Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಗಂಡ-ಹೆಂಡತಿಯರ ನಡುವಿನ ರಾಶಿ ಭವಿಷ್ಯ ಹೇಗಿದೆ ನೋಡಿ..
ವಿವಾಹದ ಮಂತ್ರಘೋಷಗಳಲ್ಲಿ 'ಶಯನೇಶು ವೇಶ್ಯಾ' ಎಂಬ ವಾಕ್ಯವನ್ನೂ ಪಠಿಸಲಾಗುತ್ತದೆ. ಆರೋಗ್ಯಕ ದಾಂಪತ್ಯ ಜೀವನಕ್ಕೆ ಸಂಗಾತಿಯಿಂದ ಶಯನಸುಖವನ್ನೂ ಸರಿಸಮನಾಗಿ ಅನುಭವಿಸುವುದು ದಾಂಪತ್ಯ ಜೀವನದ ಮೂಲವಾಗಿದೆ. ಆದರೆ ಈ ಅನುಭವ ದೈಹಿಕ ಆಕರ್ಷಣೆ ಹಾಗೂ ಮೈಮಾಟದ ತಾತ್ಕಾಲಿಕ ಅನುಭೂತಿಯೇ ಹೊರತು ಯಾವುದೇ ದಂಪತಿಗಳ ನಡುವಣ ಮಾನಸಿಕ ಭಾವನೆ ಹಾಗೂ ಆತ್ಮೀಯತೆಯೇ ಜೀವನಪರ್ಯಂತ ಉಳಿಕೊಳ್ಳಬೇಕಾದ ದಾಂಪತ್ಯಕ್ಕೆ ಮೂಲ ಎಂದು ಎಲ್ಲಾ ದಂಪತಿಗಳು ಅಭಿಪ್ರಾಯ ಪಡುತ್ತಾರೆ.
ಆದರೂ, ದಾಂಪತ್ಯದಲ್ಲಿ ದೈಹಿಕ ಸುಖದಲ್ಲಿ ಎಷ್ಟರ ಮಟ್ಟಿಗೆ ಸಂಗಾತಿ ಸಹಕರಿಸುವರು ಎಂಬುದೂ ಒಂದು ಸುಖದಾಂಪತ್ಯಕ್ಕೆ ಮೂಲವಾಗಿದೆ. ಒಂದು ವೇಳೆ ಶಯನದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಪೂರಕವೆಂದಾದರೆ ಸಂಗಾತಿಯ ಆತ್ಮೀಯ ಸ್ಪರ್ಶ ಅಥವಾ ಚುಂಬನವೂ ಸುಖದ ಪರಾಕಾಷ್ಠೆಯತ್ತ ಕೊಂಡೊಯ್ಯಬಹುದು.
ನಾಲ್ಕು ಜನರ ನಡುವೆ ಇದ್ದಾಗ ಪ್ರತಿಯೊಬ್ಬರೂ ನಡೆದುಕೊಳ್ಳುವ ರೀತಿ ದಂಪತಿಗಳು ಶಯನಕೋಣೆಯ ಬಾಗಿಲನ್ನು ಹಾಕಿದ ಬಳಿಕ ಬದಲಾಗಬಹುದು. ಕೆಲವರಿಗೆ ನಾಚಿಕೆಯೇ ಪ್ರಧಾನವಾದರೆ ಕೆಲವರು ತಮ್ಮ ಮನದಾಳದ ಅವ್ಯಕ್ತ ಭಾವನೆ ಹಾಗೂ ಬಯಕೆಗಳನ್ನು ಪ್ರಕಟಿಸಬಹುದು. ಆದರೆ ತನ್ನ ಸಂಗಾತಿ ತನ್ನ ಮೆಚ್ಚಿನದ್ದಾಗಿದ್ದರೆ ಮಾತ್ರ ಮನದಾಳದ ಮಾತುಗಳು ಹೊರಬರುತ್ತವೆ.
ಕೆಲವು ದಂಪತಿಗಳಲ್ಲಿ ಇಬ್ಬರಲ್ಲೊಬ್ಬರು ನಾಲ್ಕು ಜನರ ನಡುವೆ ಇದ್ದಾಗ ಬಹಿರ್ಮುಖ ಅಂದರೆ ಎಲ್ಲರೊಂದಿಗೂ ಬೆರೆಯುವ ಪ್ರವೃತ್ತಿ ಹೊಂದಿದ್ದರೂ ಶಯನಗೃಹದಲ್ಲಿ ಸಂಗಾತಿಯೊಂದಿಗೆ ಏಕಾಂತಕ್ಕೆ ಬಂದಾಕ್ಷಣ ಅಂತರ್ಮುಖಿಗಳಾಗಿಬಿಡುತ್ತಾರೆ. ಇವರು ತಾವಾಗಿ ಮುಂದುವರೆಯದೇ ತನ್ನ ಸಂಗಾತಿಯೇ ಪ್ರಾರಂಭಿಸಲು ಎಂದು ಆಶಿಸುತ್ತಾರೆ. ಇದರಿಂದ ಶಯನದಲ್ಲಿ ದಂಪತಿಗಳ ನಡುವೆ ಹೊಂದಾಣಿಕೆ ಕಂಡುಬರದೇ ಹೋಗಬಹುದು. ಆದ್ದರಿಂದ ಶಯನಗೃಹದಲ್ಲಿ ಸರಿಹೊಂದುವ ಸಂಗಾತಿ ಇರುವುದು ಮುಖ್ಯವಾಗಿದೆ. ಬನ್ನಿ, ಶಯನಗೃಹದಲ್ಲಿ ಯಾವ ರಾಶಿಯ ಜನರಿಗೆ ಯಾವ ರಾಶಿಯ ಸಂಗಾತಿಗಳು ಸೂಕ್ತವಾಗಿದ್ದಾರೆ ಎಂಬುದನ್ನು ನೋಡೋಣ...
ಮೇಷ (Mar 20 - Apr 19)
ಒಂದು ವೇಳೆ ನೀವೇ ನಿಮ್ಮ ಮನೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ವ್ಯಕ್ತಿಯಾಗಿದ್ದರೆ ಶಯನಗೃಹದಲ್ಲಿಯೂ ಪ್ರಮುಖ ಕಾರ್ಯಗಳನ್ನು ನೀವೇ ಕಾರ್ಯರಂಭಿಸಲು ಬಯಸುತ್ತೀರಿ. ಆದ್ದರಿಂದ ನಿಮ್ಮ ಶಯನಸಂಗಾತಿಯಾಗುವವರು ಸಿಂಹ ಅಥವಾ ಕಟಕ ರಾಶಿಯವರಾಗಿದ್ದರೆ ಅತಿ ಸೂಕ್ತರಾಗಿರುತ್ತಾರೆ. ಮಿಥುನ ಹಾಗೂ ತುಲಾ ರಾಶಿಯವರೂ ಸೂಕ್ತರು.
ವೃಶಭ (Apr 19 - May 20)
ಒಂದು ವೇಳೆ ನಿಮಗೆ ಸುಖಾನುಭವ ನಿಧಾನವಾಗಿ ಹಾಗೂ ಹೆಚ್ಚು ಕಾಲಾ ಪಡೆಯುವಂತಿರಬೇಕೆಂದಿದ್ದರೆ ನಿಮ್ಮ ಬಯಕೆಯನ್ನು ಅರ್ಥೈಸಿಕೊಂಡು ಮುಂದುವರೆಯುವ ಸಂಗಾತಿಯ ಅಗತ್ಯವಿದೆ. ವೃಶಭ ರಾಶಿಯವರು ಸೂಕ್ಷ್ಮವಾದ ವಿಷಯಗಳಾದ ಪರಿಮಳ, ನಾದ, ಸ್ಪರ್ಶ, ತಾಪಮಾನ ಮೊದಲಾದವುಗಳಿಗೆಲ್ಲಾ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇವರಿಗೆ ಸೂಕ್ತರಾದ ಸಂಗಾತಿಗಳು ವೃಶ್ಚಿಕ, ಕಟಕ, ಕನ್ಯಾ ಹಾಗೂ ಮಕರ ರಾಶಿಯ ಸಂಗಾತಿಗಳು ಸೂಕ್ತರಾಗಿರುತ್ತಾರೆ.
ಮಿಥುನ (May 20 - Jun 20)
ಈ ರಾಶಿಯವರು ಶಯನದಲ್ಲಿ ವಿಜೃಂಭಿಸುವುದನ್ನು ಇಷ್ಟಪಡುತ್ತಾರೆ ಹಾಗೂ ಹೆಚ್ಚಿನ ಪೋಲಿತನವನ್ನು ಬಯಸುತ್ತಾರೆ. ಇವರಿಗೆ ಸಂಗಾತಿಯಾಗುವವರೂ ಈ ಪೋಲಿತನವನ್ನು ಇಷ್ಟಪಟ್ಟರೆ ಮಾತ್ರವೇ ಇವರ ದಾಂಪತ್ಯ ಸುಖಕರವಾಗಿರುತ್ತದೆ. ಇವರಿಗೆ ಚೆಲ್ಲಾಟ ಹಾಗೂ ಹೊಸವಿಧಾನಗಳನ್ನು ಪ್ರಯೋಗಿಸುವುದು ಇಷ್ಟವಾಗಿರುತ್ತದೆ. ಈ ವ್ಯಕ್ತಿಗಳಿಗೆ ಸೂಕ್ತ ಸಂಗಾತಿಯಾಗಲು ಕುಂಭರಾಶಿಯವರೇ ಸೂಕ್ತರಾಗಿದ್ದಾರೆ. ಇವರನ್ನು ಬಿಟ್ಟರೆ ಧನು ಹಾಗೂ ಮಿಥುನ ರಾಶಿಯವರೇ ಸೂಕ್ತರು.
ಕಟಕ (Jun 20 - Jul 22)
ಒಂದು ವೇಳೆ ನಿಮಗೆ ಚುಂಬನ, ಅಪ್ಪುಗೆ ಮೊದಲಾದವುಗಳಲ್ಲಿಯೇ ಹೆಚ್ಚಿನ ಆಸಕ್ತಿಯಿದ್ದು ನಿಮ್ಮ ಸಂಗಾತಿಯೂ ಇವನ್ನು ಹೆಚ್ಚು ಇಷ್ಟಪಟ್ಟರೆ ನಿಮ್ಮ ಸಂಗಾತಿಯಾಗುವವರು ಮಕರ ಹಾಗೂ ಮೀನರಾಶಿಯರವಾಗಿರಬೇಕು. ಸಿಂಹ ಹಾಗೂ ವೃಶಭರಾಶಿಯವರನ್ನೂ ಪರಿಗಣಿಸಬಹುದು.
ಸಿಂಹ (Jul 22- Aug 22)
ಒಂದು ವೇಳೆ ನಿಮ್ಮ ಮೈಮಾಟ ಅಥವಾ ದೈಹಿಕ ಆಕರ್ಷಣೆಯನ್ನು ಸಂಗಾತಿಯ ಮೆಚ್ಚುಗೆ ಗಳಿಸಲು ಬಳಸುವುದಾದರೆ ಮುನ್ನಲಿವಿಗೆ ನಿಮ್ಮ ಆದ್ಯತೆ ಹೆಚ್ಚಾಗಿರುತ್ತದೆ. ಇದರೊಂದಿಗೆ ಮಸಾಜ್, ಸಾಕಷ್ಟು ನಾಟಕೀಯ ಪ್ರಹಸನಗಳು ನಿಮಗೆ ಅಗತ್ಯವೆನಿಸುತ್ತವೆ. ನಿಮಗೆ ಅತ್ಯುತ್ತಮವಾದ ಸಂಗಾತಿಗಳು ಮೇಶ ಅಥವಾ ಧನು ರಾಶಿಯವರಾಗಿರಬೇಕು. ವೃಶ್ಚಿಕ ರಾಶಿಯವರೂ ಆಗಬಹುದು.
ಕನ್ಯಾ (Aug 22 - Sep 22)
ನಿಮ್ಮ ಶಯನದಲ್ಲಿ ನಡೆಯುವ ಪ್ರೇಮಪ್ರಕರಣ ಇಂದ್ರಿಯಗಳ ಮೇಲೆ ಪರಿಣಾಮ ಬೀರುವಂತಹದ್ದಾಗಿರಬೇಕೆಂದರೆ ನಿಮ್ಮ ಸಂಗಾತಿಯನ್ನು ತೃಪ್ತಿಪಡಿಸಲು ನೀವು ಪರಿಪೂರ್ಣತಾವಾದಿಯಾಗಿದ್ದೀರಿ. ನಿಮಗೆ ಸೂಕ್ತರಾದ ಸಂಗಾತಿ ಕನ್ಯಾ, ಮಕರ, ಮೀನ ಹಾಗೂ ತುಲಾರಾಶಿಯವರಾಗಿರಬೇಕು.
ತುಲಾ (Sep 22 - Oct 23)
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮಂದ ಏನನ್ನು ಬಯಸುತ್ತಾರೆ ಹಾಗೂ ಹೇಗೆ ಮುಂದುವರೆಯಲು ಇಚ್ಛಿಸುತ್ತಾರೆ ಎಂಬುದನ್ನು ಸ್ಪಷ್ಟ ಮಾತುಗಳನ್ನು ಕೇಳಿ ಅದರಂತೆ ನಡೆಯುವವರು ನೀವಾಗಿದ್ದರೆ ನಿಮಗೆ ಮಿಥುನ ಹಾಗೂ ಮೇಶ ರಾಶಿಯ ಸಂಗಾತಿಯೇ ಅತಿ ಹೆಚ್ಚು ಸೂಕ್ತರು.
ವೃಶ್ಚಿಕ (Oct 23 - Nov 21)
ಈ ರಾಶಿಯವರು ಶಯನಗೃಹದಲ್ಲಿ ಅತಿ ಉತ್ತಮರು ಎಂದು ಎಲ್ಲರಿಗೂ ಗೊತ್ತು. ಈ ವಿಷಯದಲ್ಲಿ ವೃಶ್ಚಿಕರಾಶಿಯ ಸಂಗಾತಿ ನಾಯಕತ್ವವನ್ನು ವಹಿಸಿ ಸಂಗಾತಿಗೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಅನುಭವಿಸುವಂತೆ ಮಾಡುತ್ತಾರೆ. ಈ ವ್ಯಕ್ತಿಗಳು ಪ್ರಬಲ ಬಯಕೆಯ ವ್ಯಕ್ತಿಗಳಾಗಿದ್ದು ಇವರಿಗೆ ಸಿಂಹ ಹಾಗೂ ಮೀನರಾಶಿಯವರು ಹೆಚ್ಚು ಸೂಕ್ತರಾಗಿರುತ್ತಾರೆ.
ಧನು (Nov 21 - Dec 22)
ಒಂದು ವೇಳೆ ನೀವು ಶಯನಗೃಹದಲ್ಲಿ ಸಂಗಾತಿಗೆ ಹೆಚ್ಚು ಗಮನ ನೀಡುವ, ಪ್ರೀತಿಸುವ ಹಾಗೂ ಮೋಹಕರಾಗಿದ್ದರೆ ನಿಮಗೆ ಸೂಕ್ತರಾದ ಸಂಗಾತಿ ಮೇಶ, ಸಿಂಹ ಅಥವಾ ಮಿಥುನರಾಶಿಯವರಾಗಿರಬೇಕು.