For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ವಿಚ್ಛೇದನಕ್ಕೂ-ಬಂಜೆತನಕ್ಕೂ ಯಾವುದೇ ಸಂಬಂಧ ಇಲ್ಲ!

By Hemanth
|

ಮದುವೆ ಎನ್ನುವ ಬಂಧನದಲ್ಲಿ ಸಿಲುಕಿದ ಬಳಿಕ ಮಗು ಪಡೆದು ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರಿಗೆ ಸಂತಾನಪ್ರಾಪ್ತಿಯಾದರೆ ಇನ್ನು ಕೆಲವರಿಗೆ ಈ ಭಾಗ್ಯ ಸಿಗುವುದಿಲ್ಲ. ಮಗುವನ್ನು ಪಡೆಯಲು ಬಯಸುವ ದಂಪತಿ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ.

ಇಂದಿನ ದಿನಗಳಲ್ಲಿ ಫಲವತ್ತತೆ ಸಮಸ್ಯೆ ದಂಪತಿಯನ್ನು ಅತಿಯಾಗಿ ಕಾಡುವ ಸಮಸ್ಯೆ. ಮದುವೆಯಾದ ವ್ಯಕ್ತಿಯು ಫಲವತ್ತತೆ ಅಥವಾ ಬಂಜೆತನ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದೇ ಎನ್ನುವ ಪ್ರಶ್ನೆಗೆ ಅಧ್ಯಯನವೊಂದು ಇಲ್ಲವೆನ್ನುತ್ತಿದೆ. ಫಲವತ್ತತೆಯ ಸಮಸ್ಯೆಯು ವಿಚ್ಛೇದನಕ್ಕೆ ಕಾರಣವಲ್ಲ.

ವಿಚ್ಛೇದನ ನಂತರದ ಜೀವನ, ಆ ದೇವರಿಗೇ ಪ್ರೀತಿ...

ಇದರಿಂದ ಸಂಗಾತಿ ದೂರವಾಗಲ್ಲ. ಫಲವತ್ತತೆಯಿಂದಾಗಿ ಒತ್ತಡ, ಆತಂಕ, ಜಗಳ ಮತ್ತು ಅಂತಿಮವಾಗಿ ವಿಚ್ಛೇದನವಾಗಬಹುದು ಎಂದು ಹಿಂದಿನ ಅಧ್ಯಯನಗಳು ಹೇಳಿವೆ. ಆದರೆ ಇತ್ತೀಚೆಗೆ ನಡೆಸಿರುವ ಅಧ್ಯಯನದ ಪ್ರಕಾರ ಫಲವತ್ತತೆಯು ವಿಚ್ಛೇದನಕ್ಕೆ ಕಾರಣವಲ್ಲ ಎಂದು ಹೇಳಿರುವುದು ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. ಇದರ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿ...

ದಂಪತಿಯಲ್ಲಿ ನಿರೀಕ್ಷೆ

ದಂಪತಿಯಲ್ಲಿ ನಿರೀಕ್ಷೆ

ಅಧ್ಯಯನದ ಪ್ರಕಾರ ಇಂತಹ ಹಲವಾರು ಮಂದಿ ದಂಪತಿಯನ್ನು ಸಂದರ್ಶಿಸಲಾಯಿತು. ಈ ವೇಳೆ ಹೊಸ ಹೊಸ ಚಿಕಿತ್ಸಾ ತಂತ್ರಗಳು ಅವರಿಗೆ ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಎಲ್ಲಾ ವಿಧಾನಗಳು ವಿಫಲವಾದರೆ ದತ್ತು ತೆಗೆದುಕೊಳ್ಳಲು ಮುಂದಾಗುತ್ತೇವೆ ಎಂದು ದಂಪತಿ ಹೇಳಿದ್ದಾರೆ.

ಶಿಕ್ಷಣ ಎಲ್ಲವನ್ನೂ ಬದಲಾಯಿಸಿದೆ

ಶಿಕ್ಷಣ ಎಲ್ಲವನ್ನೂ ಬದಲಾಯಿಸಿದೆ

ಕೆಲವು ದಶಕಗಳ ಹಿಂದೆ ಗರ್ಭ ಧರಿಸಲು ವಿಫಲವಾಗುತ್ತಿದ್ದ ಮಹಿಳೆಯರು ಹೆಚ್ಚಾಗಿ ಒತ್ತಡಕ್ಕೆ ಒಳಗಾಗುತ್ತಿದ್ದರು. ಮಗು ನೀಡಲು ವಿಫಲವಾಗುವಂತಹ ಪುರುಷರು ಕೂಡ ತಮ್ಮ ಬದುಕು ದುಸ್ತರವೆಂದು ಭಾವಿಸುತ್ತಿದ್ದರು. ಆದರೆ ಈಗ ಹಾಗೆ ಆಗುತ್ತಿಲ್ಲವೆಂದು ಅಧ್ಯಯನಗಳು ಹೇಳಿವೆ. ಇದಕ್ಕೆ ಪ್ರಮುಖವಾಗಿ ಶಿಕ್ಷಣ ಮತ್ತು ಮಹಿಳೆಯರಲ್ಲಿ ಮೂಡುತ್ತಿರುವ ಜಾಗೃತಿ ಪ್ರಮುಖ ಕಾರಣ. ಕೇವಲ ಮಗುವನ್ನು ಹೆರುವುದು ಮಾತ್ರ ಜೀವನ ಎನ್ನುವ ಮಾತನ್ನು ಇಂದಿನ ಮಹಿಳೆಯರು ಒಪ್ಪಿಕೊಳ್ಳುತ್ತಿಲ್ಲ.

ಸುಂದರ ಜೀವನ ಅಗತ್ಯ

ಸುಂದರ ಜೀವನ ಅಗತ್ಯ

ಜೀವನವನ್ನು ಸುಂದರವಾಗಿಸಲು ಇತರ ಕೆಲವು ವಿಷಯಗಳು ಕೂಡ ಮುಖ್ಯವಾಗಿದೆ. ವೃತ್ತಿ, ಗುರಿ, ಸಾಹಸಗಳು ಮತ್ತು ವಿದೇಶಿ ಪ್ರವಾಸಗಳು ಜೀವನದಲ್ಲಿ ದಂಪತಿಗೆ ಮಕ್ಕಳಿಲ್ಲದ ನೋವನ್ನು ಮರೆಸುವುದು.

ಇತ್ತೀಚಿನ ಅಧ್ಯಯನ

ಇತ್ತೀಚಿನ ಅಧ್ಯಯನ

ಈ ಅಧ್ಯಯನಕ್ಕಾಗಿ ಸುಮಾರು 45 ಸಾವಿರ ಮಕ್ಕಳಿಲ್ಲದ ದಂಪತಿಯನ್ನು ಸಂದರ್ಶಿಸಲಾಯಿತು ಮತ್ತು ಇದರಲ್ಲಿ ಶೇ.1ರಷ್ಟು ದಂಪತಿ ಮಾತ್ರ ಸಂಗಾತಿಯ ಫಲವತ್ತತೆ ಕೊರತೆಯಿಂದ ವಿಚ್ಛೇದನ ನೀಡಲು ಬಯಸಿದರು. ಮಕ್ಕಳಾಗದೆ ಇದ್ದರೆ ಸಂಬಂಧ ಮುರಿದು ಬೀಳುತ್ತದೆ ಎಂದು ಈಗಲೂ ನಂಬಿರುವಂತಹ ಕೆಲವು ದಂಪತಿಗೆ ಈ ಅಧ್ಯಯನವು ಕಣ್ಣು ತೆರೆಸಲಿದೆ.

ಸಾಮಾಜಿಕ ಸಮಸ್ಯೆಗಳು

ಸಾಮಾಜಿಕ ಸಮಸ್ಯೆಗಳು

ಮಕ್ಕಳಿಲ್ಲದ ದಂಪತಿಗಳು ಎದುರಿಸುವಂತಹ ಸಾಮಾಜಿಕ ಸಮಸ್ಯೆಗಳು ಯಾವುದೆಂದು ಅಧ್ಯಯನಗಳು ತಿಳಿಯಲು ಪ್ರಯತ್ನಿಸಿತು. ಈ ಅಧ್ಯಯನದಲ್ಲಿ ಭಾಗಿಯಾದ ಹೆಚ್ಚಿನ ದಂಪತಿ ಅಭಿವೃದ್ಧಿ ಹೊಂದಿದ ದೇಶದಿಂದ ಬಂದ ನಗರವಾಸಿಗಳು. ಹೆಚ್ಚಿನವರು ಸುಶಿಕ್ಷಿತ ಕುಟುಂಬದಿಂದ ಬಂದವರು. ಇದರಿಂದಾಗಿ ಅವರು ಸಮಾಜದಲ್ಲಿ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಲ್ಲದ ದಂಪತಿ ಈಗಲೂ ಸ್ನೇಹಿತರು ಹಾಗೂ ಸಂಬಂಧಿಕರಿಂದ ಒತ್ತಡ ಎದುರಿಸುತ್ತಾರೆ ಎಂದು ಅಧ್ಯಯನ ಕಂಡುಕೊಂಡಿದೆ.

English summary

Does Infertility Lead To Divorce?

Most of the earlier studies have stated that infertility may cause stress, anxiety, frequent quarrels and finally divorce. But this new study, conducted on couples of this generation totally changes the perspective. Here are some facts.
X
Desktop Bottom Promotion