿಯ ಸಂಗಾತಿಯು ಆದಷ್ಟು ಬೇಗ ಮಕ್ಕಳನ್ನು ಹೊಂದಲು ಬಯಸಬಹುದು ಆದರೆ ಕಿರಿಯ ಸಂಗಾತಿಯು ಈ ಬಗ್ಗೆ ಅಷ್ಟೊಂದು ಉತ್ಸುಕನಾಗಿರುವುದಿಲ್ಲ. ಅವರ ಆಲೋಚನಾ ಮಟ್ಟದಲ್ಲಿನ ವ್ಯತ್ಯಾಸವು ದೊಡ್ಡ ನ್ಯೂನತೆಗಳಲ್ಲಿ ಒಂದಾಗಿದೆ.

10 ವರ್ಷಗಳ ವಯಸ್ಸಿನ ಅಂತರ:

10 ವರ್ಷಗಳ ವಯಸ್ಸಿನ ಅಂತರ:

ಸಂಗಾತಿಗಳ ನಡುವೆ ಸಾಕಷ್ಟು ಪ್ರೀತಿ ಮತ್ತು ಹೊಂದಾಣಿಕೆ ಇದ್ದರೆ 10 ವರ್ಷಗಳ ವಯಸ್ಸಿನ ಅಂತರವಿದ್ದರೂ, ಸುಖವಾಗಿರುವ ಅನೇಕ ದಂಪತಿಗಳಿದ್ದಾರೆ. ಅವರು ತಮ್ಮ ಜೀವನದ ಗುರಿಗಳು, ಮಹತ್ವಾಕಾಂಕ್ಷೆಗಳು ಮತ್ತು ದೃಷ್ಟಿಕೋನಗಳನ್ನು ಪರಸ್ಪರ ಅರ್ಥಮಾಡಿಕೊಂಡರೆ, 10 ವರ್ಷಗಳ ಅಂತರವು ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಸಾಮಾನ್ಯ ದಂಪತಿಗಳಿಗೆ, ಇದು ಸ್ವಲ್ಪ ಕಷ್ಟವಾಗಬಹುದು. ಕೆಲವೊಮ್ಮೆ, ವಯಸ್ಸಿನಲ್ಲಿ ಚಿಕ್ಕವರಿರುವವರು, ವಯಸ್ಸಾದವರ ಮೆಚ್ಯುರಿಟಿ ಮಟ್ಟಕ್ಕೆ ಸರಿಹೊಂದುವುದಿಲ್ಲ. ಅದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು.

5-7 ವರ್ಷಗಳ ವಯಸ್ಸಿನ ಅಂತರ:

5-7 ವರ್ಷಗಳ ವಯಸ್ಸಿನ ಅಂತರ:

ಈ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳಲ್ಲಿ ಕಡಿಮೆ ಘರ್ಷಣೆಗಳು, ತಪ್ಪುಗ್ರಹಿಕೆಗಳು ಮತ್ತು ವಾದಗಳು ಕಂಡುಬರುತ್ತವೆ. ಇಂತಹ ವೈವಾಹಿಕ ಜೀವನದಲ್ಲಿ ಒಬ್ಬರು ಯಾವಾಗಲೂ ಪ್ರಬುದ್ಧರಾಗಿರುತ್ತಾರೆ; ಅವರು ಆ ಸಂಬಂಧವನ್ನು ಮುರಿಯದಂತೆ ಕಾಪಾಡುತ್ತಾರೆ. ಈ ವಯಸ್ಸಿನ ಅಂತರವು ಇತರರಿಗಿಂತ ಹೆಚ್ಚು ಸೂಕ್ತವಾಗಿದೆ ಏಕೆಂದರೆ ಇದು ದಂಪತಿಗಳು ಸ್ಥಿರತೆಯನ್ನು ಸಾಧಿಸಲು ಮತ್ತು ನಿಕಟ ದೃಷ್ಟಿಕೋನದಿಂದ ಪರಸ್ಪರ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಯಸ್ಸಿನ ಅಂತರವು ನಿಜವಾಗಿಯೂ ಮುಖ್ಯವೇ?:

ವಯಸ್ಸಿನ ಅಂತರವು ನಿಜವಾಗಿಯೂ ಮುಖ್ಯವೇ?:

ಹೌದು, ಇತ್ತೀಚಿನ ಕಾಲಘಟ್ಟಕ್ಕೆ ವಯಸ್ಸಿನ ಅಂತರ ತುಂಬಾ ಮುಖ್ಯ. ಏಕೆಂದರೆ, ಪ್ರಸ್ತುತ ಪ್ರಪಂಚವು ಪ್ರತಿ ಹಂತಕ್ಕೂ ಬದಲಾಗುತ್ತಿರುವುದರಿಂದ ಅಭಿಪ್ರಾಯಗಳಲ್ಲಿ ಭಾರಿ ವ್ಯತ್ಯಾಸಗಳು ಕಂಡುಬರುತ್ತವೆ. ಇದರಿಂದ ಮದುವೆ ಎಂಬುದು ದೀರ್ಘಕಾಲ ಉಳಿಯುತ್ತಿಲ್ಲ. ಜೊತೆಗೆ ವಿಚ್ಛೇದನಕ್ಕೂ ಕಾರಣವಾಗುವ ಅಂಶಗಳಲ್ಲಿ ಇದು ಒಂದು ಎನ್ನಬಹುದು.

ಸಾಮಾನ್ಯವಾಗಿ, ವಯಸ್ಸಿನ ಅಂತರ ಹೆಚ್ಚಾದಂತೆ, ದಂಪತಿಗಳು ಎದುರಿಸುವ ಸಮಸ್ಯೆಗಳು ಹೆಚ್ಚು. ಆದ್ದರಿಂದ ಚಿಕ್ಕ ವಯಸ್ಸಿನ ಅಂತರವು ವೈವಾಹಿಕ ಜೀವನಕ್ಕೆ ಉತ್ತಮವಾಗಿದೆ.

English summary

What Is the Best Age Difference For A Successful Marriage in Kannada

Here we talking about What Is the Best Age Difference For A Successful Marriage in Kannada, read on
X
Desktop Bottom Promotion