For Quick Alerts
ALLOW NOTIFICATIONS  
For Daily Alerts

ಸಂಬಂಧ ಲಾಂಗ್ ಡಿಸ್ಟಾನ್ಸ್ ನಲ್ಲಿದ್ದಾಗ ಈ ಪ್ರೀತಿ ಮಂತ್ರ ಸಹಾಯ ಮಾಡುತ್ತೆ..

|

ಲಾಂಗ್ ಡಿಸ್ಟಾನ್ಸ್ ರಿಲೇಷನ್ ಶಿಪ್ ನಲ್ಲಿದ್ದಾಗ ದಂಪತಿಗಳು ಅಥವಾ ಪ್ರೇಮಿಗಳು ಸ್ವಲ್ಪ ದೂರ ಮತ್ತು ಬೇರ್ಪಟ್ಟ ಭಾವನೆ ಸಾಮಾನ್ಯವಾಗಿದೆ. ಈ ಭಾವನೆಗಳು ಅವರಲ್ಲಿ ಕೆಲವು ರೀತಿಯ ಸಂದೇಹಗಳನ್ನು ಹುಟ್ಟುಹಾಕಬಹುದು. ನನ್ನಂತೆಯೇ ಅವನು/ಅವಳು ಇದೇ ರೀತಿ ಕಾಯುತ್ತಿರಬಹುದುದೇ?, ನಾನು ಕಾಯುವ ವ್ಯಕ್ತಿ ಇದಕ್ಕೇ ಯೋಗ್ಯನೇ' ಹೀಗೆ ನೂರಾರು ಗೊಂದಲಗಳು ಹುಟ್ಟಿಕೊಳ್ಳುತ್ತವೆ.

ದೂರದಲ್ಲಿನ ಸಂಬಂಧ ಪರಿಕಲ್ಪನೆಯು ಹೊಸದಲ್ಲವಾದರೂ, ತಮ್ಮ ಪ್ರೀತಿ ಪಾತ್ರರು ಮತ್ತೊಂದು ಖಂಡದಲ್ಲಿದ್ದರೂ ಸಹ ಅವರನ್ನು ಸಂಪರ್ಕ ಸಾಧಿಸಲು ಮತ್ತು ಸಂಪರ್ಕದಲ್ಲಿರುವ ಮಾರ್ಗವನ್ನು ತಂತ್ರಜ್ಞಾನವು ಸುಲಭಗೊಳಿಸಿದೆ. ಆದರೆ ಅದರ ಹೊರತಾಗಿಯೂ, ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನೀವು ಹೆಣಗಾಡುತ್ತಿದ್ದರೆ ಮತ್ತು ಅದನ್ನು ಸ್ಥಿರವಾಗಿ ಮತ್ತು ವಿನೋದದಿಂದ ಇರಿಸಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ಅದನ್ನು ನಿಭಾಯಿಸುವ ಕಾರ್ಯವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ, ಮುಂದೆ ಓದಿ.

ಲಾಂಗ್ ಡಿಸ್ಟಾನ್ಸ್ ರಿಲೇಷನ್ ಶಿಪ್ ನ್ನು ಉಳಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ:

ಪರಸ್ಪರ ಸ್ವೀಕಾರ:

ಪರಸ್ಪರ ಸ್ವೀಕಾರ:

ಈ ಹಂತದಲ್ಲಿ, ವ್ಯಕ್ತಿಯು ದೈಹಿಕವಾಗಿ ನಿಮ್ಮ ಸುತ್ತಲೂ ಇರುವುದಿಲ್ಲ ಎಂದು ಒಪ್ಪಿಕೊಳ್ಳುವುದು ತುಂಬಾ ಮುಖ್ಯ. ಈ ಹಂತಕ್ಕೆ ಪ್ರವೇಶಿಸುವ ಹಿಂದಿನ ಕಾರಣವನ್ನು ಒಪ್ಪಿಕೊಳ್ಳಿ. ಅದು ಉದ್ಯೋಗವಾಗಿರಬಹುದು, ಹಣಕಾಸಿನ ಅಗತ್ಯತೆಗಳು, ಕುಟುಂಬದ ಸಂದರ್ಭಗಳು ಅಥವಾ ಇನ್ನಾವುದೇ ಕಾರಣವಾಗಿರಬಹುದು. ಒಪ್ಪಿಕೊಳ್ಳುವಿಕೆಯು ದಂಪತಿಗಳನ್ನು ಈ ಹಂತದಲ್ಲಿ ಜೀವನ ಸರಾಗವಾಗಿ ಸಾಗುವಂತೆ ಮಾಡುತ್ತದೆ ಮತ್ತು ಭರವಸೆಯ ದೀಪವನ್ನು ಉರಿಯುವಂತೆ ಮಾಡುತ್ತದೆ.

ಸಂವಹನವು ಮುಖ್ಯವಾಗಿದೆ:

ಸಂವಹನವು ಮುಖ್ಯವಾಗಿದೆ:

ಜನರು ದೂರದ-ಸಂಬಂಧದಲ್ಲಿದ್ದಾಗ ಸಂವಹನವು ಒಂದು ಪ್ರಮುಖ ಅಂಶವಾಗುತ್ತದೆ. ಪ್ರಾಮಾಣಿಕ ಸಂವಹನ ಮತ್ತು ಸಾಕಷ್ಟು ಸ್ಥಳಾವಕಾಶ ನೀಡುವುದು ಮುಖ್ಯ. ಇವುಗಳನ್ನು ನೀಡಬೇಕಾದ ಅವಶ್ಯಕತೆಗಳನ್ನು ಪರಸ್ಪರ ಇಬ್ಬರೂ ಅರ್ಥಮಾಡಿಕೊಳ್ಳಬೇಕು. ಸಂವಹನವನ್ನು ಸ್ವ ಇಚ್ಛೆಯಿಂದ ಮಾಡಿ, ಯಾವುದೇ ಬಲವಂತಂದಿಂದಲ್ಲ. ಪರಸ್ಪರರ ದಿನದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುವುದು ದೂರದಿಂದಲೇ ಉತ್ತಮ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಮತೋಲನದಲ್ಲಿರಿ:

ಸಮತೋಲನದಲ್ಲಿರಿ:

ನಿಮ್ಮ ಅವಲಂಬನೆ ಮತ್ತು ಸ್ವಾತಂತ್ರ್ಯವು ಸಮತೋಲಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಗಾತಿಗೆ ನೀವು ಎಷ್ಟು ಬೇಕು ಎಂದು ಖಚಿತಪಡಿಸಿಕೊಳ್ಳಿ, ಆದರೆ ಅಂಟಿಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಸಂಗಾತಿಗೆ ಉಸಿರುಗಟ್ಟಿಸುತ್ತದೆ.

ತಂತ್ರಜ್ಞಾನವನ್ನು ಬಳಸಿ:

ತಂತ್ರಜ್ಞಾನವನ್ನು ಬಳಸಿ:

ವೀಡಿಯೊ ಕಾಲ್, ಇಮೇಲ್, ಪದಗಳ ಮೂಲಕ ಆಶ್ಚರ್ಯ, ಆನ್‌ಲೈನ್ ಉಡುಗೊರೆ ಎಲ್ಲವೂ ಸಂಬಂಧದಲ್ಲಿ ಉತ್ಸಾಹವನ್ನು ಕಾಪಾಡಿಕೊಳ್ಳಲು ಮತ್ತು ಸಂಪರ್ಕದಲ್ಲಿರಲು ಉತ್ತಮ ಮಾರ್ಗಗಳಾಗಿವೆ.

 ಕೇಳಲು ಪ್ರೋತ್ಸಾಹಿಸಿ:

ಕೇಳಲು ಪ್ರೋತ್ಸಾಹಿಸಿ:

ಅವರು ನಿಮ್ಮ ಮಾತನ್ನು ಸರಿಯಾಗಿ ಕೇಳಿದಾಗ ತಕ್ಷಣದ ಮೆಚ್ಚುಗೆಯನ್ನು ತೋರಿಸಿ ಮತ್ತು ಅವರು ಮಾತನಾಡುವಾಗ ಆಸಕ್ತಿಯನ್ನು ತೋರಿಸಿ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ನೀವು ಸಂಪರ್ಕದಲ್ಲಿರಬೇಕು.

ಒಟ್ಟಿಗೆ ಚಟುವಟಿಕೆಗಳನ್ನು ಮಾಡಿ:

ಒಟ್ಟಿಗೆ ಚಟುವಟಿಕೆಗಳನ್ನು ಮಾಡಿ:

ಪರಸ್ಪರ ಒಟ್ಟಿಗೆ ವಿಷಯಗಳನ್ನು ಅನ್ವೇಷಿಸುವ ಮತ್ತು ಅನುಭವಿಸುವ ಅವಶ್ಯಕತೆಯಿದೆ, ಆದರೆ ದೂರದ-ಸಂಬಂಧದಲ್ಲಿ, ಅದು ಕಷ್ಟಕರವಾಗುತ್ತದೆ. ಒಂದೇ ಸಮಯದಲ್ಲಿ ಚಲನಚಿತ್ರವನ್ನು ನೋಡುವುದು, ವರ್ಚುವಲ್ ಆಗಿ ಒಟ್ಟಿಗೆ ಅಡುಗೆ ಮಾಡುವುದು ಅಥವಾ ಒಬ್ಬರ ದಿನವನ್ನು ಅನ್ವೇಷಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡುವುದು. ಅಲ್ಲದೆ, ಒಟ್ಟಿಗೆ ರಜಾದಿನವನ್ನು ಆಯೋಜಿಸಿ.

ವಿಶ್ವಾಸವನ್ನು ಕಾಪಾಡಿಕೊಳ್ಳಿ:

ವಿಶ್ವಾಸವನ್ನು ಕಾಪಾಡಿಕೊಳ್ಳಿ:

ವಿಶ್ವಾಸವು ಎಲ್ಲಾ ಬಲವಾದ ಸಂಬಂಧಗಳ ಅಡಿಪಾಯವಾಗಿದೆ. ದೈಹಿಕ ಅಂತರವಿದ್ದರೂ ಸಹ, ಬಾಂಧವ್ಯ ಮತ್ತು ಭಾವನಾತ್ಮಕ ಸಂಪರ್ಕವನ್ನು ಪರಿಣಾಮಕಾರಿಯಾಗಿ ಉಳಿಸಿಕೊಳ್ಳಬಹುದು. ಸಂಬಂಧವನ್ನು ಉಳಿಸಿಕೊಳ್ಳಲು ಮತ್ತು ದೂರದಲ್ಲಿ ಅಭಿವೃದ್ಧಿ ಹೊಂದಲು ಸಂಗಾತಿಯನ್ನು ನಂಬುವುದು ಒಂದು ಪ್ರಮುಖ ಅಂಶವಾಗಿದೆ.

English summary

Mantras To Stay Close To Your Partner In Long Distance Relationship

here we told about Mantras To Stay Close to Your Partner in Long Distance Relationship, read on
Story first published: Friday, February 26, 2021, 14:28 [IST]
X
Desktop Bottom Promotion