For Quick Alerts
ALLOW NOTIFICATIONS  
For Daily Alerts

ಮಿಲನಕ್ರಿಯೆ ಬಳಿಕ ಈ ಸೂಚನೆಗಳು ಕಾಣುತ್ತಿವೆಯೇ? ಅಲಕ್ಷಿಸದಿರಿ!

|

ಮಹಿಳೆಯರೇ, ಒಂದು ವೇಳೆ ನಿಮಗೆ ನಿಮ್ಮ ಆತ್ಮೀಯ ಘಳಿಗೆಯ ಚಟುವಟಿಕೆಯ ಅಪ್ಯಾಯಮಾನ ಹಾಗೂ ಸುಖದ ಉತ್ತಂಗವನ್ನು ತಲುಪಿದ ಬಳಿಕ ಪವಡಿಸಿ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಅಹಿತಕರ ಅನುಭವ ಹಾಗೂ ತಲೆತಿರುಗಿದ ಅನುಭವವಾಗುತ್ತದೆಯೇ? ಲೈಂಗಿಕ ಸುಖದ ನಂತರ ಹೊಟ್ಟೆಯಲ್ಲಿ ಗುಳುಗುಳು ಎನ್ನುವಂತಹ ಅನುಭವವಾಗುತ್ತಿದೆಯೇ?

Do Not Ignore This Symptoms After Having Sex

ಒಂದು ವೇಳೆ ಹೌದು ಎಂದಾದರೆ ಇದರ ಕಾರಣಗಳನ್ನು ನೀವು ಅರಿತಿರುವುದು ಅಗತ್ಯವಾಗಿದೆ. ಈ ಬಗ್ಗೆ ಅಲಕ್ಷ್ಯ ತೋರದೇ ಇದಕ್ಕೆ ಕಾರಣಗಳನ್ನು ಹುಡುಕಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ಈ ಸುಸ್ತಿಗೆ ಸುಪ್ತವಾದ ಕಾಯಿಲೆ ಕಾರಣವಾಗಿರಬಹುದು. ಇದಕ್ಕೆ ಈ ಕೆಳಗೆ ವಿವರಿಸಿದ ಕಾರಣಗಳಿರಬಹುದು:

ಲೈಂಗಿಕಾಸಕ್ತಿ ಕ್ಷೀಣಿಸುವ ತೊಂದರೆ (​Sexual aversion disorder)

ಲೈಂಗಿಕಾಸಕ್ತಿ ಕ್ಷೀಣಿಸುವ ತೊಂದರೆ (​Sexual aversion disorder)

ಕೆಲವಾರು ಕಾರಣಗಳಿಂದ ಕೆಲವು ವ್ಯಕ್ತಿಗಳು ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಈಗ ತಾನೇ ನಡೆದ ಘಟನೆಯಿಂದ ನಿಮಗೆ ಪರಿಪೂರ್ಣವಾದ ತೃಪ್ತಿ ದೊರಕಿಲ್ಲ ಎಂದು ನಿಮ್ಮ ದೇಹ ನೀಡುತ್ತಿರುವ ಸೂಚನೆಯೂ ಆಗಿರಬಹುದು. ಹಿಂದೆ ಲೈಂಗಿಕಾಸಕ್ತಿ ಉತ್ತಮವಾಗಿದ್ದು ಈಗ ಉಡುಗಿದ್ದರೆ ಇದಕ್ಕೆ ನಿಮಗೇ ಅರಿವಿಲ್ಲದ ಯಾವುದೋ ಕಾರಣವಿರಬಹುದು ಹಾಗೂ ಸೂಕ್ತ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿರುತ್ತದೆ. ಒಂದು ವೇಳೆ ಸತತವಾಗಿ ಈ ಸೂಚನೆ ಮರುಕಳಿಸುತ್ತಿದ್ದರೆ ಶರೀರಶಾಸ್ತ್ರಜ್ಞರನ್ನು ಭೇಟಿಯಾಗುವುದು ಅನಿವಾರ್ಯವಾಗುತ್ತದೆ.

ಎಂಡೋಮೆಟ್ರಿಯೋಸಿಸ್

ಎಂಡೋಮೆಟ್ರಿಯೋಸಿಸ್

ಒಂದು ವೇಳೆ ಮಿಲನದ ಬಳಿಕ ಹೊಟ್ಟೆಯ ಭಾಗದಲ್ಲಿ ನೋವು ಮತ್ತು ವಾಕರಿಕೆ ಕಾಣಿಸಿಕೊಂಡರೆ ನೀವು ಈ ಸ್ಥಿತಿಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳುವ ಪರೀಕ್ಷೆಗೊಳಪಡುವುದು ಅಗತ್ಯ. ಏಕೆಂದರೆ ಗರ್ಭಾಶಯದ ಒಳಪದರವಾದ ಎಂಡೋಮೆಟ್ರಿಯಮ್ ಸಡಿಲಗೊಂಡು ಕಳಚಿಕೊಳ್ಳುತ್ತದೆ ಹಾಗೂ ತುಂಡುತುಂಡಾಗಿ ರಕ್ತದೊಂದಿಗೆ ಹೊರಬಂದು ಗರ್ಭಾಶಯದ ಹೊರಭಾಗ ಮತ್ತು ಇತರ ಭಾಗಗಳಿಗೆಲ್ಲಾ ಮೆತ್ತಿಕೊಳ್ಳುತ್ತದೆ. ಹಾಗಾಗಿ ಕಿಬ್ಬೊಟ್ಟೆಯ ಭಾಗದಲ್ಲಿ ನೀಡಲಾಗುವ ಕೊಂಚವೂ ಒತ್ತಡದಿಂದ ಈ ಭಾಗಕ್ಕೆ ಹೆಚ್ಚಿನ ಭಾರ ಬಿದ್ದು ವಾಕರಿಕೆ ಎದುರಾಗುತ್ತದೆ. ಒಂದು ವೇಳೆ ಲೈಂಗಿಕ ಕ್ರಿಯೆ ನೋವಿನಿಂದ ಕೂಡಿದ್ದು ವಾಕರಿಕೆ ಎದುರಾದರೆ ಈ ಮಹಿಳೆಯರು ತಕ್ಷಣವೇ ಎಂಡೋಮೆಟ್ರಿಸಿಸ್ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿದೆ.

ಗರ್ಭಕಂಠದ ಉತ್ತೇಜನ

ಗರ್ಭಕಂಠದ ಉತ್ತೇಜನ

ಹಲವು ಮಹಿಳೆಯರಿಗೆ ಲೈಂಗಿಕ ಕ್ರೀಡೆ ಇಷ್ಟವಾದರೂ ಮಿಲನಪ್ರವೇಶದ ಸಮಯ ಮಾತ್ರ ಹಿತಕರವಾಗಿರುವುದಿಲ್ಲ ಹಾಗೂ ಆಳವಾದ ಪ್ರವೇಶದಿಂದ ಗರ್ಭಕಂಠದ (ಗರ್ಭಾಶಯದ ದ್ವಾರ) ಭಾಗಕ್ಕೆ ದೊರಕುವ ಪ್ರಚೋದನೆ ಹಿತಕರವಾಗುವ ಬದಲು ನೋವು ಮತ್ತು ವಾಕರಿಕೆಯನ್ನುಂಟುಮಾಡುತ್ತದೆ. ಅಲ್ಲದೇ ಕ್ರೀಡೆಯ ಸಮಯದಲ್ಲಿಯೂ ಇವರಿಗೆ ವಾಕರಿಕೆ, ಸೆಡೆತ ಮತ್ತು ಅಹಿತಕರ ಭಾವನೆಯುಂಟಾಗುತ್ತದೆ.

ಮೂತ್ರದಲ್ಲಿ ಉರಿಯುತ್ತಿರುವ ಭಾವನೆ

ಮೂತ್ರದಲ್ಲಿ ಉರಿಯುತ್ತಿರುವ ಭಾವನೆ

ಒಂದು ವೇಳೆ ಮೂತ್ರವಿಸರ್ಜನೆಯ ವೇಳೆ ಅಪಾರವಾಗಿ ಉರಿಯುತ್ತಿದ್ದರೆ ಹಾಗೂ ಸತತವಾಗಿ ಮೂತ್ರವಿಸರ್ಜನೆಗೆ ಅವಸರವಾಗುತ್ತಿದ್ದರೆ ಇದಕ್ಕೆ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಕಾರಣವಿರಬಹುದು. ಕಡಿಮೆ ಸಮಯದ ಅಂತರದಲ್ಲಿ ನಡೆಯುವ ಸಮಾಗಮದಿಂದ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು ಹಾಗೂ ಇದರಿಂದ ಈಗಿರುವ ನೋವು ಇನ್ನಷ್ಟು ಹೆಚ್ಚಬಹುದು. ಅಲ್ಲದೇ ಮಿಲನಕ್ರಿಯೆ ಈ ಸೋಂಕನ್ನು ಮೂತ್ರಕೋಶಕ್ಕೆ ದಾಟಿಸುವಲ್ಲಿ ಒತ್ತಡ ಹೇರಬಹುದು ಹಾಗೂ ಹೆಚ್ಚಿನ ಗಂಭೀರತರನಾದ ಕಾಯಿಲೆಯಾದ ಸಿಸ್ಟೈಸಿಸ್ (cystitis) ಎಂಬ ಸ್ಥಿತಿಗೆ ಕಾರಣವಾಗಬಹುದು. ಅಪರೂಪದ ಸಂದರ್ಭಗಳಲ್ಲಿ ಈ ಉರಿಗೆ ವಲ್ವೋಡೈನಿಯಾ (vulvodynia) ಎಂಬ ಸ್ಥಿತಿಯೂ ಕಾರಣವಾಗಬಹುದು, (ಸತತ ಶಿಲೀಂಧ್ರದ ಸೋಂಕು ಎರಗುವಿಕೆ ಅಥವಾ ಕ್ಯಾಂಡಿಡಾ ವೈರಸ್ ಆಕ್ರಮಣ) ಅಥವಾ ಈ ಭಾಗದಲ್ಲಿ ನಡೆಸಲಾದ ಶಸ್ತ್ರಚಿಕಿತ್ಸೆಯ ಗಾಯದಿಂದ ನರಗಳಿಗೆ ಆದ ಘಾಸಿ ಮೊದಲಾದವೂ ಕಾರಣವಿರಬಹುದು. ಇವುಗಳ ಹೊರತಾಗಿ ಗುರುತು ಹಿಡಿಯಲಾರದ ಕಾರಣಗಳೂ ಇರಬಹುದು.

English summary

Do Not Ignore This Symptoms After Having Sex

Ladies, tell us if this sounds familiar. You just had mindblowing sex and are feeling at the top of the world. However, instead of laying back and relaxing, you feel uncomfortable and woozy. Suddenly, all the after-sex euphoria has gone for a toss and it is replaced with a disturbance in your tummy.
Story first published: Saturday, October 5, 2019, 13:20 [IST]
X
Desktop Bottom Promotion