ಗಂಡ-ಹೆಂಡತಿಯ ಸಂಬಂಧ ಕನ್ನಡಿ ಇದ್ದಂತೆ-ಒಡೆದರೆ ಹೋಯಿತು!

By: Hemanth
Subscribe to Boldsky

ಸಂಬಂಧಗಳು ಕನ್ನಡಿ ಇದ್ದಂತೆ. ಒಮ್ಮೆ ಒಡೆದು ಹೋದರೆ ಅದನ್ನು ಮತ್ತೆ ಜೋಡಿಸುವುದು ತುಂಬಾ ಕಷ್ಟ. ಪತಿ-ಪತ್ನಿ, ತಂದೆ-ಮಗ, ತಾಯಿ-ಮಗಳು ಹೀಗೆ ಯಾವುದೇ ಸಂಬಂಧವಾಗಿರಲಿ ಅದನ್ನು ಗಿಡ ನೆಟ್ಟು ಆರೈಕೆ ಮಾಡುವಂತೆ ಪೋಷಿಸಬೇಕಾಗುತ್ತದೆ. ಯಾಕೆಂದರೆ ಸಂಬಂಧಗಳನ್ನು ಕಟ್ಟಿ ಹಾಕಲು ಸಾಧ್ಯವೇ ಇಲ್ಲ.

ಸಂಬಂಧಗಳು ಮುಕ್ತವಾಗಿರಬೇಕು. ಅದು ಮರ ಬೆಳೆದಂತೆ ಗಟ್ಟಿಯಾಗುತ್ತಾ ಹೋಗಬೇಕು. ಕೆಲವೊಮ್ಮೆ ಸಮಸ್ಯೆಗಳು ಆಗಾಗ ಬರುತ್ತದೆ. ಆದರೆ ಇದನ್ನು ನಿಭಾಯಿಸಿಕೊಂಡು ಸಂಬಂಧ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಕೆಲವೊಂದು ಸಲ ಸಂಬಂಧಗಳು ಕಾರಣವಿಲ್ಲದೆ ಮುರಿದು ಬೀಳುತ್ತದೆ. ಇದು ಇಂದಿನ ದಿನಗಳಲ್ಲಿ ಅತಿಯಾಗುತ್ತಾ ಇದ್ದರೂ ಸಂಬಂಧವನ್ನು ಅರಿತುಕೊಂಡು ಇನ್ನೇನೂ ಸಾಧ್ಯವೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಮಾತ್ರ ಇಂತಹ ನಿರ್ಧಾರ ತೆಗೆದುಕೊಳ್ಳಬೇಕು. 

ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!

ಯಾಕೆಂದರೆ ಒಮ್ಮೆ ಮುರಿದು ಬಿದ್ದ ಸಂಬಂಧ ಮತ್ತೆ ಕಟ್ಟಿಕೊಳ್ಳುವುದು ತುಂಬಾ ಕಷ್ಟ. ಮದುವೆಯಾದ ದಂಪತಿಗಳ ಮಧ್ಯೆ ಕೇವಲ ಆಕರ್ಷಣೆಯಿದ್ದರೆ ಮಾತ್ರ ಸಂಬಂಧ ಮುಂದುವರಿಯದು. ಪ್ರೀತಿಯ ಜತೆಗೆ ಆಕರ್ಷಣೆಯಿದ್ದರೆ ಅದು ಖಂಡಿತವಾಗಿಯೂ ದೀರ್ಘ ಕಾಲ ಬಾಳುವ ಸಂಬಂಧವಾಗುವುದು.

ಯಾವ್ಯಾವ ಸಂಬಂಧಗಳು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಆದರೆ ಬೋಲ್ಡ್ ಸ್ಕೈ ನಿಮಗೋಸ್ಕರ ಯಾವ ಸಂಬಂಧಗಳು ಉಳಿದುಕೊಳ್ಳಬಹುದು ಮತ್ತು ಹೆಚ್ಚು ಬಾಳಬಹುದು ಎಂದು ಹೇಳಿಕೊಡಲಿದೆ. ಈ ಲೇಖನವನ್ನು ಗಮನವಿಟ್ಟು ಓದಿದರೆ ನಿಮ್ಮ ಸಂಬಂಧ ಸುಮಧುರವಾಗಿರಬಹುದು....

ಪ್ರಾಯೋಗಿಕ ಮತ್ತು ಕ್ರಿಯಾತ್ಮಕ

ಪ್ರಾಯೋಗಿಕ ಮತ್ತು ಕ್ರಿಯಾತ್ಮಕ

ಕೆಲವು ದಂಪತಿಯನ್ನು ನೀವು ನೋಡಿರಬಹುದು. ಅದರಲ್ಲಿ ಒಬ್ಬರು ತುಂಬಾ ಪ್ರಾಯೋಗಿಕವಾಗಿ ಜೀವನದ ಸಮಸ್ಯೆ ಹಾಗೂ ಸತ್ಯಗಳನ್ನು ಅದು ಬಂದಂತೆ ಸ್ವೀಕರಿಸುತ್ತಾರೆ. ಇನ್ನೊಬ್ಬರು ತುಂಬಾ ಕ್ರಿಯಾತ್ಮಕವಾಗಿ ಕಲ್ಪನೆಗಳಿಗೆ ಜೀವ ನೀಡುತ್ತಾರೆ. ಒಬ್ಬರು ಹೇಗೆ ಕೆಲಸ ಮಾಡುತ್ತಾರೆ ಎಂದು ಮತ್ತೊಬ್ಬರಿಗೆ ತಿಳಿದಿರುತ್ತದೆ. ಅವರು ಪರಸ್ಪರರನ್ನು ಎಷ್ಟು ಹಚ್ಚಿಕೊಂಡಿರುತ್ತಾರೆ ಎಂದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲಾರರು.

ಒಬ್ಬರ ಬುದ್ಧಿ ಮತ್ತೊಬ್ಬರ ಹೃದಯ

ಒಬ್ಬರ ಬುದ್ಧಿ ಮತ್ತೊಬ್ಬರ ಹೃದಯ

ಈ ದಂಪತಿಗಳಲ್ಲಿ ಒಬ್ಬರು ತಮ್ಮ ಬುದ್ಧಿಯನ್ನು ಉಪಯೋಗಿಸಿದರೆ ಇನ್ನೊಬ್ಬರು ಭಾವನೆಗಳನ್ನು ಬಳಸುತ್ತಾ ಇರುತ್ತಾರೆ. ದಂಪತಿಯು ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ. ಯಾಕೆಂದರೆ ಹೃದಯವು ಭಾವನೆಗಳನ್ನು ಅತಿಯಾಗಿ ವ್ಯಕ್ತಪಡಿಸುವಾಗ ಮೆದುಳು ಅದನ್ನು ನಿಯಂತ್ರಿಸುತ್ತದೆ. ಅದೇ ಸೂಕ್ಷ್ಮ ವಿಚಾರಗಳಲ್ಲಿ ಮೆದುಳನ್ನು ಹೃದಯವು ಮೃಧುಗೊಳಿಸುತ್ತದೆ.

ತುಂಬಾ ರೋಮ್ಯಾಂಟಿಕ್ ಮತ್ತು ಹೆಚ್ಚು ರೋಮ್ಯಾಂಟಿಕ್ ಇಲ್ಲದಿರುವುದು

ತುಂಬಾ ರೋಮ್ಯಾಂಟಿಕ್ ಮತ್ತು ಹೆಚ್ಚು ರೋಮ್ಯಾಂಟಿಕ್ ಇಲ್ಲದಿರುವುದು

ಯಾವುದೇ ದಂಪತಿಯಾಗಲಿ ಪರಸ್ಪರರನ್ನು ಒಂದೇ ರೀತಿಯಲ್ಲಿ ಪ್ರೀತಿಸಲು ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ. ಒಬ್ಬರು ಯಾವಾಗಲೂ ಮತ್ತೊಬ್ಬರು ತುಂಬಾ ಪ್ರೀತಿಸುತ್ತಾರೆ. ಈ ಸಂಬಂಧವು ಅದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ರೋಮ್ಯಾಂಟಿಕ್ ಆಗಿರುವ ವ್ಯಕ್ತಿಯು ಏನಾದರೂ ಉಡುಗೊರೆ ಅಥವಾ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಮತ್ತೊಬ್ಬರು ಯಾವಾಗಲೂ ಇಂತಹ ಪ್ರೀತಿಯನ್ನು ಸ್ವೀಕರಿಸುವವರೇ ಆಗಿರುವ ಕಾರಣದಿಂದ ಇದೇ ರೀತಿಯಲ್ಲಿ ಪ್ರೀತಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

ಸ್ನೇಹಿತರು

ಸ್ನೇಹಿತರು

ಈ ದಂಪತಿಗಳು ಸಂಗಾತಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಇರುತ್ತಾರೆ. ರೋಮ್ಯಾನ್ಸ್ ಮಾತ್ರ ಅವರಿಗೆ ಮುಖ್ಯ ವಿಷಯವಾಗಿರುವುದಿಲ್ಲ. ಅವರು ಪರಸ್ಪರರು ಸಮಾನರು ಎಂದು ಭಾವಿಸುವುದು ಮಾತ್ರವಲ್ಲದೆ ಪರಸ್ಪರರ ಸಂಘವನ್ನು ಇಷ್ಟಪಡುತ್ತಾರೆ. ಅವರು ಜತೆಯಾಗಿ ಕುಳಿತುಕೊಂಡು ವೀಡಿಯೋ ಗೇಮ್ ಆಡಬಹುದು ಮತ್ತು ಒಂದು ಫಿಜ್ಜಾವನ್ನು ಸಂಪೂರ್ಣವಾಗಿ ಮುಗಿಸಿ ಮತ್ತೆ ಡೇಟಿಂಗ್ ಗೆ ಹೋಗಬಹುದು.

ಗುರಿಯಿರುವ ದಂಪತಿ

ಗುರಿಯಿರುವ ದಂಪತಿ

ಈ ಸಂಬಂಧವು ಹೆಚ್ಚು ಗುರಿಯನ್ನು ಹೊಂದಿರುವುದು. ಪ್ರತಿಯೊಬ್ಬ ಸಂಗಾತಿಗೆ ಕೂಡ ತನ್ನದೇ ಆಗಿರುವ ಗುರಿ ಇರುತ್ತದೆ. ಇದನ್ನು ಈಡೇರಿಸಲು ಅವರು ಪರಸ್ಪರ ಬೆಂಬಲ ಸೂಚಿಸುತ್ತಾರೆ. ಯಾರಾದರೂ ಗುರಿ ಮುಟ್ಟಿದಾಗ ಇನ್ನೊಬ್ಬರು ತುಂಬಾ ಖುಷಿ ಪಡುತ್ತಾರೆ. ಅವರು ತಮ್ಮ ಸಾಧನೆ ಬಗ್ಗೆ ತುಂಬಾ ಗೌರವ ಪಟ್ಟುಕೊಳ್ಳುತ್ತಾರೆ. ಈ ದಂಪತಿಯನ್ನು ಕಿರಿಕಿರಿಯವರೆಂದು ಕರೆಯಲಾಗುತ್ತದೆ. ಇದು ಅವರಿಗೋಸ್ಕರ ಕೆಲಸ ಮಾಡಿದರೆ ಅದು ತುಂಬಾ ಒಳ್ಳೆಯದು.

ಫ್ಯಾಷನ್ ಇರುವ ದಂಪತಿ

ಫ್ಯಾಷನ್ ಇರುವ ದಂಪತಿ

ಈ ದಂಪತಿಯಲ್ಲಿ ಸಂಗಾತಿಗಳಿಬ್ಬರು ತಮ್ಮ ಫ್ಯಾಷನ್ ನೊಂದಿಗೆ ಒಪ್ಪಿಕೊಳ್ಳುತ್ತಾರೆ ಮತ್ತು ಒಪ್ಪಿಕೊಳ್ಳುವುದಿಲ್ಲ. ಲೈಂಗಿಕತೆ ಮತ್ತು ಆಕರ್ಷಣೆಯು ಈ ಸಂಬಂಧಕ್ಕೆ ಯಾವಾಗಲೂ ಮೂಲವಾಗಿರುತ್ತದೆ. ಅವರಲ್ಲಿನ ಅಹಂ ಅವರನ್ನು ಸದಾ ನೋವು ಮಾಡುತ್ತಿರುವುದು. ಅವರು ಪರಸ್ಪರ ಜಗಳವಾಡಿದರೂ ಒಳ್ಳೆಯ ಫ್ಯಾಷನ್ ನೊಂದಿಗೆ ಜಗಳವಾಡುತ್ತಾರೆ. ಆಕರ್ಷಣೆ ಮತ್ತು ಲೈಂಗಿಕತೆಯು ದಂಪತಿಯಿಂದ ದೂರವಾದ ಬಳಿಕ ಈ ಸಂಬಂಧ ಉಳಿದುಕೊಳ್ಳುವುದು ತುಂಬಾ

ಕಷ್ಟದ ಕೆಲಸ. ಪ್ರೀತಿಯೊಂದಿಗೆ ಬದುಕಲು ಮತ್ತು ಅಹಂನ್ನು ಬದಿಗಿಟ್ಟರೆ ಈ ಸಂಬಂಧವನ್ನು ಕೂಡ ಉಳಿಸಿಕೊಳ್ಳಲು ಹೆಚ್ಚು ಕಷ್ಟವೇನಿಲ್ಲ.

English summary

Types Of Couples You Come Across

The next thing you hear is about them splitting up. Similarly, you may look at a couple's relationship and predict that it is doomed from the start. But somehow, it withstands the tests of time. If you look at the various relationships, the relationships that work may have things in common. Keeping all these things in mind, we have made a list of types of relationships that might actually work; well, at least, most of the time. So, without further ado, let's take a look at the kind of relationships that may actually work.
Story first published: Tuesday, July 4, 2017, 11:33 [IST]
Subscribe Newsletter