ಮದುವೆ ಆದ್ಮೇಲೆ, ಕೂಡಿ ಬಾಳಿದರೆ ಅದುವೇ ಸ್ವರ್ಗ ಸುಖ!

Posted By: Hemanth
Subscribe to Boldsky

ಮದುವೆ ಎನ್ನುವುದು ಏಳು ಜನ್ಮಗಳ ಅನುಬಂಧವೆಂದು ಹಿರಿಯರು ಹೇಳುತ್ತಾರೆ. ಮದುವೆ ಸಂಪೂರ್ಣ ಜೀವನವನ್ನೇ ಬದಲಾಯಿಸಬಲ್ಲದು. ಮದುವೆಯಿಂದ ಜವಾಬ್ದಾರಿ ಕೂಡ ಹೆಚ್ಚುವುದು. ಆದರೆ ಮದುವೆಯಾಗುವ ಇಂದಿನ ಯುವ ಜೋಡಿಗಳು ಕೇವಲ ನಾಲ್ಕು ಗೋಡೆಗಳ ನಡುವಿನ ಸುಖದ ಬಗ್ಗೆ ಮಾತ್ರ ಯೋಚಿಸುತ್ತಾರೆ.  ಮದುವೆ ಮುಂಚೆಯೇ, ದೈಹಿಕ ಸಂಬಂಧ ಸರಿಯಲ್ಲ...

ಆದರೆ ಮದುವೆಯೆನ್ನುವುದು ಕೇವಲ ನಾಲ್ಕು ಗೋಡೆಗಳ ನಡುವಿನ ಸಂಬಂಧ ಮಾತ್ರವಲ್ಲ. ಮದುವೆ ಬಳಿಕ ನೀವು ಹಿಂದೆ ಕಂಡಿರದ ಮತ್ತು ಅನುಭವಿಸದೆ ಇರುಂತಹ ಕೆಲವೊಂದು ಅನುಭವಗಳು ಹಾಗೂ ಜವಾಬ್ದಾರಿಗಳು ಬರುತ್ತದೆ. ಇದನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ.  ವಯಸ್ಸು ಮೂವತ್ತೈದು ದಾಟಿದರೂ ಇನ್ನೂ ಮದುವೆ ಆಗಿಲ್ಲವೇ?

ಜೀವನದ ಬಗ್ಗೆ ನಿಮ್ಮ ನಡೆ ಸ್ಪಷ್ಟವಾಗಿದ್ದರೆ ಇಂತಹ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಬಹುದು. ಮದುವೆಯಾಗುವ ವೇಳೆ ಹೊಸ ಜೀವನಶೈಲಿಯನ್ನು ಜತೆಯಾಗಿಸಿಕೊಳ್ಳುತ್ತೀರಿ. ಇದರಿಂದ ನಿಮ್ಮ ಜೀವನಶೈಲಿಯಲ್ಲಿ ಕೂಡ ಹಲವಾರು ಬದಲಾವಣೆ ಮಾಡಬೇಕಾಗುತ್ತದೆ. ಮದುವೆ ಬಳಿಕ ಸಂಭವಿಸುವಂತಹ ಹಠಾತ್ ಬದಲಾವಣೆಗೆ ನೀವು ತಯಾರಾದರೆ ಆಗ ಜೀವನ ಹೂವಿನ ಹಾಸಿಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮದುವೆ ಬಳಿಕ ಯಾವೆಲ್ಲಾ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....    

ಹೊಸ ವಾತಾವರಣ

ಹೊಸ ವಾತಾವರಣ

ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಹೊಸತೊಂದು ಜಾಗಕ್ಕೆ ಸ್ಥಳಾಂತರವಾಗುವುದು ಹಲವಾರು ಕಾರಣಗಳಿಂದ ಸಂತೋಷ ನೀಡಬಹುದು ಅಥವಾ ಕಿರಿಕಿರಿಯಾಗಬಹುದು. ಮಹಿಳೆಯಾಗಿದ್ದರೆ ಪತಿ ಹಾಗೂ ಅತ್ತೆ ಮಾವನೊಂದಿಗೆ ಬದುಕು ಸಾಗಿಸಬೇಕಾಗುತ್ತದೆ...ಕಾರಣಾಂತರಗಳಿಂದ ಇದು ಖುಷಿ ನೀಡಲಿಕ್ಕಿಲ್ಲ. ಪುರುಷರಾಗಿದ್ದರೆ ಹೆತ್ತವರ ಮನೆ ಬಿಟ್ಟು ಬೇರೆ ಮನೆ ಮಾಡಿದರೆ ಆಗ ನಿಮಗೆ ಖಂಡಿತವಾಗಿಯೂ ಖುಷಿಯಾಗದು. ಈ ಕಾರಣದಿಂದಾಗಿ ಮದುವೆ ಜೀವನ ಬದಲಾಯಿಸುತ್ತದೆ.

ಹವ್ಯಾಸಗಳನ್ನು ತ್ಯಜಿಸಬೇಕಾಗುತ್ತದೆ

ಹವ್ಯಾಸಗಳನ್ನು ತ್ಯಜಿಸಬೇಕಾಗುತ್ತದೆ

ಮದುವೆಗೆ ಮೊದಲು ನೀವು ಧೂಮಪಾನ ಮತ್ತು ಮದ್ಯಪಾನವನ್ನು ತಡರಾತ್ರಿ ತನಕ ಮಾಡಿರಬಹುದು. ಆದರೆ ಮದುವೆ ಬಳಿಕ ನಿಮ್ಮ ಸಂಗಾತಿ ಇದಕ್ಕೆ ಅವಕಾಶ ನೀಡಲಿಕ್ಕಿಲ್ಲ. ನೀವು ಮಹಿಳೆಯಾಗಿದ್ದರೆ ಜಂಕ್ ಫುಡ್ ತಿನ್ನುವುದು ಮತ್ತು ಪದೇ ಪದೇ ಶಾಪಿಂಗ್‌ಗೆ ಹೋಗುವುದು ಕಷ್ಟವಾಗಲಿದೆ. ಮದುವೆ ಬಳಿಕ ಜೀವನಶೈಲಿ ಬದಲಾಗುವುದು.

ನೀವು ಇಷ್ಟಪಡದ ಕೆಲಸಗಳನ್ನು ಮಾಡಬೇಕಾಗಬಹುದು

ನೀವು ಇಷ್ಟಪಡದ ಕೆಲಸಗಳನ್ನು ಮಾಡಬೇಕಾಗಬಹುದು

ಮನೆಯನ್ನು ಗುಡಿಸಿ, ಒರೆಸುವುದು, ತರಕಾರಿ ತರಲು ಮಾರುಕಟ್ಟೆಗೆ ಹೋಗುವುದು, ನಲ್ಲಿ ಸರಿಪಡಿಸುವುದು ಇತ್ಯಾದಿಗಳು ನಿಮಗೆ ಇಷ್ಟವಾಗದೆ ಇರುವಂತಹ ಕೆಲಸವಾಗಿರಬಹುದು. ಆದರೆ ಮದುವೆ ಬಳಿಕ ಕೆಲವೊಂದು ಸಂದರ್ಭಗಳಲ್ಲಿ ನೀವು ಈ ಕೆಲಸಗಳನ್ನು ಮಾಡಲೇಬೇಕಾಗುತ್ತದೆ.

ನೀವು ಇಷ್ಟಪಡದ ಕೆಲಸಗಳನ್ನು ಮಾಡಬೇಕಾಗಬಹುದು

ನೀವು ಇಷ್ಟಪಡದ ಕೆಲಸಗಳನ್ನು ಮಾಡಬೇಕಾಗಬಹುದು

ದಿನವಿಡಿ ದುಡಿದ ಬಳಿಕ ನೀವು ಕುಳಿತು ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸಿರಬಹುದು. ಆದರೆ ಮದುವೆ ಬಳಿಕ ನಿಮ್ಮ ಸಂಗಾತಿಯ ಜತೆ ಕುಳಿತು ಕೆಲವೊಂದು ದೂರುಗಳನ್ನು ಕೇಳಬೇಕಾಗುತ್ತದೆ.

ಅಡುಗೆ ಮಾಡಬೇಕು

ಅಡುಗೆ ಮಾಡಬೇಕು

ಕೆಲವೊಂದು ಪರಿಸ್ಥಿತಿಗಳಲ್ಲಿ ನೀವು ಅಡುಗೆ ಮಾಡಬೇಕಾಗಿ ಬರಬಹುದು. ನಿಮ್ಮ ಸಂಗಾತಿ ಅನಾರೋಗ್ಯದಿಂದ ಬಳಲುತ್ತಿದ್ದು, ಹೊರಗಿನ ಆಹಾರ ತಿನ್ನಬಾರದು ಎಂದು ವೈದ್ಯರು ಹೇಳಿದರೆ ನೀವು ಅಡುಗೆ ಮಾಡಬೇಕಾಗುತ್ತದೆ. ಇದರಿಂದ ಮದುವೆಗೆ ಮೊದಲು ಅಡುಗೆ ಕಲಿತುಕೊಂಡರೆ ಒಳ್ಳೆಯದು.

For Quick Alerts
ALLOW NOTIFICATIONS
For Daily Alerts

    English summary

    Why Marrying Someone Is More Like Marrying A New Lifestyle?

    When you are marrying someone, you are marrying a lifestyle. In the initial stages, many things about your lifestyle may change. If you can adjust to the sudden changes, it would be a cake walk. Here are some examples.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more