For Quick Alerts
ALLOW NOTIFICATIONS  
For Daily Alerts

ಸದ್ದಿಲ್ಲದೇ ಟ್ರೆಂಡ್ ಆಗ್ತಿದೆ, ತಂದೆಯರ ಹೊರೆ ಕಡಿಮೆ ಮಾಡುವ ಈ ಮೈಕ್ರೋ ವೆಡ್ಡಿಂಗ್ ಪ್ಲಾನ್!

|

ಈ ಹಿಂದೆ ಒಬ್ಬರ ಮನೆಯಲ್ಲಿ ಮದುವೆ ಅಂದ್ರೆ ಇಡೀ ಊರಿಗೆ ಊರಿ ಆ ಮದುವೆಗೆ ಆಗಮಿಸುತ್ತಿತ್ತು. ಎಲ್ಲೆಲ್ಲೂ ಜನ, ಅಲಂಕಾರ, ಸದ್ದು-ಗದ್ದಲ, ಮೃಷ್ಟಾನ್ನ ಭೋಜನ ಜೊತೆಗೆ ಅತಿಯಾದ ಖರ್ಚು ಎಲ್ಲವೂ ವಿವಾಹದ ಸುತ್ತ ಸೇರಿಕೊಳ್ಳುತ್ತಿತ್ತು. ಆದರೆ ಇದೀಗ ಕೊರೊನಾ ಕಾರಣದಿಂದ ಇದೆಲ್ಲದಕ್ಕೂ ಬ್ರೇಕ್ ಬಿದ್ದು, ಮೈಕ್ರೋ ವೆಡ್ಡಿಂಗ್ ಪ್ರವೃತ್ತಿ ಜಾರಿಗೆ ಬಂದಿದೆ.

ಕೊರೊನಾ ಕಾರಣದಿಂದ ಹುಟ್ಟಿಕೊಂಡಿದ್ದಾದರೂ, ಸದ್ಯ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ ಈ ಮೈಕ್ರೊ ವೆಡ್ಡಿಂಗ್ ಪ್ಲಾನ್. ಸದ್ದುಗದ್ದಲವಿಲ್ಲದ ಈ ಮದುವೆ ಪ್ಲಾನ್ ಸದ್ಯ ಎಲ್ಲೆಡೆ ಟ್ರೆಂಡ್ ಆಗುತ್ತಿದ್ದು, ಹೆಚ್ಚಿನ ಹುಡುಗ -ಹುಡುಗಿಯರು ಹೀಗೆ ಮದುವೆ ಆಗಬೇಕು ಎಂದು ಹೇಳುತ್ತಿದ್ದಾರೆ.

ಹಾಗಾದ್ರೆ ಮೈಕ್ರೋ ವೆಡ್ಡಿಂಗ್ ಅಂದ್ರೇನು ? ಅದನ್ನು ಮಾಡುವುದರಿಂದ ಆಗುವ ಪ್ರಯೋಜನಗಳೇನು ಎಂಬುದ್ನು ಈ ಕೆಳಗೆ ನೀಡಲಾಗಿದೆ:

ಏನಿದು ಮೈಕ್ರೋ ವೆಡ್ಡಿಂಗ್ :

ಏನಿದು ಮೈಕ್ರೋ ವೆಡ್ಡಿಂಗ್ :

ಮೈಕ್ರೋ ವೆಡ್ಡಿಂಗ್ ನಲ್ಲಿ ಜನದಟ್ಟಣೆ ಇಲ್ಲ, ಹೆಚ್ಚು ಗೌಜಿ-ಗಮ್ಮತ್ತು ಇಲ್ಲ, ಅತಿಯಾದ ಖರ್ಚಂತೂ ಮೊದಲೇ ಇಲ್ಲ. ವಧು-ವರರನ್ನು ಹೊರತುಪಡಿಸಿ, ಅವರ ಕುಟುಂಬ ಸದಸ್ಯರು ಮತ್ತು ತುಂಬಾ ಹತ್ತಿರದ ವ್ಯಕ್ತಿಗಳಿಗೆ ಮಾತ್ರ ಆಹ್ವಾನವಿರುವುದು. ಅಂದರೆ ಮದುವೆಗೆ ಹುಡುಗ-ಹುಡುಗಿಯ ಕಡೆಯಿಂದ ಕನಿಷ್ಟ ಜನರನ್ನು ಕರೆದಿರಲಾಗುತ್ತದೆ. ಮದುವೆಗೆ ಆಗಮಿಸುವವರ ಸಂಖ್ಯೆ ಗರಿಷ್ಠ 50-100 ಮತ್ತು ಕನಿಷ್ಠ 20-25 ಆಗಿರಬಹುದು. ಕಡಿಮೆ ಜನರಿದ್ದರೂ, ಯಾವುದೇ ಸಂಪ್ರದಾಯ ಶಾಸ್ತ್ರಗಳಿಗೆ ಅಡ್ಡಿಯಾಗದಂತೆ ಬಹಳ ಅದ್ಭುತ ರೀತಿಯಲ್ಲೇ ವಿವಾಹ ನಡೆಸಲಾಗುತ್ತದೆ.

ಮೈಕ್ರೋ ವೆಡ್ಡಿಂಗ್ ನ ಪ್ರಯೋಜನಗಳು:

ಮೈಕ್ರೋ ವೆಡ್ಡಿಂಗ್ ನ ಪ್ರಯೋಜನಗಳು:

ಬ್ರೋಕನ್ ಓಲ್ಡ್ ಟ್ರೆಂಡ್:

ಭಾರತದ ಪ್ರಾಚೀನ ಸಂಪ್ರದಾಯದ ಪ್ರಕಾರ, ಮದುವೆಗಳಿಗೆ ಸಾಕಷ್ಟು ಖರ್ಚು ಮಾಡಲಾಗುತ್ತದೆ. ಮದುವೆ ಅಂದರೆ ಅದೊಂದು ಊರಿನ ಜಾತ್ರೆಯಂತೆ, ಇಡೀ ಊರಿಗೆ ಆಮಂತ್ರಣ ನೀಡಿ, ಭವ್ಯವಾಗಿ ನಡೆಸಲಾಗುತ್ತಿತ್ತು. ಮದುವೆಗೆ ಮಾಡುವ ಖರ್ಚು ಘನತೆ, ಗೌರವದ ಸಂಕೇತವಾಗಿತ್ತು. ಆದರೆ ಈ ಮೈಕ್ರೋ ವೆಡ್ಡಿಂಗ್ ಆ ಹಳೇ ಟ್ರೆಂಡ್ ನ್ನು ಮುರಿದಿದ್ದು, ಇತ್ತೀಚೆಗೆ ಜನರು ಕಡಿಮೆ ಜನಸಂದಣಿಯಲ್ಲಿ ವಿವಾಹವಾಗಲು ಆದ್ಯತೆ ನೀಡುತ್ತಿದ್ದಾರೆ.

ಅತಿಥಿಗಳ ಆರೈಕೆ ಸುಲಭ:

ಅತಿಥಿಗಳ ಆರೈಕೆ ಸುಲಭ:

ಭವ್ಯ ವಿವಾಹಗಳಲ್ಲಿ ಅತಿಥಿಗಳ ಹಾಗೂ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧಿಕರ ಆರೈಕೆ ಯಲ್ಲಿ ಏನಾದರೂ ಹೆಚ್ಚು-ಕಮ್ಮಿ ಆದಾಗ ಅವರು ಮನೆ ಯಜಮಾನರ ಮೇಲೆ ಅದರಲ್ಲೂ ಹುಡುಗಿಯ ಅಪ್ಪನ ಮೇಲೆ ಕೋಪಗೊಳ್ಳುತ್ತಿದ್ದರು. ಆದರೆ ಮೈಕ್ರೋ ವೆಡ್ಡಿಂಗ್ ನಿಂದಾಗಿ ಕನಿಷ್ಠ ಅತಿಥಿಗಳನ್ನು ಆಹ್ವಾನಿಸಿರುವುದರಿಂದ ಜನರು ಕೋಪಗೊಳ್ಳುವ ಪ್ರವೃತ್ತಿಯೂ ಕಡಿಮೆಯಾಗುವುದು.

ಸಾಲಭಾರವಿಲ್ಲದ ಮದುವೆ:

ಸಾಲಭಾರವಿಲ್ಲದ ಮದುವೆ:

ಮಧ್ಯಮ ಹಾಗೂ ಬಡ ಕುಟುಂಬದಲ್ಲಿ ಮದುವೆ ಮಾಡುವುದೆಂದರೆ ಅಲ್ಲಿ ಸಾಲ ಕಡ್ಡಾಯವಾಗಿ ಮಾಡಲೇಬೇಕು. ವಿಜೃಂಭಣೆಯ ಮದುವೆಗಾಗಿ ಸಾಲ ಮಾಡಿಕೊಂಡು ಆ ಹೊರೆಯನ್ನು ಮದುವೆಯ ಬಳಿಕ ಹೊತ್ತುಕೊಂಡೇ ಸಾಗುತ್ತಾರೆ. ಆದರೆ ಮೈಕ್ರೋ ವೆಡ್ಡಿಂಗ್ ನಲ್ಲಿ ಜನರು ತಮ್ಮ ಮದುವೆಯನ್ನು ಬಹಳ ಬಜೆಟ್ ಸ್ನೇಹಿ ರೀತಿಯಲ್ಲಿ ಮಾಡಬಹುದು. ಕಡಿಮೆ ಖರ್ಚಿನಿಂದ, ಬಹಳ ಸರಳವಾಗಿ ಮದುವೆ ಆಗಬಹುದು.

ಅಲಂಕಾರದಲ್ಲೂ ವಿನಾಯಿತಿ:

ಅಲಂಕಾರದಲ್ಲೂ ವಿನಾಯಿತಿ:

ಮೈಕ್ರೋ ವೆಡ್ಡಿಂಗ್ ಗೆ, ಅದರ ಕೂಟಕ್ಕೆ ಒಂದು ಸಣ್ಣ ಸ್ಥಳ ಮಾತ್ರ ಬೇಕಾಗುತ್ತದೆ. ಆದ್ದರಿಂದ, ವಿವಾಹದ ಸ್ಥಳದ ಸಂಪೂರ್ಣ ಅಲಂಕಾರವನ್ನು ಕನಿಷ್ಠ ವೆಚ್ಚದಲ್ಲಿ ಮಾಡಬಹುದು. ಕಡಿಮೆ ಹಣದಲ್ಲಿ ಎಲ್ಲಾ ಜಾಗವನ್ನು ಸುಂದರವಾಗಿ ನಿಮಗೆ ಬೇಕಾಗಿರುವ ರೀತಿಯಲ್ಲಿ ಅಲಂಕಾರ ಮಾಡಬಹುದು. ಖರ್ಚು ಕಡಿಮೆ, ಸಮಯವೂ ವ್ಯರ್ಥವಾಗದು.

English summary

The Micro-Wedding Trend: Benefits of a Small Wedding in Kannada

Here we talking about The Micro-Wedding Trend: Benefits of a Small Wedding in Kannada, read on
X
Desktop Bottom Promotion