Just In
Don't Miss
- Movies
ನೀರು ಮಿತಬಳಕೆ ಜಾಗೃತಿ ಮೂಡಿಸಲು 21 ಕಿ.ಮೀ ನಡೆದ ಅಕ್ಷಯ್ ಕುಮಾರ್
- News
Video: ಭಯ ಹುಟ್ಟಿಸುತ್ತೆ ಕೆಂಪುಕೋಟೆಯಲ್ಲಿ ನಡೆದ ಈ ದೃಶ್ಯ!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊಬೈಲ್‌ನಲ್ಲಿ ಸದಾ ಬ್ಯುಸಿ, ಸಂಬಂಧ ಜೋಕೆ!
ಸಂಬಂಧ ಎನ್ನುವುದು ಬಹಳ ಸೂಕ್ಷ್ಮವಾಗಿರುವಂತದ್ದು. ಆದ್ದರಿಂದ ಅದನ್ನು ಬಹಳ ಕಾಳಜಿ ವಹಿಸಿ ಕಾಪಾಡಿಕೊಳ್ಳಬೇಕು. ನೀವು ಮಾಡುವ ಣ್ಣ ತಪ್ಪುಗಳು ಸಹ ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ಅಂತಹ ಒಂದು ವಿಚಾರ ಅಂದ್ರೆ ನೀವು ಬಳಸುವ ಸ್ಮಾರ್ಟ್ ಫೋನ್. ಹೌದು, ಮೊಬೈಲ್ ಫೋನುಗಳು ಇತ್ತಿಚಿನ ದಿನಗಳಲ್ಲಿ ಸಂಬಂಧಗಳು ಹದಗೆಡಲು ಪ್ರಮುಖ ಕಾರಣ ಅಂದ್ರೆ ತಪ್ಪಾಗಲ್ಲ. ಈಗಿನ ಕಾಲದಲ್ಲಿ ಸ್ಮಾರ್ಟ್ ಫೋನ್ ಇಲ್ಲದೇ ಇರುವವರನ್ನು ವಿಚಿತ್ರವಾಗಿ ನೋಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಎಲ್ಲರ ಜೀವನದ ಪ್ರಮುಖ ಅಂಗವಾಗಿರುವಂತಹ ಸ್ಮಾರ್ಟ್ ಫೋನ್ ಕೆಲವೊಮ್ಮೆ ನಮ್ಮ ಸಂಬಂಧದ ಮೇಲೆ ಗಾಢ ಪರಿಣಾಮ ಬೀರುವುದು. ಯಾಕಂದ್ರೆ ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತೆ. ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತೆ.
ಮನೆ, ಕಚೇರಿ, ಸ್ನೇಹಿತರು ಹೀಗೆ ಪ್ರತಿಯೊಂದು ಕಡೆಯಲ್ಲೂ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರೆ, ಆಗ ನೀವು ಇದನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ತಿಳಿದಿರಬೇಕು. ಯಾಕೆಂದರೆ ಇದು ದೊಡ್ಡ ಮಟ್ಟದಲ್ಲಿ ನಿಮ್ಮ ಸಂಬಂಧವನ್ನು ಕೆಡಿಸಬಹುದು. ನೀವು ಸಂಗಾತಿಯ ಜತೆಗೆ ಕುಳಿತುಕೊಂಡು ಸ್ಮಾರ್ಟ್ ಫೋನ್ ನಲ್ಲೇ ಕಾಲ ಕಳೆಯುತ್ತಿದ್ದರೆ ಅದು ನಿಮ್ಮ ಸಂಬಂಧಕ್ಕೆ ಮಾರಕವಾಗುವುದರಲ್ಲಿ ಸಂಶಯವಿಲ್ಲ.
ಸಂಗಾತಿ ಜತೆಗೆ ಕುಳಿತುಕೊಂಡು ಮಾತನಾಡುವಾಗ ಅಥವಾ ಊಟ ಮಾಡುವಾಗಲೂ ನಿಮಗೆ ಸ್ಮಾರ್ಟ್ ಫೋನ್ ಬಳಕೆ ಮಾಡಬೇಕು ಎನ್ನುವ ಬಯಕೆಯು ಅತಿಯಾಗುತ್ತಲಿದರೆ ಆಗ ನೀವು ಇದರ ಬಗ್ಗೆ ಗಮನಿಸಿ. ಇದನ್ನು ನೀವು ಎಚ್ಚರಿಕೆ ಎಂದು ಪರಿಗಣಿಸಿ. ಯಾಕೆಂದರೆ ದೈಹಿಕವಾಗಿ ನೀವಿಬ್ಬರು ಜತೆಯಾಗಿದ್ದು, ಭಾವನಾತ್ಮಕವಾಗಿ ಅಥವಾ ಮಾನಸಿಕವಾಗಿ ದೂರವಿರುವಿರಿ. ಅರ್ಥಪೂರ್ಣ ಮಾತುಕತೆ ನಡೆಸುವ ಜತೆಗೆ ಒಳ್ಳೆಯ ಭಾವನಾತ್ಮಕ ಬೆಸುಗೆಯನ್ನು ನೀವು ಬೆಸೆಯಬೇಕು. ನೀವು ಆನ್ ಲೈನ್ ಲೋಕದಲ್ಲಿ ಇದ್ದರೆ ಆಗ ಖಂಡಿತವಾಗಿಯೂ ಅದು ನಿಮ್ಮ ಸಂಬಂಧಕ್ಕೆ ಹಾನಿ ಉಂಟು ಮಾಡುವುದು.

ಕೇಳುಗರಾಗಿ:
ನೀವು ಸಂಗಾತಿ ಜತೆಗೆ ಕುಳಿತುಕೊಂಡು ಮಾತನಾಡುತ್ತಿರುವಾಗ ಅವರು ಏನು ಹೇಳುತ್ತಿರುವರು ಎನ್ನುವುದರ ಕಡೆಗೆ ಗಮನಹರಿಸಿ. ಅವರೊಂದಿಗೆ ಮಾತನಾಡಿಕೊಂಡು ಸ್ಮಾರ್ಟ್ ಫೋನ್ ನಲ್ಲಿ ತಡಕಾಡುತ್ತಿದ್ದರೆ ಆಗ ಎದುರಿನ ವ್ಯಕ್ತಿಗೆ ತಾವು ಯಾಕಾಗಿ ಮಾತನಾಡುತ್ತಿದ್ದೇವೆ ಎಂದು ಅನಿಸುವುದು. ಅವರು ಹೇಳುವುದನ್ನು ಗಮನವಿಟ್ಟು ಕೇಳಿ. ಇದರಿಂದ ನಿಮ್ಮ ಸಂಬಂಧಕ್ಕೆ ಒಳ್ಳೆಯದಾಗುವುದು.

ಕೆಲವು ನಿಯಮ ಮಾಡಿ:
ಸ್ಮಾರ್ಟ್ ಫೋನ್ ನಿಮ್ಮ ಸಂಬಂಧವನ್ನು ಹಾಳು ಮಾಡದಂತೆ ನೋಡಿಕೊಳ್ಳಲು ನೀವು ಸಂಗಾತಿ ಜತೆಗೆ ಕೆಲವು ನಿಯಮಗಳನ್ನು ರೂಪಿಸಿಕೊಳ್ಳಿ. ಊಟ ಅಥವಾ ಮಲಗುವ ಕೋಣೆಯಲ್ಲಿ ಫೋನ್ ನ್ನು ಸೈಲೆಂಟ್ ಆಗಿಡಬಹುದು. ನಿಮ್ಮಿಬ್ಬರ ಮೊಬೈಲ್ ಫೋನ್ ಗಳು ಯಾವಾಗ ಸ್ವಿಚ್ ಆಫ್ ಆಗಬೇಕು ಎಂದು ನೀವಿಬ್ಬರು ಮೊದಲೇ ನಿರ್ಧಾರ ಮಾಡಿಕೊಳ್ಳಿ.

ಸಾಮಾಜಿಕ ಜಾಲತಾಣಗಳಲ್ಲಿ ಬಿಗುಮಾನ ಬೇಡ:
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ಇಂದಿನ ದಿನಗಳಲ್ಲಿ ಫ್ಯಾಶನ್ ಆಗಿ ಹೋಗಿದೆ. ಆದರೆ ಇದು ಸರಿಯಲ್ಲ. ಕೆಲವರು ತಾವು ಇಂತಹವರ ಜತೆಗೆ ಡೇಟಿಂಗ್ ಗೆ ಹೋಗುತ್ತಿದ್ದೇವೆ ಎಂದು ಪೋಸ್ಟ್ ಹಾಕುವರು. ನೀವು ಹೊರಗಡೆ ಸುತ್ತಾಡಲು ಹೋಗುವ ಜಾಗ, ಉಳಿದುಕೊಂಡಿರುವಂತಹ ಹೋಟೆಲ್ ಇತ್ಯಾದಿಗಳ ಬಗ್ಗೆ ಬರೆಯಬೇಡಿ. ನೀವು ಹೀಗೆ ಮಾಡುತ್ತಲಿದ್ದರೆ ಆಗ ನಿಮಗೆ ಸಾಮಾಜಿಕ ಜಾಲತಾಣದಲ್ಲಿ ಇರುವವರ ಬಗ್ಗೆ ಹೆಚ್ಚಿನ ಚಿಂತೆಯಾಗಿದೆ ಎಂದು ಹೇಳಬಹುದು. ನೀವು ಸಂಗಾತಿ ಜತೆಗೆ ಹೊರಗಡೆ ರಜೆ ಕಳೆಯಲು ಹೋದ ವೇಳೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್ ಡೇಟ್ ಮಾಡುತ್ತಲಿದ್ದರೆ, ಆಗ ಬದಿಗಿರುವ ಸಂಗಾತಿ ಏನು ಮಾಡಬೇಕು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿ.

ಸರಿಯಾದ ಕಾರಣಕ್ಕೆ ಬಳಸಿ:
ಕಚೇರಿಯಲ್ಲಿ ಇರುವ ವೇಳೆ ನೀವು ಸಂಗಾತಿಗೆ ಕೆಲವು ರೋಮ್ಯಾಂಟಿಕ್ ಆದ ಸಂದೇಶಗಳನ್ನು ಕಳುಹಿಸಿ. ಅವರೊಂದಿಗೆ ತುಂಬಾ ದೀರ್ಘ ಸಮಯದಿಂದ ಇಲ್ಲದೆ ಇದ್ದರೆ ಆಗ ನೀವು ವೀಡಿಯೋ ಕಾಲ್ ಮಾಡಿ. ಅವರ ಜತೆಗೆ ನೀವು ಆನ್ ಲೈನ್ ಗೇಮ್ ಕೂಡ ಆಡಬಹುದು. ನೀವು ಯಾವಾಗಲೂ ಸಂಗಾತಿಯ ಮುಖದಲ್ಲಿ ನಗುವನ್ನು ನೋಡಲು ಪ್ರಯತ್ನಿಸಿ. ಇದಕ್ಕಾಗಿ ನೀವು ಮೊಬೈಲ್ ಬಳಸಿದರೆ ತುಂಬಾ ಒಳ್ಳೆಯದು.

ಇದನ್ನು ಪ್ರಯತ್ನಿಸಿ:
ವಾರದಲ್ಲಿ ಒಂದು ದಿನ, ಅದರಲ್ಲೂ ವಾರಾಂತ್ಯದಲ್ಲಿ ನೀವಿಬ್ಬರು ಸಂಪೂರ್ಣವಾಗಿ ಡಿಜಿಟಲ್ ಜಗತ್ತಿನಿಂದ ದೂರವಿರುವ ಬಗ್ಗೆ ನಿರ್ಧಾರ ಮಾಡಿ. ನಿಮ್ಮ ಫೋನ್, ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಸ್ವಿಚ್ ಆಫ್ ಮಾಡಿ. ನೀವು ಜತೆಯಾಗಿ ಸಮಯ ಕಳೆಯಿರಿ. ನಿಮ್ಮಿಬ್ಬರ ಮಧ್ಯೆ ಈ ಡಿಜಿಟಲ್ ವಿಶ್ವವು ಪ್ರವೇಶಿಸಲು ಬಿಡಬೇಡಿ. ಮನೆಯಲ್ಲಿ ನೀವು ಜತೆಯಾಗಿ ಕೆಲವು ಕೆಲಸಗಳನ್ನು ಮಾಡಬಹುದು. ಪಾರ್ಕ್ ಗೆ ಸುತ್ತಾಡಲು ಹೋಗಬಹುದು ಇತ್ಯಾದಿಗಳು.