For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯರ ಸಂಬಂಧ, ಮುರಿಯದಿರಲಿ ಅನುಬಂಧ

|

ದಾ೦ಪತ್ಯ ಜೀವನದಲ್ಲಿ ಮಾಡಬಾರದ ತಪ್ಪುಗಳ ಕುರಿತು ನಮಗೆಲ್ಲರಿಗೂ ತಿಳಿದಿರುವ೦ತಹದ್ದೇ ಆಗಿದೆ. ಆದರೂ ಕೂಡ, ಓರ್ವ ಆದರ್ಶ ಪತ್ನಿ ಅಥವಾ ಓರ್ವ ಆದರ್ಶ ಪತಿಯಾಗಿರುವುದು ವಾಸ್ತವದಲ್ಲಿ, ರೂಢಿಗತವಾಗಿ ಬಹಳ ಕಷ್ಟಕರವಾದ ಸ೦ಗತಿಯಾಗಿರುತ್ತದೆ. ನಾವೆಲ್ಲರೂ ಕೂಡ ಕೆಲವೊಮ್ಮೆ ಮಿತಿಮೀರಿ ನಡೆದುಕೊ೦ಡು ವೈವಾಹಿಕ ಸ೦ಬ೦ಧಕ್ಕೆ ಧಕ್ಕೆ ತರಬಹುದಾದ೦ತಹ ಕೆಲವೊ೦ದು ಅನಾಹುತಗಳನ್ನು ಮಾಡಿಯೇ ಬಿಡುತ್ತೇವೆ.

ಆದರೂ ಕೂಡ, ಎಚ್ಚೆತ್ತುಕೊ೦ಡು, ಸರಿಯಾದ ತಿಳುವಳಿಕೆಯೊ೦ದಿಗೆ ತಪ್ಪನ್ನು ತಿದ್ದಿಕೊ೦ಡು ಮುನ್ನಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅ೦ತೆಯೇ ಇ೦ತಹ ಕ್ರಮವನ್ನು ಕೈಗೊಳ್ಳುವುದರ ಮೂಲಕ, ಅ೦ತಹ ಅನಾಹುತಗಳು ಮಗದೊಮ್ಮೆ ಎ೦ದಿಗೂ ನಡೆಯದ೦ತೆ ಜಾಗರೂಕತೆಯಿ೦ದಿರಲು ಸಾಧ್ಯವಿರುತ್ತದೆ. ಸ೦ಬ೦ಧಗಳು ನಮಗೆ ಜೀವನಪಾಠವನ್ನು ಕಲಿಸುವುದರ ಮೂಲಕ ನಮ್ಮ ವಿಕಸನಕ್ಕೆ ಕಾರಣವಾಗುತ್ತವೆ. ನಾವೆಲ್ಲರೂ ನಮ್ಮ ಸ೦ಬ೦ಧಗಳ ನವಿರಾದ ಬ೦ಧನದಲ್ಲಿ ಬೆಳವಣಿಗೆಯನ್ನು ಕ೦ಡು ಕೊ೦ಡವರಾಗಿರುತ್ತೇವೆ.

ಅದರಲ್ಲೂ ವಿಶೇಷವಾಗಿ, ವೈವಾಹಿಕ ಸ೦ಬ೦ಧದ ವಿಚಾರದಲ್ಲಿ ನಾವು ಸರಿಯಾದ ಕೆಲಸಗಳನ್ನೇ ಮಾಡಿಕೊ೦ಡಿದ್ದಲ್ಲಿ, ಪ್ರತಿದಿನವೂ ಆನ೦ದಮಯವಾಗಿರುತ್ತದೆ. ಆದ್ದರಿ೦ದಲೇ ವೈವಾಹಿಕ ಜೀವನವನ್ನು ಸ೦ತೋಷದಾಯಕವಾಗಿ ಇರಿಸಿಕೊಳ್ಳುವುದು ಹೇಗೆ ಎ೦ಬುದನ್ನು ತಿಳಿದುಕೊ೦ಡಿರಬೇಕು ಹಾಗೂ ವೈವಾಹಿಕ ಜೀವನದಲ್ಲಿ ಏನನ್ನು ಮಾಡಕೂಡದೆ೦ಬುದರ ಪರಿಜ್ಞಾನವಿರಬೇಕಾದುದೂ ಕೂಡ ಅಷ್ಟೇ ಅಗತ್ಯ. ದಾ೦ಪತ್ಯ ಜೀವನದಲ್ಲಿ ಈ ಕೆಳಗಿನ ತಪ್ಪುಗಳನ್ನು ಸತಿಪತಿಯರು ಮಾಡಬಾರದು.

How to Have a Healthy Relationship

ಸಂವಹನ ಕೊರತೆಗೆ ಎಂದೂ ಆಸ್ಪದ ನೀಡಬೇಡಿ
ನಿಮ್ಮಲ್ಲಿ ಸಂವಹನದ ಕೊರೆತ ಇದ್ದಾಗ ಕೂಡ ಸಮಸ್ಯೆಗಳ ಅರ್ಥಮಾಡಿಸಿಕೊಳ್ಳುವಿಕೆ ಒಮ್ಮೊಮ್ಮೆ ಮನದಲ್ಲಿ ಹುದುಗಿರುವ ದುಃಖವಾಗುತ್ತದೆ. ಇಬ್ಬರು ಸಂಗಾತಿಯರಲ್ಲಿ ಸಂವಹನದ ಕೊರತೆ ಇದೆ ಎಂದಾದಲ್ಲಿ ಆ ಸಂಬಂಧ ಗಟ್ಟಿಯಾಗಿ ಇರುವುದಿಲ್ಲ. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುವ ಸಂದರ್ಭವೇ ಇಲ್ಲಿ ಮಾಯವಾಗಿಬಿಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಚೆನ್ನಾಗಿ ಮಾತನಾಡದಿದ್ದಲ್ಲಿ ನಿಮ್ಮ ಸಂಬಂಧ ಹಳಸುತ್ತದೆ, ಹಾಗಾಗಿ ನಿಮ್ಮಬ್ಬರ ಸಂಬಂಧ ಹಾಲು ಜೇನಿನಂತೆ ಇರಲು ನೀವು ಬಯಸುವಿರಾದರೆ ಸಂವಹನಕ್ಕೆ ಹೆಚ್ಚಿನ ಮಹತ್ವ ನೀಡಿ.

ತಮ್ಮ ಸಂಗಾತಿಯ ಅಭಿಪ್ರಾಯಗಳನ್ನು ಸ್ವಾಗತಿಸಿ
ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿರಬಹುದು. ನಿಮ್ಮ ಸಂಗಾತಿಯ ಅಭಿಪ್ರಾಯವೂ ನಿಮ್ಮ ಅಭಿಪ್ರಾಯಕ್ಕೆ ಪೂರಕವೂ ಆಗಿರಬಹುದು, ವಿರುದ್ಧವೂ ಆಗಿರಬಹುದು. ಒಂದು ವೇಳೆ ವಿರುದ್ಧವಾಗಿದ್ದರೆ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಿಗಣಿಸಿ. ಎರಡೂ ಅಭಿಪ್ರಾಯಗಳ ಸಾಧಕ ಬಾಧಕಗಳನ್ನು ಪರಾಮರ್ಶಿಸಿ. ಒಂದು ವೇಳೆ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಪರಾಮರ್ಶಿಸದೇ ಕಡೆಗಣಿಸಿದರೆ, ನಿಮ್ಮ ಸಂಗಾತಿ ನಿಮ್ಮನ್ನೇ ಕಡೆಗಣಿಸುವ ಅಪಾಯವಿರುತ್ತದೆ. ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

ಕೀಳುಭಾವನೆಗೆ ಆಸ್ಪದ ನೀಡಬೇಡಿ
ಪರಸ್ಪರರನ್ನು ಕೀಳಾಗಿ ಕಾಣುವುದು ಈ ಕ್ರಮವೇ ನಿಮ್ಮಿಬ್ಬರ ನಡುವೆ ಬೇಧವೆಣಿಸುವಂತೆ ಮಾಡುತ್ತದೆ. ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಪ್ರೀತಿಯ ರೀತಿಯಲ್ಲ. ಇದಕ್ಕಿಂತ ಮೇಲಾಗಿ ಕೀಳಾಗಿ ಕಾಣುವ ಮನೋಭಾವನೆಯು ಪ್ರೀತಿಯ ಕೊರತೆಯನ್ನು ಎದ್ದು ಕಾಣುವಂತೆ ಮಾಡುತ್ತದೆ. ಯಾವಾಗ ತನ್ನ ಸಂಗಾತಿಯ ಕುರಿತಾಗಿ ಒಬ್ಬ ವ್ಯಕ್ತಿಯು ನಕಾರಾತ್ಮಕ ಅಂಶಗಳನ್ನು ಹುಡುಕಲು ಆರಂಭಿಸುತ್ತಾನೋ, ಆಗ ಆ ವ್ಯಕ್ತಿ ತನ್ನ ಸಂಗಾತಿಯನ್ನು ಒಪ್ಪಿಕೊಳ್ಳುವ ವಿಚಾರವನ್ನು ಮರೆತುಬಿಡುತ್ತಾನೆ
ಆದರೆ ಯಶಸ್ವಿ ದಂಪತಿಗಳು ಹೀಗೆಲ್ಲ ಮಾಡುವುದಿಲ್ಲ. ಅವರು ತಮ್ಮ ಎಲ್ಲ ಇಲ್ಲಗಳ ನಡುವೆ ಪ್ರೀತಿಯ ಇರುವಿಕೆಯನ್ನು ಸಾಭೀತು ಮಾಡುತ್ತಾರೆ. ತಮ್ಮ ಸಂಗಾತಿಯ ಎಲ್ಲಾ ಕೊರತೆ, ಹೋರೆ ಮತ್ತು ಕೋರೆಗಳನ್ನು ಅವರು ಒಪ್ಪಿಕೊಂಡು, ಅವರನ್ನು ಸಹ ಒಪ್ಪಿಕೊಳ್ಳುವ ಮೂಲಕ ಅವರ ಜೊತೆಯಲ್ಲಿ ಜೀವನವನ್ನು ಸಾಗಿಸುತ್ತಾರೆ. ಇದರಿಂದ ಅವರ ನಡುವೆ ಸಂಬಂಧ ಮತ್ತಷ್ಟು ಗಾಢವಾಗುತ್ತದೆ ಮತ್ತು ಅವರ ಸಂಬಂಧ ಶಾಶ್ವತವಾಗಿರುತ್ತದೆ.

ಸಂಬಂಧದಲ್ಲಿ ಸೋಮಾರಿತನ ಬೇಡವೇ ಬೇಡ
ಸಂಬಂಧ ಎನ್ನುವುದು ಹೂವಿನ ಬೀಜವಿದ್ದಂತೆ ಅದನ್ನು ನೀವು ಚೆನ್ನಾಗಿ ಆರೈಕೆ ಮಾಡಿದಷ್ಟು ಅದು ನಿಮಗೆ ನೀಡುವ ಪ್ರತಿಫಲ ನಳನಳಿಸುವ ಹೂಗಿಡದಂತೆ ಸುಂದರವಾಗಿರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧದಲ್ಲಿ ಆಲಸ್ಯತನ ಮಾಡದಿರಿ. ನೀವು ಎಲ್ಲಿ ಎಡವುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಸಂಗಾತಿಯ ಹೃದಯವನ್ನು ಪ್ರೀತಿಯಿಂದ ಗೆಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿಯಾಗುವುದು ಖಂಡಿತ.

ಪ್ರಾಮಾಣಿಕತೆ ಆದ್ಯತೆ ನೀಡಿ
ಪ್ರಾಮಾಣಿಕತೆ "ಸತ್ಯ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವವನಿಗೆ ಹೇಳಬೇಕಾದುದು ಏನೂ ಇಲ್ಲ" ಎಂದು ಹೇಳುತ್ತಾರೆ ಕನ್‍ಫ್ಯೂಶಿಯಸ್, ಹಾಗೆಯೇ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ನಿಮ್ಮ ಸಂಗಾತಿಯ ಬಗ್ಗೆ ಇನ್ನೇನು ತಾನೇ ಹೇಳಲಾದೀತು. ಸಂಬಂಧದ ಬುನಾದಿಯೇ ಪ್ರಾಮಾಣಿಕತೆ. ನಿಮ್ಮ ಸಂಬಂಧವನ್ನು ಶಾಶ್ವತಗೊಳಿಸುವ ಮೊದಲು ಪ್ರಾಮಾಣಿಕತೆಗೆ ಆದ್ಯತೆ ನೀಡಿ..

English summary

How to Have a Healthy Relationship

In this article, let us discuss about some simple ways to be an awesome partner. When you know about certain simple ways, you can take small steps towards a big goal. Being a nice person helps your relationship and also helps you become a better person. Being a better person is nothing but progressing as a person in the journey
X
Desktop Bottom Promotion