For Quick Alerts
ALLOW NOTIFICATIONS  
For Daily Alerts

ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ ಮೇಲೂ ವಿಚ್ಛೇದನ ತಡೆಯುವುದು ಹೇಗೆ?

|

ಈಗೆಲ್ಲಾ ಹುಡುಗುರು ಹಿಡಿದಿದ್ದಕ್ಕೆ-ಮುಟ್ಟದ್ದೆಕ್ಕೆಲ್ಲಾ ಡಿವೋರ್ಸ್‌ ಅಂತ ಹೋಗುತ್ತಾರೆ, ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಬುದ್ಧಿನೇ ಇಲ್ಲ' ಎಂದು ಹಿರಿಯರು ಹೇಳುವುದುಂಟು.

ಈಗೆಲ್ಲಾ ಎಷ್ಟೋ ಮದುವೆಗಳು ಮದುವೆಯಾಗಿ ಜೀವನ ಪ್ರಾರಂಭವಾಗುವ ಮುನ್ನವೇ ಮುರಿದು ಬೀಳುವುದುಂಟು. ಅರೇಂಜ್ಡ್ ಮ್ಯಾರೇಜ್‌ ಆದವರಿಗಿಂತ ಪ್ರೀತಿಸಿ ಮದುವೆಯಾದವರು ಹೆಚ್ಚಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.

ಮದುವೆಯಾಗುವಾಗ ನಾನಾ ನಿರೀಕ್ಷೆಗಳಿರುತ್ತೆ, ಮದುವೆಯಾದ ಮೇಲೆ ನಾವು ನಿರೀಕ್ಷೆ ಮಾಡಿದ ರೀತಿಯಲ್ಲಿ ಪರಿಸ್ಥಿತಿ ಇರದಿದ್ದರೆ ಹೊಂದಿಕೊಂಡು ಹೋಗೋಣ ಎಂಬ ಗೋಜಿಗೇ ಹೋಗಲ್ಲ, ಪಟ್‌ ಅಂತ ವಿಚ್ಛೇದನಕ್ಕೆ ಅರ್ಜಿ ಹಾಕಿ ಬಿಡುತ್ತಾರೆ.

ಈ ಪ್ರಪಂಚದಲ್ಲಿ ನೂರಕ್ಕೆ ನೂರು ಪರ್ಫೆಕ್ಟ್ ಜೋಡಿ ಎಂಬುವುದು ಇರಲು ಸಾಧ್ಯನೇ ಇಲ್ಲ, ಒಂದು ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಎಂದರೆ ಅಲ್ಲಿ ಪ್ರೀತಿಯ ಜೊತೆಗೆ ಹೊಂದಿಕೊಂಡು ಹೋಗುವ ಗುಣವಿರುತ್ತೆ.

Attend marriage counseling

ಇನ್ನು ಕೆಲವರು ಬೇರೆ ಯಾರದೋ ಮಾತಿಗೆ ಪ್ರಭಾವಿತರಾಗಿ ಅಥವಾ ಯಾವುದೋ ಚಿಕ್ಕ ಕಾರಣಕ್ಕೆ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ, ಕೂತು ಮಾತನಾಡಿದರೆ ಎಲ್ಲಾ ಸರಿಯಾಗುತ್ತಿತ್ತು, ಆದರೆ ಈಗೋ ಅದಕ್ಕೆ ಬಿಟ್ಟಿರಲಿಲ್ಲ, ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ.

ಆದರೆ ವಿಚ್ಚೇದನಕ್ಕೆ ಹಾಕಿದ ಮೇಲೆ ಕೆಲವರಿಗೆ ಎಲ್ಲಾ ಸಮಸ್ಯೆ ಬಗೆಹರಿಸಿ ಹೋಗಬೇಕೆಂದು ಅನಿಸುತ್ತದೆ, ಆದರೆ ಅವರಿಗೆ ನಾನು ಬೇಡವಾದ ಮೇಲೆ ನನಗೂ ಬೇಡ ಎಂದು ಸುಮ್ಮನಾಗುತ್ತಾರೆ.

ವಿಚ್ಛೇದನವಾದ ದಂಪತಿಯೇನೋ ಬೇರೆ-ಬೇರೆಯಾಗುತ್ತಾರೆ, ಆದರೆ ಅವರಿಗೆ ಮಕ್ಕಳಿದ್ದರೆ ಅವರ ಜೀವನದಲ್ಲಿ ಬೀರುವ ಪ್ರಭಾವ ಮಾತ್ರ ಅಷ್ಟಿಷ್ಟಲ್ಲ, ಆದ್ದರಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದ ಮೇಲೂ ನಿಮ್ಮ ದಾಂಪತ್ಯ ಜೀವನ ಉಳಿಸಿಕೊಳ್ಳಲು ನೀವು ಪ್ರಯತ್ನಿಸಿ, ನಿಮ್ಮ ಸಂಗಾತಿ ಆ ಪ್ರಯತ್ನ ಮಾಡದಿದ್ದರೂ ಪರ್ವಾಗಿಲ್ಲ, ನೀವು ಪ್ರಯತ್ನಿಸಿ ನೋಡಿ, ಮತ್ತೆ ಒಂದಾಗುವ ಸಾಧ್ಯತೆ ಹೆಚ್ಚಿದೆ:

 ಕೌನ್ಸಿಲಿಂಗ್ ಮಾಡಿ

ಕೌನ್ಸಿಲಿಂಗ್ ಮಾಡಿ

ಮರಿದು ಬೀಳಬೇಕಾಗಿದ್ದ ಎಷ್ಟೋ ವೈವಾಹಿಕ ಜೀವನ ಕೌನ್ಸಿಲಿಂಗ್‌ನಿಂದ ಉಳಿದುಕೊಳ್ಳುತ್ತದೆ, ಮುಂದೆ ಆ ಜೋಡಿ ಚೆನ್ನಾಗಿ ಬದುಕುತ್ತೆ ಕೂಡ. ಪ್ರಾರಂಭದಲ್ಲಿ ಈ ರೀತಿಯ ಕೌನ್ಸಿಲಿಂಗ್‌ಗಳನ್ನು ಮನೆಯಲ್ಲಿ ಹಿರಿಯರೇ ಮಾಡುತ್ತಾರೆ, ಅಂದರೆ ಇಬ್ಬರ ಹತ್ರ ಈ ಕುರಿತು ಮಾತನಾಡಿರುತ್ತಾರೆ, ಅಂದರೂ ವರ್ಕ್ ಆಗುತ್ತಿಲ್ಲ ಎಂದಾದರೆ ಎಕ್ಸ್‌ಪರ್ಟ್‌ಗಳನ್ನು ಭೇಟಿಯಾಗಿ. ಅವರು ಇಬ್ಬರನ್ನೂ ಮಾತನಾಡಿಸುತ್ತಾರೆ. ನಿಜವಾಗಲೂ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಇದೆಯೇ ಅಥವಾ ಚಿಕ್ಕ ಕಾರಣಕ್ಕೆ ಬೇರೆಯಾಗುತ್ತಿದ್ದೀರಾ ಎಂದು ಅರಿತು ಅವರು ಮಾತನಾಡಿ ಸರಿಪಡಿಸಲು ಪ್ರಯತ್ನಿಸುತ್ತಾರೆ.

 ಕ್ಷಮೆ ಕೇಳಿ

ಕ್ಷಮೆ ಕೇಳಿ

ನಿಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿ. ಸಾಮಾನ್ಯವಾಗಿ ಈ ರೀತಿಯ ವಿಚ್ಛೇದನಗಳು ಸಂಗಾತಿ ಮಾಡುವ ಮೋಸ ಗೊತ್ತಾಗಿ ಉಂಟಾಗತ್ತಿರುತ್ತದೆ. ಅದರ ಬಗ್ಗೆ ನಿಮಗೆ ಪಶ್ಚಾತಾಪವಿದ್ದರೆ ಇನ್ನು ಮುಂದೆ ಆ ತಪ್ಪು ಮಾಡಲ್ಲ ಎಂದು ಕ್ಷಮೆ ಕೇಳಿ. ಅದರಂತೆ ನಡೆದುಕೊಳ್ಳಿ. ಅವರು ಕ್ಷಮಿಸಿದರೆ ನಿಮ್ಮ ವೈವಾಹಿಕ ಜೀವನ ಉಳಿಯಬಹುದು.

 ಪ್ರಯತ್ನ, ಪ್ರಯತ್ನ, ಪ್ರಯತ್ನ

ಪ್ರಯತ್ನ, ಪ್ರಯತ್ನ, ಪ್ರಯತ್ನ

ಈ ವೈವಾಹಿಕ ಜೀವನ ಉಳಿಸಿಕೊಳ್ಳಲು ಪ್ರಯತ್ನಿಸಿ, ಒಂದು ಬಾರಿ ಪ್ರಯತ್ನಿಸಿದಾಗ ನೀವು ಬಯಸಿದ ಫಲ ಸಿಗದೇ ಹೋಗಬಹುದು, ಆದರೆ ಮತ್ತೆ-ಮತ್ತೆ ಪ್ರಯತ್ನ ಮಾಡಿ, ಅವರ ಭಾವನೆ ಬದಲಾಗಿ ಮತ್ತೆ ಪ್ರೀತಿ ಮೂಡಬಹುದು.

 ಮನಸ್ಸು ಬಿಚ್ಚಿ ಮಾತನಾಡಿ

ಮನಸ್ಸು ಬಿಚ್ಚಿ ಮಾತನಾಡಿ

ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಮನಸ್ಸು ಬಿಚ್ಚಿ ಮಾತನಾಡಿ, ಮೊದಲು

ಹೇಗಿದ್ದೀರಿ ಎಂಬುವುದರ ಬಗ್ಗೆ ಇಬ್ಬರು ಮಾತನಾಡಿ, ನಂತರ ಎಲ್ಲಿ ಹಳಿ ತಪ್ಪಿತು, ಇದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಮುಕ್ತವಾಗಿ ಮಾತನಾಡಿ, ಇಬ್ಬರೂ ಮನಸ್ಸು ಬಿಚ್ಚಿ ಮಾತನಾಡಿದರೆ ಎಲ್ಲವೂ ಸರಿಹೋಗಬಹುದು.

 ಒಂದು ವೇಳೆ ಸರಿ ಹೋಗದಿದ್ದರೆ ಪ್ರಯತ್ನ ಮಾಡಿದೆ ಎಂಬ ತೃಪ್ತಿಯಾದರೂ ಇರುತ್ತೆ.

ಒಂದು ವೇಳೆ ಸರಿ ಹೋಗದಿದ್ದರೆ ಪ್ರಯತ್ನ ಮಾಡಿದೆ ಎಂಬ ತೃಪ್ತಿಯಾದರೂ ಇರುತ್ತೆ.

ಕೆಲವೊಂದು ಸಂಬಂಧಗಳು ಮತ್ತೆ ಒಂದಾದರೆ ಚೆನ್ನಾಗಿರುತ್ತದೆ, ಇನ್ನು ಕೆಲವು ಸಂಬಂಧಗಳು ಬೇರೆಯಾದರನೇ ನೆಮ್ಮದಿ, ನಿಮ್ಮದು ಇದರಲ್ಲಿ ಯಾವ ಬಗೆಯ ಸಂಬಂಧ ಅಂತ ಯೋಚಿಸಿ. ವಿಚ್ಛೇದನಕ್ಕೆ ಅರ್ಜಿ ಹಾಕಿದರೂ ವೈವಾಹಿಕ ಜೀವನ ಉಳಿಸಲು ನೀವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇ ಆದರೆ ಖಂಡಿತ ಫಲ ಸಿಗುವುದು, ಹೊಂದಿಕೊಂಡು ಹೋಗುವುದು ವೈವಾಹಿಕ ಜೀವನದ ಮೊದಲ ಸೂತ್ರ ಎಂಬುವುದನ್ನು ಮರೆಯದಿರಿ.

English summary

How to Stop a Divorce After Filing in Kannada

Here are tips to save your marriage life after filing Divorce, read on....
Story first published: Friday, August 26, 2022, 19:17 [IST]
X
Desktop Bottom Promotion