Just In
Don't Miss
- Sports
ಐಎಸ್ಎಲ್: ನಾರ್ಥ್ಈಸ್ಟ್ ಯುನೈಟೆಡ್ಗೆ ಸೋತು ತಲೆಬಾಗಿದ ಬಾಗನ್
- News
18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ
- Movies
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಸಂಬಂಧ ಚಿರಕಾಲ ಉಳಿಯಲು ಈ ರೀತಿ ಮಾಡಿ
ಮನುಷ್ಯನ ಜೀವನದಲ್ಲಿ ಸಂಬಂಧಗಳು ಬೆಸೆದುಕೊಳ್ಳುತ್ತಾ ಹೋಗುತ್ತದೆ. ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಉದಾಹರಣೆಗೆ, ಮಗಳು ಗಂಡನ ಮನೆಗೆ ಅಲ್ಲಿ ಹೊಸಹೊಸ ಸಂಬಂಧಗಳಿಗೆ ಒಗ್ಗಿಕೊಳ್ಳುತ್ತಾ ಹೋಗುತ್ತಾಳೆ. ಆದರೆ ಗಂಡು ಹೆಣ್ಣಿನ ನಡುವಿನ ಪ್ರೀತಿ-ದಾಂಪತ್ಯ ಎಂಬ ಸಂಬಂಧ ಹಾಗಲ್ಲ. ಬಹಳ ಸೂಕ್ಷ್ಮವಾಗಿರುವಂತದ್ದು.
ಸ್ನೇಹದಿಂದ ಶುರುವಾಗಿ, ಪ್ರೀತಿ ತಿರುಗಿ ಮದುವೆ ತಲುಪುವವರೆಗೂ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಕೇವಲ ಕುಟುಂಬದ ಕಡೆಯಿಂದಷ್ಟೆ ಅಲ್ಲ, ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯಗಳು ಸಹ ಸಂಬಂಧ ಮುರಿದು ಹೋಗುವವರೆಗೂ ಮುಂದುವರೆಯಬಹುದು. ಸಮಯ ಸಾಗಿದಂತೆ ಸಂಬಂಧಗಳಿಗೆ ನೀಡುವ ಪ್ರಾಮುಖ್ಯತೆಯು ಬೇರೊಂದು ಸಂಬಂಧಕ್ಕೆ ಬದಲಾಗಬಹುದು. ಅಂದರೆ ಯಾವುದು ನಮಗೆ ಅತಿ ಆಪ್ತ ಸಂಬಂಧವೋ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಜೀವನದ ಪ್ರಯಣದಲ್ಲಿ ನಮ್ಮ ಜತೆಗೆ ಸಾಗಿ ಬರುವಂತಹ ಜೀವನ ಸಂಗಾತಿಯ ಸಂಬಂಧವು ಒಂದಾಗಿದೆ. ಆದರೆ ಕೆಲವೊಂದು ಸಲ ಸಂಗಾತಿಯೊಂದಿಗಿನ ಸಂಬಂಧವು ಜಡ್ಡು ಹಿಡಿದಂತೆ ಆಗುವುದು. ನಾವು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಇದ್ದರೆ ಅದು ಅಲ್ಲೇ ಸತ್ತು ಹೋಗಬಹುದು. ಆದರೆ ಇದೆಲ್ಲದಕ್ಕೂ ಕಾರಣ ನಾವೇ ಎಲ್ಲವೂ ಇರುವುದು ನಮ್ಮ ಕೈಯಲ್ಲಿಯೇ.
ನಾವು ಒಂದು ಸಸಿ ನೆಟ್ಟ ಬಳಿಕ ಅದಕ್ಕೆ ಹೇಗೆ ನೀರು, ಗೊಬ್ಬರ ಹಾಕಿ ಸಲಹುತ್ತೇವೆಯಾ ಅದೇ ರೀತಿಯಾಗಿ ಸಂಬಂಧ ಕೂಡ. ನಾವು ಸಂಬಂಧವನ್ನು ಕಡೆಗಣಿಸಿದರೆ ಆಗ ಅನಾಹುತ ತಪ್ಪಿದಲ್ಲ. ಅದರಲ್ಲೂ ನಮ್ಮ ಕೊನೇ ತನಕ ಇರುವಂತಹ ಸಂಬಂಧವಾಗಿರುವ ಸಂಗಾತಿಯೊಂದಿಗಿನ ಸಂಬಂಧದಲ್ಲಿ ನೀವು ಅದಕ್ಕೆ ಕೊಡಬಹುದಾದ ಪ್ರಾಮುಖ್ಯತೆಗಳು ಇಲ್ಲಿವೆ.

ಹೆಚ್ಚು ಮಾತನಾಡಿ:
ಹೌದು, ಇದು ಅತ್ಯಂತ ಪ್ರಮುಖವಾದುದು. ಯಾಕೆಂದರೆ ಇಂದಿನ ದಿನಗಳಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ನಮಗೆ ಸುತ್ತಲಿನ ಜಗತ್ತಿನ ಅರಿವೇ ಇಲ್ಲದಂತೆ ಇರುತ್ತಾರೆ. ಸಂಬಂಧದ ಮೇಲೂ ಮೊಬೈಲ್ ಎನ್ನುವುದು ಗಾಢ ಪರಿಣಾಮ ಬೀರುತ್ತದೆ. ಹೀಗಾಗಿ ನೀವು ಸಂಗಾತಿ ಜತೆಗೆ ಇರುವ ವೇಳೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಆಕೆಯೊಂದಿಗೆ ಕಾಲ ಕಳೆಯಬೇಕು. ಅಂದರೆ ಸಂಗಾತಿಗೆ ನೀವು ದಿನದಲ್ಲಿ ಒಂದಿಷ್ಟು ಸಮಯ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಸಂಬಂಧದ ಮೇಲಿನ ನಂಬಿಕೆಯನ್ನು ನಿಮ್ಮ ಸಂಗಾತಿ ಕಳೆದುಕೊಳ್ಳಬಹುದು. ಕೇವಲ ಒಂದು ಜೀವಿವಿಲ್ಲದ ವಸ್ತು ನಿಮ್ಮ ಅಮೂಲ್ಯ ಸಂಬಂಧ ಕೆಡಿಸುತ್ತದೆ ಅಂದ್ರೆ ಅದು ನಿಮ್ಮದೇ ತಪ್ಪು.

ಕೇಳುಗರಾಗಿ:
ಸಂಬಂಧದಲ್ಲಿ ಸಂವಹನ ಎಷ್ಟು ಮುಖ್ಯವೋ, ಅದೇ ರೀತಿಯಾಗಿ ಸಂಗಾತಿಯು ಮಾತನಾಡುವ ವೇಳೆ ಕೇಳುಗರಾಗಿರುವುದು ಕೂಡ ಅಷ್ಟೇ ಮುಖ್ಯ. ನೀವು ಸಂಗಾತಿಯ ಮಾತುಗಳನ್ನು ಸರಿಯಾಗಿ ಆಲಿಸಿದರೆ ಆಗ ಅವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದು ಮತ್ತು ನಿಮ್ಮೊಂದಿಗೆ ಅವರು ಮತ್ತಷ್ಟು ಗಾಢವಾಗಿ ಬೆಸೆದುಕೊಳ್ಳುವರು. ನೀವು ಅವರ ಮಾತುಗಳನ್ನು ಕೇಳಲು ತಯಾರಿರದೇ ಹೋದಾಗ ಆಕೆಗೆ ನೋವಾಗಿ ಎಲ್ಲವೂ ಅವಳಲ್ಲೇ ಹುದುಗಿಕೊಂಡು ಮತ್ತಷ್ಟು ನೋವು ತಿನ್ನುತ್ತಾಳೆ. ಇದಕ್ಕೆ ಕಾರಣ ನೀವಾಗಿರುತ್ತೀರಿ.

ಆಗಾಗ ಉಡುಗೊರೆ ನೀಡಿ:
ಸರ್ಪೈಸ್ ಉಡುಗೊರೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ?, ಎಲ್ಲರಿಗೂ ಇಷ್ಟ. ಇನ್ನು ನಿಮ್ಮ ಸಂಬಂಧವನ್ನು ಇನ್ನಷ್ಟು ಸುಂದರವಾಗಿಸಬೇಕಾದರೆ ಕೆಲವೊಂದು ಸಲ ಸಂಗಾತಿಗೆ ಸರ್ಪೈಸ್ ಉಡುಗೊರೆಗಳನ್ನು ತಂದುಕೊಡಿ. ಇದರಿಂದ ನೀವು ಅವರಿಗೆ ಅಚ್ಚರಿ ಮೂಡಿಸುವ ಜತೆಗೆ ಅವರ ಬಗ್ಗೆ ಕಾಳಜಿ ಕೂಡ ಇಟ್ಟಿದ್ದೀರಿ ಎನ್ನುವ ಭಾವನೆ ಮೂಡುವುದು. ಸಂಗಾತಿಗೆ ಇಷ್ಟವಾಗುವಂತಹ ಯಾವುದೇ ಕೆಲಸವನ್ನಾದರೂ ನೀವು ಮಾಡಿ, ನಿಮ್ಮ ಸಂಗಾತಿಯನ್ನು ಖುಷಿಯಾಗಿಡಿ.

ಪರಸ್ಪರರಿಗೆ ಸಮಯ ನೀಡಿ:
ಇದು ಅತಿ ಮುಖ್ಯ, ಯಾಕಂದ್ರೆ ನಿಮ್ಮ ಸಂಗಾತಿಗೆ ನಿಮ್ಮ ಇರುವಿಕೆಯನ್ನು ಸಾಬೀತು ಪಡಿಸಬೇಕು. ಮದುವೆಯಾದ ಆರಂಭದಲ್ಲಿ ನೀವಿಬ್ಬರು ಜತೆಯಾಗಿ ಹೆಚ್ಚು ಸಮಯ ಕಳೆದಿರಬಹುದು. ಆದರೆ ಮದುವೆ ಬಳಿಕ ನಿಮಗೆ ಇಂತಹ ಅವಕಾಶ ಸಿಗದೆ ಇರಬಹುದು. ಇದಕ್ಕಾಗಿ ನೀವು ಎಷ್ಟೇ ವ್ಯಸ್ತರಾಗಿದ್ದರೂ ಪರಸ್ಪರ ಜತೆಯಾಗಿ ಕಳೆಯಲು ಸಮಯ ಮೀಸಲಿಡಿ. ಕೆಲವೊಮ್ಮೆ ನಾವು ವೃತ್ತಿ ಮಧ್ಯೆ ಸಮಯ ಹೊಂದಿಸಲು ಕಷ್ಟಪಡುತ್ತಿದ್ದರೂ ವೃತ್ತಿಗಿಂತಲೂ ಮಿಗಿಲಾಗಿರುವ ಸಂಬಂಧಕ್ಕೆ ನಿರ್ದಿಷ್ಟವಾದ ಸಮಯ ಮೀಸಲಿಡಿ.

ಆಗಾಗ ಪ್ರವಾಸಕ್ಕೆ ಹೋಗಿ:
ನಿಮ್ಮ ಮಾಮೂಲಿ ಮನೆ ಹಾಗೂ ಕಚೇರಿಯ ನಡುವೆ ಜೀವನವು ತುಂಬಾ ಬೇಸರ ಮೂಡಿಸುವುದು ಸಹಜ. ಇಂತಹ ಸಮಯದಲ್ಲಿ ಸಂಗಾತಿಗಳು ಹೊರಗಡೆ ಸುತ್ತಾಡಲು ಹೋದರೆ ಆಗ ಖಂಡಿತವಾಗಿಯೂ ಪ್ರೀತಿ ಹಾಗೂ ಭಾಂದವ್ಯವು ಮತ್ತಷ್ಟು ಬೆಸೆಯುವುದು. ಯಾವುದೇ ಪ್ರವಾಸಕ್ಕೆ ಹೋಗುವುದಿದ್ದರೂ ಅದು ನಿಮಗಿಬ್ಬರಿಗೆ ಖುಷಿ ನೀಡುವಂತಿರಲಿ. ನಿಮ್ಮ ಸಂಗಾತಿಗೆ ಇಷ್ಟವಾದ ಜಾಗವನ್ನು ಅರಿತು ಅಲ್ಲಿಗೆ ಕರೆದುಕೊಂಡು ಹೋದರೆ ಉತ್ತಮ.

ವಿಶೇಷ ದಿನಗಳನ್ನು ನೆನಪಿಡಿ:
ಸಾಮಾನ್ಯವಾಗಿ ಹುಡುಗರು ತಮ್ಮ ಮದುವೆಯಾದ ದಿನ, ಪತ್ನಿಯ ಹುಟ್ಟಿದ ಹಬ್ಬದ ದಿನಾಂಕ ಇಂತಹ ಪ್ರಮುಖ ದಿನಗಳನ್ನೇ ಮರೆತುಬಿಡುವರು. ಆದರೆ ಇದು ಒಳ್ಳೆಯದಲ್ಲ. ನೀವು ವಿಶೇಷವಾಗಿ ಭೇಟಿ ಮಾಡಿದ ದಿನ ಇತ್ಯಾದಿ ದಿನಾಂಕಗಳನ್ನು ನೆನಪಿಟ್ಟುಕೊಂಡು ಅದನ್ನು ಸಂಗಾತಿಗೆ ಹೇಳಿದರೆ ಆಗ ಖಂಡಿತವಾಗಿಯೂ ನಿಮ್ಮಲ್ಲಿನ ಅನ್ಯೋನ್ಯತೆ ಹೆಚ್ಚಾಗುವುದು. ಯಾಕಂದ್ರೆ ಹೆಣ್ಣು ಇಂತಹ ಚಿಕ್ಕಚಿಕ್ಕ ವಿಚಾರಗಳನ್ನೇ ಅತೀ ಹೆಚ್ಚು ನಿರೀಕ್ಷೆ ಮಾಡುವುದು, ಇದೇ ಆಕೆಗೆ ಖುಷಿ ನೀಡುವುದು.

ಆಸಕ್ತಿಗಳಿಗೆ ಪ್ರಾಮುಖ್ಯತೆ ನೀಡಿ:
ನಮ್ಮ ಹವ್ಯಾಸ ಹಾಗೂ ಅಭ್ಯಾಸಗಳಿಗೆ ಹೆಚ್ಚು ಒತ್ತು ನೀಡುವಂತೆ ಸಂಗಾತಿಯ ಆಸಕ್ತಿಗಳನ್ನು ಬೆಳೆಸಲು ಅವಕಾಶ ನೀಡಬೇಕು. ಅವರಿಗೆ ಯಾವುದಾದರೂ ವಿಚಾರದಲ್ಲಿ ಆಸಕ್ತಿಯಿದ್ದರೆ ಆಗ ನೀವು ಅವರನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲವಾಗಿ ನಿಲ್ಲಿ. ಇದರಿಂದ ಅವರಿಗೆ ಸುರಕ್ಷಿತ ಭಾವನೆ ಬರುವುದು ಮಾತ್ರವಲ್ಲದೆ, ನಿಮ್ಮ ಮೇಲಿನ ಗೌರವವು ಹೆಚ್ಚಾಗುತ್ತದೆ.