For Quick Alerts
ALLOW NOTIFICATIONS  
For Daily Alerts

ಎಚ್ಚರ! ಸಹೋದ್ಯೋಗಿಗಳ ಜತೆ ಎಂದಿಗೂ ಈ ವಿಷಯಗಳನ್ನು ಹಂಚಿಕೊಳ್ಳಲೇಬೇಡಿ

|

ನಿಮ್ಮ ಕೆಲಸದ ವಾತಾವರಣವು ನಿಮ್ಮ ಸಾಮಾಜಿಕ ವಾತಾವರಣವೂ ಆಗಿರಬಹುದು. ಆದಾಗ್ಯೂ, ನಿಮ್ಮ ಸಹೋದ್ಯೋಗಿಗಳಿಗೆ ನೀವು ಬಹಿರಂಗಪಡಿಸಲು ಸಾಧ್ಯವಿಲ್ಲದ ಕೆಲವು ವಿಷಯಗಳಿವೆ. ಉತ್ತಮವಾಗಿ ಕೆಲಸ ಮಾಡುವುದು, ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ನಿಮ್ಮ ಕೆಲಸದ ಸಹೋದ್ಯೋಗಿಗಳೊಂದಿಗೆ ಅದ್ಭುತವಾದ ಸಂಬಂಧವನ್ನು ಬೆಳೆಸುವುದು ಸಹಜ, ಆದರೆ ನೀವು ಏನು ಹಂಚಿಕೊಳ್ಳಬೇಕು ಮತ್ತು ಯಾವುದನ್ನು ಹಂಚಿಕೊಳ್ಳಬಾರದು ಎಂಬುದರ ಕುರಿತು ನೀವು ಮಿತಿಯನ್ನು ನಿಗದಿಪಡಿಸಬೇಕು. ನಿಮ್ಮ ಜೀವನವನ್ನು ಸುಲಭಗೊಳಿಸಲು, ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದನ್ನು ನೀವು ತಡೆಯಬೇಕಾದ ವಿಷಯಗಳ ಪಟ್ಟಿಯನ್ನು ನಾವು ತಯಾರಿಸಿದ್ದೇವೆ.

ಸಂಬಳದ ಮಾಹಿತಿ

ಸಂಬಳದ ಮಾಹಿತಿ

ನೀವು ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಗೆ ಎಷ್ಟೇ ಹತ್ತಿರವಾಗಿದ್ದರೂ ನಿಮ್ಮ ಸಂಬಳ (ವೇತನ)ದ ಬಗ್ಗೆ ಮಾತ್ರ ಎಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡಲೇಬೇಡಿ. ಸಂಬಳದ ಮಾಹಿತಿಯನ್ನು ಬಹಿರಂಗಪಡಿಸಿದ್ದೇ ಆದಲ್ಲಿ ನೀವು ಇನ್ಯಾವುದೇ ಇತರೆ ವೃತ್ತಿಪರ ವಿಷಯಗಳನ್ನು ಗೌಪ್ಯವಾಗಿಡಲು ಸಮರ್ಥವಾಗಿಲ್ಲ ಎಂದರ್ಥ ಎದಾಗುತ್ತದೆ. ಅಲ್ಲದೇ ಇದರಿಂದ ನಿಮ್ ಸಹೋದ್ಯೋಗಿಯ ಜತೆ ಅನಗತ್ಯ ಹೋಲಿಕೆ ಅಥವಾ ಇನ್ಯಾವುದೇ ತೊಡಕುಗಳಿಗೆ ಕಾರಣವಾಗಬಹುದು, ಆದ್ದರಿಂದ ಅಪ್ಪಿತಪ್ಪಿಯೂ ವೇತನದ ವಿಚಾರ ಬಾಯಿಬಿಡಬೇಡಿ.

ಕೆಲಸದ ದೂರುಗಳು

ಕೆಲಸದ ದೂರುಗಳು

ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಕೆಲಸದ ಹೊರೆ, ಒತ್ತಡ ಹೆಚ್ಚೇ ಇರಬಹುದು. ಇದರ ನಡುವೆ ಕಂಪನಿಯ ಬಗ್ಗೆ ಸಹ ನಿಮಗೆ ಕೆಲವು ದೂರುಗಳಿರಬಹುದು. ಆದರೆ ಈ ಎಲ್ಲವನ್ನೂ ನಿಮ್ಮ ಸಹೋದ್ಯೋಗಿಯ ಜತೆ ಹಂಚಿಕೊಂಡಿದ್ದೇ ಆದಲ್ಲಿ ನಿಮ್ಮ ಕೆಲಸಕ್ಕೇ ಕುತ್ತು ಬರಬಹುದು. ಅವರು ನಿಮ್ಮ ಆಪ್ತ ಸ್ನೇಹಿತರೇ ಆಗಿದ್ದರೂ, ಅವರಿಗೇ ತಿಳಿಯದಂತೆ ಅಥವಾ ಕಾರಣಾಂತರಗಳಿಂದ ಅವರು ಬದಲಾಗಿ ನಿಮ್ಮ ದೂರುಗಳನ್ನು ಇತರರಿಗೂ ತಿಳಿಸಬಹುದು ಅಲ್ಲವೇ. ಕಂಪನಿಯ ನೀತಿಗಳನ್ನು ನೀವು ಒಪ್ಪದಿದ್ದರೆ ಅದನ್ನು ಸಂಬಂಧಪಟ್ಟ ಜನರಿಗೆ ತಿಳಿಸಿ, ಇತರೆ ಸಹೋದ್ಯೋಗಿಯ ಬಗ್ಗೆ ದೂರಿದ್ದರೆ ಅದನ್ನು ಅವರ ಬಳಿಯೇ ನೇರವಾಗಿ ಹೇಳಿ ಬಗೆಹರಿಸಿಕೊಳ್ಳಿ. ಬದಲಾಗಿ ನಿಮ್ಮೊಂದಿಗೆ ಕೆಲಸ ಮಾಡುವವರಿಗೆ ಹೇಳುವುದರಿಂದ ಏನೂ ಪ್ರಯೋಜನವಿಲ್ಲ, ಅವರೂ ಸಹ ನಿಮ್ಮಂತೆಯೇ ಒಬ್ಬ ಉದ್ಯೊಗಿ ಎಂಬುದು ನಿಮಗೆ ನೆನಪಿರಲಿ.

ವೈದ್ಯಕೀಯ ಇತಿಹಾಸ

ವೈದ್ಯಕೀಯ ಇತಿಹಾಸ

ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಸಮಸ್ಯೆ ನಿಮ್ಮದೇ ಆಗಿರುತ್ತದೆ, ನೀವು ಅವರೊಂದಿಗೆ ಹಂಚಿಕೊಳ್ಳುವುದರಿಂದ ಹೆಚ್ಚೆಂದರೆ ಸಾಂತ್ವನ ಹೇಳಬಹುದು ಅಷ್ಟೇ. ಅಲ್ಲದೇ ಇದರಿಂದ ಮುಂದೆ ನಿಮಗೇ ಸಮಸ್ಯೆಗಳು ಹೆಚ್ಚಾಗಬಹುದು ಅಥವಾ ನಿಮ್ಮ ದುರ್ಬಲತೆಯಾಗಿ ಪರಿಣಮಿಸಬಹುದು. ಆದ್ದರಿಂದ ನಿಮ್ಮ ಸಹೋದ್ಯೋಗಿ ಎಷ್ಟೇ ಸಮೀಪದವರಾಗಿದ್ದರೂ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಬೇಡಿ.

ವೈಯಕ್ತಿಕ ವಿವರಗಳು

ವೈಯಕ್ತಿಕ ವಿವರಗಳು

ಮೊದಲನೆಯದಾಗಿ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸಹೋದ್ಯೋಗಿಗಳ ಜತೆ ಹಂಚಿಕೊಳ್ಳವ ಅವಶ್ಯಕತೆಯೇ ಇಲ್ಲ. ಹಾಗಿದ್ದೂ ನೀವು ಹೇಳಿದ್ದೇ ಆದಲ್ಲಿ ನಿಮ್ಮ ಗೌರವ, ಘನತೆಯನ್ನು ನೀವೆ ಕಳೆದುಕೊಂಡಂತೆ, ಅದಕ್ಕೂ ಮೀರಿ ಅವರಿಗೆ ನಿಮ್ಮ ಮೇಲಿನ ವಿಶೇಷ ಆಸಕ್ತಿಯೇ ಇರುವುದಿಲ್ಲ. ಆದ್ದರಿಂದ ನಿಮ್ಮ ನಿಕಟ ವೈಯಕ್ತಿಕ ಜೀವನದ ವಿವರಗಳನ್ನು ಎಂದಿಗೂ ಹಂಚಿಕೊಳ್ಳುವ ತಪ್ಪು ಮಾಡಲೇಬೇಡಿ. ಇನ್ನೂ ಮುಖ್ಯವಾಗಿ, ಅವರು ಈ ಮಾಹಿತಿಯನ್ನು ನಿಮ್ಮ ವಿರುದ್ಧ ಅಥವಾ ಇತರೆ ಸ್ವಹಿತಾಸಕ್ತಿಗೆ ಬಳಸಿಕೊಳ್ಳಬಹುದು.

ಸಹೋದ್ಯೋಗಿಗಳ ನಕಾರಾತ್ಮಕ ಅಭಿಪ್ರಾಯಗಳು

ಸಹೋದ್ಯೋಗಿಗಳ ನಕಾರಾತ್ಮಕ ಅಭಿಪ್ರಾಯಗಳು

ಕಚೇರಿಯಲ್ಲಿ ಇತರ ಸಹೋದ್ಯೋಗಿಯ ಜೀವನಶೈಲಿ, ವೃತ್ತಿಪರ ಸಾಮರ್ಥ್ಯಗಳು ಅಥವಾ ಇನ್ಯಾವುದೇ ವಿಚಾರಗಳನ್ನು ನೀವು ಒಪ್ಪದಿದ್ದರೆ ಆ ವ್ಯಕ್ತಿಯನ್ನು ಕಡೆಗಣಿಸಿ. ತೀರಾ ಅಗತ್ಯವಿದ್ದರೆ ಮಾತ್ರ ಸಂಪರ್ಕಿಸಿ. ಅದರ ಬದಲಾಗಿ, ಅಂಥಾ ಸಹೋದ್ಯೋಗಿಯ ಬಗ್ಗೆ ಇನ್ನೊಬ್ಬರೊಂದಿಗೆ ನಕಾರಾತ್ಮಕವಾಗಿ ಮಾತನಾಡಲು ಹೋಗಲೇಬೇಡಿ. ಇಂಥಾ ವಿಚಾರಗಳು ಮುಂದೆ ನಿಮಗೆ ದೊಡ್ಡ ಕುತ್ತಾಗಬಹುದು ಅಥವಾ ಕೆಲಸದ ಸ್ಥಳದಲ್ಲಿ ವಾದ-ವಿವಾದಗಳಿಗೆ ಎಡೆಮಾಡಿಕೊಡಬಹುದು.

ಬಣ್ಣ, ಜಾತಿ, ಧರ್ಮ ವಿಚಾರ ಸಲ್ಲದು

ಬಣ್ಣ, ಜಾತಿ, ಧರ್ಮ ವಿಚಾರ ಸಲ್ಲದು

ಕೆಲಸದ ಸ್ಥಳದಲ್ಲಿ ಎಲ್ಲರೂ ಒಂದೇ, ಇಲ್ಲಿ ಧರ್ಮ, ಜಾತಿ, ಬಣ್ಣ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಈ ಬಗ್ಗೆ ಕಚೇರಿಯಲ್ಲೂ ಸಹ ನೀವು ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಎಚ್ಚರಿಸಿರುತ್ತಾರೆ. ಅದಾಗ್ಯೂ ನೀವು ಜನಾಂಗೀಯ, ಧರ್ಮ, ಬಣ್ಣದ ಬಗ್ಗೆ ನಿಂದನೆ ಮಾಡಿದ್ದೇ ಆದರೆ ಕಚೇರಿಗೆ ಮಾತ್ರವಲ್ಲದೇ, ಅದರ ಹೊರತಾಗಿಯೂ ನೀವು ಶಿಕ್ಷೆಯನ್ನು ಎದುರಿಸಬೇಕಾದೀತು ಎಚ್ಚರ. ನಿಮ್ಮ ಮಾನಸಿಕ ಕೆಟ್ಟ ಸಂತೋಷಕ್ಕಾಗಿ ಇತರರ ಕಾಲು ಎಳೆದು ತಮಾಷೆ ಮಾಡುವುದರಿಂದ ನಿಮ್ಮ ಸಹೋದ್ಯೋಗಿಯ ಮನಸ್ಸು ಸಹ ನೋಯಬಹುದು. ಜನಾಂಗೀಯ ಹಾಸ್ಯ ಮಾಡುವುದು ತಮಾಷೆಯಲ್ಲ ಮತ್ತು ಎಂದಿಗೂ ಅಂತಹ ಅಪಾಯವನ್ನು ತೆಗೆದುಕೊಳ್ಳಬೇಡಿ.

English summary

Things you should never share with a work colleague

Here we are discussing about Never Ever share with a work colleague These Things. To make your life easy, we've made a list of things that you should refrain from sharing with your co-workers.Read more.
X
Desktop Bottom Promotion