For Quick Alerts
ALLOW NOTIFICATIONS  
For Daily Alerts

ಪುರುಷರ ಲೈಂಗಿಕ ಆರೋಗ್ಯ: ತಿಳಿಯಲೇಬೇಕಾದ 5 ಅಂಶಗಳು

By Manju
|

ನಾನಾ ತರದ ಲೈಂಗಿಕ ಸಮಸ್ಯೆಗಳು ಪುರುಷರನ್ನುಕಾಡುತ್ತವೆ. ಈ ಲೈಂಗಿಕ ಸಮಸ್ಯೆಗಳಿಂದಾಗಿ ಲೈಂಗಿಕ ತೃಪ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಶೀಘ್ರ ಸ್ಖಲನ, ಇನ್ನು ಕೆಲವರಿಗೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ನಪುಂಸಕತೆ ಮುಂತಾದ ಸಮಸ್ಯೆ ಕಾಡುವುದು.

men sexual health

ಲೈಂಗಿಕ ಸಮಸ್ಯೆ ಉಂಟಾದಾಗ ಇದರಿಂದ ಮುಜುಗರ ಪಟ್ಟು ಕೂರುವುದರಿಂದ ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗುವುದು. ಲೈಂಗಿಕ ಸಮಸ್ಯೆಗಳು ಕಾಣಿಸಿಕೊಂಡಾಗ ಸಂಕೋಚ ಪಟ್ಟು ಕೂರುವ ಬದಲು ಲೈಂಗಿಕ ತಜ್ಞರನ್ನು ಭೇಟಿಯಾಗಿ ಅವರಲ್ಲಿ ಸಮಸ್ಯೆಗಳನ್ನು ಹೇಳಿದರೆ ಅವರು ಸೂಕ್ತ ಚಿಕಿತ್ಸೆಯ ಮೂಲಕ ನಿಮ್ಮ ಸಮಸ್ಯೆಯನ್ನು ಹೋಗಲಾಡಿಸುತ್ತಾರೆ.

ಪುರುಷರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಶೀಘ್ರ ಸ್ಖಲನ

ಪುರುಷರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಶೀಘ್ರ ಸ್ಖಲನ

40 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ರಕ್ತದೊತ್ತಡ, ನಾಳೀಯ ಸಮಸ್ಯೆಗಳಿಂದಾಗಿ ಪುರುಷರಲ್ಲಿ ಈ ಸಮಸ್ಯೆ ಉಂಟಾಗುವುದು. ಇನ್ನು ಧೂಮಪಾನ, ಇತರ ಆರೋಗ್ಯ ಸಮಸ್ಯೆಗೆ ತೆಗೆದುಕೊಳ್ಳುವ ಔಷಧಗಳು, ಮದ್ಯಪಾನ, ಸರ್ಜರಿ ಇವೆಲ್ಲಾ ಕೂಡ ಶೀಘ್ರ ಸ್ಖಲನ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.

ಮಾನಸಿಕ ಸಮಸ್ಯೆ ಅಥವಾ ಅತಿಯಾದ ಮಾನಸಿಕ ಒತ್ತಡದಿಂದ ತೀವ್ರ ಸ್ಖಲನ ಉಂಟಾಗುವುದು

ಮಾನಸಿಕ ಸಮಸ್ಯೆ ಅಥವಾ ಅತಿಯಾದ ಮಾನಸಿಕ ಒತ್ತಡದಿಂದ ತೀವ್ರ ಸ್ಖಲನ ಉಂಟಾಗುವುದು

ಅತಿಯಾದ ಮಾನಸಿಕ ಒತ್ತಡ, ಖಿನ್ನತೆ ಅಥವಾ ಇತರ ಮಾನಸಿಕ ಸಮಸ್ಯೆಗಳಿಂದಾಗಿ ಪುರುಷರಲ್ಲಿ ತೀವ್ರ ಸ್ಖಲನ ಉಂಟಾಗುವುದು. ಮಾನಸಿಕ ತಜ್ಞರನ್ನು ಕಂಡು ಖಿನ್ನತೆ ಅಥವಾ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದರೆ ಈ ಸಮಸ್ಯೆಯಿಂದ ಹೊರಬರಬಹುದು. ಇನ್ನು ಅತಿಯಾದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಧ್ಯಾನ ಅಥವಾ ಪ್ರಾಣಯಾಮ ಮಾಡುವ ಮೂಲಕ ಮಾನಸಿಕ ಒತ್ತಡವನ್ನು ಹೊರದಬ್ಬಿ.

ಮೂರನೇ ಒಂದರಷ್ಟು ಬಂಜೆತನ ಸಮಸ್ಯೆಗೆ ಪುರುಷರ ನಪುಂಸಕತೆ ಕಾರಣವಾಗಿದೆ

ಮೂರನೇ ಒಂದರಷ್ಟು ಬಂಜೆತನ ಸಮಸ್ಯೆಗೆ ಪುರುಷರ ನಪುಂಸಕತೆ ಕಾರಣವಾಗಿದೆ

ಬಂಜೆತನಕ್ಕೆ ಮಹಿಳೆಯರಲ್ಲಿರುವ ಸಮಸ್ಯೆಗಳೇ ಕಾರಣವಲ್ಲ, ಮೂರು ಬಂಜೆತನ ಕೇಸ್‌ಗಳಲ್ಲಿ ಒಂದು ಕೇಸ್ ಪುರುಷ ಬಂಜೆತನಕ್ಕೆ ಸಂಬಂಧಿಸಿದ್ದು ಆಗಿರುತ್ತದೆ. ಲ್ಯಾಬ್ ಪರೀಕ್ಷೆ, ವೀರ್ಯಾಣುಗಳ ಪರೀಕ್ಷೆ ಮೂಲಕ ಪುರುಷರಲ್ಲಿ ಬಂಜೆತನಕ್ಕೆ ಕಾರಣವನ್ನು ತಿಳಿದುಕೊಳ್ಳಲಾಗುವುದು. ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಕೆಲವರಲ್ಲಿ ಈ ಸಮಸ್ಯೆ ಹೋಗಲಾಡಿಸಬಹುದಾಗಿದೆ.

ಪೆರೋನಿ ಕಾಯಿಲೆ ಕೂಡ ಸಮಸ್ಯೆಯನ್ನು ಉಂಟು ಮಾಡುವುದು

ಪೆರೋನಿ ಕಾಯಿಲೆ ಕೂಡ ಸಮಸ್ಯೆಯನ್ನು ಉಂಟು ಮಾಡುವುದು

ಶಿಶ್ದ ನಾಳಗಳಲ್ಲಿ ಗಾಯ ಅಥವಾ ರಕ್ತಸ್ರಾವ ಉಂಟಾದರೆ ಲೈಂಗಿಕ ಸಮಸ್ಯೆ ಕಂಡು ಬರುವುದು. ಈ ಸಮಸ್ಯೆಯನ್ನು ಸ್ಕ್ಯಾನಿಂಗ್ ಮೂಲಕ ಪತ್ತೆ ಹಚ್ಚಲಾಗುವುದು. ಪೆರೋನಿ ಕಾಯಿಲೆಗೆ 10-12 ತಿಂಗಳು ಚಿಕಿತ್ಸೆ ಪಡೆದರೆ ಆರೋಗ್ಯಕರ ಲೈಂಗಿಕ ಜೀವನಕ್ಕೆ ಮರಳ ಬಹುದಾಗಿದೆ.

ವ್ಯಾಸೆಕ್ಟಮಿ ಲೈಂಗಿಕ ಸಮಸ್ಯೆ ಉಂಟು ಮಾಡುವುದಿಲ್ಲ

ವ್ಯಾಸೆಕ್ಟಮಿ ಲೈಂಗಿಕ ಸಮಸ್ಯೆ ಉಂಟು ಮಾಡುವುದಿಲ್ಲ

ವ್ಯಾಸೆಕ್ಟಮಿ ಎನ್ನುವುದು ಪುರುಷರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯಾಗಿದೆ. ಸಂತಾನೋತ್ಪತ್ತಿಯನ್ನು ಶಾಶ್ವತವಾಗಿ ತಡೆಗಟ್ಟಲು ಇದೊಂದು ತೀರ ಚಿಕ್ಕ ಶಸ್ತ್ರಚಿಕಿತ್ಸೆಯಾಗಿದೆ. ಈ ಶಸ್ತ್ರ ಚಿಕಿತ್ಸೆ ಪುರುಷರ ಲೈಂಗಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

English summary

Things to Know About Men Sexual Health in Kannada

There are a number of sexual health issues among men that can interfere with his sex life, including erectile dysfunction, problems with ejaculation, infertility and others.
X
Desktop Bottom Promotion