ಕ್ಷಣದ ಸುಖಕ್ಕಾಗಿ ಕೆಟ್ಟದ್ದರ ಸಹವಾಸ ಬೇಡವೇ ಬೇಡ....

By: manu
Subscribe to Boldsky

ಆಧುನಿಕ ಯುಗದಲ್ಲಿ ಎಲ್ಲವೂ ತುಂಬಾ ವೇಗವಾಗಿ ಆಗಬೇಕು ಎನ್ನುವ ಬಯಕೆ ಯುವ ಜನಾಂಗದ್ದಾಗಿದೆ. ಇದರಿಂದ ಪ್ರತಿಯೊಂದರಲ್ಲೂ ವೇಗವನ್ನು ಬಯಸುತ್ತಾರೆ. ಕೆಲಸ ಹಾಗೂ ಸಂಬಂಧದಲ್ಲಿ ಅವರಿಗೆ ವ್ಯತ್ಯಾಸವೇ ಕಾಣಿಸುವುದಿಲ್ಲ. ಇದರಿಂದ ಸಂಬಂಧಗಳು ಬೇಗನೆ ಮುರಿದು ಬೀಳುತ್ತಾ ಇದೆ. ಲಿವ್ ಇನ್ ರಿಲೇಷನ್ ಹಾಗೂ ಒಂದು ರಾತ್ರಿಯ ಸಂಬಂಧಗಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಾ ಇದೆ. ಇದು ಸಮಾಜಕ್ಕೆ ತುಂಬಾ ಅಪಾಯಕಾರಿ ಕೂಡ. ಇದರಿಂದ ಮುಂದೆ ಅಪಾಯಗಳು ಸಂಭವಿಸಬಹುದು. ಮದುವೆ ಮುಂಚೆಯೇ, ದೈಹಿಕ ಸಂಬಂಧ ಸರಿಯಲ್ಲ...

ವಿದೇಶಗಳಲ್ಲಿ ಇಂತಹ ಸಂಸ್ಕೃತಿ ಇರುವುದರಿಂದ ಹೆಚ್ಚಿನ ಮಕ್ಕಳಿಗೆ ತಂದೆತಾಯಿಯ ಪ್ರೀತಿಯೇ ಸಿಗುವುದಿಲ್ಲ. ಇದು ಸಮಾಜಕ್ಕೆ ಮಾರಕ. ಯುವಕರು ಸಂಬಂಧಗಳನ್ನು ಕೂಡ ತುಂಬಾ ಹಗುರವಾಗಿ ಪರಿಗಣಿಸಿದ್ದಾರೆ. ಇದರಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ಮಜಾ ಮಾಡಲು ಸಂಬಂಧ ಬೆಳೆಸುವ ಬದಲು ಬದ್ಧತೆಯಿರುವಂತಹ ಸಂಬಂಧವನ್ನು ಬೆಳೆಸಿದರೆ ತುಂಬಾ ಒಳ್ಳೆಯದು. ಇದು ಯಾಕೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ.....   

ಕಷ್ಟ ಸುಖ ಹಂಚಿಕೊಳ್ಳಲು ಸಂಗಾತಿ ಬೇಕು...

ಕಷ್ಟ ಸುಖ ಹಂಚಿಕೊಳ್ಳಲು ಸಂಗಾತಿ ಬೇಕು...

ಮಾತನಾಡಲು, ಚರ್ಚೆ ಮಾಡಲು ಮತ್ತು ಯೋಜನೆಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕು. ಕೇವಲ ಪ್ರೀತಿ ಮಾತ್ರ ಜೀವನದಲ್ಲಿ ಎಲ್ಲವನ್ನು ನೀಡುವುದಿಲ್ಲ. ನಿಮ್ಮ ಜೀವನದ ಬಗ್ಗೆ ಮಾತನಾಡಲು ಯಾರಾದರೂ ಬೇಕು. ದಿನದ ಬಿಡುವಿಲ್ಲದ ಕೆಲಸದ ಬಳಿಕ ಸಂಜೆ ಬಂದು ಮನೆಯಲ್ಲಿ ಸೋಫಾದ ಮೇಲೆ ಬಿದ್ದುಕೊಳ್ಳುವಾಗ ನಿಮ್ಮ ನೋವನ್ನು ಹಂಚಿಕೊಳ್ಳಲು ಯಾರಾದರೂ ಬೇಕು. ಕೇವಲ ಲೈಂಗಿಕ ಕ್ರಿಯೆ ಮಾತ್ರ ನಿಮ್ಮ ಉದ್ದೇಶವಾಗಿರಬಾರದು.

ಒಂದು ರಾತ್ರಿ ಅವರೊಂದಿಗೆ ಕಳೆಯುವುದರಲ್ಲಿ ಅರ್ಥವಿಲ್ಲ

ಒಂದು ರಾತ್ರಿ ಅವರೊಂದಿಗೆ ಕಳೆಯುವುದರಲ್ಲಿ ಅರ್ಥವಿಲ್ಲ

ನೀವು ಯಾರೊಂದಿಗಾದರೂ ಸಿನೆಮಾ ಅಥವಾ ಪಾರ್ಟಿಗೆ ಹೋಗಬಹುದು. ಆದರೆ ಕೇವಲ ಒಂದು ರಾತ್ರಿಯ ಸಂಬಂಧದಿಂದ ನೀವು ಅವರೊಂದಿಗೆ ಹೋಗಬಾರದು. ಬದ್ಧತೆಯಿರುವ ಸಂಬಂಧದಿಂದ ನಿಮಗೆ ಒಳ್ಳೆಯ ಜತೆ ಸಿಗುವುದು ಖಚಿತ.

 ಕ್ಷಣದ ಸುಖಕ್ಕಾಗಿ ಮಾರಕ ಕಾಯಿಲೆ ಬರಬಹುದು!!

ಕ್ಷಣದ ಸುಖಕ್ಕಾಗಿ ಮಾರಕ ಕಾಯಿಲೆ ಬರಬಹುದು!!

ಬದ್ಧತೆಯಿರುವ ಸಂಗಾತಿ ಜತೆಗೆ ಮಲಗುವಾಗ ನೀವು ಯಾವುದೇ ರೋಗದ ಬಗ್ಗೆ ಚಿಂತೆ ಮಾಡದೆ ಸುಖ ಪಡಬಹುದು. ಒಂದು ರಾತ್ರಿಯ ಸಂಬಂಧವಾದರೆ ಹೀಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮೊಂದಿರುವ ವ್ಯಕ್ತಿಯ ಆರೋಗ್ಯದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ.

ನಿಮ್ಮಲ್ಲಿ ಹಣವಿದ್ದರೆ ಮಾತ್ರ ಇವರು ನಿಮ್ಮೊಟ್ಟಿಗೆ

ನಿಮ್ಮಲ್ಲಿ ಹಣವಿದ್ದರೆ ಮಾತ್ರ ಇವರು ನಿಮ್ಮೊಟ್ಟಿಗೆ

ನಿಮಗೆ ಯಾವುದೇ ರೀತಿಯ ನೆರವು ಬೇಕಿದ್ದರೆ ಆಗ ತಕ್ಷಣ ನೆರವು ಸಿಗುತ್ತದೆ ಮತ್ತು ನಿಮ್ಮ ಮೇಲಿನ ಒತ್ತಡ ಕಡಿಮೆಯಾಗುವುದು. ಇದು ಬದ್ಧತೆಯಿರುವ ಸಂಬಂಧದ ದೊಡ್ಡ ಲಾಭವಾಗಿದೆ. ಒಂದು ರಾತ್ರಿಯ ಸಂಬಂಧ ಇದನ್ನು ಒದಗಿಸಲ್ಲ.

ಆದರೆ ನಂಬಿಕಸ್ಥ ಸಂಗಾತಿ ಯಾವತ್ತೂ ಮೋಸ ಮಾಡಲ್ಲ!

ಆದರೆ ನಂಬಿಕಸ್ಥ ಸಂಗಾತಿ ಯಾವತ್ತೂ ಮೋಸ ಮಾಡಲ್ಲ!

ಸಂಗಾತಿಗೆ ಬದ್ಧರಾದ ಬಳಿಕ ನಿಮ್ಮ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ನಿಮ್ಮ ಬಟ್ಟೆ, ಕೂದಲಿನ ವಿನ್ಯಾಸ ಮತ್ತು ದೇಹದ ಬೊಜ್ಜಿನ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ. ಇದೆಲ್ಲವೂ ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಲ್ಲ.

ಸಮಸ್ಯೆ ನೀರು ಕುಡಿದಷ್ಟು ಸುಲಭವಾಗಿ ನಿವಾರಣೆಯಾಗುತ್ತದೆ!

ಸಮಸ್ಯೆ ನೀರು ಕುಡಿದಷ್ಟು ಸುಲಭವಾಗಿ ನಿವಾರಣೆಯಾಗುತ್ತದೆ!

ಸಂಬಂಧದಲ್ಲಿ ಬದ್ಧತೆಯಿದ್ದರೆ ಆಗ ದೊಡ್ಡ ಸಮಸ್ಯೆಗಳು ಕೂಡ ಚಿಕ್ಕದಾಗುತ್ತದೆ ಮತ್ತು ಜೀವನವು ಸುಂದರವಾಗುವುದು.

English summary

Why Committed Relationships Are Better Than Causal Relationships And One-Night Stands

In this modern era, casual relationships, one night stands, blind dates and open relationships have become a trend. People get into them seeking thrill. But committed relationships will never be outdated as long as human race exists. Why? Well, human beings can't live on seeking thrill alone. There are so many other areas which need to be addressed in life.
Subscribe Newsletter