For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಹೀಗೆ ಮಾಡಿದರೆ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು

|

ಹೊಸ ವರ್ಷ ಪ್ರಾರಂಭವಾಗುವಾಗ ಸಂಗಾತಿ ಜೊತೆ ಖುಷಿ-ಖುಷಿಯಾಗಿ ಸ್ವಾಗತಿಸಲು ರೆಡಿಯಾಗಿದ್ದೀರಾ ಅಥವಾ ನಿಮ್ಮಿಬ್ಬರ ನಡುವೆ ಇರುವ ಅನೇಕ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ಹಾಗೇ ಇಟ್ಟು ಹೊಸ ವರ್ಷಕ್ಕೆ ಕಾಲಿಡಲು ಬಯಸುತ್ತಿದ್ದೀರಾ? ಖಂಡಿತ ಖುಷಿಯಾಗಿ ಸ್ವಾಗತಿಸಬೇಕೆಂದು ಬಯಸುತ್ತೀರಿ ತಾನೆ?

New Year 2023

ಹೌದು ಹೊಸ ವರ್ಷದಲ್ಲಿ ತಮ್ಮೆಲ್ಲಾ ಕಹಿ ಭಾವನೆಗಳನ್ನು ಅಳಿಸಿ ಹಾಕಿ ಹೊಸ ವರ್ಷವನ್ನು ಹೊಸತನದಿಂದ ಸ್ವಾಗತಿಸಬೇಕೆಂದು ನೀವು ಬಯಸುವುದಾದರೆ ಹೊಸ ವರ್ಷಕ್ಕೆ ಮುನ್ನ ಈ ಕಾರ್ಯಗಳನ್ನು ಮಾಡಿ.

ಮಿಸ್‌ಅಂಡರ್‌ಸ್ಟ್ಯಾಂಡಿಂಗ್‌ ದೂರಮಾಡಿ
ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಇಲ್ಲದ ಕುಟುಂಬ ಯಾವುದಿದೆ? ಎಲ್ಲಾ ದಾಂಪತ್ಯದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಚಿಕ್ಕ ತಪ್ಪು ಕಲ್ಪನೆ ಅಥವಾ ಭಿನ್ನಾಭಿಪ್ರಾಯ ಇದ್ದಿದ್ದರೆ ಅದನ್ನು ಇಬ್ಬರು ಕೂತು ಬಗೆಹರಿಸಲು ಪ್ರಯತ್ನಿಸಿ.

ಎಷ್ಟೋ ಭಿನ್ನಾಭಿಪ್ರಾಯಗಳ ಬೆಳೆಯುವುದು ಆ ವಿಷಯದ ಬಗ್ಗೆ ಇಬ್ಬರು ಮಾತನಾಡದೇ ಇದ್ದಾಗ. ಚಿಕ್ಕ ಸಂಶಯ ಅಥವಾ ಅಭಿಪ್ರಾಯ ವ್ಯತ್ಯಾಸವನ್ನು ಹಾಗೇ ಬಿಟ್ಟರೆ ಅದು ಹಾಗೇ ಬೆಳೆದು ಸಂಸಾರದ ಖುಷಿಯನ್ನೇ ಕಿತ್ತುಕೊಳ್ಳಬಹುದು. ಆದ್ದರಿಂದ ಮಿಸ್‌ಅಂಡರ್‌ಸ್ಟ್ಯಾಂಡಿಂಗ್ ಇದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು.

ಏನೋ ಮಿಸ್‌ ಹೊಡೆದಿದೆ ಎಂಬುವುದು ನಮ್ಮ ಸಂಗಾತಿಯ ವರ್ತನೆ ನೋಡಿದಾಗ ತಿಳಿದು ಬರುತ್ತದೆ. ಆಗ ಅವರ ಬಳಿ ನಿನ್ನ ಕೋಪಕೆ ಕಾರಣವೇನು ಎಂದು ಕೇಳಿ, ಅವರು ಹೇಳಲು ನಿರಾಕರಿಸಿದರೆ ಪ್ರೀತಿಯಿಂದ ವಿಚಾರಿಸಿ, ಅವರು ಅವರ ಕೋಪಕ್ಕೆ ಕಾರಣವೇನು ಎಂಬುವುದು ಖಂಡಿತ ಹೇಳುತ್ತಾರೆ. ಆಗ ನಿಮಗೆ ಅವರ ಸಂಶಯ ಅಥವಾ ತಪ್ಪ ಕಲ್ಪನೆ ಬಗೆಹರಿಸಬಹುದು.

ನಿಮ್ಮಲ್ಲಿ ಏನೋ ಅಸಮಧಾನ ಅಥವಾ ತಪ್ಪು ಕಲ್ಪನೆ ಇದ್ದರೆ ಹೊಸ ವರ್ಷಕ್ಕೆ ಮುಂಚೆನೇ ಮುಕ್ತವಾಗಿ ಮಾತನಾಡುವ ಮೂಲಕ ಪರಿಹರಿಸಿ.

ಸತ್ಯವನ್ನು ಒಪ್ಪಿಕೊಳ್ಳಿ
ಒಂದು ಒಳ್ಳೆಯ ಸಂಬಂಧದಲ್ಲಿ ಯಾವುದೇ ಮುಚ್ಚುಮರೆ ಇರಬಾರದು, ಅದು ಯಾವುದೇ ವಿಷಯದಲ್ಲಿ ಆದರೂ ಇಬ್ಬರು ಮನಸ್ಸು ಬಿಚ್ಚಿ ತಮ್ಮ ಅನಿಸಿಕೆಗಳನ್ನು ಹೇಳಬೇಕು. ಹೇಳಿದರೆ ಸಂಗಾತಿ ಎಲ್ಲಿ ತಪ್ಪು ತಿಳಿಯಬಹುದೆಂದು ನಿಮಗೆ ಅನಿಸಬಹುದು, ಆದರೆ ಹೇಳದೇ ಇದ್ದರೆ ಅದರಿಂದ ಮುಂದೆ ದೊಡ್ಡ ಸಮಸ್ಯೆ ಬರಬಹುದು. ಆದ್ದರಿಂದ ಏನೇ ಮನಸ್ಸಿಗೆ ಅನಿಸಿದರೂ ಅದನ್ನು ಮುಕ್ತವಾಗಿ ನಿಮ್ಮ ಸಂಗಾತಿ ಜೊತೆ ಚರ್ಚಿಸಲು ಹಿಂಜರಿಕೆ ಬೇಡ.

ಸಂಗಾತಿಯನ್ನು ಗೌರವಿಸಿ
ದಂಪತಿ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಬೇಕು. ಆದರೆ ಎಷ್ಟೋ ಕುಟುಂಬದಲ್ಲಿ ಅದು ಇರಲ್ಲ, ಹೆಂಡತಿಯ ಭಾವನೆಗಳಿಗೆ ಅಥವಾ ಅಭಿಪ್ರಾಯಗಳಿಗೆ ಬೆಲೆನೇ ಇರಲ್ಲ, ಆ ರೀತಿ ಇದ್ದರೆ ಅದು ಸುಂದರ ದಾಂಪತ್ಯ ಅನಿಸುವುದಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು, ಭಾವನೆಗಳಿಗೆ, ಮಾತುಗಳಿಗೆ ಬೆಲೆ ಕೊಡಬೇಕು. ಅದು ನಡೆಯುತ್ತಿಲ್ಲ ಎಂದಾದರೆ ಹೊಸ ವರ್ಷಕ್ಕೆ ಮುನ್ನವೇ ಈ ಬಗೆ ಮುಕ್ತ ಚರ್ಚೆ ಮಾಡಿ ಹೊಸದಾಗ ಜೀವನ ಪ್ರಾರಂಭಿಸಿ.

ಹೊಸ ವರ್ಷದ ಬಗ್ಗೆ ಪ್ಲ್ಯಾನ್ ಮಾಡಿ
ಹೊಸ ವರ್ಷದಲ್ಲಿ ಏನೆಲ್ಲಾ ಮಾಡಬೇಕು, ಏನೆಲ್ಲಾ ಯೋಜನೆಗಳನ್ನು ರೂಪಿಸಬೇಕು ಎಂಬುವುದರ ಬಗ್ಗೆ ಇಬ್ಬರು ಕೂತು ಚರ್ಚಿಸಿ. ಮನೆ ಕಟ್ಟುವುದಾದರೆ ಕಟ್ಟು ಮನೆ ಹೇಗಿರಬೇಕು ಅಥವಾ ಮತ್ಯಾವುದೋ ಪ್ಲ್ಯಾನ್ ಇದ್ದರೆ ಆ ಕುರಿತು ಜೊತೆಯಾಗಿ ಚರ್ಚಿಸಿ. ಹೊಸ ವರ್ಷದ ಬಜೆಟ್‌ ಪ್ಲ್ಯಾನ್ ಒಬ್ಬರು ಮೊದಲೇ ಮಾಡಿ ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಗುರಿ ಬೇಗನೆ ತಲುಪಬಹುದು.

ಹೊಸ ವರ್ಷ ಸ್ವಾಗತಿಸಲು ಪ್ಲ್ಯಾನ್ ಮಾಡಿ
ಈ ಹೊಸ ವರ್ಷವನ್ನು ಹೇಗೆ ಸ್ವಾಗತಿಸಬೇಕು ಎಂಬ ಪ್ಲ್ಯಾನ್ ಮಾಡಿ. ಎಲ್ಲಿಗಾದರೂ ಹೋಗಬೇಕೋ ಅಥವಾ ಮನೆಯಲ್ಲಿಯೇ ಮಾಡುವುದೋ, ಮನೆಯಲ್ಲಿ ಏನೆಲ್ಲಾ ಅರೇಂಜ್‌ಮೆಂಟ್‌ ಮಾಡಬೇಕು ಎಂದು ಪ್ಲ್ಯಾನ್ ಮಾಡಿ. ಮಕ್ಕಳಿದ್ದರೆ ಅವರು ಖುಷಿ-ಖುಷಿಯಾಗಿ ನಿಮ್ಮ ಜೊತೆ ಕುಣಿದು ಕುಪ್ಪಿಳಿಸುವ ಕ್ಷಣಗಳನ್ನು ಸೃಷ್ಟಿಸಿ.

ಪ್ಲ್ಯಾನ್ ರೊಮ್ಯಾಂಟಿಕ್ ಆಗಿರಲಿ
ಹೊಸ ವರ್ಷ ನಿಮ್ಮ ಜೀವನ ರಸಮಯವಾಗಿರಲಿ, ಹಾಗಾಗಿ ಹೊಸ ವರ್ಷವನ್ನು ಇಬ್ಬರು ರೊಮ್ಯಾಂಟಿಕ್‌ ಆಗಿ ಸ್ವಾಗತಿಸಿ. ಲಾಂಗ್ ಡ್ರೈವ್ ಅಥವಾ ಇಷ್ಟದ ರೆಸ್ಟೋರೆಂಟ್‌ಗೆ ಹೋಗುವುದು, ಕ್ಯಾಂಡಲ್‌ ಲೈಟ್‌ ಡಿನ್ನರ್ ಹೀಗೆ ನಿಮಗೆ ಇಷ್ಟವಾಗುವಂತೆ ಪ್ಲ್ಯಾನ್‌ ರೊಮ್ಯಾಂಟಿಕ್ ಆಗಿ ಸ್ವಾಗತಿಸಿ, ಈ ರೀತಿಯೆಲ್ಲಾ ಮಾಡುವುದರಿಂದ ನಿಮ್ಮಿಬ್ಬರ ನಡುವಿನ ಅನುರಾಗ ತುಂಬಿ ಹರಿಯುವುದು ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು....

ಹ್ಯಾಪಿ ನ್ಯೂ ಇಯರ್.....

English summary

New Year 2023: Do these Things To start Relationship With A Fresh Note

New Year 2023: Before new year start do these things to start a relationship with a fresh note read on....
X
Desktop Bottom Promotion