ನಿಮ್ಮ ಪತಿಯೂ ಇತರ ಮಹಿಳೆಯರನ್ನು ನೋಡುತ್ತಾನೆಯೇ?

By: Deepu
Subscribe to Boldsky

ಮದುವೆ ಆಗಿರಲಿ ಅಥವಾ ಆಗದೇ ಇರಲಿ. ಪುರುಷರು ಮಾತ್ರ ಮಹಿಳೆಯರನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳುವುದಿಲ್ಲ. ಹೆಂಡತಿ, ಗೆಳತಿ, ಅಮ್ಮಾ, ಅಕ್ಕ-ತಂಗಿ ಯಾರಾದರೂ ಜೊತೆಯಲ್ಲಿದ್ದಾಗ ಇತರ ಮಹಿಳೆಯರು ಯಾರಾದರೂ ಪಾಸಾದರೆ ಸಾಕು. ಜೊತೆಯಲ್ಲಿರುವವರ ಕಣ್ಣು ತಪ್ಪಿಸಿಯಾದರೂ ಆ ಮಹಿಳೆಯನ್ನು ನೋಡುತ್ತಾರೆ.

ಮಹಿಳೆ ಸುಂದರವಾಗಿರಲಿ ಇಲ್ಲಾ ಸಾಧಾರಣವಾಗಿರಲಿ, ಆಧುನಿಕ ಉಡುಗೆ ತೊಡುಗೆಯಲ್ಲಿಯೇ ಇರಲಿ ಇಲ್ಲಾ ಸಾಂಪ್ರದಾಯಿಕವಾಗಿ ಸಂಪೂರ್ಣವಾಗಿ ಮೈ ಮುಚ್ಚಿಕೊಂಡೇ ಇರಲಿ ಅದ್ಯಾವುದೂ ಪುರುಷರ ಲೆಕ್ಕಾಚಾರದಲ್ಲಿ ಇರುವುದಿಲ್ಲ. ಅವರಿಗೊಮ್ಮೆ ಎದುರು-ಬದುರು ಇರುವ ಮಹಿಳೆಯರನ್ನು ಸರಿಯಾಗಿ ನೋಡಿಕೊಳ್ಳಬೇಕು ಅಷ್ಟೇ. ಈ ವಿಚಾರವಾಗಿ ಹೆಂಡತಿಯ ಬಳಿ ಅಥವಾ ಅಕ್ಕ-ತಂಗಿಯ ಬಳಿ ಬೈಗುಳಕ್ಕೆ ಒಳಗಾಗುತ್ತೇವೆ ಎನ್ನುವ ದೃಢ ವಿಚಾರ ಗೊತ್ತಿದ್ದರೆ ಆಕ್ಷಣದಲ್ಲಿ ಸಂಭಾವಿತರಂತೆ ವರ್ತಿಸಿ, ಕದ್ದು ಮುಚ್ಚಿಯಾದರೂ ನೋಡುತ್ತಾರೆ...

ಯಾವ ಗಾತ್ರದ ಎದೆಗಾತಿಯರು ಪುರುಷರಿಗೆ ಅಚ್ಚುಮೆಚ್ಚು?

ಎದುರಿಗೆ ಬಂದ ಮಹಿಳೆಯನ್ನು ನೋಡಿದರೆ ಸಾಕು ಅವರ ದೇಹದಾಕಾರವನ್ನು ಒಮ್ಮೆಲೇ ಅಳೆದು ಬಿಡುತ್ತಾರೆ. ಪುರುಷರು ದಿಟ್ಟಿಸಿ ನೋಡುವುದನ್ನು ಮಹಿಳೆ ಗಮನಿಸಿದರೆ ಆ ವ್ಯಕ್ತಿಯ ಬಗ್ಗೆ ಅಸಹ್ಯದ ಮನೋಭಾವವನ್ನು ತಳೆಯುತ್ತಾಳೆ. ಆದರೆ ಅದ್ಯಾವುದಕ್ಕೂ ಪುರುಷರು ಬೇಸರಗೊಳ್ಳುವುದಿಲ್ಲ. ಪುನಃ ತಮ್ಮ ವರ್ತನೆಯನ್ನು ಮುಂದುವರಿಸುತ್ತಾರೆ. ಇದರಿಂದ ಮಹಿಳೆಯರಿಗೆ ಮುಜುಗರ, ಕೋಪ, ಹತಾಶೆ ಅಥವಾ ಭಯಪಡುವಂತಹ ಪರಿಸ್ಥಿತಿ ಎದುರಾಗುತ್ತದೆ.

ಪುರುಷರ ಈ ವರ್ತನೆ ಯಾಕೆ? ಎನ್ನುವ ಪ್ರಶ್ನೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಒಮ್ಮೆ ಕಾಡಿರುತ್ತದೆ. ಒಂದು ಕ್ಷಣ ಕುತೂಹಲ, ಇನ್ನೊಂದು ಕ್ಷಣ ತಮಾಷೆ ಎನಿಸುವ ಈ ವಿಚಾರದ ಬಗ್ಗೆ ನಾವು ಹೇಗೆ ಚಿಂತಿಸಬೇಕು? ನಮ್ಮ ವರ್ತನೆ ಹಾಗೂ ಭಾವನೆ ಹೇಗಿರಬೇಕು ಎನ್ನುವುದು ಸ್ಪಷ್ಟವಾಗಿರಬೇಕು. ಈ ವಿಷಯದ ಕುರಿತು ನೀವೂ ತಿಳಿದುಕೊಳ್ಳಬೇಕು ಎನ್ನುವ ಆಸೆ ಇದ್ದರೆ ಮುಂದಿರುವ ವಿವರಣೆಯನ್ನು ಓದಿ... 

ಇದು ಸಾಮಾನ್ಯವೇ?

ಇದು ಸಾಮಾನ್ಯವೇ?

ಚಪಲ ಚನ್ನಿಗ ಅಥವಾ ಪೋಲಿ ಹುಡುಗರು ಮಾತ್ರ ಹೀಗೆ ನೋಡುತ್ತಾರೆ ಎನ್ನುವ ನಿರ್ಣಯಕ್ಕೆ ಬರದಿರಿ. ಏಕೆಂದರೆ ಪುರುಷರು ಎನ್ನುವ ಎಲ್ಲಾ ವ್ಯಕ್ತಿಗಳು ಹೀಗೆ ಮಾಡುತ್ತಾರೆ. ಕೆಲವರು ಯಾವ ಭಯವಿಲ್ಲದೆಯೇ ನೋಡಬಹುದು. ಕೆಲವರು ಕದ್ದು ಮುಚ್ಚಿ ನೋಡಬಹುದು ಎನ್ನುವ ವ್ಯತ್ಯಾಸವಿರುತ್ತದೆ ಅಷ್ಟೆ. ಇದರಲ್ಲಿ ವಿವಾಹವಾದವರು ಅಥವಾ ಆಗದಿರುವವರು ಎನ್ನುವ ತಾರತಮ್ಯವಿಲ್ಲ. ಎಲ್ಲರೂ ನೋಡುತ್ತಾರೆ. ಹಾಗೊಮ್ಮೆ ನಿಮ್ಮ ಪತಿ/ಗೆಳಯ ನಿಮ್ಮನ್ನು ಬಿಟ್ಟು ಬೇರೆ ಮಹಿಳೆಯರನ್ನು ನೋಡುವುದಿಲ್ಲ ಎಂದಾದರೆ ನೀವು ಅದೃಷ್ಟವಂತರು.

ಅವನು ನಿಮ್ಮನ್ನು ಪ್ರೀತಿಸುವುದಿಲ್ಲವೇ?

ಅವನು ನಿಮ್ಮನ್ನು ಪ್ರೀತಿಸುವುದಿಲ್ಲವೇ?

ಇತರ ಮಹಿಳೆಯರನ್ನು ಗಮನಿಸುತ್ತಾರೆ ಅಥವಾ ನೋಡುತ್ತಾರೆ ಎಂದರೆ ನಿಮ್ಮ ಮೇಲಿನ ಆಸಕ್ತಿ ಅಥವಾ ಪ್ರೀತಿಯನ್ನು ಕಳೆದುಕೊಂಡರು ಎಂದರ್ಥವಲ್ಲ. ಅದು ಪುರುಷರಿಗಿರುವ ಜನ್ಮದತ್ತವಾದ ಸ್ವಭಾವ ಎನ್ನಬಹುದು. ಈ ವಿಚಾರವಾಗಿ ನಡೆಸಿದ ಕೆಲವು ಸಮೀಕ್ಷೆಯಲ್ಲಿ ಪುರುಷರು ನೀಡಿರುವ ಉತ್ತರ ಹಾಗೂ ಫಲಿತಾಂಶ ಹೀಗಿತ್ತು. "ಕೆಲವೊಮ್ಮೆ ಇತರ ಮಹಿಳೆಯರನ್ನುನೋಡುತ್ತೇವೆಯಾದರೂ, ಸಂಗಾತಿಯನ್ನು ಹೊರತು ಪಡಿಸಿ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸುವುದಿಲ್ಲ ಎಂದು." ಇತರ ಮಹಿಳೆಯರನ್ನು ನೋಡುವುದು ಬಹಳ ಸ್ವಾಭಾವಿಕ ಸ್ವಭಾವ ಎಂದು ಒಪ್ಪಿಕೊಂಡಿದ್ದಾರೆ.

ಇದರ ಅರ್ಥವೇನು?

ಇದರ ಅರ್ಥವೇನು?

ಪುರುಷರು ಇನ್ನೊಬ್ಬ ಮಹಿಳೆಯನ್ನು ನೋಡುತ್ತಾನೆ ಎಂದರೆ ಆ ಮಹಿಳೆಯ ದೈಹಿಕ ಆಕರ್ಷಣೆಗೆ ಒಳಗಾದ ಎಂದರ್ಥವಲ್ಲ. ಸುಂದರ ಮಹಿಳೆಯರನ್ನು ನೋಡಿದಾಗ ಮೆದುಳಿನಲ್ಲಿ ಸೆರೊಟೋನಿನ್ ಮತ್ತು ಡೊಪಮೈನ್‍ಗಳು ಉತ್ಪತ್ತಿಯಾಗುತ್ತವೆ. ಇದು ಅವರಿಗೆ ಕೆಲವು ಆನಂದವನ್ನು ನೀಡುತ್ತದೆ. ಈ ಆನಂದವನ್ನು ಪುರುಷರು ರಹಸ್ಯವಾಗಿಯೇ ಆನಂದಿಸುತ್ತಾರೆ. ಇನ್ನೂ ಕೆಲವರು ಆ ಮಹಿಳೆಯೊಂದಿಗೆ ಮಲಗುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾರೆ. ಕೆಲವು ನಿಮಿಷದಲ್ಲಿಯೇ ಬೇರೆ ಅಡೆತಡೆಗಳು ಉಂಟಾಗುತ್ತದೆ. ಅವರು ವಾಸ್ತವಕ್ಕೆ ಹಿಂದಿರುಗುತ್ತಾರೆ.

ಇದು ಅಪಾಯಕಾರಿಯೇ?

ಇದು ಅಪಾಯಕಾರಿಯೇ?

ವ್ಯಕ್ತಿ ಇತರ ಮಹಿಳೆಯನ್ನು ರಹಸ್ಯವಾಗಿ ನೋಡುತ್ತಾನೆ ಅಥವಾ ಕಲ್ಪನೆಗೆ ಒಳಗಾಗುತ್ತಾನೆ ಎಂದರೆ ಯಾವುದೇ ಭಯವಿಲ್ಲ. ಇತರ ಮಹಿಳೆಯರೊಂದಿಗೆ ಬಹಿರಂಗವಾಗಿ ಕೂಡಿಕೊಳ್ಳುವ ಅಥವಾ ಸಂಬಂಧ ಹೊಂದುವ ವ್ಯಕ್ತಿಗಳು ದೊಡ್ಡ ತೊಂದರೆಯಲ್ಲಿ ಇಳಿಯಬಹುದು. ಅದು ನಿಮ್ಮ ಸಂಬಂಧಕ್ಕೆ ಅನಾರೋಗ್ಯಕರವಾದದ್ದು ಎಂದು ಹೇಳಬಹುದು.

ಈ ಅರ್ಥ ಅಲ್ಲ

ಈ ಅರ್ಥ ಅಲ್ಲ

ನಿಮ್ಮ ಪತಿ ಇತರ ಮಹಿಳೆಯರನ್ನು ನೋಡುತ್ತಾನೆ ಎಂದರೆ ನೀವು ಸುಂದರವಾಗಿಲ್ಲ ಅಥವಾ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದರ್ಥವಲ್ಲ. ಇಲ್ಲ ನಿಮ್ಮೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತಾರೆ ಎನ್ನುವ ತಾತ್ಪರ್ಯವೂ ಅಲ್ಲ. ನಿಮಗೆ ಮೋಸ ಮಾಡಿ, ಶೀಘ್ರದಲ್ಲಿಯೇ ಇನ್ನೊಬ್ಬಳ ಸಹವಾಸ ಮಾಡುತ್ತಾನೆ ಎನ್ನುವ ಅರ್ಥವೂ ಅಲ್ಲ.

ಪುರುಷರ ಆಕರ್ಷಣೆ

ಪುರುಷರ ಆಕರ್ಷಣೆ

ಒಬ್ಬ ಪುರುಷ ತನ್ನ ಹೆಂಡತಿ ಅಥವಾ ಸಂಗಾತಿಯನ್ನು ಹೊರತು ಪಡಿಸಿ ಸುಂದರವಾದ ಮಹಿಳೆಯನ್ನು ನೋಡಿದಾಗ, ಅವನು ಆ ಮಹಿಳೆಯೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆಸುತ್ತಾನೆ ಎಂದರ್ಥವಲ್ಲ. ಕೆಲವು ಕ್ಷಣ ಆಕೆಯ ದೈಹಿಕ ಆಕರ್ಷಣೆಗೆ ಒಳಗಾಗುತ್ತಾನೆಯಾದರೂ ಇನ್ನೊಂದು ನಿಮಿಷದಲ್ಲಿ ಅದು ಅಲ್ಲಿಯೇ ಕೊನೆಗೊಳ್ಳುತ್ತದೆ. ಪುರುಷರು ಹೊಂದಾಣಿಕೆ ಅಥವಾ ಭಾವನಾತ್ಮಕ ಸಂಪರ್ಕದ ಬಗ್ಗೆ ಯೋಚಿಸದೆ ಕೆಲವು ಕ್ಷಣಕ್ಕೆ ಭೌತಿಕ ಸೌಂದರ್ಯವನ್ನು ಆಕರ್ಷಿಸಬಹುದು. ಪತ್ನಿಯರಲ್ಲಿ ತುಂಬಾ ಭಕ್ತಿ ಇರುವ ಪುರುಷರು ಸಹ ಕೆಲವೊಮ್ಮ ತಿಳಿದೋ ಅಥವಾ ತಿಳಿದೆಯೋ ಇತರ ಮಹಿಳೆಯರಿಗೆ ಆಕರ್ಷಿತರಾಗುವ ಸಾಧ್ಯತೆ ಇರುತ್ತದೆ.

ಇದೊಂದು ಸಮಸ್ಯೆಯಾಗಿ ತಿರುಗಿದಾಗ

ಇದೊಂದು ಸಮಸ್ಯೆಯಾಗಿ ತಿರುಗಿದಾಗ

ವ್ಯಕ್ತಿ ನೋಡುವುದಕ್ಕೂ ಮತ್ತು ದಿಟ್ಟಿಸಿ ನೋಡುವುದಕ್ಕೂ ವ್ಯತ್ಯಾಸವಿರುತ್ತದೆ. ಪುರುಷನು ನಿಸ್ಸಂಶಯವಾಗಿ ನೋಡಿದಾಗ ಮತ್ತು ಆಕ್ರಮಣಕಾರಿ ವರ್ತನೆಯನ್ನು ತೋರಿದಾಗ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ನೋಡುವುದು ಹಾಗೂ ದಿಟ್ಟಿಸಿ ನೋಡುವುದರ ನಡುವೆ ತೆಳುವಾದ ರೇಖೆಯಿದೆ ಎನ್ನುವುದನ್ನು ಅರಿಯಿರಿ.

ನಿಮ್ಮ ಪತಿ/ಗೆಳೆಯನಿಗೆ ಹೇಳುವುದು ಹೇಗೆ?

ನಿಮ್ಮ ಪತಿ/ಗೆಳೆಯನಿಗೆ ಹೇಳುವುದು ಹೇಗೆ?

ನಾವು ಯಾರನ್ನಾದರೂ ನೋಡುತ್ತಿದ್ದರೆ ಅಥವಾ ಮಾತನಾಡುತ್ತಿದ್ದರೆ ಅವರ ಭಾವನೆ ಹಾಗೂ ವರ್ತನೆಯನ್ನು ಸುಲಭವಾಗಿ ಅರಿಯಬಹುದು. ನೋಡುವುದು ಅಪರಾಧವಲ್ಲ. ಆದರೆ ದಿಟ್ಟಿಸಿ ನೋಡುತ್ತಿದ್ದರೆ ಅದು ಮಹಿಳೆಯರಿಗೆ ಮುಜುಗರಕ್ಕೆ ಕಾರಣವಾಗುತ್ತದೆ. ಈ ಅನುಭವ ಅವರ ಪತ್ನಿಯಾದ ನಿಮಗೆ ಹೇಗೆ ಆಗುತ್ತದೆ ಎನ್ನುವುದನ್ನು ತಿಳಿಸಿಕೊಡಬೇಕು.

 ಅವರ ಬದಲಾವಣೆಯನ್ನು ನೀವು ಬಯಸುತ್ತೀರಾ?

ಅವರ ಬದಲಾವಣೆಯನ್ನು ನೀವು ಬಯಸುತ್ತೀರಾ?

ಒಂದೇ ದಿನದಲ್ಲಿ ಶೇ.100 ರಷ್ಟು ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ನಿಮ್ಮವರ ಜೊತೆಗಿರುವಾಗ ಅವರ ವರ್ತನೆಯ ಬಗ್ಗೆ ತಿಳಿ ಹೇಳಬಹುದು. ಅದು ನಿಮ್ಮೊಂದಿಗೆ ಇರುವಾಗ ಹಿಡಿತದಲ್ಲಿರಬಹುದು. ಹಾಗೆಯೇ ನೀವು ಇಲ್ಲದೆ ಇರುವಾಗಲೂ ನಿಮ್ಮ ಸಲಹೆಯ ಮಾತು ಅವರ ನೆನಪಿಗೆ ಬರುವಂತಿರಬೇಕು. ಆಗ ಅವರು ಯೋಗ್ಯ ರೀತಿಯ ವರ್ತನೆ ತೋರುತ್ತಾರೆ.

ಪುರುಷರು ಮಾತ್ರ ನೋಡುತ್ತಾರೆಯೇ?

ಪುರುಷರು ಮಾತ್ರ ನೋಡುತ್ತಾರೆಯೇ?

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಪುರುಷರು ತಮ್ಮ ಹೆಂಡತಿಯರು ಸಹ ಸುಂದರ ಪುರುಷರನ್ನು ನೋಡಿದಾಗ ದಿಟ್ಟಿಸಿ ನೋಡುತ್ತಾರೆ ಎಂದು. ಅತಿ ಕಡಿಮೆ ಮಹಿಳೆಯರು ಹೀಗೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ನಿಮ್ಮ ಪಾಲುದಾರರ ಮಾತನ್ನು ಆಲಿಸುವುದು ಹಾಗೂ ಅವರ ಭಾವನೆ ಹವ್ಯಾಸಗಳಿಗೆ ಬೆಲೆ ಕೊಡುವುದರಿಂದ ಸಂಬಂಧಗಳು ಸುಂದರವಾಗಿ ಇರುತ್ತವೆ.

English summary

Why Men Look At Other Women

What to do in such a situation? How to tell your husband that what he's doing is unhealthy? How to tell him that you may need to deal with anger, jealousy, pain, insecurity and frustration whenever he rotates his head to catch a glimpse of other women? Firstly, does it mean that he is not interested in you anymore? Read on to know why men look at other women.
Story first published: Monday, October 23, 2017, 23:16 [IST]
Subscribe Newsletter