For Quick Alerts
ALLOW NOTIFICATIONS  
For Daily Alerts

ಮದುವೆ ಬಳಿಕ ಎಲ್ಲಾ ಮೋಜು ಮಸ್ತಿಗಳಿಗೆ ಬ್ರೇಕ್! ಹೌದೇ?

ಮದುವೆಯಾದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕು. ಸ್ವಲ್ಪ ಹೊತ್ತಾದರೂ ಹಲವಾರು ಪ್ರಶ್ನೆಗಳು ನಿಮ್ಮ ಮುಂದಿರುತ್ತದೆ. ಮದುವೆಯೆನ್ನುವುದು ಬಂಧನವೆನ್ನುವಂತೆ ಎಂದು ಮದುವೆಯಾದ ಮಂದಿ ಹೇಳುತ್ತಾರೆ....

By Hemanth
|

ಸಂತೋಷಕ್ಕೆ ಹಾಡು ಸಂತೋಷಕ್ಕೆ. ಕುಣಿದು ತಾಳಕ್ಕೆ ಕುಣಿದು...ಎನ್ನುವ ಹಾಡು ಕೇಳಿದ್ದೇವೆ. ಬ್ರಹ್ಮಚಾರಿಗಳು ಯಾನೆ ಬ್ಯಾಚುಲರ್ ಗಳಿಗೆ ಈ ಹಾಡು ಹೊಂದಿಕೆಯಾಗುವುದು. ಬ್ಯಾಚುಲರ್ ಜೀವನದ ಬಗ್ಗೆ ಹೇಳುವುದೇ ಒಂದು ಸಂತೋಷದ ಸಂಗತಿ. ಯಾಕೆಂದರೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ನಮಗೆ ಇಷ್ಟಬಂದ ಹಾಗೆ ಇರಬಹುದಾಗಿದೆ. ಮದುವೆ ಎಂದರೆ ಮಕ್ಕಳಾಟವಲ್ಲ, ಎರಡೆರಡು ಬಾರಿ ಯೋಚಿಸಿ!

ಆದರೆ ಮದುವೆಯಾದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕು. ಸ್ವಲ್ಪ ಹೊತ್ತಾದರೂ ಹಲವಾರು ಪ್ರಶ್ನೆಗಳು ನಿಮ್ಮ ಮುಂದಿರುತ್ತದೆ. ಮದುವೆಯೆನ್ನುವುದು ಬಂಧನವೆನ್ನುವಂತೆ ಎಂದು ಮದುವೆಯಾದ ಮಂದಿ ಹೇಳುತ್ತಾರೆ. ಮದುವೆಯಾದ ಬಳಿಕ ಕೂಡ ಹಿಂದಿನಂತೆ ಸಂತೋಷದಿಂದ ಇರಲು ಯಾಕೆ ಸಾಧ್ಯವಾಗುವುದಿಲ್ಲ. ಬ್ಯಾಚುಲರ್‌ನಲ್ಲಿ ಮಾಡುತ್ತಿದ್ದ ಚೇಷ್ಟೆ, ಮದುವೆ ಬಳಿಕ ನಡೆಯಲ್ಲ!

ಮದುವೆ ಯಾಕೆ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಮದುವೆ ಎನ್ನುವುದು ಹೀಗೆ ಆಗುವುದು ಯಾಕೆ? ಮದುವೆ ಬಳಿಕ ಕೂಡ ಸ್ವಾತಂತ್ರ್ಯವಾಗಿ ಸಂತೋಷದಿಂದ ಇರಲು ಸಾಧ್ಯವಿಲ್ಲವೇ? ಜನರು ಮದುವೆಯನ್ನು ದ್ವೇಷಿಸುವುದು ಯಾಕೆ ಎಂದು ಈ ಬಗ್ಗೆ ನಾವು ಲೇಖನದಲ್ಲಿ ತಿಳಿದುಕೊಳ್ಳುವ.....

ಅತ್ತೆ-ಮಾವ ಜೊತೆ ಹೊಂದಾಣಿಕೆ

ಅತ್ತೆ-ಮಾವ ಜೊತೆ ಹೊಂದಾಣಿಕೆ

ಮದುವೆಯಲ್ಲಿ ದೊಡ್ಡ ಕಂಟವೆಂದರೆ ಅದು ಅತ್ತೆ ಮತ್ತು ಮಾವ. ಇದು ಪತಿ ಅಥವಾ ಪತ್ನಿ ಯಾರೇ ಆಗಿರಲಿ. ನಿಮ್ಮನ್ನು ಅತ್ತೆ-ಮಾವ ಸರಿಯಾಗಿ ನೋಡಿಕೊಳ್ಳದೆ ಇದ್ದರೆ ನೀವು ಸಂಗಾತಿಯನ್ನು ಪ್ರೀತಿಸುತ್ತಾ ಇದ್ದರೂ ಮದುವೆಯನ್ನು ದ್ವೇಷಿಸಲು ಆರಂಭಿಸುತ್ತೀರಿ. ಆದರೆ ಈ ಬಗ್ಗೆ ನೀವು ಸಂಗಾತಿ ಜತೆಗೆ ಕುಳಿತುಕೊಂಡು ಮಾತುಕತೆ ನಡೆಸಿ ಪ್ರತಿಯೊಂದನ್ನು ನಿಭಾಯಿಸಬಹುದು.ಅತ್ತೆಯೊಂದಿಗೆ ಹೊಂದಿಕೊಂಡರೆ ಅರ್ಧ ಯುದ್ಧ ಗೆದ್ದಂತೆ!

ಒಂದೊಂದು ಪೈಸೆಗೂ ಲೆಕ್ಕ

ಒಂದೊಂದು ಪೈಸೆಗೂ ಲೆಕ್ಕ

ಆರ್ಥಿಕ ಸ್ವಾತಂತ್ರ್ಯವು ಮತ್ತೊಂದು ಸಮಸ್ಯೆಯಾಗಿದೆ. ಯಾಕೆಂದರೆ ಮದುವೆಗೆ ಮೊದಲು ನಿಮಗೆ ಇಷ್ಟಬಂದಂತೆ ಖರ್ಚು ಮಾಡುತ್ತಾ ಇರಬಹುದು. ಆದರೆ ಮದುವೆ ಬಳಿಕ ನಿಮಗೆ ಇಷ್ಟಬಂದಂತೆ ಖರ್ಚು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭವಿಷ್ಯದ ಜೀವನಕ್ಕಾಗಿ ಉಳಿತಾಯ ಮಾಡಬೇಕಾಗುತ್ತದೆ. ಆದರೆ ಇಬ್ಬರು ಕುಳಿತುಕೊಂಡು ಈ ಬಗ್ಗೆ ಮಾತುಕತೆ ನಡೆಸಿದರೆ ಎಲ್ಲವೂ ಸರಿಯಾಗಬಹುದು.

ಪದೇ ಪದೇ ಜಗಳ

ಪದೇ ಪದೇ ಜಗಳ

ಆಗಾಗ ಜಗಳವಾಗುವುದು ಮತ್ತೊಂದು ಸಮಸ್ಯೆಯಾಗಿದೆ. ಇದು ಮದುವೆಯ ಸಂಬಂಧವನ್ನು ಕೆಡಿಸುವುದು. ಆದರೆ ಸಂಗಾತಿ ಜಗಳಕ್ಕೆ ಇಳಿದಾಗ ನೀವು ಮೌನವಾಗಿದ್ದುಕೊಂಡು ಬೇರೆ ಕೆಲಸದಲ್ಲಿ ತೊಡಗಿಕೊಂಡರೆ ಆಗ ಜಗಳವು ವಿಪರೀತಕ್ಕೆ ಏರುವುದು ಕಡಿಮೆಯಾಗುವುದು.

ಮಕ್ಕಳ ಜವಾಬ್ದಾರಿ

ಮಕ್ಕಳ ಜವಾಬ್ದಾರಿ

ಮಕ್ಕಳು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಹೆಚ್ಚಿನವರು ಮದುವೆಯನ್ನು ದ್ವೇಷಿಸುವುದೇ ಈ ಕಾರಣಕ್ಕಾಗಿ. ಯಾವುದೇ ಸಾಕುಪ್ರಾಣಿ ಅಥವಾ ಮಕ್ಕಳನ್ನು ಬೆಳೆಸಿದಾಗ ಅಂತಿಮವಾಗಿ ಅವು ಪಡುವ ಸಂತೋಷ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ.

ಮದುವೆಯಿಂದಾಗಿ ಬೊಜ್ಜು!!

ಮದುವೆಯಿಂದಾಗಿ ಬೊಜ್ಜು!!

ಮದುವೆ ಬಳಿಕ ದೇಹವು ಕೊಬ್ಬಿನಿಂದ ತುಂಬಬಹುದು ಮತ್ತು ಅನಾರೋಗ್ಯ ಕಾಡಬಹುದು ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಮದುವೆಯಿಂದಾಗಿ ಬೊಜ್ಜು ಬರುವುದಿಲ್ಲ. ಅತಿಯಾಗಿ ತಿನ್ನುವುದು ಮತ್ತು ನಿಮ್ಮ ಜೀವನ ಶೈಲಿಯಿಂದ ಕೊಬ್ಬು ಬರುತ್ತದೆ.

English summary

Is Marriage The End Of Happiness?

Though everyone around you marry, they may keep saying that marriage kills the joy of life. Both men and women around us keep making fun of marriage especially when someone in the friend's circle is tying the knot.
X
Desktop Bottom Promotion