ಗಂಡ-ಹೆಂಡತಿಯ ಮಧ್ಯೆ ಹೊಂದಾಣಿಕೆ ಹೀಗಿದ್ರೆ ಸ್ವರ್ಗ ಅಂಗೈಯಲ್ಲಿ!

By: manu
Subscribe to Boldsky

ದಾಂಪತ್ಯ ಎಂಬುದು ವಿಶ್ವದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾದ ಸಂಬಂಧ. ಇಲ್ಲಿ ಎರಡು ಜೀವಗಳು ಬೇರೆ ಬೇರೆ ಸಾಮಾಜಿಕ, ಮನೋ ವೈಜ್ಞಾನಿಕ, ಆರ್ಥಿಕ ಮತ್ತು ದೈಹಿಕ ಹಿನ್ನಲೆಗಳೊಂದಿಗೆ ಬಂದು ಒಂದೇ ಕಡೆ ಕೂಡಿ ಇರುವ ಕಾಯಕವನ್ನು ನಡೆಸುತ್ತಾರೆ. ಆದರೆ ಇಲ್ಲಿ ಹೊಂದಿಕೊಂಡರೆ ಆ ಮನೆಯೇ ಸ್ವರ್ಗ...! ಜೀವನ ಪರ್ಯಂತ ಸುಖ, ಸಂತೋಷದಿಂದ ಕೂಡಿದ ಸಮಯವನ್ನು ಕಳೆಯಬೇಕೆಂದು ಪ್ರತಿಯೊಬ್ಬ ದಂಪತಿಗಳ ಆಸೆಯಾಗಿರುತ್ತದೆ. 

ನಿಮ್ಮಲ್ಲೇ ಇದೆ ದಾಂಪತ್ಯದಲ್ಲಿನ ಸಾಮರಸ್ಯದ ಗುಟ್ಟು

ಆದರೆ ಈ ಆಸೆಯು ಕೈಗೂಡಬೇಕಾದರೆ ನಾವು ನಮ್ಮ ಸಂಬಂಧದ ಬಗ್ಗೆ ಹಲವಾರು ಅಂಶಗಳನ್ನು ತಿಳಿದುಕೊಂಡಿರಬೇಕು. ಪ್ರೀತಿ ನಿಜಕ್ಕು ಅತ್ಯಂತ ಬಲಿಷ್ಟವಾದ ಶಕ್ತಿ, ಆದರೆ ಅದರಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಮಾತ್ರ ಇರಬಾರದು. ಹಾಗಾದರೆ ನಿಮ್ಮ ಸಂಬಂಧ ಹಾಲು-ಜೇನಿನಂತೆ ಇರಬೇಕಾದರೆ ನಾವಿಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ, ಬನ್ನಿ ಮುಂದೆ ಓದಿ...

ನಂಬಿಕೆಯೇ ಸಂಸಾರದ ಬುನಾದಿ

ನಂಬಿಕೆಯೇ ಸಂಸಾರದ ಬುನಾದಿ

ಸಂಬಂಧಗಳು ನಿಂತಿರುವುದೇ ನಂಬಿಕೆಯ ಮೇಲೆ. ಒಬ್ಬರ ಮೇಲೆ ಒಬ್ಬರು ಎಲ್ಲಾ ವಿಷಯಗಳಲ್ಲೂ ನಿಂಬಿಕೆಯನ್ನಿಟ್ಟಿರುತ್ತಾರೆ. ಅದನ್ನು ಯಾರೇ ಮೀರಿದರೂ ಸಂಬಂಧಗಳು ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಮಸ್ಯೆಗಳಿಂದ ಹೊರಗುಳಿಯುವುದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಿಮ್ಮಿಂದಲೇ ಸಾಧ್ಯವಲ್ಲವೇ? ದಿನದ ಹೆಚ್ಚು ಸಮಯವನ್ನು ಮನೆಯಿಂದ ಹೊರಗೇ ಕಳೆಯುವ ಗಂಡಂದಿರಲ್ಲಿ ಹೆಂಗಸರು ನಂಬಿಕೆಯಿಟ್ಟಿರುತ್ತಾರೆ. ಅದನ್ನು ಉಳಿಸಿಕೊಳ್ಳುವುದು,

ಹೆಂಡತಿಯನ್ನು ಕಾಪಾಡುತ್ತೇನೆ ಎಂದು ಪ್ರಮಾಣ ಮಾಡಿ ಮದುವೆಯಾದ ಎಲ್ಲಾ ಗಂಡಂದಿರ ಕರ್ತವ್ಯ. ಹಾಗೆಯೇ ತನ್ನ ಸಂಗಾತಿಯಾವುದೇ ತಪ್ಪನ್ನೂ ಮಾಡುವುದಿಲ್ಲ ಎಂದು ನಂಬಿದ್ದ ಗಂಡನನ್ನು ಅದೇ ನಂಬಿಕೆಯನ್ನು ಕೊನೆವರೆಗೂ ಉಳಿಸಿಕೊಳ್ಳುವುದು ಸತಿಯಾದವಳ ಜವಾಬ್ದಾರಿ.

ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!

ಕ್ಷಮೆ ಯಾಚಿಸುವುದರಿಂದ ನೀವು ಎಂದಿಗೂ ಸಣ್ಣವರಾಗುವುದಿಲ್ಲ...

ಕ್ಷಮೆ ಯಾಚಿಸುವುದರಿಂದ ನೀವು ಎಂದಿಗೂ ಸಣ್ಣವರಾಗುವುದಿಲ್ಲ...

ಕೆಲವೊಮ್ಮೆ ಅನಾಚೂನವಾಗಿ ನಿಮ್ಮಿಂದ ನಿಮ್ಮ ಸಂಗಾತಿಯ ಮನನೋಯುತ್ತದೆ. ಈ ನೋವಿಗೆ ನೀವು ಪ್ರತ್ಯಕ್ಷರಾಗಿ ಅಥವಾ ಪರೋಕ್ಷವಾಗಿ ಕಾರಣರಾಗಿದ್ದರೂ ಮನಃಪೂರ್ವಕವಾಗಿ ಕ್ಷಮೆಯಾಚಿಸಿ. ಈ ಯಾಚನೆ ತಡವಾಗಬಾರದು! ತಡವಾದಷ್ಟೂ ನಿಮ್ಮ ಸಂಗಾತಿ ನಿಮ್ಮಿಂದ ವಿಮುಖರಾಗುವ

ಸಾಧ್ಯತೆಗಳು ಹೆಚ್ಚು. ಕ್ಷಮೆ ಯಾಚಿಸುವುದರಿಂದ ನೀವು ಎಂದಿಗೂ ಕಿರಿಯರಾಗುವುದಿಲ್ಲ, ಬದಲಿಗೆ ನಿಮ್ಮ ಸಂಗಾತಿಯ ದೃಷ್ಟಿಯಲ್ಲಿ ಇನ್ನಷ್ಟು ಬೆಳೆಯುತ್ತೀರಿ.

ಎಷ್ಟೇ ಬ್ಯೂಸಿ ಇದ್ದರೂ ಅವರಿಗೂ ಸ್ವಲ್ಪ ಸಮಯ ನೀಡಿ

ಎಷ್ಟೇ ಬ್ಯೂಸಿ ಇದ್ದರೂ ಅವರಿಗೂ ಸ್ವಲ್ಪ ಸಮಯ ನೀಡಿ

ಸಂಗಾತಿಗಳ ನಡುವಣ ಆಕರ್ಷಣೆಗೆ ರೂಪ, ಲಾವಣ್ಯ, ಬಣ್ಣ, ಹಣ, ಅಂತಸ್ತು ಮೊದಲಾದ ಹಲವು ಮಾಧ್ಯಮಗಳಿದ್ದರೂ ಅವುಗಳಿಗಿಂತ ಮಿಗಿಲಾದದ್ದು, ಅಪೂರ್ವವಾದದ್ದು ಮತ್ತು ಬೆಲೆಕಟ್ಟಲಾಗದಂತಹದ್ದು ಎಂದರೆ ಅಪ್ಪಟ ಪ್ರೀತಿಯಾಗಿದೆ. ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರಿಗಾಗಿ ನೀವು ಏನು ಮಾಡುತ್ತೀರಿ ಎಂದು ಹೇಳಿದರೆ ಅದರಂತೆ ನಡೆದುಕೊಳ್ಳಿ. ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ. ಅವರೊಂದಿಗೆ ಕಳೆಯುವ ಕಾಲವನ್ನು ನಿಗದಿಪಡಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬೇಡಿ, ನಿಗದಿತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ.

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು.

ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

ಪ್ರಾಮಾಣಿಕತೆ

ಪ್ರಾಮಾಣಿಕತೆ

ಪ್ರಾಮಾಣಿಕತೆಯೂ ಗಂಡ ಹೆಂಡತಿಯರ ಸಂಸಾರದ ದೋಣಿ ಸಾಗಲು ಮುಖ್ಯ. ಹಿಂದೆ ನಡೆದ ಘಟನೆಗಳು ಸಂಗಾತಿಯ ಗಮನಕ್ಕೆ ತರದೇ ಅದು ಬೇರೆ ಯಾರದ್ದೋ ಮೂಲಕ ಅವರಿಗೆ ತಿಳಿದರೆ ಜೀವನ ನರಕವೇ ಸರಿ. ಮುಚ್ಚುಮರೆ ಎನ್ನುವುದು ಗಂಡ ಹೆಂಡತಿಯರ ನಡುವೆ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದು. ಇದರಿಂದ ಸಂಸಾರದಲ್ಲಿ ಕಲಹಗಳು ಉಂಟಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ 'be honest' |

ಮದುವೆಯ ಈ ಬಂಧ - ಅನುರಾಗದ ಸಂಬಂಧ

English summary

Secrets of Happy Couples

Relationship experts say that there are a lot of romantic things to do in a relationship, if couples have the time on their hands to spend for their significant other. By looking into your partner's eyes and expressing your love can be a start.
Subscribe Newsletter