For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಜಗಳ ಕಡಿಮೆ ಮಾಡಲು ಇಲ್ಲಿವೆ ಸೀಕ್ರೆಟ್ಸ್

|

ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಜೀವನದಲ್ಲಿ ಬರುವ ಏರಿಳಿತಗಳನ್ನು ಸಮರ್ಥವಾಗಿ ನಿಭಾಯಿಸಲು ಇಬ್ಬರೂ ಪರಸ್ಪರ ಶ್ರಮವಹಿಸಬೇಕಾಗುತ್ತದೆ. ಇದಕ್ಕೆ ಒಬ್ಬರ ಸಹಕಾರವಿಲ್ಲದಿದ್ದರೂ, ಆ ಸಂಬಂಧ ಮುರಿದು ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ ದಾಂಪತ್ಯದಲ್ಲಿ ಆಗಾಗ ಜಗಳ, ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಹಾಗಂತ ದಾಂಪತ್ಯವೆಂದರೆ ಭಿನ್ನಾಭಿಪ್ರಾಯಗಳ ಗೂಡು ಎಂದಲ್ಲ. ಕೆಲವು ದಂಪತಿಗಳು ತಮ್ಮ ಜೀವನದಲ್ಲಿ ಇಂತಹ ಮನಸ್ತಾಪಗಳು ಸುಳಿಯಲು ಬಿಡುವುದಿಲ್ಲ. ಅದಕ್ಕಾಗಿ ಕೆಲವೊಂದು ಮಾರ್ಗಗಳನ್ನು ಅನುಸರಿಸುತ್ತಿರುತ್ತಾರೆ. ಹಾಗಾದರೆ, ಜಗಳ ಕಡಿಮೆಮಾಡುವ ಸೀಕ್ರೆಟ್‌ಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ದಾಂಪತ್ಯದಲ್ಲಿ ಜಗಳ ಕಡಿಮೆ ಮಾಡಲು ಸೀಕ್ರೆಟ್ಸ್‌ಗಳನ್ನು ಈ ಕೆಳಗೆ ನೀಡಲಾಗಿದೆ:

1. ಕೂಗಾಡುವುದಕ್ಕಿಂತ ಹೆಚ್ಚು ಮಾತಾಡಿ:

1. ಕೂಗಾಡುವುದಕ್ಕಿಂತ ಹೆಚ್ಚು ಮಾತಾಡಿ:

ಜಗಳ ಮತ್ತು ಭಿನ್ನಾಭಿಪ್ರಾಯದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಸಂವಹನ. ನಿಮ್ಮನ್ನು ಕಾಡುವ ಸಮಸ್ಯೆಗಳನ್ನು ಪರಸ್ಪರ ಕೂತು ಚರ್ಚಿಸಬೇಕು. ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆಯನ್ನು ನಡೆಸಬೇಕು. ಆರೋಗ್ಯಕರ ಮತ್ತು ಸಂತೋಷದಿಂದಿರುವ ದಂಪತಿಗಳು ಕ್ಷುಲ್ಲಕ ವಿಷಯಗಳಿಗೆ ಜಗಳವಾಡುವುದಿಲ್ಲ. ಅಂತಹ ಸಂದರ್ಭ ಬಂದಾಗ ಇಬ್ಬರೂ ಕೂತು ಮಾತನಾಡಬೇಕೇ ಹೊರತು, ಕೂಗಾಡಬಾರದು. ಇದರಿಂದ ಜಗಳ ಹೆಚ್ಚಾಗುವುದೇ ಹೆಚ್ಚು, ಸಮಸ್ಯೆಯನ್ನು ಇಬ್ಬರೂ ಕುಳಿತು ಮಾತನಾಡಿ, ಪರಿಹರಿಸಿಕೊಂಡಾಗ, ಅವರ ಸಂಬಂಧವು ಗಮನಾರ್ಹವಾಗಿ ಸುಧಾರಿಸುತ್ತದೆ.

2. ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ:

2. ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ:

ಜಗಳದ ನಂತರ, ಪ್ರತಿಯೊಬ್ಬ ಪಾಲುದಾರನು ಅವನ ಅಥವಾ ಅವಳ ಕ್ರಿಯೆಗಳನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ತ್ವರಿತವಾಗಿ ಕ್ಷಮೆ ಕೇಳಲು ಕಲಿಯಿರಿ. ನೀವು ತಪ್ಪು ಮಾಡಿಲ್ಲ ಎಂಬ ನಂಬಿಕೆಯಿದ್ದರೂ, ಸಂಬಂಧದಲ್ಲಿ ಹಠಮಾರಿಯಾಗಿದ್ದರೂ ಸಹ ಕ್ಷಮೆ ಕೇಳಿ, ಇದರಿಂದ ಏನು ಕಳೆದುಕೊಳ್ಳುವುದಿಲ್ಲ. ತ್ವರಿತವಾಗಿ ಕ್ಷಮೆಯಾಚಿಸುವುದು ದೀರ್ಘಾವಧಿಯಲ್ಲಿಯಾಗುವ ನೋವನ್ನು ತಡೆಯುತ್ತದೆ. ಕೆಲವೊಮ್ಮೆ ಬಹಳ ಏನು ಬೇಡವಾದರೂ, ಸರಳವಾದ ಕ್ಷಮೆಯಾಚನೆಯ ಅಗತ್ಯವಿರುತ್ತದೆ. ಒಮ್ಮೆ "ಕ್ಷಮಿಸಿ" ವಿನಿಮಯ ಮಾಡಿಕೊಂಡರೆ, ನೀವಿಬ್ಬರೂ ಯಾವುದೇ ಅಸಮಾಧಾನವಿಲ್ಲದೆ ಮುಂದುವರಿಯಬಹುದು.

3. ಪರಸ್ಪರ ಪ್ರಶಂಸಿಸಿ:

3. ಪರಸ್ಪರ ಪ್ರಶಂಸಿಸಿ:

ನಿಮ್ಮ ಸಂಗಾತಿಯ ಮಾಡುವ ಪ್ರತಿ ಕೆಲಸಕ್ಕೂ ಪ್ರಶಂಸೆ ನೀಡಿ, ಆ ಕೆಲಸ ದೊಡ್ಡದಾಗಿರಲು ಅಥವಾ ಚಿಕ್ಕದಾಗಿರಲಿ. ದೀರ್ಘಕಾಲದ ಸಂಬಂಧಗಳು ಪ್ರಾಮಾಣಿಕತೆ, ಪ್ರೀತಿ ಮತ್ತು ವಿಶ್ವಾಸವನ್ನು ಕೇಳುತ್ತವೆ. ಪರಸ್ಪರ ಮಾಡುವ ಕೆಲಸಗಳಿಗೆ ಪ್ರಶಂಸೆ ನೀಡುವುದು, ಸಂಬಂಧವನ್ನು ಅಗಾಧವಾಗಿ ಸುಧಾರಿಸಬಹುದು. ನ್ಯೂನತೆಗಳನ್ನು ಎತ್ತಿ ತೋರಿಸುವುದು ಸುಲಭ, ಆದರೆ ಅದನ್ನು ಒಪ್ಪಿಕೊಂಡು, ಬಾಳುವುದು ದೊಡ್ಡತನ. ಜೊತೆಗೆ ಅವರು ಮಾಡುವ ಕೆಲಸಕ್ಕೆ ಸಣ್ಣ ಧನ್ಯವಾದ ಹೇಳುವುದರಿಂದ ನೀವೇನನ್ನೂ ಕಳೆದುಕೊಳ್ಳುವುದಿಲ್ಲ, ಬದಲಾಗಿ ಗಳಿಸುತ್ತೀರಿ.

4. ಜಗಳಗಳಿಂದ ಕಲಿಯಿರಿ:

4. ಜಗಳಗಳಿಂದ ಕಲಿಯಿರಿ:

ಪ್ರತಿಯೊಬ್ಬ ದಂಪತಿಗಳು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದರಲ್ಲಿ ಕೆಲವರು ಈ ಜಗಳಗಳಿಂದ ಕಲಿಯುತ್ತಾರೆ. ವಾದವನ್ನು ಹುಟ್ಟುಹಾಕಿದ ಸನ್ನಿವೇಶ ಮತ್ತು ಅದನ್ನು ಹೇಗೆ ಪರಿಹರಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಂಡು, ಅದನ್ನು ಅಳವಡಿಸಿಕೊಳ್ಳುತ್ತಾರೆ. ಮುಂದೆಂದೂ ಅಂತಹ ತಪ್ಪಾಗದಂತೆ ಎಚ್ಚರವಹಿಸುತ್ತಾರೆ. ಅವರು ತಮ್ಮ ಸಂಬಂಧವನ್ನು ಸುಧಾರಿಸಲು ತಮ್ಮ ಹೊಸ ಜ್ಞಾನವನ್ನು ಅನ್ವಯಿಸುತ್ತಾರೆ. ನಿಮ್ಮ ತಪ್ಪುಗಳನ್ನು ಪುನರಾವರ್ತಿಸುವ ಬದಲು ಅದರಿಂದ ಪಾಠ ಕಲಿತು, ಬದಲಾಗಬೇಕು.

English summary

Secrets of Couples Who Don’t Fight in Kannada

Here we talking about secrets of couples who don’t fight in kannada, read on
Story first published: Saturday, February 26, 2022, 17:17 [IST]
X
Desktop Bottom Promotion