ಸಂಸಾರದಲ್ಲಿ ಮನೆ–ಮನ ಮುಳುಗಿಸುವ 'ಗುಸುಗುಸು ಸುದ್ದಿ'!

By: Deepu
Subscribe to Boldsky

ಗಾಸಿಪ್ ಅಥವಾ ಗುಸುಗುಸು ಸುದ್ದಿ ಎಂದರೆ ತೀರಾ ವೈಯಕ್ತಿಕ ವಿಷಯಗಳನ್ನು ಗುಟ್ಟಾಗಿ ಇನ್ನೊಬ್ಬರಿಗೆ ದಾಟಿಸುವುದು ಮತ್ತು ಇತರರಿಂದ ಪಡೆಯುವುದು. ಗುಸುಗುಸು ಸುದ್ದಿ ಕೇವಲ ಮಹಿಳೆಯರಿಗೆ ಮೀಸಲಾದ ವಿದ್ಯಮಾನ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಇಲ್ಲ, ಪುರುಷರೂ ಹೆಚ್ಚಿನ ಸಂಖ್ಯೆಯಲ್ಲಿ ಗುಸುಗುಸು ಸುದ್ದಿ ದಾಟಿಸುತ್ತಾರೆ. ಆದರೆ ಪುರುಷರ ಗುಸುಗುಸು ಸುದ್ದಿಗೂ ಮಹಿಳೆಯರ ಗುಸುಗುಸು ಸುದ್ದಿಗೂ ವ್ಯತ್ಯಾಸವಿದೆ.  ಸಣ್ಣ ಪುಟ್ಟ ತಪ್ಪುಗಳೇ ಸಾಕು, ದಾಂಪತ್ಯದಲ್ಲಿ ವೈಮನಸ್ಸು ಮೂಡಲು

ಪುರುಷರ ಗುಸುಗುಸು ಕ್ರೀಡೆ, ಹಣ, ಮನೆ, ಆಸ್ತಿ, ಕಳ್ಳತನದ ಆಸ್ತಿ ಮೊದಲಾದ ವಿಷಯಗಳ ಕುರಿತಾಗಿಯೇ ಇದ್ದರೆ ಮಹಿಳೆಯರದ್ದು ಬೇರೆ ಬೇರೆ ವಿಷಯದ ಕುರಿತಾಗಿದ್ದರೂ ಅತಿ ಹೆಚ್ಚಿನ ಕುತೂಹಲವನ್ನು ಅನೈತಿಕ ಸಂಬಂಧಗಳತ್ತ ತೋರುತ್ತಾರೆ. ಗುಸುಗುಸು ಸುದ್ದಿ ಸಂಪೂರ್ಣವಾಗಿ ಅನಾರೋಗ್ಯಕರವಂತೂ ಅಲ್ಲ. ಕೊಂಚ ಮಟ್ಟಿಗಿನ ಈ ಗುಸುಗುಸು ಮಾನಸಿಕವಾಗಿ ತಾಜಾತನವನ್ನೂ ನೀಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.   

ಈ ಮೂಲಕ ಮೆದುಳಿಗೆ ಆಕ್ಸಿಟೋಸಿನ್ ಎಂಬ ಪ್ರಚೋದಕ ರವಾನೆಯಾಗುವ ಮೂಲಕ ಇದು ಸಾಧ್ಯವಾಗುತ್ತದೆ. ಅಲ್ಲದೇ ಗುಸುಗುಸು ಸುದ್ದಿಯನ್ನು ಹರಡುವ ಮೂಲಕ ಸ್ನೇಹಿತರೊಂದಿಗೆ ಹಾಗೂ ಸಂಬಂಧಿಕರೊಂದಿಗಿನ ಬಾಂಧವ್ಯವೂ ಉತ್ತಮಗೊಳ್ಳುತ್ತದೆ. ಆದರೆ ಇದು ಒಂದು ಹಂತ ಮೀರಬಾರದು, ಆದರೆ ಮಾತ್ರ ಇದು ಮನಗಳನ್ನು ಮಾತ್ರವಲ್ಲ ಮನೆಗಳನ್ನೂ ಕೆಡಿಸಬಹುದು.  ಕಾಲ ಬದಲಾಗಿದೆ ಸ್ವಾಮಿ, ಈಗ ಮಹಿಳೆಯರೇ ಸ್ಟ್ರಾಂಗ್‌ ಗುರು!

ಈ ಗುಸುಗುಸು ಸುದ್ದಿಗೆ ಕೆಲವರು ತೀರಾ ವ್ಯಸನಿಗಳಾಗಿರುತ್ತಾರೆ. ಇದು ಅಪಾಯಕಾರಿಯಾಗಿದ್ದು ಇದು ಅವರ ಮನೆಯ ತಳಹದಿಯನ್ನೇ ಅಲ್ಲಾಡಿಸಬಹುದು. ಕೆಲವು ಕಾಲ್ಪನಿಕ ಸಂಗತಿಗಳು ವಿಚಿತ್ರ ರೂಪ ಪಡೆದು ಇದರ ಪರಿಣಾಮ ಸಾಮಾಜಿಕವಾಗಿ ತೊಂದರೆಯನ್ನೂ ತಂದೊಡ್ಡಬಹುದು. ಒಂದು ವೇಳೆ ನಿಮ್ಮ ಪತ್ನಿಯೂ ಗುಸುಗುಸು ಸುದ್ದಿಯನ್ನು ಇಷ್ಟಪಡುತ್ತಿದ್ದು ಈ ವ್ಯಸನಕ್ಕೆ ತುತ್ತಾಗಿದ್ದರೆ ಇದನ್ನು ಕೆಳಗಿನ ಸಂಜ್ಞೆಗಳು ಖಚಿತಪಡಿಸಲಿವೆ....  

ಸಂಜ್ಞೆ #1

ಸಂಜ್ಞೆ #1

ನೀವು ಮನೆ ತಲುಪಿದ ತಕ್ಷಣ ಆಕೆ ಕೆಲವು ಕಥೆಗಳನ್ನು ಹೇಳತೊಡಗುತ್ತಾಳೆ. ಯಾವ ಕಥೆಗಳು? ಅಕ್ಕಪಕ್ಕದವರ ಮನೆಯಲ್ಲಿ ನಡೆಯುತ್ತಿರುವ ಕೋಳಿ ಜಗಳಗಳು! ಈ ಕೋಳಿಜಗಳಗಳಲ್ಲಿ ನಿಮಗೆ ಯಾವುದೇ ಆಸಕ್ತಿ ಇಲ್ಲದಿದ್ದರೂ ಆಕೆಗೆ ತನ್ನ ಹೊಟ್ಟೆಯಲ್ಲಿಟ್ಟಿರುವ ಗುಟ್ಟನ್ನು ಹೊರಗೆಡವದೇ ನಿರ್ವಾಹವೇ ಇಲ್ಲದಂತೆ ನಿಮಗೆ ತಿಳಿಸುತ್ತಾ ಹೋಗುತ್ತಾಳೆ. ನಿಮ್ಮಾಕೆ ಗುಸುಗುಸು ಸುದ್ದಿಗೆ ವ್ಯಸನಿಯಾಗಿದ್ದಾಳೆ ಎಂಬುದನ್ನು ಇದು ಸೂಚಿಸುತ್ತದೆ.

ಸಂಜ್ಞೆ #2

ಸಂಜ್ಞೆ #2

ಆಕೆಗೆ ಯಾವುದೇ ವಿಷಯಕ್ಕೆ ತನ್ನದೇ ಆದ ಉಪ್ಪು ಖಾರ ಸೇರಿಸಿ ಹೇಳುವ ಅಭ್ಯಾಸ ಅಂಟಿಕೊಳ್ಳುತ್ತದೆ. ಈ ಮಸಾಲೆ ಹಚ್ಚುವಲ್ಲಿ ಆಕೆ ಹೆಚ್ಚಿನ ಸಂತೋಷ ಹೊಂದುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ, ಇದೂ ಇನ್ನೊಂದು ಸೂಚನೆಯಾಗಿದೆ.

ಸಂಜ್ಞೆ #3

ಸಂಜ್ಞೆ #3

ಯಾವಾಗ ಅವಕಾಶ ದೊರೆತರೂ ತನ್ನ ಮನೆಯಲ್ಲಿ ತನ್ನ ಸ್ನೇಹಿತೆಯರನ್ನು ಆಹ್ವಾನಿಸಿ ದುಂಡುಮೇಜಿನ ಸುತ್ತಾ ಕುಳಿತು ವಿವಿಧ ವಿಷಯಗಳ ಬಗ್ಗೆ ಘಂಟೆಗಟ್ಟಲೇ ಹರಟೆ ಕೊಚ್ಚುತ್ತಾರೆ ಹಾಗೂ ಅಕ್ಕಪಕ್ಕದವರ ಬಗ್ಗೆ ಕೇವಲವಾಗಿ ಆಡುತ್ತಾ ಸೂರು ಹಾರುವಂತೆ ನಗುತ್ತಾ ಲೇವಡಿಯಾಡುತ್ತಾರೆ. ಇದು ಹೆಚ್ಚೂ ಕಡಿಮೆ ದಿನವಿಡೀ ನಡೆಯುತ್ತದೆ.

ಸಂಜ್ಞೆ #4

ಸಂಜ್ಞೆ #4

ಯಾವಾಗ ಸುತಮುತ್ತಲಿನವರ ಬಗ್ಗೆ ಯಾವುದೋ ಕುತೂಹಲಕಾರಿಯಾದ ವಿಷಯಗಳನ್ನು ನಿಮ್ಮಲ್ಲಿ ಹೇಳಲು ಪ್ರಾರಂಭಿಸುತ್ತಾಳೋ ಆಗ ಆಕೆಯ ಕಣ್ಣುಗಳು ಅಗಲವಾಗಿ ತೆರೆದುಕೊಂಡು ಕಾಂತಿಯಿಂದ ಪ್ರಜ್ವಲಿಸತೊಡಗುತ್ತವೆ. ಈ ವಿಷಯವನ್ನು ಹೇಳುತ್ತಿರುವಷ್ಟೂ ಹೊತ್ತು ಆಕೆ ಅತ್ಯಂತ ಸಂತೋಷಕರ ಕ್ಷಣಗಳನ್ನು ಕಳೆಯುತ್ತಿದ್ದಾಳೆ ಎಂದು ಆಕೆಯ ವದನ ತಿಳಿಸುತ್ತದೆ.

 
English summary

Signs Your Wife Is A Gossip Addict!

Talking about rumours, or discussing the dirty side of others' private lives is gossiping. Firstly, let us clear certain misconceptions. Many believe that only women gossip. No, even men do that. But of course, the topics may differ a bit as men are interested in different topics and women like to talk about different topics. So, both the genders gossip.
Please Wait while comments are loading...
Subscribe Newsletter