ಮದುವೆ ಎಂದರೆ ಮಕ್ಕಳಾಟವಲ್ಲ, ಎರಡೆರಡು ಬಾರಿ ಯೋಚಿಸಿ!

By: Hemanth
Subscribe to Boldsky

ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ ಮತ್ತು ಮುಪ್ಪು ಎನ್ನುವ ಮೂರು ಹಂತಗಳಿರುತ್ತದೆ. ಈ ಮೂರು ಹಂತಗಳಿಗೆ ಇಷ್ಟಿಷ್ಟೇ ವರ್ಷಗಳು ಎನ್ನುವುದು ಇರುತ್ತದೆ. ಪ್ರತಿಯೊಂದು ಹಂತದಲ್ಲಿ ಏನು ಆಗಬೇಕೋ ಅದು ಆಗಬೇಕು. ಇನ್ನೊಂದು ಹಂತಕ್ಕೆ ಹೋದ ಬಳಿಕ ಅದನ್ನು ಮಾಡಲು ಸಾಧ್ಯವಿಲ್ಲ.

ಅದೇ ರೀತಿಯ ಮದುವೆ ಕೂಡ. ಯೌವನದಲ್ಲಿ ಮದುವೆ ಕೆಲಸಗಳು ಆಗಬೇಕು. ಯೌವನ ದಾಟಿ ಮುಪ್ಪಿನಲ್ಲಿ ಮದುವೆ ಆಗಲು ಹೋದರೆ ಅದು ಅನರ್ಥವಾಗುತ್ತದೆ ಮತ್ತು ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಅದರಲ್ಲೂ ಮದುವೆ ಎನ್ನುವ ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಒಮ್ಮೆ ಈ ಬಂಧನಕ್ಕೆ ಸಿಲುಕಿದರೆ ಮತ್ತೆ ಇದರಿಂದ ಹೊರಬರುವುದು ತುಂಬಾ ಕಷ್ಟ. ಇದನ್ನೆಲ್ಲಾ ವಿವಾಹದ ಮೊದಲೇ ಇತ್ಯರ್ಥ ಮಾಡಿಕೊಳ್ಳಿ!

ಇದಕ್ಕಾಗಿ ಮದುವೆಯ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರವು ತುಂಬಾ ಮಹತ್ವದ್ದಾಗಿರುತ್ತದೆ. ಕೆಲವೊಂದು ವ್ಯಕ್ತಿತ್ವನ್ನು ಹೊಂದಿರುವವರನ್ನು ನೀವು ಮದುವೆಯಾಗಬಾರದು. ಹಾಗೊಂದು ವೇಳೆ ನೀವು ಮದುವೆಯಾದರೆ ಅದರಿಂದ ಸಮಸ್ಯೆಗಳು ಎದುರಾಗುವುದು ಖಚಿತ. ಹಿರಿಯರೇ ನಿಶ್ಚಯಿಸಿದ ಮದುವೆ, ಆದರೆ ಆ ಮೊದಲ ರಾತ್ರಿ....

ಈ ಲೇಖನದಲ್ಲಿ ಕೊಟ್ಟಿರುವ ವ್ಯಕ್ತಿತ್ವವಿರುವವರೊಂದಿಗೆ ಮದುವೆಯಾಗಲು ಹೊರಟಿರುವುದಾದರೆ ಅದರಿಂದ ದೂರ ಹೋಗುವುದು ಒಳ್ಳೆಯದು....  

ಸುಳ್ಳುಗಾರ

ಸುಳ್ಳುಗಾರ

ನೀವು ಮದುವೆಯಾಗಲು ಬಯಸುವಂತಹ ವ್ಯಕ್ತಿಯು ಸುಳ್ಳುಗಳನ್ನು ಹೇಳುತ್ತಾ ಸುಳ್ಳುಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ್ದರೆ ಈ ಮದುವೆಯಿಂದ ದೂರು ಉಳಿಯುವುದೇ ಉತ್ತಮ.

ಸಮಯಸಾಧಕ....

ಸಮಯಸಾಧಕ....

ಸಂಗಾತಿ ಎಂದ ಮೇಲೆ ಕಷ್ಟ ಸುಖದಲ್ಲಿ ಭಾಗಿಯಾಗಬೇಕು. ಆದರೆ ಒಳ್ಳೆಯ ಸಮಯದಲ್ಲಿ ಮಾತ್ರ ನಿಮ್ಮ ಜತೆಗಿದ್ದು, ಕಷ್ಟದ ಸಮಯದಲ್ಲಿ ದೂರವಿದ್ದರೆ ಆ ವ್ಯಕ್ತಿಯ ಬಗ್ಗೆ ನೀವು ಮತ್ತಷ್ಟು ಚಿಂತಿಸಬೇಕು.

ಸಮಯಸಾಧಕ....

ಸಮಯಸಾಧಕ....

ಆತ್ಮರತಿಯ ಸ್ವಭಾವದವನು ಯಾವಾಗಲೂ ವಿಶ್ವದಲ್ಲಿ ತಾನೇ ದೊಡ್ಡವನು ಎಂದುಕೊಳ್ಳುತ್ತಾನೆ. ಅವರು ನಂಬಿದಂತಹ ವಿಷಯದ ಬಗ್ಗೆ ನೀವು ವಿರೋಧ ವ್ಯಕ್ತಪಡಿಸಿದರೆ ಆಗ ನಿಮಗೆ ಬೈಯ್ಯಬಹುದು ಅಥವಾ ನಿಂದಿಸಬಹುದು. ಇದರಿಂದ ಇಂತಹ ವ್ಯಕ್ತಿಯಿಂದ ದೂರವಿರುವುದೇ ಒಳ್ಳೆಯದು.

ಬದ್ಧತೆಯ ಭೀತಿ

ಬದ್ಧತೆಯ ಭೀತಿ

ಜೀವನವಿಡಿ ನಿಮ್ಮ ಜತೆ ಜೀವನ ಸಾಗಿಸಲು ಹೆದರುತ್ತಾ ಇರುವ ವ್ಯಕ್ತಿಯನ್ನು ಮದುವೆಯಾಗುವುದು ನಿಮ್ಮ ಶ್ರಮವನ್ನು ವ್ಯರ್ಥಗೊಳಿಸಿದಂತೆ....

ನಿಂದಿಸುವ ವ್ಯಕ್ತಿ

ನಿಂದಿಸುವ ವ್ಯಕ್ತಿ

ನಿಮ್ಮನ್ನು ನಿಂದಿಸುವುದರಲ್ಲೇ ಆತ ಅಥವಾ ಆಕೆ ಸಂತೋಷ ಪಡುತ್ತಾ ಇದ್ದರೆ ಅಂತವರನ್ನು ಮದುವೆಯಾದರೆ ಜೀವನವಿಡಿ ಸಂಕಷ್ಟದಲ್ಲಿ ಇರಬೇಕಾಗುತ್ತದೆ.

ಬಲಿಪಶು

ಬಲಿಪಶು

ಆತ ಅಥವಾ ಆಕೆ ಯಾವಾಗಲೂ ತಾನು ಪರಿಸ್ಥಿತಿಗೆ ಬಲಿಪಶುವಾದೆ ಎಂದು ದಿನವನ್ನು ಕಳೆಯುತ್ತಾ ಇದ್ದರೆ ಅವರೊಂದಿಗೆ ಜೀವನ ಸಾಗಿಸುವುದು ವ್ಯರ್ಥ. ಯಾಕೆಂದರೆ ಪರಿಸ್ಥಿತಿಯನ್ನು ದೂರುತ್ತಾ ಇರುವವರಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ ಹೇಳಿ.

ಜಡ ವ್ಯಕ್ತಿತ್ವ

ಜಡ ವ್ಯಕ್ತಿತ್ವ

ಯಾವುದೇ ಆರಂಭವನ್ನು ಮಾಡಲು ಹಿಂಜರಿಯುವ, ಪೂರ್ವಭಾವಿಯಾಗಿರದ ಮತ್ತು ನಿಮ್ಮ ಅಗತ್ಯತೆಗಳಿಗೆ ಸ್ಪಂದಿಸದೆ ಇರುವ ವ್ಯಕ್ತಿಯನ್ನು ನೀವು ದೂರವಿರಿಸಬೇಕು.

 
English summary

Don't Marry These personality Types

Marrying isn't a bad idea but marrying someone who may spoil your entire life would surely be one bad idea that would torment you forever. In fact, that is why marriages give unpredictable results. So, here are some types of people who are not to be married. Of course, you don't need to be judgmental but if you find clues that your would-be has serious personality issues, think again. Read on...
Please Wait while comments are loading...
Subscribe Newsletter