For Quick Alerts
ALLOW NOTIFICATIONS  
For Daily Alerts

ಮದುವೆಯಾಗೋ ಪ್ಲ್ಯಾನ್ ಇದ್ಯಾ? ಈಗಲೇ ಈ ವಿಚಾರಗಳನ್ನು ಸಂಗಾತಿಯೊಡನೆ ಚರ್ಚಿಸಿ

|

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುವುದು ಅತ್ಯಂತ ಪ್ರಾಮುಖ್ಯತೆ ಪಡೆದಿರುವ ವಿಚಾರವಾಗಿದೆ. ಆಧುನಿಕ ಕಾಲದಲ್ಲಿ ಹುಡುಗ ಹಾಗೂ ಹುಡುಗಿ ತಮಗೆ ಬೇಕಾಗಿರುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಈ ಜೀವನ ಸಂಗಾತಿಯ ಆಯ್ಕೆಯಲ್ಲೇ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಯಾಕೆಂದರೆ ಒಂದು ತಪ್ಪಿನಿಂದ ಜೀವನವಿಡಿ ಕೊರಗಬೇಕಾಗಿ ಬರಬಹುದು.

ನಿಮ್ಮ ಸಂಗಾತಿ ಆಯ್ಕೆ ಮಾಡುವ ಮೊದಲು ಅವರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕು ಹಾಗೂ ಮುಂದೆ ಅವರು ಜೀವನಸಂಗಾತಿಯಾಗಲು ಯೋಗ್ಯರೇ ಎಂಬುದನ್ನು ಮೊದಲೇ ನಿರ್ಧರಿಸಬೇಕು. ಇಲ್ಲವಾದಲ್ಲಿ ನಿಮ್ಮ ಜೀವನ, ವೃತ್ತಿ ಎಲ್ಲವೂ ನಿರ್ನಾಮವಾಗಿ ಹೋಗಬಹುದು. ಆದರೆ ಸಂಗಾತಿಯ ಆಯ್ಕೆಯು ಉತ್ತಮವಾಗಿದ್ದರೆ ಆಗ ನೀವು ಇನ್ನಷ್ಟು ಯಶಸ್ಸನ್ನು ಪಡೆಯಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಮದುವೆಗೆ ಮೊದಲು ನೀವು ಸಂಗಾತಿಯಾಗುವವರಲ್ಲಿ ಕೇಳಬಹುದಾದ ಪ್ರಶ್ನೆಗಳು ಈ ರೀತಿಯಾಗಿ ಇದೆ.

ಇಷ್ಟ-ಕಷ್ಟ:

ಇಷ್ಟ-ಕಷ್ಟ:

ಪರಸ್ಪರರ ಇಷ್ಟ -ಕಷ್ಟ ಅರಿಯುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಮುಂದೆ ಇದೇ ನಿಮ್ಮ ಜೀವನದಲ್ಲಿ ಮುಳುವಾಗಬಹುದು. ಪರಸ್ಪರರ ಹವ್ಯಾಸ, ಇಷ್ಟ ಹಾಗೂ ಇಷ್ಟವಿಲ್ಲದೆ ಇರುವುದನ್ನು ಮೊದಲು ತಿಳಿಯಬೇಕು. ಸಂಗಾತಿ ಜತೆಗೆ ನೀವು ಇದರ ಬಗ್ಗೆ ಮಾತನಾಡುವುದು ಒಳ್ಳೆಯದು. ಯಾಕೆಂದರೆ ಒಂದೇ ರೀತಿಯ ಆಯ್ಕೆ ಇದ್ದರೆ ಆಗ ನಿಮಗೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸುಲಭವಾಗುವುದು. ಅವರ ಜೀವನಶೈಲಿ, ಇಷ್ಟದ ಅಡುಗೆ ಮತ್ತು ಪ್ರವಾಸದ ಬಗ್ಗೆ ತಿಳಿಯಿರಿ. ಇದು ಮುಂಎ ನಿಮಗೆ ಅವರ ಆಸೆಗಳನ್ನು ಈಡೇರಿಸಲು ಸಹಾಯವಾಗುತ್ತದೆ.

​ಮದುವೆ ಬಳಿಕ ವೃತ್ತಿ:

​ಮದುವೆ ಬಳಿಕ ವೃತ್ತಿ:

ಇದು ಈಗಿನ ಕಾಲದಲ್ಲಿ ಕೇಳಲೇಬೇಕಾದ ಮಾತು. ಆದರೆ ಮದುವೆ ಬಳಿಕ ಉದ್ಯೋಗಕ್ಕೆ ಹೋಗಬಾರದು ಎಂದು ಹೇಳುವ ಕಾಲ ಈಗಿಲ್ಲ. ಎಲ್ಲರೂ ತಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಬೇಕು ಎಂದು ಬಯಸುವರು ಮತ್ತು ಪತ್ನಿಯು ಉದ್ಯೋಗಕ್ಕೆ ಹೋಗಲಿ ಎಂದು ಹೇಳುವರು. ಆದರೆ ನೀವು ಮದುವೆಗೆ ಮೊದಲು ಸಂಗಾತಿಗೆ ಕೆಲಸಕ್ಕೆ ಹೋಗಲು ಇಷ್ಟವಿದೆಯಾ ಎಂದು ತಿಳಿಯುವುದು ಉತ್ತಮ. ಯಾಕಂದ್ರೆ ಕೆಲ ಹಿರಿಯರಿಗೆ ಸೊಸೆ ಮನೆ ಬಿಟ್ಟು ಹೊರಹೋಗಿ ದುಡಿಯುವುದು ಇಷ್ಟವಿರುವುದಿಲ್ಲ.

​ಸಸ್ಯಹಾರಿ-ಮಾಂಸಹಾರಿ:

​ಸಸ್ಯಹಾರಿ-ಮಾಂಸಹಾರಿ:

ಆಹಾರ ಆಯ್ಕೆಯು ವೈಯಕ್ತಿಕವಾಗಿ ಇರುವಂತಹದ್ದು. ಇದನ್ನು ಯಾರ ಮೇಲೂ ಹೇರಲು ಆಗದು. ಹೀಗಾಗಿ ನೀವು ಮದುವೆಗೆ ಮೊದಲು ನಿಮ್ಮ ಆಹಾರ ಕ್ರಮದ ಬಗ್ಗೆ ತಿಳಿಸುವುದು ಉತ್ತಮ. ನಿಮ್ಮ ಸಂಗಾತಿಯು ಸಸ್ಯಾಹಾರಿಯಾಗಿ, ನೀವು ಮಾಂಸಾಹಾರಿಯಾಗಿದ್ದರೆ ಆಗ ಭವಿಷ್ಯದಲ್ಲಿ ತೊಂದರೆ ಆಗುವುದು. ಹೀಗಾಗಿ ನೀವು ಆಹಾರದ ಆಯ್ಕೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುಂದಿನ ಆಯ್ಕೆ ಮಾಡಿ. ಪ್ರೀತಿ ಹಾಗೂ ಆರೋಗ್ಯವು ಭಿನ್ನ ವಿಚಾರ. ಇದರ ಬಗ್ಗೆ ನೀವು ಗಮನಿಸುವುದು ಅಗತ್ಯ.

​ಮದುವೆ ಬಳಿಕ ಸ್ನೇಹಿತರು:

​ಮದುವೆ ಬಳಿಕ ಸ್ನೇಹಿತರು:

ವಿವಾಹದ ಬಳಿಕ ಸ್ನೇಹಿತರನ್ನೇ ಮತ್ತಷ್ಟು ಹಚ್ಚಿಕೊಳ್ಳುವುದು ಕೆಲವರಿಗೆ ಇಷ್ಟವಾಗದು. ಅದರಲ್ಲೂ ಹುಡುಗಿಯರಿಗೆ ಪುರುಷ ಸ್ನೇಹಿತರಿರುವುದು ಕೆಲವೊಂದು ಪತಿಯರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಮದುವೆ ಬಳಿಕ ಪತ್ನಿಗೆ ಯಾರಾದರೂ ಒಳ್ಳೆಯ ಹುಡುಗ ಸ್ನೇಹಿತನಿದ್ದರೆ ಆಗ ಸಮಸ್ಯೆ ಕಾಡಬಹುದು. ಇದಕ್ಕಾಗಿ ಇಂತಹ ವಿಚಾರವನ್ನು ಮದುವೆಗೆ ಮೊದಲೇ ತೀರ್ಮಾನಿಸುವುದು ಸೂಕ್ತ. ಆಗ ಯಾವುದೇ ಗೊಂದಲಗಳಿರುವುದಿಲ್ಲ. ಹಾಗಂತ ಸ್ನೇಹಿತರನ್ನು ಮರೆತುಬಿಡುವುದು ಸರಿಯಲ್ಲ.

​ಕುಟುಂಬ ಯೋಜನೆ:

​ಕುಟುಂಬ ಯೋಜನೆ:

ಇಂದಿನ ಕಾಲದಲ್ಲಿ ಈ ಚರ್ಚೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಮುಂದೆ ದಂಪತಿಗಳ ನಡುವೆ ವೈಮನಸ್ಸಿಗೆ ಕಾರಣವಾಗುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಮದುವೆ ಬಳಿಕ ತಕ್ಷಣವೇ ಮಕ್ಕಳು ಬೇಕು ಎಂದು ಕೆಲವು ದಂಪತಿ ಇಷ್ಟುಪಟ್ಟರೆ, ಇನ್ನು ಕೆಲ ದಂಪತಿಯು ಇದನ್ನು ಮುಂದೂಡುತ್ತಾರೆ. ಮಗುವಿನ ಬಗ್ಗೆ ಅಭಿಪ್ರಾಯವೇನು ಎಂದು ತಿಳಿಯಿರಿ. ಇಬ್ಬರ ನಿಲುವು ಒಂದೇ ರೀತಿಯಾಗಿ ಇಲ್ಲದೆ ಇದ್ದರೆ ಆಗ ಸಮಸ್ಯೆಯು ಕಾಡುವುದು. ಮಕ್ಕಳ ಪಾಲನೆ, ವಿದ್ಯಾಭ್ಯಾಸ ಇತ್ಯಾದಿಗಳ ಬಗ್ಗೆ ಕೂಡ ಮೊದಲೇ ಆಲೋಚನೆ ಮಾಡಿ.

​ಬಟ್ಟೆ ಹಾಗೂ ಆಭರಣಗಳು:

​ಬಟ್ಟೆ ಹಾಗೂ ಆಭರಣಗಳು:

ಮದುವೆ ಆದ ಮೇಲೆ ಸಾಮಾನ್ಯವಾಗಿ ಹೆಚ್ಚಾಗಿ ಹುಡುಗರು ಮನೆಯಲ್ಲಿ ತಂದೆತಾಯಿಯ ಮುಂದೆ ಸಂಪ್ರದಾಯಬದ್ಧ ಬಟ್ಟೆ ಧರಿಸಬೇಕೆಂದು ಬಯಸುವುದು ಸಹಜ. ಆದರೆ ನೀವು ಮದುವೆಗೆ ಮೊದಲು ವಿದೇಶಿ ಬಟ್ಟೆ ಈಗಿನ ಫ್ಯಾಶನ್ ಎಂದು ತಿಳಿಸಿ. ಮದುವೆ ಬಳಿಕ ನಿಮಗೆ ಈ ಬಗ್ಗೆ ವಾಗ್ವಾದ ಆಗುವ ಮೊದಲು ಇದನ್ನು ಮೊದಲೇ ಬಗೆಹರಿಸಿಕೊಂಡರೆ ತುಂಬಾ ಒಳ್ಳೆಯದು. ಮದುವೆ ಬಳಿಕ ಬೋಲ್ಡ್ ಆಗಿ ಕಾಣಿಸುವಂತಹ ಬಟ್ಟೆ ಧರಿಸುವ ಬಗ್ಗೆಯೂ ನೀವು ಸರಿಯಾದ ತೀರ್ಮಾನ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ತಂದೆ ತಾಯಿ ಹಾಗೂ ಹೆಂಡತಿಯ ನಡುವೆ ಸಿಲುಕಿ ಬೀಳಬಹುದು.

English summary

Things You Must Talk About Before You Get Married In Kannada

There are things you must talk about before you get married. Topics that have a major impact on the way you plan and live your life. Here w told about Things You Must Talk about before You Get Married in Kannada, have a look
Story first published: Monday, January 11, 2021, 14:00 [IST]
X