ಮಾತು ಮಾತಿಗೂ ಜಗಳ! ಹೀಗಾದರೆ ನೆಮ್ಮದಿ ಎಲ್ಲಿ?

By Arshad
Subscribe to Boldsky

ವಿವಾಹ ಬಂಧನ ಜೀವಮಾನವಿಡೀ ಪಾಲಿಸಬೇಕಾದ ಬಂಧನವಾಗಿದೆ. ಜೀವಮಾನವಿಡೀ ಸುಖವಾದ ದಾಂಪತ್ಯ ಜೀವನವನ್ನು ಪಡೆಯುವಲ್ಲಿ ಕೆಲವು ದಂಪತಿಗಳು ಯಶಸ್ವಿಯಾಗಿದ್ದರೆ ಕೆಲವು ದಾಂಪತ್ಯಗಳು ವಿವಾಹದ ಕೆಲವೇ ದಿನಗಳಲ್ಲಿ ಮುರಿದುಬೀಳುತ್ತವೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇಂದಿನ ದಿನಕ್ಕೆ ಸರ್ವಥಾ ಸೂಕ್ತವಲ್ಲ.

ಏಕೆಂದರೆ ದಾಂಪತ್ಯದಲ್ಲಿ ಇಬ್ಬರಿಗೂ ತಮ್ಮ ಸಂಗಾತಿಯ ಬಗ್ಗೆ ಯಾವುದಾದರೂ ವಿಷಯ ಬಳಿಕ ಗೊತ್ತಾದರೆ ಹಿಂದಿನವರಂತೆ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸುವ ಮನೋಭಾವ ಈಗಿನವರಲ್ಲಿ ಇಲ್ಲ. ಆದ್ದರಿಂದ ಸಾವಿರ ಸುಳ್ಳು ಹೇಳಿ ಮದುವ ಮಾಡಿಸುವ ಹಿರಿಯರ ಅಥವಾ ಮದುವೆ ದಳ್ಳಾಳಿಗಳನ್ನು ದೂರಿ ಯಾವುದೇ ಪ್ರಯೋಜನವಿಲ್ಲ.  ಗಂಡ-ಹೆಂಡತಿಯರ ಸಂಬಂಧ, ಮುರಿಯದಿರಲಿ ಅನುಬಂಧ

ಇಂದು ವಿಚ್ಛೇದನಗಳ ಪ್ರಮಾಣವೂ ಹೆಚ್ಚಾಗಿವೆ. ಕಾರಣವೇನೆಂದು ಕೆದಕಿದರೆ ಪ್ರತಿ ಪ್ರಕರಣಕ್ಕೂ ಪ್ರತ್ಯೇಕ ಕಾರಣಗಳಿರುತ್ತವೆ. ಅದರಲ್ಲಿಯೂ ಪ್ರೇಮ ವಿವಾಹಗಳೇ ಹೆಚ್ಚಾಗಿ ವಿಚ್ಛೇದನ ಪಡೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ. ಕೆಲವು ಸಂಬಂಧಗಳು ಪ್ರಮುಖ ಕಾರಣವಿಲ್ಲದೆಯೇ ಮುರಿದು ಬೀಳಬಹುದು. ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ಕಾಯುವ ಪ್ರವೃತ್ತಿಯಿರುವ ಸಂಗಾತಿಯೊಂದಿಗೆ ಜೀವನ ಸಾಗಿಸುವುದು ಅಷ್ಟು ಸುಲಭವಲ್ಲ.   ವಿಚ್ಛೇದನಕ್ಕೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!

ಈ ಒತ್ತಡ ಈಗಲ್ಲದಿದ್ದರೂ ಕೆಲಕಾಲದ ಬಳಿಕ ಘೋರ ರೂಪ ಪಡೆಯುವುದು ಖಚಿತ. ಆದರೆ ಯಾವುದೇ ಬೆಂಕಿಯ ಜ್ವಾಲೆಗೆ ಚಿಕ್ಕ ಕಿಡಿಯೇ ಕಾರಣವಾಗಿರುವಂತೆ ವಿಚ್ಛೇದನಗಳಿಗೂ ಅಥವಾ ಹಳಸುತ್ತಿರುವ ಸಂಬಂಧಗಳಿಗೂ ಚಿಕ್ಕ ಚಿಕ್ಕ ಹಾಗೂ ಕ್ಷುಲ್ಲುಕ ವಿಷಯಗಳೇ ಕಾರಣವಾಗಿರುತ್ತವೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಈ ವಿಷಯಗಳನ್ನು ಗಮನಿಸದೇ ಬೆಂಕಿ ದೊಡ್ಡದಾಗುತ್ತದೆ. ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!

ಒಂದು ವೇಳೆ ಇಬ್ಬರಲ್ಲೊಬ್ಬರು ಈ ಕಿಡಿಗಳನ್ನು ಗಮನಿಸುವಷ್ಟು ಪ್ರಬುದ್ಧರಾಗಿದ್ದರೆ, ಅಥವಾ ಇವನ್ನು ಕಂಡು ಎಚ್ಚರಿಸುವ ಹಿರಿಯರ ಮಾತುಗಳನ್ನು ಆಲಿಸಿ ಆ ಪ್ರಕಾರ ತಮ್ಮ ತಪ್ಪುಗಳನ್ನು ತಿದ್ದಿಕೊಂಡರೆ ಆ ಕಿಡಿ ಅಲ್ಲಿಯೇ ಶಮನಗೊಂಡು ದೊಡ್ಡ ಅನಾಹುತದಿಂದ ತಪ್ಪಿಸಿದಂತಾಗುತ್ತದೆ. ಈ ಕಿಡಿ ಹಚ್ಚುವ ಸೂಚನೆಗಳನ್ನು ಕೆಲವು ಸಂಜ್ಞೆಗಳು ನೀಡುತ್ತವೆ. ಬನ್ನಿ, ಈ ಸಂಜ್ಞೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ....  

ಸಂಜ್ಞೆ #1

ಸಂಜ್ಞೆ #1

ಒಂದು ವೇಳೆ ನಿಮ್ಮ ಸಂಗಾತಿಯೊಂದಿಗೆ ಯಾವುದೋ ವಿಷಯದ ಕುರಿತು ಜಗಳವಾಡಿದರೆ ಈ ಜಗಳದ ಬಗ್ಗೆ ನಿಮ್ಮ ಆತ್ಮೀಯ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಿದ್ದೀರಾ? ಇದು ಅತ್ಯಂತ ದೊಡ್ಡ ತಪ್ಪು. ಏಕೆಂದರೆ ಜಗಳವಾಡದ ಪತಿ ಪತ್ನಿಯರು ಈ ಜಗತ್ತಿನಲ್ಲಿಯೇ ಇಲ್ಲ. ಜೀವನದ ಎಲ್ಲಾ ಸ್ವಾದಗಳಂತೆ ಚಿಕ್ಕಪುಟ್ಟ ಜಗಳವೂ ದಾಂಪತ್ಯಕ್ಕೆ ಅಗತ್ಯ. ಆದ್ದರಿಂದ ನಿಮ್ಮ ಜಗಳದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳದೇ ಕೇವಲ ಉತ್ತಮ ಗುಣಗಳ ಬಗ್ಗೆ ಮಾತ್ರವೇ ಹೇಳುವುದು ಸಂಬಂಧ ಹಸಿರಾಗಿರಲು ಅಗತ್ಯ. ಇದರ ಹೊರತಾಗಿ ನಿಮ್ಮ ಜಗಳದ ಬಗ್ಗೆ ಸ್ನೇಹಿತರಲ್ಲಿ ಹೇಳಿಕೊಳ್ಳಲು ಪ್ರಾರಂಭಿಸಿದಿರಿ ಎಂದರೆ ನೀವು ನಿಮ್ಮ ಸಂಬಂಧವನ್ನು ಗೌರವಿಸುವ ಮಟ್ಟದಿಂದ ಹೊರಬಂದಿದ್ದೀರಿ ಎಂದು ಅರ್ಥೈಸಿಕೊಳ್ಳಬೇಕು.

ಸಂಜ್ಞೆ #2

ಸಂಜ್ಞೆ #2

ಒಂದು ವೇಳೆ ನೀವು ಆರಾಮವಾಗಿ ಕುಳಿತಿರುವ ಸಮಯದಲ್ಲಿ ನಿಮ್ಮ ಮನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಳೆದ ಸಂತೋಷಕರ ಕ್ಷಣಗಳಿಗಿಂತಲೂ ಹೆಚ್ಚಾಗಿ ಅವರೊಂದಿಗೆ ಜಗಳವಾಡಿದ ಮತ್ತು ಈ ನಡುವೆ ಮೂಡಿದ ಮನನೋಯುವ ಮಾತುಗಳೇ ಗುಂಗುಣಿಸುತ್ತಿದ್ದರೆ ನಿಮ್ಮ ಸಂಬಂಧ ಹಳಸುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಸಂಜ್ಞೆ #3

ಸಂಜ್ಞೆ #3

ಒಂದು ವೇಳೆ ನಿಮ್ಮ ಸಂಗಾತಿ ಯಾವುದೋ ವಿಷಯ ಮಾತನಾಡಲು ಪ್ರಾರಂಭಿಸುತ್ತಿದ್ದಂತೆಯೇ ಇದರಿಂದ ತಪ್ಪಿಸಿಕೊಳ್ಳುವ ಯತ್ನ ನಿಮ್ಮದಾಗಿದ್ದರೆ ನಿಮ್ಮ ಮನ ಸಂಗಾತಿಯಿಂದ ದೂರಾಗುವಷ್ಟು ಮಟ್ಟಿಗೆ ನೊಂದಿದೆ ಎಂದು ಅರ್ಥಸಿಕೊಳ್ಳಬೇಕು.

ಸಂಜ್ಞೆ #4

ಸಂಜ್ಞೆ #4

ಒಂದು ವೇಳೆ ನಿಮಗೆ ಈ ಸಂಬಂಧದಲ್ಲಿ ಸಿಕ್ಕಿ ಹಾಕಿಸಿಕೊಳ್ಳಲಾಗಿದೆ ಎಂಬ ಭಾವನೆ ಬಂದಿದ್ದು ಈ ಸಂಬಂಧಕ್ಕೆ ಸಿಲುಕಿಕೊಂಡು ನಿಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡಂತಾಗಿದೆ ಎಂಬ ಭಾವನೆ ಬರುತ್ತಿದೆಯೇ? ಹಾಗಾದರೆ ಈ ನಿಟ್ಟಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತನಾಡುವುದು ಅಗತ್ಯ. ಇಲ್ಲದಿದ್ದರೆ ಈ ಭಾವನೆ ಬಲವಾಗುತ್ತಾ ಹೋಗಿ ಸಂಬಂಧ ಕುಸಿದುಬೀಳಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ವಿಷಯಗಳಲ್ಲಿ ಮಾತನಾಡದೇ ಇರುವುದೇ ಪ್ರಮುಖ ಕಾರಣವಾಗಿರುತ್ತದೆ. ಸ್ಪಷ್ಟವಾಗಿ ಮಾತನಾಡಿ ಈ ಬಂಧನದಿಂದ ಹೊರಬರುವತ್ತ ಯೋಚಿಸಿ.

ಸಂಜ್ಞೆ #5

ಸಂಜ್ಞೆ #5

ಕೆಲವೊಮ್ಮೆ ಜಗಳದ ನಡುವೆ ಕೋಪದ ಭರದಲ್ಲಿ ನಿಮ್ಮ ಸಂಗಾತಿಯನ್ನು 'ನನ್ನ ಜೀವನದಿಂದ ದೂರಾಗು' ಎಂದು ಹೇಳಿದಾಗ ಅವರಿಂದಲೂ ಇದೇ ಮಾತು ಹಿಂದಿರುಗಿದರೆ ತಕ್ಷಣವೇ ಇಬ್ಬರೂ ತಮ್ಮ ಸಂಗಾತಿಯಲ್ಲಿ ಕ್ಷಮಾಪಣೆಯನ್ನು ಕೇಳಿಕೊಂಡರೆ ಮಾತ್ರ ಈ ಸಂಬಂಧ ಉಳಿಯುತ್ತದೆ. ಇಲ್ಲದಿದ್ದರೆ ಈ ಮಾತು ಮನಸ್ಸಿನಾಳದಲ್ಲಿ ಎಷ್ಟು ಬಲವಾಗಿ ಚುಚ್ಚುತ್ತದೆ ಎಂದರೆ ಇದರ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ.

 
For Quick Alerts
ALLOW NOTIFICATIONS
For Daily Alerts

    English summary

    Signs Of A Dysfunctional Relationship

    Some relationships choices just don't work. Incompatibility could be the reason among many others. Here are some signs of a dysfunctional relationship...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more