For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಅಭದ್ರತೆ ಇದೆ ಎಂದು ಸೂಚಿಸುವ ಲಕ್ಷಣಗಳಿವು

|

ಸಂಬಂಧದಲ್ಲಿ ಅಭದ್ರತೆ ಅಥವಾ ಅಸುರಕ್ಷತೆ ಇಂದಿನ ಕಾಲದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ನಮ್ಮ ಕುಟುಂಬಗಳ ಕೆಲವರು ಸೇರಿದಂತೆ ಅನೇಕ ಜನರು ತಮ್ಮ ವಿವಾಹಗಳಲ್ಲಿ ಅಭದ್ರತೆಯಿಂದ ಬಳಲುತ್ತಿರುವುದನ್ನು ನಾವು ಗಮನಿಸರಬಹುದು. ಇದಕ್ಕೆ ಕಾರಣ ಹಲವಾರು. ಆದರೆ ಇದಕ್ಕೆ ಮುಖ್ಯ ಕಾರಣ ತಮ್ಮ ಸಂಗಾತಿಗಳೊಡನೆ ಸ್ಪಷ್ಟವಾಗಿ ಸಂವಹನ ನಡೆಸದೇ ಇರುವುದು. ಇದು ಒರಟು ತೇಪೆಗಳು, ನಿರಂತರ ತಪ್ಪುಗ್ರಹಿಕೆಯ ಮತ್ತು ಜಗಳಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ದಾಂಪತ್ಯದಲ್ಲಿ ಅಸುರಕ್ಷತೆ ಭಾವನೆ ಇದೆ ಎಂದು ಅರಿಯಲು ಕೆಲವೊಂದು ಲಕ್ಷಣಗಳನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ.

ಸಂಬಂಧದಲ್ಲಿ ಅಸುರಕ್ಷರೆ ಭಾವನೆ ಇದೆ ಎನ್ನಲು ಲಕ್ಷಣಗಳು ಇಲ್ಲಿವೆ:

ವಿಪರೀತ ಹಿಂಬಾಲಿಸುವುದು:

ವಿಪರೀತ ಹಿಂಬಾಲಿಸುವುದು:

ಸಾಮಾನ್ಯವಾಗಿ ಕೆಲವೊಮ್ಮೆ ಕೆಲಸ ಮಾಡಲು ಹೋದಾಗ ಗಂಡನನ್ನು ಹಿಂಬಾಲಿಸುವುದು. ಯಾಕಂದ್ರೆ ಗಂಡನ ಜೊತೆಯಿರುವ ಇತರ ಮಹಿಳಾ ಸಹೋದ್ಯೋಗಿಗಳನ್ನು ಮೇಲಿನ ಅಸೂಯೆ ಹಾಗೂ ಅಸುರಕ್ಷಿತ ಭಾವನೆಯಿಂದ. ತನ್ನ ಗಂಡ ಅವರ ಜೊತೆ ಹೆಚ್ಚು ನಗುತ್ತಾ ಮಾತನಾಡುವುದನ್ನು ಸಹಿಸಳು. ಈಕೆಗೆ ಸಣ್ಣ ಅನುಮಾನ ತನ್ನ ಬಳಿ ಹೇಳಿಕೊಳ್ಳದ ಮಾತುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾನೆಂದು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಗಂಡನ ಮೊಬೈಲ್ ಗೆ ಜಿಪಿಎಸ್ ಅಪ್ಲೀಕೇಷನ್ ಕೂಡ ಅಳವಡಿಸಿದ ಉದಾಹರಣೆಗಳಿವೆ.

ಗಮನ ಸೆಳೆಯಲು ಪ್ರಯತ್ನಿಸುವುದು:

ಗಮನ ಸೆಳೆಯಲು ಪ್ರಯತ್ನಿಸುವುದು:

ಪ್ರತಿ ಹೆಣ್ಣು ಅಥವಾ ಗಂಡು ತನ್ನ ಸಂಗಾತಿಯ ಗಮನವನ್ನು ಬಯಸುತ್ತಾರೆ. ಆದರೆ ಸಂಬಂಧದಲ್ಲಿ ಅಥವಾ ದಾಂಪತ್ಯದಲ್ಲಿ ಅಸುರಕ್ಷತೆ ಹೊಂದಿರುವ ವ್ಯಕ್ತಿಗಳು ಸದಾ ಕಾಲ ತಮ್ಮ ಸಂಗಾತಿಯ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಪದೇ ಪದೇ ತನ್ನ ಸೌಂದರ್ಯದ ಬಗ್ಗೆ ಕೇಳುವುದು, ಹೀಗೆ ನಾನಾ ತರಹದ ಸರ್ಕಸ್ ಗಳನ್ನು ಮಾಡುತ್ತಿರುತ್ತಾರೆ. ಒಂದು ವೇಳೆ ತನ್ನ ಸಂಗಾತಿಯ ಗಮನ ಬೇರೆಡೆ ಹೋದರೆ ಅದಕ್ಕೂ ಅಳುವ ಜನರಿದ್ದಾರೆ.

ನಂಬಿಕೆಯಿಲ್ಲದಿರುವುದು:

ನಂಬಿಕೆಯಿಲ್ಲದಿರುವುದು:

ಇದು ಅಸುರಕ್ಷತೆ ಕಾಡಲು ಬಹುಮುಖ್ಯ ಕಾರಣವಾಗಿದೆ. ತಮ್ಮ ಸಂಗಾತಿಯ ಬಗ್ಗೆ ಒಮ್ಮೆ ಯಾವುದೋ ವದಂತಿ ಕೇಳಿದರೆ ಅದನ್ನು ನೇರವಾಗಿ ಅವರೊಡನೆ ಕುಳಿತು ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಅದು ಬಿಟ್ಟು ಅವರನ್ನು ರಹಸ್ಯವಾಗಿ ಹಿಂಬಾಲಿಸುವುದಲ್ಲ. ಪ್ರತಿ ವಿಚಾರಕ್ಕೂ ಅನುಮಾನ ಪಡುವುದು ಸಹ ನಂಬಿಕೆ ಇಲ್ಲದೇ ಇರುವ ಲಕ್ಷಣವಾಗಿದೆ. ಆದ್ದರಿಂದ ಯಾರೂ ನಂಬಿಕೆ ಕಳೆದುಕೊಳ್ಳುವ ಕೆಲಸ ಮಾಡಬಾರದು.

ತಾನು ಎಂತಹವನೆಂಬುದನ್ನು ಅತಿಯಾಗಿ ಸಾಬೀತುಪಡಿಸುವುದು:

ತಾನು ಎಂತಹವನೆಂಬುದನ್ನು ಅತಿಯಾಗಿ ಸಾಬೀತುಪಡಿಸುವುದು:

ಕೆಲವೊಮ್ಮೆ ಇದು ಕೂಡ ಅಸುರಕ್ಷತೆಯ ಲಕ್ಷಣವಾಗಿರುತ್ತದೆ. ತಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ, ಚುರುಕಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಎಲ್ಲವನ್ನೂ ಅತಿಯಾಗಿ ಮಾಡುವುದು. ತನ್ನ ಮೇಲೆ ತನ್ನ ಸಂಗಾತಿ ಆಸಕ್ತಿ ಕಳೆದುಕೊಳ್ಳಬಾರದೆನ್ನುವ ಕಾರಣಕ್ಕೆ ಹೆಚ್ಚಾಗಿ ಇಂತಹ ಕಾರ್ಯಗಳಲ್ಲಿ ತೊಡಗಿಕೊಂಡು ತನ್ನ ಪತಿ ಅಥವಾ ಪತ್ನಿಯನ್ನು ಸೆಳೆಯುತ್ತಿರುತ್ತಾರೆ.

ಅತಿಯಾದ ಸ್ವಾರ್ಥ:

ಅತಿಯಾದ ಸ್ವಾರ್ಥ:

ಹೌದು ಇದು ಕೂಡ ಸಂಬಂಧದಲ್ಲಿನ ಅಸುರಕ್ಷತೆಯ ಸೂಚನೆಯಾಗಿದೆ. ತನ್ನ ಸಂಗಾತಿ ಎಂದಿಗೂ ತನ್ನನ್ನು ಬಿಟ್ಟು ಹೋಗಬಾರದು, ಯಾರೋಡನೆಯೂ ಸೇರಬಾರದು, ತನಗೆ ಮಾತ್ರ ಸ್ವಂತ ಎಂದು ಹೇಳುವ ಪ್ರತಿ ಮಾತಿನ ಹಿಂದಿರುವುದು ಸಹ ಅಸುರಕ್ಷತೆಯ ಭಾವನೆಯೇ. ಬೇರೆಯವರೊಡನೆ ಸೇರಿದರೆ ಎಲ್ಲಿ ನನ್ನನ್ನು ದೂರಮಾಡುತ್ತಾನೋ ಎಂಬ ಭಯದಿಂದ ಈ ರೀತಿ ಆಡುತ್ತಿರುತ್ತಾರೆ. ನೀವು ಯಾರೊಡನೆಯಾದರೂ ಸ್ವಲ್ಪ ಕ್ಲೋಸ್ ಆಗಿ ಮಾತನಾಡಿದರೂ ಅವರಿಗೆ ಆಗುವುದಿಲ್ಲ.

English summary

Behaviour Of People Who Are Insecure In Married Life

Here we told about behaviour Of People Who are insecure in married life, read on
Story first published: Friday, March 5, 2021, 12:01 [IST]
X
Desktop Bottom Promotion