ಪ್ರೀತಿಗೂ-ಬಾಂಧವ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ!!

By: Arshad
Subscribe to Boldsky

ಕೆಲವೊಮ್ಮೆ ಪ್ರೀತಿಯನ್ನೇ ಬಾಂಧವ್ಯವೆಂದುಕೊಂಡು ಗೊಂದಲವಾಗುವುದುಂಟು. ಬಾಂಧವ್ಯದಲ್ಲಿ ಒಳಗೊಳ್ಳುವುದರಲ್ಲಿ ತಪ್ಪಿಲ್ಲದಿದ್ದರೂ ಇಂದಲ್ಲ ನಾಳೆ ಈ ಬಾಂಧವ್ಯವನ್ನು ಪ್ರೀತಿಗೆ ಪರಿವರ್ತಿಸುವುದು ಮೇಲು. ಏಕೆಂದರೆ ಬಾಂಧವ್ಯದಲ್ಲಿ ಕೆಲವು ಕಟ್ಟೆಗಳಿರುತ್ತವೆ. ಪ್ರೀತಿ ಈ ಕಟ್ಟೆಗಳನ್ನು ಒಡೆಯುತ್ತದೆ.  ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!

ಸಂಬಂಧಗಳು ಉತ್ತಮವಾಗಬೇಕೆಂದರೆ ಸಮಯ ನಮಗೆ ಕಲಿಸುವ ವಿದ್ಯೆಗಳನ್ನು ಕಲಿತುಕೊಳ್ಳಬೇಕು. ಅಂತೆಯೇ ಬಾಂಧವ್ಯ ಮೊದಮೊದಲಿಗೆ ಅತಿ ಸಿಹಿಯಾದ ಅನುಭವವನ್ನೇ ನೀಡುತ್ತದೆ. ಆದರೆ ಸಮಯ ಕಳೆದಂತೆ ಬಾಂಧವ್ಯ ವ್ಯಸನದ ರೂಪ ತಾಳುತ್ತದೆ ಹಾಗೂ ತನ್ಮೂಲಕ ಅಸುರಕ್ಷತಾ ಭಾವನೆಯನ್ನೂ ದ್ವೇಷ ಭಾವನೆಯನ್ನೂ ಹುಟ್ಟಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ... 

ವಾಸ್ತವಾಂಶ #1

ವಾಸ್ತವಾಂಶ #1

ಒಂದು ವೇಳೆ ನೀವು ಓರ್ವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿದ್ದರೆ ಆ ವ್ಯಕ್ತಿಯ ಬಗ್ಗೆ ಕೇವಲ ಒಳ್ಳೆಯ ಗುಣಗಳು ಮಾತ್ರವೇ ಕಣ್ಣಿಗೆ ಕಾಣುತ್ತವೆ. ಆದರೆ ನೀವು ಅದೇ ವ್ಯಕ್ತಿಯೊಂದಿಗೆ ಬಾಂಧವ್ಯದಲ್ಲಿದ್ದರೆ ಅವರ ಬಗ್ಗೆ ಕುತೂಹಲ, ಭಯ, ನಿಮ್ಮನ್ನು ಆ ವ್ಯಕ್ತಿ ಬಿಟ್ಟು ಹೋಗುತ್ತಾರೋ ಎಂಬ ಅಸುರಕ್ಷತಾ ಭಾವನೆಯೂ ಮೂಡುತ್ತದೆ.

ವಾಸ್ತವಾಂಶ #2

ವಾಸ್ತವಾಂಶ #2

ಪ್ರೀತಿ ಎಂದಿಗೂ ನಿಃಸ್ವಾರ್ಥವಾಗಿರುತ್ತದೆ. ಆದರೆ ಬಾಂಧವ್ಯ ಸ್ವಾರ್ಥಪರತೆಗೆ ಇನ್ನೊಂದು ಹೆಸರಾಗಿದೆ. ಪ್ರೀತಿಸುವ ವ್ಯಕ್ತಿಯನ್ನು ಹಿಡಿದಿಡುವ ಅಗತ್ಯವಿಲ್ಲ. ಆದರೆ ಬಾಂಧವ್ಯದಲ್ಲಿರುವ ವ್ಯಕ್ತಿ ಸದಾ ತನ್ನ ಕಣ್ಣ ಮುಂದೆಯೇ ಇರಬೇಕು, ತನ್ನನ್ನೆಂದೂ ಬಿಟ್ಟು ಹೋಗಬಾರದು ಎಂಬ ಭಯ ಸದಾ ಆವರಿಸಿರುತ್ತದೆ.

ವಾಸ್ತವಾಂಶ #3

ವಾಸ್ತವಾಂಶ #3

ಪ್ರೀತಿ ಪರಸ್ಪರರ ಏಳ್ಗೆಯನ್ನೇ ಬಯಸುವ ಗುಣವಾಗಿದ್ದು ಇದರಲ್ಲಿ ಇಬ್ಬರೂ ಏಳ್ಗೆ ಹೊಂದುತ್ತಾರೆ ಅಥವಾ ಇನ್ನೊಬ್ಬರ ಏಳ್ಗೆಯಲ್ಲಿಯೇ ತನ್ನ ಏಳ್ಗೆಯನ್ನು ಕಾಣುತ್ತಾರೆ. ಆದರೆ ಒಂದು ವೇಳೆ ಇದು ಕೇವಲ ಬಾಂಧವ್ಯವಾಗಿದ್ದರೆ ಆ ವ್ಯಕ್ತಿ ನಿಮ್ಮ ವಲಯದಿಂದ ಒಂದಿಂಚೂ ಹೊರ ಹೋಗುವುದನ್ನು ಸಹಿಸಲಾಗದು.

ವಾಸ್ತವಾಂಶ #4

ವಾಸ್ತವಾಂಶ #4

ಪ್ರೀತಿ ಸ್ವಾತಂತ್ರ್ಯವನ್ನು ನೀಡಿದರೆ ಬಾಂಧವ್ಯ ಸಾಮ್ಯವನ್ನು ಪ್ರಕಟಿಸುತ್ತದೆ. ಒಂದು ವೇಳೆ ಸಕಾರಣಕ್ಕೇ ನಿಮ್ಮ ಸಂಗಾತಿ ಬೇರಾವುದೋ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾದರೆ ಈ ಸಮಯದಷ್ಟೂ ಕಾಲ ಅಸುರಕ್ಷತಾ ಭಾವನೆ ಕಾಡುತ್ತಿರುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

ಪ್ರೀತಿಸುವ ವ್ಯಕ್ತಿಗಾಗಿ ಏನು ಬೇಕಾದರೂ ಮಾಡುವ ಹುಮ್ಮಸ್ಸು ಹುಟ್ಟುತ್ತದೆ. ಆದರೆ ಬಾಂಧವ್ಯದಲಿರುವಾಗ ಸಂಗಾತಿ ಪಕ್ಕದಲ್ಲಿಯೇ ಇದ್ದು ಹೀಗೆ ಮಾಡು ಎಂದು ಪ್ರೇರೇಪಿಸಿದಾಗ ಮಾತ್ರ ಏನಾದರೊಂದನ್ನು ಮಾಡುವ ಹುಮ್ಮಸ್ಸು ಹುಟ್ಟುತ್ತದೆ. ಸಂಗಾತಿ ದೂರದಲ್ಲಿದ್ದರೆ ಈ ಹುಮ್ಮಸ್ಸು ತಣ್ಣಗಾಗುತ್ತದೆ.

English summary

Understanding The Difference Between Love And Attachment

In relationships, we all learn lessons and attachment is one such lesson that may look like a sweet experience in the initial stages. But as time passes by, attachment may turn into an addiction and can create insecurity and hatred too. Read on to know more about love and attachment.
Please Wait while comments are loading...
Subscribe Newsletter