For Quick Alerts
ALLOW NOTIFICATIONS  
For Daily Alerts

ಈ 4 ಅಭ್ಯಾಸಗಳಿಂದ ವೈವಾಹಿಕ ಜೀವನದಲ್ಲಿ ಸದಾ ಜೀವಂತಿಕೆ ತುಂಬಿರುವುದು!

|

ದಂಪತಿಗಳು ಸ್ವಲ್ಪ ಸಮಯದ ಬಳಿಕ ತಮ್ಮ ಸಂಬಂಧದಲ್ಲಿ ನೀರಸತನ ಅನುಭವಿಸುವುದು ಸಾಮಾನ್ಯ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇದರಿಂದ ಸಂಬಂಧದ ಸಾರಾವೆಂಬುದು ಕಳೆದುಹೋಗುತ್ತದೆ. ಆದರೆ, ದಂಪತಿಗಳು ಕೆಲವು ಅಭ್ಯಾಸಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ಸಂಬಂಧವು ಸದಾ ಜೀವಂತಿಕೆಯಿಂದ ಕೂಡಿರುತ್ತದೆ. ಹಾಗಾದರೆ ಆ ಅಭ್ಯಾಸಗಳಾವುವು ಎಂಬದನ್ನು ನೋಡೋಣ.

ನಿಮ್ಮ ಸಂಗಾತಿಗೆ ಹತ್ತಿರವಾಗಲು ನಿಯಮಿತವಾಗಿ ಮಾಡಬೇಕಾದ 4 ಸರಳ ವಿಷಯಗಳನ್ನು ನಾವು ಇಲ್ಲಿ ತಂದಿದ್ದೇವೆ.

1. ಕೃತಜ್ಞತೆಯನ್ನು ವ್ಯಕ್ತಪಡಿಸಿ:

1. ಕೃತಜ್ಞತೆಯನ್ನು ವ್ಯಕ್ತಪಡಿಸಿ:

ಹೌದು, ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಬಹಳ ದೊಡ್ಡದೇನೂ ಮಾಡಬೇಕಾಗಿಲ್ಲ. ಅವರು ಮಾಡುವ ಸಹಾಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರೆ ಸಾಕು, ಸಹಾಯ ದೊಡ್ಡದಿರಲಿ, ಚಿಕ್ಕದಿರಲಿ ಧನ್ಯವಾದ ಎಂಬ ಪದ ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಸೇರಿಸುವುದು. ಸಂಬಂಧದಲ್ಲಿ ಸಾರಿ ಹಾಗೂ ಥ್ಯಾಂಕ್ಸ್ ಬೇಕಾಗಿಲ್ಲ ಎನ್ನುವ ಮಾತಿದೆ, ಆದರೆ ಆ ಎರಡೇ ಪದಗಳಿಂದ ಸಂಬಂಧ ಉಳಿದುಕೊಂಡ ಉದಾಹರಣೆಗಳು ಅದೆಷ್ಟೋ ಇವೆ. ಆದ್ದರಿಂದ ನಿಮ್ಮ ಸಂಬಂಧದಲ್ಲಿ ಜೀವಂತಿಕೆಯನ್ನು ಉಳಿಸಿಕೊಳ್ಳಲು ಈ ಅಭ್ಯಾಸ ಬೆಳೆಸಿಕೊಳ್ಳಿ.

2. ಆಗಾಗ ಅಪ್ಪುಗೆಯನ್ನು ನೀಡಿ:

2. ಆಗಾಗ ಅಪ್ಪುಗೆಯನ್ನು ನೀಡಿ:

ಯಾವುದೇ ಕಾರಣವಿಲ್ಲದೇ, ಸರ್ಪ್ರೈರೈಸ್ ಆಗಿ ನಿಮ್ಮ ಸಂಗಾತಿಗೆ ಆಗಾಗ ಅಪ್ಪುಗೆಯನ್ನು ನೀಡಿ. ಅಪ್ಪುಗೆಗಳು ನಿಸ್ಸಂದೇಹವಾಗಿ ಹೃದಯವನ್ನು ಬೆಚ್ಚಗಾಗಿಸುತ್ತವೆ. ಯಾದೃಚ್ಛಿಕ ಅಪ್ಪುಗೆಯನ್ನು ನೀಡುವುದು ನೀವು ಕಾಳಜಿಯುಳ್ಳ ಮತ್ತು ಚಿಂತನಶೀಲರಾಗಿರುವ ಸಂದೇಶವನ್ನು ರವಾನಿಸುತ್ತದೆ. ಪ್ರೀತಿಯನ್ನು ತೋರಿಸಲು ಇದು ಉತ್ತಮ ಮಾರ್ಗವಾಗಿದೆ. ಜೊತೆಗೆ ನಿಮ್ಮ ಒಂದು ಅಪ್ಪುಗೆಗೆ ಸಂಗಾತಿಯ ನೋವನ್ನು ಮರೆಸುವ ಶಕ್ತಿಯಿದೆ.

3. ನಗುವನ್ನು ಹಂಚಿಕೊಳ್ಳಿ:

3. ನಗುವನ್ನು ಹಂಚಿಕೊಳ್ಳಿ:

ನೀವು ಮದುವೆಯಾಗಿ ಕೆಲವು ದಿನಗಳಾಗಿರಲಿ ಅಥವಾ ಹಲವಾರು ವರ್ಷಗಲಾಗಿರಲಿ, ಪರಸ್ಪರ ನಗುವನ್ನು ಹಂಚಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮಿಬ್ಬರ ನಡುವೆ ವಿಷಯಗಳು ಹದಗೆಟ್ಟಾಗ ನಿಮ್ಮ ನಡುವೆ ಆದ ಹಾಸ್ಯವನ್ನು ನೆನಪಿಸಿಕೊಳ್ಳಿ. ಹಾಸ್ಯವು ಒತ್ತಡವನ್ನು ನಿವಾರಿಸಲು ಮತ್ತು ಚಿತ್ತವನ್ನು ಬೆಳಗಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ನಗುವಂತೆ ಮಾಡುವ ವಿಷಯವನ್ನು ಹಂಚಿಕೊಳ್ಳಿ. ಅದೇ ರೀತಿ, ಅವನ ಅಥವಾ ಅವಳ ಹಾಸ್ಯಗಳನ್ನು ಕೇಳಿ ನಗುವುದನ್ನು ಮರೆಯದಿರಿ.

4.ಸಂಗಾತಿಯ ಅಭಿಪ್ರಾಯವನ್ನು ಬೆಂಬಲಿಸಿ:

4.ಸಂಗಾತಿಯ ಅಭಿಪ್ರಾಯವನ್ನು ಬೆಂಬಲಿಸಿ:

ನೀವು ಯಾವಾಗಲೂ ನಿಮ್ಮ ಸಂಗಾತಿಯ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಪ್ರಯತ್ನಿಸಬೇಕು. ನೀವು ವಾದಿಸುತ್ತಿದ್ದರೆ ಅಥವಾ ಸರಳವಾಗಿ ಒಪ್ಪದಿದ್ದರೆ, ನಿಮ್ಮನ್ನು ಅವರ ಸ್ಥಾನದಲ್ಲಿ ಇದ್ದು ಯೋಚಿಸಲು ಪ್ರಯತ್ನಿಸಿ. ಭಿನ್ನಾಭಿಪ್ರಾಯವು ಸ್ವಾಭಾವಿಕವಾಗಿದ್ದರೂ, ಅವರು ಏನು ಹೇಳುತ್ತಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಪ್ರದರ್ಶಿಸುವುದು ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ಗೌರವ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.

ಪ್ರತಿದಿನ ಈ ಪ್ರೀತಿಯ ಕ್ರಿಯೆಗಳಲ್ಲಿ ಒಂದನ್ನಾದರೂ ಅಭ್ಯಾಸ ಮಾಡಲು ನೀವು ಬದ್ಧರಾಗಿದ್ದರೆ, ನಿಮ್ಮ ಸಂಬಂಧವು ಬೆಳೆಯುವುದನ್ನು ನೋಡುತ್ತೀರಿ.

English summary

Ways to Feel More Connected to your Spouse every day in Kannada

Here we talking about Ways to feel more connected to your spouse every day in kannada, read on
Story first published: Tuesday, February 15, 2022, 17:41 [IST]
X
Desktop Bottom Promotion