For Quick Alerts
ALLOW NOTIFICATIONS  
For Daily Alerts

ನಿಮ್ಮ ಗೆಳತಿಯನ್ನೇ ಪ್ರೀತಿಸುವ ಪ್ರೇಮಿಯ ಸಂಕೇತಗಳಿವು

|

ನಿಮ್ಮ ಸಂಗಾತಿ ಮತ್ತು ಸ್ನೇಹಿತೆ ಪರಸ್ಪರ ಸ್ನೇಹಪರ ಸಂಬಂಧವನ್ನು ಹೊಂದಿರುವುದನ್ನು ನೀವು ಸಾಮಾನ್ಯವಾಗಿ ಕಾಣಬಹುದು. ವಾಸ್ತವವಾಗಿ, ಅವರು ಉತ್ತಮ ರೀತಿಯ ಸಂಬಂಧವನ್ನು ಹೊಂದಿದ್ದರೆ ನಿಮಗೆ ಸಂತೋಷವಾಗಬಹುದು. ತಮ್ಮ ಸ್ನೇಹಿತನ ಸಂಗಾತಿಯ ಮೇಲೆ ಮೋಹವನ್ನು ಬೆಳೆಸಿಕೊಳ್ಳುವ ಜನರಿರಬಹುದು.

 These Signs In Your Boyfriend Is In Love With Your Friend

ಆದರೆ ನಿಮ್ಮ ಗೆಳೆಯ ನಿಮ್ಮ ಸ್ನೇಹಿತೆಯ ಹಿಂದೆ ಬೀಳುತ್ತಿದ್ದಾನೆ ಎಂದು ನೀವು ಕಂಡುಕೊಂಡಿದ್ದೀರೆ? ಹಾಗಿದ್ದರೂ, ನಿಮ್ಮ ಗೆಳೆಯ ನಿಜವಾಗಿಯೂ ನಿಮ್ಮ ಸ್ನೇಹಿತೆಯೊಂದಿಗೆ ಕೆಲವು ಪ್ರಣಯ ಭಾವನೆಗಳನ್ನು ಬೆಳೆಸಿಕೊಂಡಿದ್ದಾನೆಯೇ ಎಂದು ಕಂಡುಹಿಡಿಯುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಈ ಲಕ್ಷಣಗಳ ಮೂಲಕ ಕಂಡು ಹಿಡಿಯಬಹುದು.

1. ಅವನು ಅವಳೊಂದಿಗೆ ಸುತ್ತಾಡಲು ಇಚ್ಛಿಸುತ್ತಾನೆ

1. ಅವನು ಅವಳೊಂದಿಗೆ ಸುತ್ತಾಡಲು ಇಚ್ಛಿಸುತ್ತಾನೆ

ನಿಮ್ಮ ಸಂಗಾತಿ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಲು ನಿಮ್ಮನ್ನು ಪ್ರೋತ್ಸಾಹಿಸುವುದು ಸಾಮಾನ್ಯವಾದ ವಿಷಯ. ಆದರೆ ನಿಮ್ಮ ಸ್ನೇಹಿತೆಯನ್ನು ನಿಮ್ಮ ಮನೆಗೆ ವಾರಾಂತ್ಯದಲ್ಲಿ ಕಳೆಯಲು ಆಹ್ವಾನಿಸಲು ನಿಮ್ಮನ್ನು ಪ್ರೋತ್ಸಾಹಿಸುವುದು ಅಥವಾ ನೀವು ಹೊರಗೆ ಹೋಗುವಾಗ ಅಥವಾ ಏನನ್ನಾದರೂ ಯೋಜಿಸುವಾಗ ಅವಳು ಜೊತೆಗಿದ್ದರೆ, ಅವನು ಅವಳನ್ನು ಆಗಾಗ್ಗೆ ನೋಡಲು ಆಸಕ್ತಿ ಹೊಂದಿದ್ದಾನೆ ಎಂದು ತೋರಿಸುತ್ತದೆ. ಅವನು ಯಾವಾಗಲೂ ಅವಳನ್ನು ನಿಮ್ಮ ಯೋಜನೆಗಳಲ್ಲಿ ಸೇರಿಸಿಕೊಳ್ಳುವುದು ಅವಳನ್ನು ಬಿಟ್ಟುಬರುವ ಮತ್ತು ಕರೆದುಕೊಂಡುಬರುವ ಕೆಲಸವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವುದು ಅವನ ಆಸಕ್ತಿಯನ್ನು ತೋರಿಸುತ್ತದೆ.

2. ಅವನು ಆಗಾಗ್ಗೆ ಅವಳೊಂದಿಗೆ ಚೆಲ್ಲಾಟವಾಡುತ್ತಾನೆ

2. ಅವನು ಆಗಾಗ್ಗೆ ಅವಳೊಂದಿಗೆ ಚೆಲ್ಲಾಟವಾಡುತ್ತಾನೆ

ಮೊಟ್ಟ ಮೊದಲನೆಯದಾಗಿ, ನೀವು ಈಗಾಗಲೇ ಯಾರೊಂದಿಗಾದರೂ ಸಂಬಂಧದಲ್ಲಿದ್ದೀರಿ ಎಂದಾದರೆ ಬೇರೆ ಯಾರೊಂದಿಗೂ ಚೆಲ್ಲಾಟವಾಡುವುದು ಅಷ್ಟು ಒಳ್ಳೆಯದಲ್ಲ. ಇದು ನಿಮ್ಮ ಸಂಗಾತಿಗೆ ನೀವು ಸಂಪೂರ್ಣವಾಗಿ ಬದ್ಧರಾಗಿಲ್ಲ ಎಂಬುದನ್ನು ತೋರಿಸುತ್ತದೆ. ನಿಮ್ಮ ಗೆಳೆಯನು ನಿಮ್ಮ ಸ್ನೇಹಿತೆಯೊಡನೆ ನಿಯಮಿತವಾಗಿ ಮತ್ತು ನಿಮ್ಮ ಎದುರಿನಲ್ಲೇ ಚೆಲ್ಲಾಟವಾಡುತ್ತಿರುವುದನ್ನು ನೀವು ಗಮನಿಸಿದರೆ, ಅವನು ನಿಮ್ಮನ್ನು ಹೆಚ್ಚು ಗೌರವಿಸುತ್ತಿಲ್ಲ ಎಂದೇ ಅರ್ಥ. ಅವನು ಅವಳಿಗೆ ಬೀಳುತ್ತಿದ್ದಾನೆ ಅಥವಾ ಅವಳ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ.

3. ಅವನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ

3. ಅವನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ

ನಿಮ್ಮ ಗೆಳೆಯ ನಿರ್ದಿಷ್ಟವಾಗಿ ನಿಮ್ಮ ಒಬ್ಬ ಸ್ನೇಹಿತೆಯೊಂದಿಗೆ ಹತ್ತಿರವಾಗುತ್ತಿದ್ದರೆ, ನೀವು ಈ ವಿಷಯದ ಕುರಿತು ಗಮನ ಹರಿಸಲೇಬೇಕು. ನಿಮ್ಮ ಗೆಳೆಯ ಇದ್ದಕ್ಕಿದ್ದಂತೆ ಅವಳ ಅತ್ಯುತ್ತಮ ಸ್ನೇಹಿತನಾಗಲು ಪ್ರಯತ್ನಿಸುತ್ತಿರುವುದನ್ನು ಮತ್ತು ತಾನು ಎಲ್ಲರಿಗಿಂತ ಸಂಭಾವಿತ ವ್ಯಕ್ತಿ ಎಂಬಂತೆ ತನ್ನಲ್ಲಿರುವ ಎಲ್ಲಾ ಉತ್ತಮ ಗುಣಗಳನ್ನು ತೋರಿಸುತ್ತಿರುವುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಸಂಗಾತಿ, ನಿಮ್ಮ ಸ್ನೇಹಿತೆಯನ್ನು ವಿನಾಕಾರಣ ಸ್ಪರ್ಶಿಸಲು ಪ್ರಯತ್ನಿಸುವುದು ಅಥವಾ ಅವಳೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುವುದು ಈ ಎಲ್ಲಾ ಗುಣಗಳೂ ನಿಮ್ಮ ಗೆಳೆಯನಲ್ಲಿ ಆಕೆಯ ಬಗ್ಗೆ ಆಸೆ ಹುಟ್ಟಿದೆ ಎಂಬುದನ್ನು ತೋರಿಸುವ ಸ್ಪಷ್ಟ ಚಿಹ್ನೆಗಳಾಗಿವೆ. ಅವನು ನಿಮ್ಮ ಸ್ನೇಹಿತರಲ್ಲಿ ಒಬ್ಬಳಿಗೆ ಖಂಡಿತವಾಗಿಯೂ ಆಕರ್ಷಿತನಾಗಿದ್ದಾನೆ ಎಂದು ಅದು ತೋರಿಸುತ್ತದೆ.

4. ಅವನು ಅವಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ತೋರುತ್ತಾನೆ

4. ಅವನು ಅವಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ತೋರುತ್ತಾನೆ

ಇದು ನಿಮ್ಮ ಸಂಗಾತಿ, ನಿಮ್ಮ ಸ್ನೇಹಿತೆ ಮತ್ತು ಅವಳ ಕುಟುಂಬದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಅಪಾಯಕ್ಕಿಂತ ಕಡಿಮೆಯಿಲ್ಲ. ಅವಳ ಬಗ್ಗೆ ಪ್ರತಿಯೊಂದು ವಿವರಗಳನ್ನು ತಿಳಿದುಕೊಳ್ಳಲು ಅವನು ತುಂಬಾ ಆಸಕ್ತಿ ತೋರುತ್ತಾನೆ. ಉದಾಹರಣೆಗೆ: ತನ್ನ ಬಿಡುವಿನ ವೇಳೆಯಲ್ಲಿ ಅವಳು ಏನು ಮಾಡುತ್ತಾಳೆ, ಅವಳ ಕುಟುಂಬದಲ್ಲಿ ಎಷ್ಟು ಜನರು ಇದ್ದಾರೆ, ಅವಳನ್ನು ಸಂತೋಷಪಡಿಸುವುದು ಯಾವ ವಿಷಯ? ಅವಳು ಯಾವುದಾದರೂ ಒಂದು ನಿರ್ದಿಷ್ಟ ನಗರಕ್ಕೆ ಹೋಗಲು ಇಷ್ಟಪಡುತ್ತಾಳೆಯೇ ಇತ್ಯಾದಿ. ನಿಮ್ಮ ಸಂಗಾತಿ, ನಿಮ್ಮ ಸ್ನೇಹಿತೆಯ ಬಗ್ಗೆ ತಿಳಿದುಕೊಳ್ಳಲು ಮನಸ್ಸಿನಲ್ಲಿಯೇ ಲೆಕ್ಕಾಚಾರಹಾಕುತ್ತಿದ್ದರೆ, ನೀವು ಅವನ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯಕ.

5. ನೀವು ಅವಳನ್ನು ಆಹ್ವಾನಿಸಿದಾಗ ಅವನು ಸಂತೋಷ ಮತ್ತು ಉತ್ಸಾಹವನ್ನು ಅನುಭವಿಸುತ್ತಾನೆ

5. ನೀವು ಅವಳನ್ನು ಆಹ್ವಾನಿಸಿದಾಗ ಅವನು ಸಂತೋಷ ಮತ್ತು ಉತ್ಸಾಹವನ್ನು ಅನುಭವಿಸುತ್ತಾನೆ

ನಿಮ್ಮ ಸ್ನೇಹಿತೆಯನ್ನು ಮನೆಗೆ ಕರೆದ ಕೂಡಲೇ ನಿಮ್ಮ ಗೆಳೆಯ ತುಂಬಾ ಸಂತೋಷ ಮತ್ತು ಉತ್ಸುಕನಾಗುತ್ತಾನೆ ಎಂದು ನೀವು ಗಮನಿಸಿದ್ದೀರಾ? ಅವನು ಇಡೀ ದಿನ ಮಂದವಾಗಿದ್ದರೂ, ನಿಮ್ಮ ಸ್ನೇಹಿತೆಯನ್ನು ನೋಡಿದ ಕ್ಷಣ ಅವನಿಗೆ ಇದ್ದಕ್ಕಿದ್ದಂತೆ ಸಂತೋಷಗೊಳ್ಳುವುದು, ಉತ್ಸುಕನಾಗುವುದು, ಇದಲ್ಲದೆ, ನೀವು ಮೂವರು ಒಟ್ಟಿಗೆ ಇರುವಾಗ, ಅವನು ಅವಳೊಳಗೆ ಮಾತ್ರ ಇರುವಂತೆ ಅವಳನ್ನೇ ನೋಡುವುದು ಇವೆಲ್ಲವೂ ನಿಮ್ಮ ಸಂಗಾತಿ ನಿಮ್ಮ ಸ್ನೇಹಿತೆಯ ಮೇಲೆ ಆಕರ್ಷಿತನಾಗಿದ್ದಾನೆ ಎಂಬುದಕ್ಕೆ ಹಿಡಿದ ಕೈಗನ್ನಡಿ!

6. ಅವನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅವಳೊಂದಿಗೆ ಸ್ನೇಹಿತನಾಗಿದ್ದಾನೆ

6. ಅವನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅವಳೊಂದಿಗೆ ಸ್ನೇಹಿತನಾಗಿದ್ದಾನೆ

ನಿಮ್ಮ ಗೆಳೆಯ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸ್ನೇಹಿತೆಯನ್ನು ಅನುಸರಿಸಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ ನಿಮ್ಮ ಸಂಗಾತಿಯು, ನಿಮ್ಮ ಸ್ನೇಹಿತರಲ್ಲಿ ನಿರ್ದಿಷ್ಟವಾಗಿ ಒಬ್ಬಳ ಪ್ರತಿಯೊಂದು ಪೋಸ್ಟ್ ಗಳನ್ನು ಇಷ್ಟಪಡುತ್ತಾರೆ ಮತ್ತು ಕಾಮೆಂಟ್ ಮಾಡುತ್ತಾರೆ ಎಂಬುದು ಸ್ವಲ್ಪ ವಿಲಕ್ಷಣ ಎನ್ನಿಸುವುದಿಲ್ಲವೇ? ನಿಮ್ಮ ಸಂಗಾತಿ, ಆಕೆಯನ್ನ ಪ್ರೊಫೈಲ್ ಮೂಲಕ ಆಕೆಯ ಬಗ್ಗೆ, ಆಕೆ ಇರುವ ಸ್ಥಳದ ಬಗ್ಗೆ ಜ್ಞಾನವನ್ನು ಹೊಂದಿರುವುದನ್ನು ನೀವು ಕಂಡರೆ ತಕ್ಷಣವೇ ಅವರ ಬಗ್ಗೆ ಗಮನಹರಿಸುವುದು ಉತ್ತಮ.

7. ನಿಮ್ಮ ಅನುಪಸ್ಥಿತಿಯಲ್ಲಿ ಅವಳೊಂದಿಗೆ ಸುತ್ತಾಡಲು ಅವನು ಯೋಚಿಸುತ್ತಾನೆ

7. ನಿಮ್ಮ ಅನುಪಸ್ಥಿತಿಯಲ್ಲಿ ಅವಳೊಂದಿಗೆ ಸುತ್ತಾಡಲು ಅವನು ಯೋಚಿಸುತ್ತಾನೆ

ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಸಂಗಾತಿ ಯಾವಾಗಲೂ ಅವಳೊಂದಿಗೆ ಸುತ್ತಾಡಲು ಯೋಜನೆಗಳನ್ನು ಮಾಡುತ್ತಿದ್ದರೆ, ಏನೋ ತಪ್ಪಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ, ಅವರು ಒಟ್ಟಿಗೆ ಸುತ್ತಾಡುವುದು ನಿಮಗೆ ತುಂಬಾ ಸಾಮಾನ್ಯವೆಂದು ಅನ್ನಿಸಬಹುದು ಆದರೆ ನೀವು ಯಾವಾಗಲೂ ಇದನ್ನು ಅನುಮೋದಿಸುತ್ತೀರಾ? ನೀವು ಇಲ್ಲದಿರುವಾಗ ಅವನು ಯಾವಾಗಲೂ ಅವಳೊಂದಿಗೆ ಸುತ್ತಾಡಲು ಏಕೆ ಬಯಸುತ್ತಾನೆ? ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು.

8. ಅವನು ಆಗಾಗ್ಗೆ ಅವಳ ಬಗ್ಗೆ ಕೇಳುತ್ತಾನೆ

8. ಅವನು ಆಗಾಗ್ಗೆ ಅವಳ ಬಗ್ಗೆ ಕೇಳುತ್ತಾನೆ

ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ಸ್ನೇಹಿತೆಯ ಬಗ್ಗೆ ಹೆಚ್ಚಾಗಿ ಕೇಳುತ್ತಾನೆಯೇ? ನಿಮ್ಮ ಸ್ನೇಹಿತರಲ್ಲಿ ಒಬ್ಬಳ ಬಗ್ಗೆ ಯಾವಾಗಲೂ ಚರ್ಚಿಸಲು ಅವನು ತುಂಬಾ ಇಷ್ಟಪಡುತ್ತಾನೆಯೇ? ಇದು ಸಾಮಾನ್ಯವೆಂದು ನೀವು ಭಾವಿಸಿದರೆ, ನಿಮ್ಮ ಸಂಗಾತಿ ನಿಮ್ಮ ಸ್ನೇಹಿತೆಯರಲ್ಲಿ ಒಬ್ಬಳೊಂದಿಗೆ ಇರಲ್ ಇಷ್ಟಪಡುತ್ತಾನೆ ಎಂಬ ಸಂಗತಿಯನ್ನು ನೀವು ನೀವು ನಿರ್ಲಕ್ಷಿಸುತ್ತಿದ್ದೀರೆಂದೇ ಅರ್ಥ. ಅವನು ಅವಳನ್ನು ಆಳವಾಗಿ ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದರಿಂದ ಅಥವಾ ಅವಳ ಪ್ರೀತಿಯನ್ನು ಬಯಸುತ್ತಿರುವುದರಿಂದ ಅವನು ಅವಳ ಬಗ್ಗೆ ನಿಮ್ಮ ಬಳಿ ಹೆಚ್ಚು ಚರ್ಚಿಸುತ್ತಿರಬಹುದು. ಆದ್ದರಿಂದ, ಅವನು ಅವಳ ಬಗ್ಗೆ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾನೆ ಎಂಬುದರ ಬಗ್ಗೆ ಗಮನ ಕೊಡಿ. ಅವನು ಅವಳ ಎಲ್ಲಾ ವಿಷಯಗಳಲ್ಲಿಯೂ ಆಸಕ್ತಿ ಹೊಂದಿದ್ದಾನೆಯೇ ಗಮನಿಸಿ.

9. ಅವಳು ಹೊರಟುಹೋದಾಗ ಅವನಿಗೆ ಬೇಸರವಾಗಬಹುದು

9. ಅವಳು ಹೊರಟುಹೋದಾಗ ಅವನಿಗೆ ಬೇಸರವಾಗಬಹುದು

ನಿಮ್ಮ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆದ ನಂತರ, ನಿಮ್ಮ ಸ್ನೇಹಿತೆ ತನ್ನ ಸ್ಥಳಕ್ಕೆ ತೆರಳಿದರೆ, ನಿಮ್ಮಲ್ಲಿ ಯಾರಿಗೂ ತೊಂದರೆಯಾಗಲಾರದು. ಆದರೆ ನಿಮ್ಮ ಗೆಳತಿ ತನ್ನ ಮನೆಗೆ ತೆರಳಿದ ಕೂಡಲೆ ನಿಮ್ಮ ಸಂಗಾತಿ ಬೇಸರ ಮತ್ತು ಆತಂಕ ಅನುಭವಿಸಿದರೆ, ಅವನ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಅವನು ಅವಳನ್ನು ಹೋಗಲು ಬಿಡುತ್ತಾನೆಯೇ ಅಥವಾ ಅವಳೊಂದಿಗೆ ಹೆಚ್ಚು ಸಮಯ ಕಳೆಯಲು ಅವನು ಬಯಸುತ್ತಾನೆಯೇ? ಎಂಬುದನ್ನು ಗಮನಿಸಬೇಕು.

10. ಅವಳೊಂದಿಗೆ ಸುತ್ತಾಡಲು ಅವನು ಹಾಸ್ಯ ಮಾಡುತ್ತಾನೆ

10. ಅವಳೊಂದಿಗೆ ಸುತ್ತಾಡಲು ಅವನು ಹಾಸ್ಯ ಮಾಡುತ್ತಾನೆ

ನಾವೆಲ್ಲರೂ ಪರಸ್ಪರರ ಮನಸ್ಥಿತಿಯನ್ನು ಹಗುರಗೊಳಿಸಲು ವಿವಿಧ ಹಾಸ್ಯಗಳನ್ನು ಮಾಡುತ್ತೇವೆ. ಆದರೆ ಕೆಲವೊಮ್ಮೆ, ನೀವು ಕೆಲವು ವಿಲಕ್ಷಣವಾದ ಮತ್ತು ತಮಾಷೆಯಿಲ್ಲದ ಹಾಸ್ಯಗಳನ್ನು ಮಾಡುವ ಮೂಲಕ ಇಡೀ ವಿಷಯವನ್ನು ಗೊಂದಲಗೊಳಿಸಬಹುದು. ನಿಮ್ಮ ಗೆಳೆಯನಲ್ಲೂ ಇದನ್ನು ಮಾಡಬಹುದು. ನಿಮ್ಮ ಗೆಳೆಯರು ನಿಮ್ಮ ಸ್ನೇಹಿತರನ್ನು ನಗಿಸಲು ಕೆಲವು ತಮಾಷೆಯ ಹಾಸ್ಯಚಟಾಕಿಗಳನ್ನು ಹಾರಿಸುವುದನ್ನು ಕಾಣಬಹುದು. ಆದರೆ ಅವನು ನಿಮ್ಮ ಸ್ನೇಹಿತೆಯೊಂದಿಗೆ ಸುತ್ತಾಡಲು ಬಯಸುತ್ತಾನೆ ಅಥವಾ ಅವಳನ್ನು 'ಮುಂದಿನ ಗೆಳತಿ' ಎಂದು ಕರೆಯುತ್ತ ಅವನು ತಮಾಷೆ ಮಾಡುತ್ತಿದ್ದರೆ, ನೀವು ಅದರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

11. ಅವನು ಆಗಾಗ್ಗೆ ಕೆಲವು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ

11. ಅವನು ಆಗಾಗ್ಗೆ ಕೆಲವು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ

ನಿಮ್ಮ ಸಂಗಾತಿ ಕೆಲವು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆಯೇ? ಉದಾಹರಣೆಗೆ: ನಾನು ಮತ್ತು ನಿನ್ನ ಗೆಳತಿ ಹೊರಗಡೆ ಸುತ್ತಾಡಿದರೆ ಹೇಗೆ? ನಾವು ಮೂವರೂ ಸೇರಿ ಸಮಯ ಕಳೆದರೆ ಹೇಗೆ? ಇದಲ್ಲದೆ, ನಿಮ್ಮ ಸ್ನೇಹಿತೆಯು ಯಾವ ರೀತಿಯ ಸುಗಂಧ ದ್ರವ್ಯವನ್ನು (ಪರ್ಫ್ಯೂಮ್) ಇಷ್ಟಪಡುತ್ತಾಳೆ ಅಥವಾ ಅವಳ ಲೈಂಗಿಕ ದೃಷ್ಟಿಕೋನ ಮತ್ತು ಆದ್ಯತೆಗಳು ಏನು ಎಂದು ಅವನು ನಿಮ್ಮನ್ನು ಕೇಳಬಹುದು. ಇದು ನಿಮ್ಮ ಸಂಗಾತಿ ನಿಮ್ಮ ಗೆಳತಿಯ ಬಗೆಗೆ ಆಕರ್ಷಣೆಗೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.

12. ಅವನು ಅವಳ ಯಾವುದೇ ಸಂಗಾತಿಯನ್ನೂ ಅನುಮೋದಿಸುವುದಿಲ್ಲ

12. ಅವನು ಅವಳ ಯಾವುದೇ ಸಂಗಾತಿಯನ್ನೂ ಅನುಮೋದಿಸುವುದಿಲ್ಲ

ನಿಮ್ಮ ಸ್ನೇಹಿತೆಯು ನಿಮಗೆ ಮತ್ತು ನಿಮ್ಮ ಸಂಗಾತಿಗೆ, ತನ್ನ ಸಂಗಾತಿಯನ್ನು ಪರಿಚಯಿಸುವ ಸಂದರ್ಭಗಳು ಇರಬಹುದು. ನಿಮ್ಮ ಸಂಗಾತಿಗೆ, ಒಬ್ಬ ಹುಡುಗನಾಗಿ, ಆತ ಒಳ್ಳೆಯ ವ್ಯಕ್ತಿಯೋ ಅಥವಾ ಇಲ್ಲವೋ ಎಂಬುದು ತಿಳಿದಿರಬಹುದು. ಆದರೆ ಕೆಲವು ವಿಲಕ್ಷಣ ಮತ್ತು ಅಪ್ರಸ್ತುತ ಕಾರಣಗಳಿಂದಾಗಿ ನಿಮ್ಮ ಸಂಗಾತಿ, ಆಕೆಯ ಯಾವುದೇ ಸಂಗಾತಿಯನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಸಂಗಾತಿ ಅವಳು ಯಾರೊಂದಿಗೂ ಇರಲು ಬಯಸುವುದಿಲ್ಲ ಎಂದು ತೋರಿಸುತ್ತದೆ. ನಿಮ್ಮ ಸಂಗಾತಿ ಆಕೆಯ ಸಂಗಾತಿಯರ ಬಗ್ಗೆ ಅಸೂಯೆ ಪಡುತ್ತಿರುವುದನ್ನು ನೀವು ಇದರಿಂದ ಅರಿತುಕೊಳ್ಳಬಹುದು.

13. ಅವನು ಯಾವಾಗಲೂ ಅವಳೊಂದಿಗೆ ಸಂದೇಶ ಕಳುಹಿಸುವ ಮೂಲಕ ಮಾತನಾಡುತ್ತಾನೆ

13. ಅವನು ಯಾವಾಗಲೂ ಅವಳೊಂದಿಗೆ ಸಂದೇಶ ಕಳುಹಿಸುವ ಮೂಲಕ ಮಾತನಾಡುತ್ತಾನೆ

ನಿಮ್ಮ ಸ್ನೇಹಿತರಲ್ಲಿ ಒಬ್ಬಳು ಮತ್ತು ನಿಮ್ಮ ಸಂಗಾತಿ ಉತ್ತಮ ಸ್ನೇಹಿತರಾಗಿದ್ದರೆ ಒಳ್ಳೆಯದೆ. ನೀವು ಅದನ್ನು ಅತ್ಯಂತ ಸಾಮಾನ್ಯವೆಂದು ಪರಿಗಣಿಸಬಹುದು. ಆದರೆ ಅವರು ಯಾವಾಗಲೂ ಪರಸ್ಪರ ಸಂದೇಶ ಕಳುಹಿಸುತ್ತಿದ್ದರೆ ಏನರ್ಥ? ನಿಮ್ಮ ಗೆಳೆಯನು ನಿಮ್ಮ ಸ್ನೇಹಿತೆಗೆ ಯಾವಾಗಲೂ ಸಂದೇಶ ಕಳುಹಿಸುವುದು ಮತ್ತು ಅವಳೊಂದಿಗೆ ಚಾಟ್ ಮಾಡುವಾಗ ನಗುವುದು ಇದು ಉತ್ತಮ ಚಿಹ್ನೆಗಳಲ್ಲ. ನಿಮ್ಮ ಸಂಗಾತಿ ಅವಳಿಗೆ ಯಾವ ರೀತಿಯ ಸಂದೇಶಗಳನ್ನು ಕಳುಹಿಸುತ್ತಾನೆ ಮತ್ತು ಅವನು ಅವಳೊಂದಿಗೆ ಎಷ್ಟು ಸಮಯದವರೆಗೆ ಚಾಟ್ ಮಾಡುತ್ತಾನೆ ಎಂಬುದನ್ನು ಕಂಡುಹಿಡಿಯಲು ನೀವು ಹೆಚ್ಚು ಗಮನ ಹರಿಸಬೇಕಾಗಿದೆ.

14. ಅವನು ನಿಮ್ಮ ಸ್ನೇಹಿತೆಗೆ ಹೆಚ್ಚುವರಿ ಕಾಳಜಿಯನ್ನು ತೋರಿಸುತ್ತಾನೆ

14. ಅವನು ನಿಮ್ಮ ಸ್ನೇಹಿತೆಗೆ ಹೆಚ್ಚುವರಿ ಕಾಳಜಿಯನ್ನು ತೋರಿಸುತ್ತಾನೆ

ನಿಮ್ಮ ಸಂಗಾತಿ ನಿಮ್ಮ ಸ್ನೇಹಿತನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದನ್ನು ನೀವು ಇದ್ದಕ್ಕಿದ್ದಂತೆ ಗಮನಿಸಬಹುದು. ಅವಳ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ಅವನು ನೆನಪಿನಲ್ಲಿಟ್ಟುಕೊಳ್ಳಬಹುದು ಮತ್ತು ಅವಳನ್ನು ಇಷ್ಟಪಡದ ವಿಷಯಗಳನ್ನು ಮಾಡದಿರಲು ಪ್ರಯತ್ನಿಸುತ್ತಾನೆ. ಅವನು ಯಾವಾಗಲೂ ಅವಳನ್ನು ಕರೆದುಕೊಂಡು ಬರಲು ಅಥವಾ ಬಿಟ್ಟುಬರಲು ಬಯಸುತ್ತಾನೆ. ಅವಳಿಗೆ ಯಾವಾಗಲೂ ಆಸನವನ್ನು ಬಿಟ್ಟುಕೊಡುತ್ತಾನೆ. ನಿಮ್ಮ ಸಂಗಾತಿ ನಿಮ್ಮ ಸ್ನೇಹಿತೆಗೆ ದಂಪತಿಗಳಂತೆ ಸೇವೆ ಸಲ್ಲಿಸುತ್ತಿರುವುದನ್ನು ನೀವು ಕಾಣಬಹುದು.

ನಿಮ್ಮ ಸಂಗಾತಿಯಲ್ಲಿ ಈ ಚಿಹ್ನೆಗಳನ್ನು ನೀವು ಗಮನಿಸಿದರೆ, ಅದಕ್ಕಾಗಿ ಅವನನ್ನು ಪ್ರಶ್ನೆಸುವುದು ಉತ್ತಮ. ನೀವು ಪರಿಣಾಮಕಾರಿಯಾಗಿ ಮಾತನಾಡುತ್ತೀರೆಂದು ಖಚಿತಪಡಿಸಿಕೊಳ್ಳಿ ಮತ್ತು ಅವನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಂಡುಕೊಳ್ಳಿ. ಆಗ ನೀವು ಒಂದು ತೀರ್ಮಾನಕ್ಕೆ ಬರಲು ಇದು ನಿಮಗೆ ಸಹಾಯ ಮಾಡುತ್ತದೆ.

English summary

These Signs In Your Boyfriend Is In Love With Your Friend

Here we are discussing about These 14 Signs Your Boyfriend Is In Love With Your Friend. finding out whether your boyfriend has really developed some romantic feelings for your friends can be a bit tricky. Therefore, we are here with some telltale signs for the same. Read more.
X
Desktop Bottom Promotion