For Quick Alerts
ALLOW NOTIFICATIONS  
For Daily Alerts

ಮದುವೆ ಮುಂಚೆಯೇ, ದೈಹಿಕ ಸಂಬಂಧ ಸರಿಯಲ್ಲ...

By Deepu
|

ತಾರುಣ್ಯದಲ್ಲಿ ಭಿನ್ನಲಿಂಗಿಗಳ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಆದರೆ ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕಕ್ಕೆ ಒಳಗಾಗುವುದನ್ನು ಯಾವುದೇ ಧರ್ಮ ಅಥವಾ ಕಾನೂನು ಒಪ್ಪುವುದಿಲ್ಲ. ಇಂದು ಈ ವಿಷಯದ ಬಗ್ಗೆ ಚರ್ಚಿಸಿ ಈ ಸಂಪ್ರದಾಯ ಸರಿಯೋ ತಪ್ಪೋ ಎಂದು ನೋಡೋಣ. ಪ್ರೀತಿಯನ್ನೇ ಕಾಮದ ದೃಷ್ಟಿಯಿಂದ ನೋಡುವುದು ಸರಿಯೇ?

ದೈಹಿಕ ಸಂಪರ್ಕ ನಿಸರ್ಗ ನೀಡಿದ ವಿಧಾನವಾಗಿದ್ದು ಗಂಡುಹೆಣ್ಣಿನ ಸಮಾಗಮದಿಂದ ಸಂತಾನ ಮುಂದುವರೆಯಲು ಮಾಡಿರುವ ವ್ಯವಸ್ಥೆಯಾಗಿದೆ. ಆದರೆ ಕೆಲವೇ ಪ್ರಾಣಿಗಳಲ್ಲಿ ಮತ್ತು ಪಕ್ಷಿಗಳಲ್ಲಿ ಕಂಡುಬರುವ ಏಕಸಂಗಾತಿಯ ನಿಷ್ಠೆಯನ್ನು ಬಹುತೇಕ ಎಲ್ಲಾ ಧರ್ಮಗಳೂ ಅನುಮೋದಿಸಿವೆ. ಅವಳನ್ನೊಮ್ಮೆ ಅಪ್ಪಿಕೊಳ್ಳಿ, ಆಕೆ ಅದೇ ನಿರೀಕ್ಷೆಯಲ್ಲಿರುತ್ತಾಳೆ!

ಇದೇ ಕಾರಣಕ್ಕೆ ವಿವಾಹವ್ಯವಸ್ಥೆಯನ್ನು ಅಳವಡಿಸಲಾಗಿದ್ದು ದಂಪತಿಗಳ ನಡುವಣ ದೈಹಿಕ ಸಂಬಂಧ ಜೀವಮಾನವಿಡೀ ಉತ್ತಮ ಮಾನಸಿಕ ಬಾಂಧವ್ಯ ಹೊಂದಲೂ ಸಾಧ್ಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಈ ಪರಿ ಬದಲಾಗುತ್ತಿದೆ. ಕೆಲವು ಯುವಜನರು ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಬೆಳೆಸಿ ಈ ಮೂಲಕ ಮಾನಸಿಕ ಬಂಧವನ್ನು ಪಡೆದ ಬಳಿಕವೇ ವಿವಾಹವಾಗುವುದು ಎಂಬ ಸೂತ್ರವನ್ನು ಮುಂದಿಡುತ್ತಾರೆ. ಕೆಲವರು ಮಾತ್ರ ವಿವಾಹದವರೆಗೂ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ....

ಅಡ್ಡಪರಿಣಾಮ #1

ಅಡ್ಡಪರಿಣಾಮ #1

ದೈಹಿಕ ಸಂಪರ್ಕ ಯಾವುದೇ ಸಂಬಂಧವನ್ನು ಬಲಪಡಿಸಬಹುದು ಅಥವಾ ಶಿಥಿಲಗೊಳಿಸಬಹುದು. ಹೌದು, ಒಂದು ಉತ್ತಮ ಸಂಬಂಧವನ್ನೇ ಕೆಡಿಸಬಹುದು. ನಿಶ್ಚಿತಾರ್ಥದ ಬಳಿಕ ಕೆಲವು ಜೋಡಿಗಳು ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕಕ್ಕೆ ಮುಂದಾಗುತ್ತಾರೆ. ಹೇಗೂ ವಿವಾಹವಾಗುತ್ತೇವಲ್ಲಾ, ಇದರಲ್ಲೇನು ತಪ್ಪು ಎಂಬುದು ಇವರ ವಾದ. ಇಬ್ಬರ ಲೈಂಗಿಕ ಆಸಕ್ತಿ ಮತ್ತು ಬಯಕೆಗಳು ಅವರಿಗನ್ನಿಸಿದಂತೆಯೇ ಪೂರ್ಣಗೊಂಡರೆ ಸರಿ, ಇಲ್ಲದಿದ್ದರೆ?

ಅಡ್ಡಪರಿಣಾಮ #1

ಅಡ್ಡಪರಿಣಾಮ #1

ಇಬ್ಬರಲ್ಲೊಬ್ಬರಿಗಾದರೂ ತಮ್ಮ ಸಂಗಾತಿಯಿಂದ ಸಿಗಬೇಕಿದ್ದ ಯಾವುದೋ ಒಂದು ಬಯಕೆ ಅವರು ಬಯಸಿದಂತೆ ಇರದೇ ಇದ್ದರೆ? ವಾಸ್ತವವೆಂದರೆ ಯಾವುದೇ ವ್ಯಕ್ತಿಗೆ ತನ್ನ ಕಲ್ಪನೆಯ ಲೈಂಗಿಕ ಸುಖ ನಿಜರೂಪದಲ್ಲಿ ಸಿಗಲು ಸಾಧ್ಯವೇ ಇಲ್ಲ. ಈ ಕೊರತೆ ನಿಶ್ಚಿತಾರ್ಥವಾಗಿ ಇನ್ನೇನು ನಾಳೆ ಮದುವೆ ಎಂದಾಗ ಇದೇ ಕಾರಣವಿದ್ದರೂ ಇದೇ ಕಾರಣವೆಂದು ಹೇಳದೇ ಮುರಿದುಬಿದ್ದಿವೆ.

ಅಡ್ಡಪರಿಣಾಮ #2

ಅಡ್ಡಪರಿಣಾಮ #2

ಯಾವುದೇ ಪ್ರಾಣಿಯ ಲೈಂಗಿಕ ಬಯಕೆ ಸ್ಖಲನದ ಬಳಿಕ ತಣಿಯುತ್ತದೆ. ದೈಹಿಕ ಸಂಪರ್ಕಕ್ಕೂ ಮುನ್ನ ಈ ಬಗ್ಗೆ ಇದ್ದ ಕುತೂಹಲ ಒಂದು ಬಾರಿಯ ಅನುಭವದ ಬಳಿಕ 'ಇಷ್ಟೇನೇ' ಎಂಬ ತೀರ್ಮಾನಕ್ಕೆ ಬರಲು ಕಾರಣವಾಗಬಹುದು. ಇವರು ತಕ್ಷಣವೇ ಈ ಮದುವೆಯಿಂದ ನುಣುಚಿಕೊಳ್ಳಲು ನೆವಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಅಡ್ಡಪರಿಣಾಮ #3

ಅಡ್ಡಪರಿಣಾಮ #3

ಕೆಲವರು ತಮ್ಮ ಬಯಕೆಗಳನ್ನು ತೀರಿಸಿಕೊಳ್ಳಲು ತಮ್ಮ ಅಕ್ಕಪಕ್ಕದಲ್ಲಿರುವವರೊಂದಿಗೆ ಗುಟ್ಟಾಗಿ ಸಂಬಂಧ ಬೆಳೆಸಿಕೊಂಡಿರುತ್ತಾರೆ. ನೆರೆಹೊರೆ, ಶಾಲೆಯ, ಉದ್ಯೋಗದ ಪರಿಚಯಸ್ಥರು, ಸ್ನೇಹಿತ ಅಥವಾ ಈಗಾಗಲೇ ವಿವಾಹವಾಗಿರುವವರೊಂದಿಗೂ ಸಂಬಂಧ ಇರಬಹುದು. ಈ ಸಂಬಂಧ ನಿಧಾನವಾಗಿ ಮಾನಸಿಕವಾಗಿಯೂ ಆ ವ್ಯಕ್ತಿಯೆಡೆ ವಾಲುವಂತೆ ಮಾಡಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹೀಗೇ ಆಗುತ್ತದೆ. ಈಗ ವಿವಾಹವಾದರೆ ವಿವಾಹದ ಬಳಿಕವೂ ಈ ಮೊದಲ ಸಂಬಂಧದ ವ್ಯಕ್ತಿ ಮನಸ್ಸಿನಲ್ಲಿದ್ದು ಈಗಿನ ಸಂಗಾತಿಗೆ ಮೋಸ ಮಾಡಿದಂತಾಗುತ್ತದೆ.

ಅಡ್ಡಪರಿಣಾಮ #4

ಅಡ್ಡಪರಿಣಾಮ #4

ವಿವಾಹಪೂರ್ವ ಸಂಬಂಧದಿಂದ ಅನೈಚ್ಛಿಕ ಗರ್ಭಧಾರಣೆ ಅಥವಾ ಲೈಂಗಿಕರೋಗಗಳು ಹಬ್ಬುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಅಡ್ಡಪರಿಣಾಮ #5

ಅಡ್ಡಪರಿಣಾಮ #5

ಕೆಲವು ಜೋಡಿಗಳು ವರ್ಷಗಳ ವರೆಗೆ ಡೇಟಿಂಗ್, ಅದೂ ಇದೂ ಎಂದು ಜೊತೆಯಾಗಿಯೇ ಇರುತ್ತಾರೆ. ಇವರಲ್ಲಿ ಕೆಲವರು ಮದುವೆಗೂ ಮುನ್ನವೇ ಲೈಂಗಿಕ ಸಂಪರ್ಕವನ್ನೂ ಬೆಳೆಸುತ್ತಾರೆ. ಕೆಲವೇ ದಿನಗಳಲ್ಲಿ ಇದು ಬೇಸರವನ್ನೂ ತರಿಸುತ್ತದೆ. ಆದರೆ ಈ ನಡುವೆ ಇಬ್ಬರಲ್ಲೊಬ್ಬರಿಗಾದರೂ ಮೂರನೆಯ ವ್ಯಕ್ತಿಯೊಬ್ಬರು ಇನ್ನೂ ಆಕರ್ಷಕರಾಗಿ ಕಂಡುಬಂದರೆ ಇವರಿಗೆ ಹೊಸ ಸಂಬಂಧವೇ ಹೆಚ್ಚು ಆಕರ್ಷಕವಾಗಿ ಕಾಣುವ ಮೂಲಕ ಇಷ್ಟು ವರ್ಷಗಳ ಡೇಟಿಂಗಿಗೂ ತಿಲಾಂಜಲಿ ನೀಡಿ ಮದುವೆಯನ್ನೂ ರದ್ದುಪಡಿಸುತ್ತಾರೆ.

English summary

Side Effects Of Sex Before Marriage

Let us not get into the debate of the rights or the wrongs of sex before marriage. Arguments may or may not serve the purpose or help us understand anything new.
Story first published: Thursday, March 30, 2017, 19:40 [IST]
X
Desktop Bottom Promotion