For Quick Alerts
ALLOW NOTIFICATIONS  
For Daily Alerts

ಈ ರೊಮ್ಯಾಂಟಿಕ್ ಮಾರ್ನಿಂಗ್ ಅಭ್ಯಾಸಗಳನ್ನು ಬೆಳೆಸಿಕೊಂಡರೆ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ

|

ಮದುವೆ ಅನ್ನೋದು ಒಂದು ಸುಂದರ ಬಂಧ. ಆದರೆ ಆ ಮದುವೆಯ ಜೀವನ ಸುಖ-ಸಂತೋಷ ಹಾಗೂ ಲವಲವಿಕೆಯಿಂದ ಕೂಡಿರುವಂತೆ ಮಾಡುವ ಜವಾಬ್ದಾರಿ ದಂಪತಿಗಳದ್ದೇ. ಇದು ಒಮ್ಮಿಂದೊಮ್ಮಲೇ ಸಾಧ್ಯವಿಲ್ಲ. ನಾವು ಮಾಡುವ ಪ್ರತಿ ಕೆಲಸವೂ ಸಹ ನಮ್ಮ ಸಂಬಂಧ ಗಟ್ಟಿಯಾಗಲು ಸಹಾಯ ಮಾಡುತ್ತೆ.

ಸಂಬಂಧಗಳಲ್ಲಿ ಬಂಧ ಗಟ್ಟಿಯಾಗುವ ಪ್ರಕ್ರಿಯೆ ದಿನ ಬೆಳಗಾಗುವುದರೊಂದಿಗೆ ಶುರುವಾಗಬೇಕು. ನಿಮ್ಮ ದಿನ ಚೆನ್ನಾಗಿದ್ದರೆ, ಇಡೀ ದಿನವು ಚೈತನ್ಯಭರಿತವಾಗಿರುತ್ತದೆ ಎಂದರ್ಥ. ಹಾಗಾಗಿ ನೀವು ಸಂಬಂಧದಲ್ಲಿ ಕೆಲವೊಂದು ರೊಮ್ಯಾಂಟಿಕ್ ಮಾರ್ನಿಂಗ್ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಈ ಲೇಖನದಲ್ಲಿ ಆ ರೊಮ್ಯಾಂಟಿಕ್ ಅಭ್ಯಾಸಗಳಾವುವು ಎಂಬುದನ್ನು ವಿವರಿಸಿದ್ದೇವೆ.

ಸಂಬಂಧದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವೊಂದು ರೊಮ್ಯಾಂಟಿಕ್ ಮಾರ್ನಿಂಗ್ ಹ್ಯಾಬಿಟ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ:

ಗುಡ್ ಮಾರ್ನಿಂಗ್ ಎಂದು ಹೇಳುವುದು ಮುಖ್ಯ:

ಗುಡ್ ಮಾರ್ನಿಂಗ್ ಎಂದು ಹೇಳುವುದು ಮುಖ್ಯ:

ಇದು ಕೇವಲ ಎರಡು ಪದಗಳಷ್ಟೇ, ಆದರೆ ಇದರಲ್ಲಿ ನಗು ಮತ್ತು ಪ್ರೀತಿಯನ್ನು ತುಂಬಿಸಿದಾಗ, ಅದು ನಿಮಗೆ ಮತ್ತು ನಿಮ್ಮ ಸಂಗಾತಿಯ ದಿನಕ್ಕೆ ಉತ್ಸಾಹದ ಡೋಸೇಜ್ ಆಗಿ ಮಾರ್ಪಾಡಾಗುತ್ತದೆ. ಒಬ್ಬರಿಗೊಬ್ಬರು ಗುಡ್ ಮಾರ್ನಿಂಗ್ ಅನ್ನು ನಗು ಮತ್ತು ಅಪ್ಪುಗೆಯೊಂದಿಗೆ ಹೇಳಿಕೊಳ್ಳಿ. ಅದು ನಿಮ್ಮ ಮನಸ್ಥಿತಿಗೆ ಇದ್ದಕ್ಕಿದ್ದಂತೆ ತರುವ ಬದಲಾವಣೆಯನ್ನು ನೀವೇ ನೋಡಬಹುದು.

ಒಟ್ಟಿಗೆ ವ್ಯಾಯಾಮ ಮಾಡಿ:

ಒಟ್ಟಿಗೆ ವ್ಯಾಯಾಮ ಮಾಡಿ:

ನೀವಿಬ್ಬರೂ ಕೆಲಸ ಮಾಡುವ ವಿಧಾನ ಏನೇ ಇರಲಿ, ಅದನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಿ. ಒಬ್ಬರಿಗೊಬ್ಬರು ಸ್ಫೂರ್ತಿ ನೀಡುವುದರ ಜೊತೆಗೆ, ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಅವಕಾಶವನ್ನು ಇದು ಮಾಡುತ್ತದೆ. ವ್ಯಾಯಾಮ ಮಾಡುವಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಹರಟೆ ಹೊಡೆಯುತ್ತಾ ಸಮಯ ಕಳೆಯಲು ಪ್ರಯತ್ಸಿಸಿ.

ಒಟ್ಟಿಗೆ ಸ್ನಾನ ಮಾಡಿ:

ಒಟ್ಟಿಗೆ ಸ್ನಾನ ಮಾಡಿ:

ಒಟ್ಟಿಗೆ ಸ್ನಾನ ಮಾಡುವುದು ನೀವು ಒಟ್ಟಿಗೆ ಕಳೆಯಬಹುದಾದ ರೊಮ್ಯಾಂಟಿಕ್ ದಾರಿಯಾಗಿದೆ. ಕಣ್ಣುಗಳು ನಿಮ್ಮಿಬ್ಬರನ್ನು ಹತ್ತಿರಕ್ಕೆ ತಂದರೆ, ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ. ಕಣ್ಣಿನ ಭಾಷೆಗಿಂತ ಮಿಗಿಲಾದ ಬಾಷೆ ಮತ್ತೊಂದಿಲ್ಲ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಇನ್ನು ಮುಂದೆ ಇಬ್ಬರೂ ಬೇರೆ ಬೇರೆಯಾಗಿ ಸ್ನಾ ಮಾಡುವ ಅಗತ್ಯವಿಲ್ಲ. ವಾರಕ್ಕೆ ಒಂದು ಬಾರಿ ಆದರೂ ಇಬ್ಬರೂ ಜೊತೆ ಸೇರಿ ಸ್ನಾನ ಮಾಡಿ.

ಒಟ್ಟಿಗೆ ಉಪಾಹಾರ ಸೇವಿಸಿ:

ಒಟ್ಟಿಗೆ ಉಪಾಹಾರ ಸೇವಿಸಿ:

ನಿಮ್ಮ ಬೆಳಗ್ಗಿನ ಬ್ರೇಕ್ ಫಾಸ್ಟನ್ನು ಒಟ್ಟಿಗೆ ತಿನ್ನುವುದು ನಿಮ್ಮ ಜೀವನದಲ್ಲಿ ಮ್ಯಾಜಿಕ್ ಮಾಡಬಹುದು. ಇದು ನಿಮ್ಮನ್ನು ತಂಡದಂತೆ ಮಾಡುತ್ತದೆ. ಒಟ್ಟಿಗೆ ಊಟ-ತಿಂಡಿ ತಿನ್ನುವುದರಿಂದ ಇಬ್ಬರ ಅಭಿರುಚಿಗಳು ಅರ್ಥವಾಗುತ್ತವೆ, ಜೊತೆಗೆ ಇದು ಮುಂದಿನ ದಿನಗಳಲ್ಲಿ ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಸಹಾಯ ಮಾಡುತ್ತದೆ. ಈ ಸಮಮದಲ್ಲಿ ಜೋಕ್ ಅಥವಾ ಜೀವನ ಕಷ್ಟಸುಖಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ದಿನವನ್ನು ಸಂತೋಷದ ಮೋಡ್‌ನಲ್ಲಿ ಹೇಗೆ ಕಿಕ್‌ಸ್ಟಾರ್ಟ್ ಮಾಡುತ್ತದೆ ಎಂಬುದನ್ನು ನೀವು ಅರಿತುಕೊಳ್ಳುವಿರಿ!

ಆಗಾಗ್ಗೆ ಸ್ಪರ್ಶಿಸಿ:

ಆಗಾಗ್ಗೆ ಸ್ಪರ್ಶಿಸಿ:

ಬೆಳಿಗ್ಗೆ ಎದ್ದ ತಕ್ಷಣ ದೈನಂದಿನ ಕೆಲಸಗಳಲ್ಲಿ ಬ್ಯಸಿಯಾಗಿರತ್ತಾರೆ. ನೀವು ಮಕ್ಕಳನ್ನು ಹೊಂದಿದ್ದರೆ, ಅದು ಇನ್ನಷ್ಟು ಕಾರ್ಯನಿರತವಾಗಿದೆ. ಆದರೆ ಆಗಾಗ್ಗೆ ಪರಸ್ಪರ ಸ್ಪರ್ಶಿಸುವ ಅವಕಾಶವನ್ನು ಪಡೆದುಕೊಳ್ಳಿ. ಉಪಾಹಾರ ಸೇವಿಸುವಾಗ ಕೈಗಳನ್ನು ಸ್ಪರ್ಶಿಸುವುದು ಅಥವಾ ಕೆಲಸ ಮಾಡುವಾಗ ಭುಜದ ಮೇಲೆ ಕೈ ಇತ್ಯಾದಿ. ಈ ಸನ್ನೆಗಳು ದೊಡ್ಡ ರೀತಿಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತವೆ!, ನಿಮ್ಮ ಸಂಗಾತಿಗೆ ಹಾಯಾದ ಭಾವನೆ ನೀಡುತ್ತದೆ.

English summary

Romantic Morning Habits to Grow a Strong Bond With Your Partner in Kannada

Here we talking about Romantic morning habits to grow a strong bond with your partner in kannada, read on
Story first published: Tuesday, May 4, 2021, 14:46 [IST]
X
Desktop Bottom Promotion