For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಗಾತಿಯೊಡನೆ ಎ‌ಷ್ಟೇ ಕ್ಲೋಸ್ ಇದ್ದರೂ ಸಹ ಈ ವಿಚಾರಗಳನ್ನು ಬಾಯಿಬಿಡ್ಬೇಡಿ!

|

ಮದುವೆಯಾದ ಹೊಸತರಲ್ಲಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಖುಷಿ ಮತ್ತು ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇಬ್ಬರೂ ಸಹ ತುಂಬಾ ಖುಷಿಯಾಗಿ ಸೊಗಸಾದ ಜೀವನ ನಡೆಸುತ್ತಿರುತ್ತೀರಿ. ಸಣ್ಣ - ಪುಟ್ಟ ಜಗಳಗಳು ಆಗಾಗ ನಡೆದರೂ ಕೂಡ ಅದು ದೊಡ್ಡದಾಗುವುದಿಲ್ಲ. ಬಹಳ ಬೇಗನೆ ಎಲ್ಲವನ್ನೂ ಮರೆತು ನಿಮ್ಮ ಹೊಸ ಜೀವನದಲ್ಲಿ ಪ್ರತಿ ದಿನವೂ ಹೊಸದಾಗಿ ಬದುಕಲು ಇಬ್ಬರೂ ಇಷ್ಟ ಪಡುವಿರಿ. ಆದರೆ ದಿನ ಕಳೆದಂತೆ ನಿಮ್ಮಿಬ್ಬರ ಮಧ್ಯೆ ಪ್ರೀತಿ ಮತ್ತು ಸಲುಗೆ ಹೆಚ್ಚಾದಂತೆ ಜಗಳಗಳು ಮತ್ತು ವಿರಸಗಳು ಸಹ ಕಂಡು ಬರುತ್ತವೆ. ಅಷ್ಟು ಚೆನ್ನಾಗಿದ್ದ ನಿಮ್ಮಿಬ್ಬರ ಮಧ್ಯೆ ಇದ್ದಕ್ಕಿದ್ದಂತೆ ಈ ರೀತಿ ಆಗಲು ಕೆಲವೊಮ್ಮೆ ಕಾರಣಗಳನ್ನು ನೀವೇ ಸ್ವತಃ ತಂದುಕೊಂಡಿರುತ್ತೀರಿ ಎಂಬುದರಲ್ಲಿ ಎರಡನೇ ಮಾತಿಲ್ಲ.

ನಿಮ್ಮ ಸಂಗಾತಿಯ ಮೇಲಿನ ಅತಿಯಾದ ನಂಬಿಕೆ, ಸಲುಗೆಯಿಂದ ನಿಮ್ಮೆಲ್ಲಾ ವಿಚಾರಗಳನ್ನು ನಿಮ್ಮ ಸಂಗಾತಿಯ ಜೊತೆಗೆ ಹಂಚಿಕೊಂಡು ಬಿಡುತ್ತೀರಿ. ಆದರೆ ಮುಂದೆ ಇದೇ ನಿಮ್ಮ ಬಾಳಲ್ಲಿ ಮುಳ್ಳಾಗಬಹುದು. ಯಾಕಂದ್ರೆ ನೀವು ಹೇಳಿಕೊಂಡ ಯಾವುದೋ ವಿಚಾರ ಮುಂದೆ ನಿಮ್ಮ ನಡುವಿನ ಮನಸ್ತಾಪಕ್ಕೆ ಕಾರಣವಾಗಬಹುದು. ಅಂತಹ ವಿಚಾರಗಳು ನಿಮ್ಮ ಮಾತಿನ ನಡುವೆ ಬಂದು ನಿಮ್ಮ ಸಂತೋಷಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ನಿಮ್ಮ ಯಾವೆಲ್ಲಾ ಸ್ವಂತ ಖಾಸಗಿ ವಿಚಾರಗಳನ್ನು ನಿಮ್ಮ ಸಂಗಾತಿಯ ಜೊತೆ ಹಂಚಿಕೊಂಡರೆ ಏನೆಲ್ಲಾ ತೊಂದರೆಯಾಗಬಹುದು ಎಂಬುದರ ಕುರಿತು ಈ ಲೇಖನದಲ್ಲಿ ಒಂದು ಸಣ್ಣ ಮೆಲಕು ಹಾಕಲಾಗಿದೆ.

ಪಾಸ್ವಾರ್ಡ್:

ಪಾಸ್ವಾರ್ಡ್:

ಈಗಿನ ಕಾಲದಲ್ಲಿ ಜನರು ಓದಿ ವಿದ್ಯಾವಂತರಾಗಿದ್ದರೂ ಸಹ ಹಲವು ಬಾರಿ ಮೋಸ ಹೋಗುತ್ತಾರೆ. ಹೊಸದಾಗಿ ತಮ್ಮ ಬಾಳಿನಲ್ಲಿ ಕಾಲಿಟ್ಟ ತಮ್ಮ ಸಂಗಾತಿಯ ಜೊತೆಗಿನ ಅತಿಯಾದ ಸಲುಗೆಯಿಂದ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲು ಮುಂದಾಗುತ್ತಾರೆ. ಅದು ತಮ್ಮ ಕೆಲಸಕ್ಕೆ ಸಂಬಂಧಪಟ್ಟ, ಹಾಗೆ ಕಂಪನಿಯವರು ನೀಡಿದ ಇ - ಮೇಲ್ ಪಾಸ್ವರ್ಡ್, ಬ್ಯಾಂಕ್ ಅಕೌಂಟ್ ವಿವರಗಳು, ತಮ್ಮ ಮೊಬೈಲ್ ಪಾಸ್ವರ್ಡ್ ಇತ್ಯಾದಿ ಆಗಿರಬಹುದು. ಆದರೆ ಇದೆಲ್ಲವೂ ಆರಂಭದಲ್ಲಿ ಚೆನ್ನಾಗಿದೆ ಎನಿಸಿದರೂ ನಂತರದಲ್ಲಿ ನಿಮ್ಮಿಬ್ಬರ ಸಂಬಂಧ ಹದಗೆಡಲು ಇದೇ ಒಂದು ಕಾರಣವಾಗಿ ಬದಲಾಗುತ್ತದೆ. ಹೊಸದಾಗಿ ಸಿಕ್ಕಂತಹ ಸಂಗಾತಿಯ ಜೊತೆ ಖುಷಿಯಾಗಿ ಜೀವನ ಕಳೆಯಲು ಅಗತ್ಯವಾಗಿ ಬೇಕಾಗಿರುವುದು ಪ್ರೀತಿ ಮತ್ತು ನಂಬಿಕೆ ಮಾತ್ರ. ಹಾಗಾಗಿ ನಿಮ್ಮಿಬ್ಬರ ಸಂಬಂಧ ಅಷ್ಟಕ್ಕೆ ಮಾತ್ರ ಸೀಮಿತವಾಗಿರಲಿ. ಇನ್ನು ಸಂಪೂರ್ಣವಾಗಿ ನಿಮ್ಮ ಸಂಗಾತಿಗೆ ಬಗ್ಗೆ ನಿಮಗೆ ಅರಿವಿಲ್ಲದೆ ಇರುವುದರಿಂದ ನಿಮ್ಮ ಖಾಸಗಿತನಕ್ಕೆ ದಕ್ಕೆ ತರುವಂತಹ ಯಾವುದೇ ವಿಚಾರಗಳನ್ನು ಹಂಚಿಕೊಂಡು ನಂತರ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ.

ನಿಮ್ಮ ಹಿಂದಿನ ಸಂಬಂಧದ ಬಗ್ಗೆ:

ನಿಮ್ಮ ಹಿಂದಿನ ಸಂಬಂಧದ ಬಗ್ಗೆ:

ಸಾಮಾನ್ಯವಾಗಿ ಹೊಸದಾಗಿ ಮದುವೆಯಾದ ಗಂಡು ಅಥವಾ ಹೆಣ್ಣಿಗೆ ತನ್ನ ಸಂಗಾತಿಯ ಇದುವರೆಗಿನ ಜೀವನವನ್ನು ಹೇಗಾದರೂ ಮಾಡಿ ತಿಳಿದುಕೊಳ್ಳಬೇಕು ಎನ್ನುವ ಕಾತುರ ಇರುತ್ತದೆ. ಹಾಗಾಗಿ ಮದುವೆಯಾದ ಕೆಲವು ದಿನಗಳಲ್ಲಿ ನಿಮ್ಮ ಈ ಹಿಂದಿನ ಜೀವನದ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುವಂತೆ ಬೇಡಿಕೆ ಇಡುವ ಪ್ರಶ್ನೆ ಬರಬಹುದು. ಆದರೆ ನೀವು ಇದನ್ನು ತಿರಸ್ಕರಿಸುವ ಹಾಗಿಲ್ಲ. ಅದೇ ರೀತಿ ಸಂಪೂರ್ಣವಾಗಿ ನಿಮ್ಮ ಬಗ್ಗೆ ಎಲ್ಲವನ್ನೂ ಹೇಳಿ ನಂತರ ನಿಮ್ಮ ಇರುವ ಸಂಬಂಧವನ್ನು ಹಾಳು ಮಾಡಿಕೊಳ್ಳುವ ಗೋಜಿಗೆ ಹೋಗಬೇಡಿ. ಒಂದು ವೇಳೆ ನಿಮ್ಮ ಇದುವರೆಗಿನ ಜೀವನದಲ್ಲಿ ಬೇರೆ ಯಾವುದೇ ವ್ಯಕ್ತಿ ನಿಮ್ಮ ಬಾಳಿನಲ್ಲಿ ಬಂದು ಹೋಗಿದ್ದರೆ ಅದನ್ನು ಸಾಧ್ಯವಾದಷ್ಟು ಮುಚ್ಚಿಡಿ. ಏಕೆಂದರೆ ನಿಮ್ಮ ಮನಸ್ಸಿನಲ್ಲಿ ಸಂಪೂರ್ಣವಾಗಿ ನನ್ನ ಬಗ್ಗೆ ಎಲ್ಲವನ್ನೂ ಹೇಳಿಬಿಟ್ಟರೆ ನನ್ನ ಸಂಗಾತಿಗೆ ನನ್ನ ಮೇಲೆ ಅತೀವವಾದ ಪ್ರೀತಿ ಮತ್ತು ನಂಬಿಕೆ ಬೆಳೆಯಬಹುದು ಎನ್ನುವ ಭಾವನೆ ಇರುತ್ತದೆ. ಆದರೆ ನಿಮ್ಮ ಸಂಪೂರ್ಣ ಕಥೆಯನ್ನು ಕೇಳಿದ ಬಳಿಕ ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ನಡೆಯುತ್ತಿರುವ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಇದು ನಿಮ್ಮ ಸಂಬಂಧವನ್ನು ಅತ್ಯಂತ ಸುಲಭವಾಗಿ ಮತ್ತು ಬಹಳ ಬೇಗನೆ ಹಾಳು ಮಾಡಿಬಿಡಬಹುದು. ಹಾಗಾಗಿ ಇಂತಹ ವಿಚಾರಗಳಲ್ಲಿ ನೀವು ತುಂಬಾ ಎಚ್ಚರಿಕೆ ವಹಿಸಿ ಮಾತನಾಡುವುದು ಒಳ್ಳೆಯದು.

ಕೌಟುಂಬಿಕ ಸಮಸ್ಯೆಗಳು:

ಕೌಟುಂಬಿಕ ಸಮಸ್ಯೆಗಳು:

ನಮ್ಮ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಂಡರೆ ನಮ್ಮ ಮನಸ್ಸು ಸಾಕಷ್ಟು ಹಗುರಾಗುತ್ತದೆ ಎಂದು ನಮಗೆಲ್ಲ ಗೊತ್ತು. ಆದರೆ ನಿಮ್ಮ ಸಂಗಾತಿಯ ಜೊತೆ ನಿಮ್ಮ ಕುಟುಂಬದ ಯಾವುದೇ ಸಮಸ್ಯೆಗಳನ್ನು ಹಂಚಿಕೊಳ್ಳಲು ಹೋಗಬೇಡಿ. ಏಕೆಂದರೆ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ. ಅದಕ್ಕೆ ಕಾರಣ ಅವರು ಬೆಳೆದು ಬಂದಿರುವ ವಾತಾವರಣ. ನಿಮ್ಮನ್ನು ಮದುವೆಯಾಗುವುದಕ್ಕೆ ಮುಂಚೆ ನಿಮ್ಮ ಸಂಗಾತಿ ಒಂದು ವೇಳೆ ಯಾವುದೇ ಕಷ್ಟಗಳನ್ನು ತಿಳಿಯದೆ ತುಂಬಾ ಖುಷಿಯಾಗಿ ಕಾಲ ಕಳೆದು ಬಂದಿದ್ದರೆ, ಅವರ ಮನಸ್ಸಿನಲ್ಲಿ ನನ್ನ ಸಂಗಾತಿಯ ಜೊತೆ ನಾನು ಇದುವರೆಗೂ ಜೀವಿಸಿದ ಬದುಕಿಗಿಂತ ಇನ್ನೂ ಹೆಚ್ಚು ಖುಷಿ ಅನುಭವಿಸಬೇಕು ಎನ್ನುವುದು ಮಾತ್ರ ತಲೆಯಲ್ಲಿ ಇರುತ್ತದೆ. ಹಾಗಾಗಿ ಅಂತಹ ಸಂಗಾತಿಗಳಿಗೆ ನೀವು ನಿಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳುತ್ತಾ ಕುಳಿತರೆ ಅವರಿಗೆ ಕೇಳುವ ತಾಳ್ಮೆಯಾಗಲೀ ಅಥವಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಬುದ್ಧಿ ಶಕ್ತಿಯಾಗಲಿ ಇರುವುದಿಲ್ಲ. ಏಕೆಂದರೆ ನಿಮ್ಮ ಕುಟುಂಬದ ಸಮಸ್ಯೆಗಳು ಅವರ ಜೀವನಕ್ಕೆ ಅಥವಾ ಅವರ ಕುಟುಂಬಕ್ಕೆ ಹೋಲಿಸಿ ನೋಡಿದರೆ ಸಾಕಷ್ಟು ವಿರುದ್ಧ ದಿಕ್ಕಿನಲ್ಲಿ ಇದ್ದಂತೆ ಭಾಸವಾಗುತ್ತವೆ. ಆದ್ದರಿಂದ ಅಪ್ಪಿತಪ್ಪಿಯೂ ಹೊಸದಾಗಿ ಮದುವೆಯಾದ ಸಂದರ್ಭದಲ್ಲಿ ನಿಮ್ಮ ಕುಟುಂಬದ ಯಾವುದೇ ಬೇಸರ ತರಿಸುವ ವಿಚಾರಗಳನ್ನು ನಿಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳಲು ಹೋಗಬೇಡಿ. ಒಂದು ವೇಳೆ ನಿಮ್ಮಂತೆ ನಿಮ್ಮ ಸಂಗಾತಿ ಕೂಡ ತುಂಬಾ ಕಷ್ಟದಿಂದ ಮೇಲೆ ಬಂದಿದ್ದರೆ, ಆಗ ಸರಾಗವಾಗಿ ನಿಮ್ಮ ಕಷ್ಟಗಳ ಬಗ್ಗೆ ಅವರಿಗೆ ಅರ್ಥವಾಗುತ್ತದೆ.

ಹಣಕಾಸಿನ ವಿಚಾರಗಳು:

ಹಣಕಾಸಿನ ವಿಚಾರಗಳು:

ಮೊದಲೇ ಹೇಳಿದಂತೆ ಮದುವೆಯಾದ ಹೊಸತರಲ್ಲಿ ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬೇಡಿ. ನಿಮ್ಮ ಬ್ಯಾಂಕ್ ಖಾತೆಯ ವಿವರ, ನಿಮ್ಮ ಸಂಬಳದ ವಿಚಾರ, ನೀವು ಬೇರೆ ಕಡೆ ಬಂಡವಾಳ ಹೂಡಿರುವ ವಿಚಾರಗಳು, ಇತ್ಯಾದಿಗಳನ್ನು ನಿಮ್ಮ ಹೊಸ ಸಂಬಂಧದಲ್ಲಿ ಹಂಚಿಕೊಳ್ಳಬೇಡಿ. ದುಡ್ಡಿನ ವಿಚಾರ ಆಗಿರುವುದರಿಂದ ಇದು ಮುಂಬರುವ ದಿನಗಳಲ್ಲಿ ತೊಂದರೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರಂಭದಲ್ಲಿ ನೀವು ನಿಮ್ಮ ಸಂಗಾತಿಯ ಜೊತೆ ಮಾತನಾಡುವ ಸಂದರ್ಭದಲ್ಲಿ ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು ಮತ್ತು ಯಾವ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬಾರದು ಎನ್ನುವ ಬಗ್ಗೆ ಸಾಕಷ್ಟು ಜಾಗರೂಕತೆ ವಹಿಸಿ.

ನಿಮ್ಮ ದೈಹಿಕ ಕಾರ್ಯಗಳು:

ನಿಮ್ಮ ದೈಹಿಕ ಕಾರ್ಯಗಳು:

ನಿಮ್ಮ ರಜಾದಿನಗಳು ಅಥವಾ ಹೊಟ್ಟೆನೋವು, ಜ್ವರ ಹೀಗೆ ಸಣ್ಣ ವಿಚಾರಗಳನ್ನು ನಿಮ್ಮ ಸಂಗಾತಿಯೊಡನೆ ಹಂಚಿಕೊಳ್ಳದಿರುವುದು ಒಳ್ಳೆಯದು. ಯಾಕಂದ್ರೆ ಅವರಿಗೆ ಅವರ್ದೇ ಸಾಕಷ್ಟು ತಲೆನೋವುಗಳಿರುತ್ತವೆ. ಅಂತಹ ಸಂದರ್ಭದಲ್ಲಿ ನೀವು ಅವ್ರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತವೆ. ಇಂಥಹ ಸಣ್ಣ ಪುಟ್ಟ ನೋವುಗಳನ್ನು ನೀವೇ ಸರಿಪಡಿಸಿಕೊಳಬೇಕು. ಕೆಲವ್ರು ಲೈಂಗಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಕತ್ತಲಲ್ಲಿ ಅನ್ಯೋನ್ಯವಾಗಿರುತ್ತಾರೆ. ಅಂತಹವರನ್ನು ಗೌರವಿಸಿ.

English summary

Things You Should Not Share with your Partner

Here we explain about Things You Should Not Share with your Partner, Read on.
Story first published: Thursday, December 17, 2020, 16:11 [IST]
X
Desktop Bottom Promotion