For Quick Alerts
ALLOW NOTIFICATIONS  
For Daily Alerts

ವಿಶ್ವಾದ್ಯಂತ ಇರುವ ವಿಭಿನ್ನ ಮದುವೆ ಸಂಪ್ರದಾಯಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ಮದುವೆ ಅನ್ನುವುದು ಬಹಳ ಸುಂದರವಾದ ಕ್ಷಣ. ಪ್ರತಿಯೊಬ್ಬರಿಗೂ ನೋಡುವುದಕ್ಕೆ, ಕೇಳುವುದಕ್ಕೆ ಮತ್ತು ಅದರಲ್ಲೂ ಪ್ರೀತಿಸಿದವರನ್ನೇ ಕೈಹಿಡಿಯುವ ಈ ಸುಮಧುರ ಘಳಿಗೆ ನೈಸರ್ಗಿಕವಾಗಿ ಎಲ್ಲರಿಗೂ ಇಷ್ಟವಾಗುವ ಕ್ಷಣ. ಪ್ರಾದೇಶಿಕವಾಗಿ ವಿವಿಧ ಸಂಪ್ರದಾಯಗಳು ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿದೆ. ನಮಗೆ ಭಾರತೀಯ ಸಂಪ್ರದಾಯದ ಬಗ್ಗೆ ತಿಳಿದಿದೆ ಆದರೆ ವಿಶ್ವದಾದ್ಯಂತ ಹಲವು ರೀತಿಯ ಸಂಪ್ರದಾಯಗಳಿದೆ. ಅಂತಹ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ನಾವಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

Fascinating Marriage Traditions
02/11ಭಾರತ

02/11ಭಾರತ

ಭಾರತದ ಮದುವೆಗಳಲ್ಲಿ ಮಂಗಲಸೂತ್ರಕ್ಕೆ ಮಹತ್ವದ ಸ್ಥಾನ. ತಾಳಿಕಟ್ಟುವಾಗ ಗುರುಹಿರಿಯರು ವಧುವರರ ತಲೆಯ ಮೇಲೆ ಅಕ್ಷತೆ ಕಾಳುಗಳನ್ನು ಎರಸುತ್ತಾರೆ. ಸಪ್ತಪದಿ ಅಂದರೆ ವಧುವರರು ಜೀವನದಲ್ಲಿ ಯಾವಾಗಲೂ ಕಷ್ಟಸುಖಗಳಲ್ಲಿ ಒಟ್ಟಿಗೆ ಇರುತ್ತೇವೆ ಎಂದು ಏಳು ಹೆಜ್ಜೆಗಳನ್ನು ಇಡುತ್ತಾರೆ. ವಧುವರರಿಗೆ ಆರತಿ ಎತ್ತುವ ಶಾಸ್ತ್ರ ವಿರುತ್ತದೆ.ಹೂವಿನ ಹಾರವನ್ನು ವಧುವರರು ಒಬ್ಬರಿಗೊಬ್ಬರು ಬದಲಾಯಿಸಿಕೊಳ್ಳುತ್ತಾರೆ. ಇನ್ನು ವಧುವರರ ಪೋಷಕರೂ ಕೂಡ ತಾಂಬೂಲ ಬದಲಾಯಿಸಿಕೊಳ್ಳುವ ಸಂಪ್ರದಾಯವಿದೆ. ವರರ ಚಪ್ಪಲಿಯನ್ನು ಕದ್ದಿಟ್ಟು ದುಡ್ಡು ಕೊಟ್ಟರೆ ಮಾತ್ರ ವಾಪಾಸ್ ಮರಳಿಸುತ್ತೇವೆ ಆಗ ಮಾತ್ರ ನೀವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಬಹುದು ಎಂದು ಹೇಳಲಾಗುತ್ತದೆ.ಇದನ್ನು ಜೋತಾ ಚುಪಾಯಿ ಎಂದು ಕರೆಯುತ್ತಾರೆ. ಇದು ಎರಡೂ ಕುಟುಂಬದ ಭಾಂದವ್ಯವನ್ನು ವೃದ್ಧಿಸಲು ನಡೆಸುವ ಆಚರಣೆಯಾಗಿದೆ.ಪುರೋಹಿತರ ಮಂತ್ರಘೋಷಗಳು ನಿರಂತರವಾಗಿತ್ತದೆ.ಕುಂಕುಮದ ನೀರಿನಲ್ಲಿ ಉಂಗುರ ಹುಡುಕುವುದು, ಚಾಪೆಗೆ ಎಸೆಯುವ ಅಕ್ಷತೆಯಲ್ಲಿ ಉಂಗುರ ಆರಿಸುವುದು ಇತ್ಯಾದಿ ಸಂಪ್ರದಾಯಗಳಿವೆ. ತಳಿರು ತೋರಣಗಳ ಅಲಂಕಾರ ವಧುವರ ಇಬ್ಬರ ಮನೆಯನ್ನೂ ಅಲಂಕರಿಸಿರುತ್ತದೆ. ಮಂಗಳವಾದ್ಯಗಳು ಮೊಳಗುತ್ತಿರುತ್ತದೆ.

03/11ಇಂಡೋನೇಷಿಯಾ

03/11ಇಂಡೋನೇಷಿಯಾ

ಬೋರ್ನಿಯೋದಲ್ಲಿ ವಧುವರರು ಮೂರು ದಿನಗಳ ಕಾಲ ಮನೆಯಲ್ಲೇ ಒಟ್ಟಿಗೆ ಇರಬೇಕು. ಇದು ನಿಜಕ್ಕೂ ಸಿಹಿಯಾದ ಮತ್ತು ರೊಮ್ಯಾಂಟಿಕ್ ಆಗಿರುವ ದಿನಗಳಾಗಿದ್ದು ಈ ಸಮಯದಲ್ಲಿ ಅವರಿಗೆ ಬಾತ್ ರೂಮ್ ಬಳಕೆಗೆ ಅನುಮತಿ ಇರುವುದಿಲ್ಲ. ಇದು ಅವರ ನಡುವಿನ ಬಂಧವನ್ನು ಇನ್ನಷ್ಟು ಹೆಚ್ಚಿಸುತ್ತದೆ.

04/11ನಾರ್ವೆ

04/11ನಾರ್ವೆ

ನಾರ್ವೆಯ ವಿವಾಹ ಸಂಪ್ರದಾಯದ ಆಚರಣೆಯಲ್ಲಿ ವಿಶೇಷ ಕೇಕ್ ನ್ನು ತುಅರಿಸಲಾಗುತ್ತದೆ. ಮಂಜುಗಡ್ಡೆಯಂತಹ ಬಾದಾಮಿ ಕೇಕ್ ನ್ನು ತಯಾರಿಸಲಾಗುತ್ತದೆ. ಈ ಕೇಕಿನ ಒಳಭಾಗದಲ್ಲಿ ವೈನ್ ಬಾಟಲಿಯನ್ನು ಇರಿಸಲಾಗುತ್ತದೆ. ಅದನ್ನು ಅವರು ಕುಡಿಯಬಹುದು ಮತ್ತು ಕೇಕ್ ನ್ನು ತಿನ್ನುವ ಸಂಪ್ರದಾಯ ವಿದೆ.

05/11ಜಪಾನ್

05/11ಜಪಾನ್

ಜಪಾನಿನ ವಧು ತನ್ನ ಮದುವೆಯ ದಿನ ಶಿಂಟೋ ಸಮಾರಂಭವನ್ನು ಆಚರಿಸುತ್ತಾಳೆ. ವಧು ತನ್ನ ಮದುವೆಯ ದಿನ ಶುಭ್ರ ಬಿಳಿ ಬಣ್ಣದ ಬಟ್ಟೆಯನ್ನು ಉಡಿಯಿಂದ ಮುಡಿವರೆಗೂ ಧರಿಸಿರುತ್ತಾಳೆ. ಆಕೆಯ ಮೇಕ್ ಅಪ್ ಕೂಡ ಅಧ್ಬುತವಾಗಿರುತ್ತದೆ. ಬಿಳಿ ಬಣ್ಣವು ತನ್ನ ಸ್ಥಾನಮಾನದ ಸಂಕೇತವಾಗಿದೆ ಮತ್ತು ತನ್ನ ಅತ್ತೆಯ ಜೊತೆಗೆ ಹೊಟ್ಟೆಕಿಚ್ಚು ಮಾಡದೆ ಉತ್ತಮ ಬಾಂಧವ್ಯ ಹೊಂದಬೇಕು ಎಂಬುದಾಗಿದೆ.

06/11ಗ್ರೀಸ್

06/11ಗ್ರೀಸ್

ವಧುವು ಗ್ರೀಕ್ ವರರ ಕ್ಷೌರಿಕರಾಗಿರುತ್ತಾರೆ ಮತ್ತು ಅವರ ಮುಖವನ್ನು ಕ್ಷೌರ ಮಾಡುತ್ತಾರೆ. ಕ್ಷೌರದ ನಂತರ ಅವನ ಅತ್ತೆ ಅವನಿಗೆ ಜೇನುತುಪ್ಪ ಮತ್ತು ಬಾದಾಮಿಯನ್ನು ನೀಡುತ್ತಾರೆ.

07/11ಜರ್ಮನಿ

07/11ಜರ್ಮನಿ

ತಮ್ಮ ಮೊದಲ ಮನೆಗೆಲಸದಲ್ಲಿ, ಜರ್ಮನ್ ವರ ಮತ್ತು ವಧು ಪಿಂಗಾಣಿ ಭಕ್ಷ್ಯಗಳ ರಾಶಿಯನ್ನು ಸ್ವಚ್ವ ಗೊಳಿಸುತ್ತಾರೆ. ಅತಿಥಿಗಳು ದುಷ್ಟಶಕ್ತಿಗಳನ್ನು ನಿವಾರಿಸಲು ನೆಲದ ಮೇಲೆ ಇದನ್ನು ಎಸೆಯುತ್ತಾರೆ.

08/11ಫಿಜಿ

08/11ಫಿಜಿ

ಫಿಜಿಯಲ್ಲಿ ಮದುವೆ ಸಂಪ್ರದಾಯ ಬಹಳ ಆಸಕ್ತಿದಾಯಕವಾಗಿದೆ. ಒಬ್ಬ ಪುರುಷನು ತನ್ನ ಹುಡುಗಿಯ ತಂದೆಯ ಬಳಿ ಮದುವೆ ಬಗ್ಗೆ ಪ್ರಸ್ತುತಪಡಿಸಿದಾಗ ತನ್ನ ಭವಿಷ್ಯದ ತಂದೆಯು ತಿಮಿಂಗಿಲದ ಹಲ್ಲಿನ ಜೊತೆಗೆ ಉತ್ತರ ನೀಡಬೇಕು.

ಚಿತ್ರ ಕೃಪೆ: ಕ್ಯಾಪ್ಟನ್‌ ಕುಕ್‌ ಕ್ರೂಸರ್‌

09/11ಫ್ರಾನ್ಸ್

09/11ಫ್ರಾನ್ಸ್

ಫ್ರಾನ್ಸ್ ನಲ್ಲಿ ವಧುವರರಿಗೆ ಚಾಕಲೇಟ್ ತಿನ್ನಿಸಲಾಗುತ್ತದೆ. ಮದುವೆ ರಿಸೆಪ್ಶನ್ ನಂತರ ಷಾಂಪೇನ್ ತಿನ್ನಲು ತಯಾರಿಸಲಾಗುತ್ತದೆ. ಇದು ಅವರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ ಇಲ್ಲಿನ ಸಂಪ್ರದಾಯದ ಬಗ್ಗೆ ಸಂಪೂರ್ಣ ಖಚಿತತೆ ಇಲ್ಲ!

/11ಗ್ವಾಟೆಮಾಲಾ

/11ಗ್ವಾಟೆಮಾಲಾ

ಗ್ವಾಟೆಮಾಲನ್ ವರನ ಪೋಷಕರು ವಿವಾಹದ ಸ್ವಾಗತದ ಅತಿಥೇಯರಾಗಿ ಅವರು ಏನು ಬೇಕಾದರೂ ಮಾಡಬಹುದು. ನವವಿವಾಹಿತರು ಬಂದಾಗ, ದಂಪತಿಗೆ ಸಮೃದ್ಧಿಯನ್ನು ತರುವ ಸಲುವಾಗಿ ಅಕ್ಕಿ ಮತ್ತು ಹಿಟ್ಟಿನಿಂದ, ಧಾನ್ಯಗಳಿಂದ ತುಂಬಿದ ಬಿಳಿ ಪಿಂಗಾಣಿ ಗಂಟನ್ನು ಮುರಿಯುವಂತೆ ವರನ ತಾಯಿಗೆ ಈ ಆಚರಣೆಯಲ್ಲಿ ಒತ್ತಾಯಿಸಲಾಗುತ್ತದೆ.

11/11ಜೆಕ್ ರಿಪಬ್ಲಿಕ್

11/11ಜೆಕ್ ರಿಪಬ್ಲಿಕ್

ಜೆಕ್ ರಿಪಬ್ಲಿಕ್ ನಲ್ಲಿ ಶಿಶುವನ್ನು ವಧುವರರ ಮಂಚದ ಮೇಲೆ ಮಲಗಿಸುವ ಮೂಲಕ ಪ್ರಸ್ತವನ್ನು ಆಚರಿಸುತ್ತಾರೆ. ಫಲವತ್ತತೆಯ ಸಂಕೇತವಾಗಿ ಅಕ್ಕಿ, ಬಟಾಣಿ, ಧಾನ್ಯಗಳನ್ನು ಎಸೆಯುತ್ತಾರೆ.

English summary

Fascinating Marriage Traditions From Around The World

Here we are going to discuss about Fascinating Marriage Traditions From Around The World. We know of Indian traditions but there are some very fascinating wedding traditions that are followed across the world. We have collated some of the most interesting (and some very weird) ones here. Read more.
Story first published: Wednesday, July 1, 2020, 17:53 [IST]
X
Desktop Bottom Promotion