For Quick Alerts
ALLOW NOTIFICATIONS  
For Daily Alerts

  ಪತಿ-ಪತ್ನಿಯರ ನಡುವೆ 'ವಿವಾದಾಸ್ಪದ ವಿಷಯಕ್ಕೆ' ಆಸ್ಪದ ಬೇಡ...

  By Arshad
  |

  ಒಂದು ಸಂಬಂಧ ಕುದುರುವ ಮೊದಲು ಕೆಲವಾರು ಸತ್ಯಸಂಗತಿಗಳನ್ನು ಸ್ಪಷ್ಟಪಡಿಸಿ ಅನುಮಾನಗಳನ್ನು ಪರಿಹರಿಸಿಕೊಂಡಷ್ಟೂ ಮುಂದಿನ ಜೀವನದಲ್ಲಿ ಹುಳಿ ಹಿಂಡದಿರಲು ಸಾಧ್ಯ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದು ಹಿಂದಿನವರು ಹೇಳಿದ್ದರೂ ಇಂದಿನ ದಿನಗಳಲ್ಲಿ ಈ ಸುಳ್ಳುಗಳೇ ಮುಂದಿನ ಜೀವನದ ತೊಡಕಾಗಬಹುದು.   ಇವರೊಂದಿಗೆ ಜೀವನ ಸಾಗಿಸುವುದು ತುಂಬಾನೇ ಕಷ್ಟವಿದೆ!

  ಆದ್ದರಿಂದ ಇಂದಿನ ದಿನಗಳಲ್ಲಿ ಕೆಲವರು ಪ್ರತಿ ಚಿಕ್ಕ ವಿಷಯವನ್ನೂ ಕೇಳಿ ಸ್ಪಷ್ಟಪಡಿಸಿಕೊಂಡರೆ ಇನ್ನು ಕೆಲವರು ಮುಖ್ಯ ವಿಷಯವನ್ನೂ ಕೇಳದೇ ಬಲು ಬೇಗನೇ ಒಪ್ಪಿಗೆ ಕೊಟ್ಟು ಬಿಡುತ್ತಾರೆ. ಇವೆರಡೂ ಸರಿಯಾದ ವಿಧಾನಗಳಲ್ಲ. ಬದಲಿಗೆ ಅವಶ್ಯಕವಾದವುಗಳನ್ನು ಖಂಡಿತವಾಗಿ ಸ್ಪಷ್ಟಪಡಿಸಿಕೊಳ್ಳಬೇಕು ಹಾಗೂ ಅನಾವಶ್ಯಕ ಹಾಗೂ ವಿವಾದಾಸ್ಪದವಾದ ವಿಷಯಗಳನ್ನು ಕೆದಕಲೇಬಾರದು. ಮದುವೆ ಮುಂಚೆ, ಇವೆಲ್ಲಾ ಸಂಗತಿ ನಿಮಗೆ ತಿಳಿದಿರಲಿ

  ಪತಿ ಪತ್ನಿಯರ ಸಂಬಂಧದಲ್ಲಿ ಪರಸ್ಪರ ವಿಶ್ವಾಸವೇ ಭದ್ರವಾದ ತಳಹದಿಯಾಗಿದ್ದು ವಿವಾಹದ ಬಳಿಕ ಒಬ್ಬರಿಗೊಬ್ಬರು ಬೆಂಬಲ ನೀಡುವ ಮೂಲಕ ದಾಂಪತ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಆದರೆ ಕೆಲವು ವಿಷಯಗಳನ್ನು ಕೆದಕುವುದರಿಂದ ಈ ತಳಹದಿ ಅಲ್ಲಾಡಬಹುದು. ಬನ್ನಿ, ಈ ವಿಷಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಇವುಗಳನ್ನು ಕೆದಕದೇ ದಾಂಪತ್ಯವನ್ನು ಸಾವಿನವರೆಗೂ ಸುಂದರವಾಗಿ ನಿರ್ವಹಿಸಲು ಸಾಧ್ಯವಾಗಿಸಬಹುದು.....   

  ಮಾನಸಿಕ ವ್ಯಭಿಚಾರ

  ಮಾನಸಿಕ ವ್ಯಭಿಚಾರ

  ವಿವಾಹಕ್ಕೂ ಮುನ್ನ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಓರ್ವ ವ್ಯಕ್ತಿ ಆದರ್ಶಪ್ರಾಯನಾಗಿರುತ್ತಾರೆ. ಕೆಲವರು ತಮ್ಮ ಸುತ್ತಮುತ್ತಲ ಕೆಲವು ವ್ಯಕ್ತಿಗಳಲ್ಲಿ ಈ ಆದರ್ಶಗಳನ್ನು ಕಂಡುಕೊಂಡು ಮನಸ್ಸಿನಲ್ಲಿಯೇ ಆರಾಧಿಸಿ ಪ್ರೀತಿಗೂ ತಿರುಗಿದ್ದಿದ್ದರಬಹುದು. ಆದರೆ ವಿವಾಹದ ಬಳಿಕ ತಮ್ಮ ಪತಿ ಅಥವಾ ಪತ್ನಿಯಲ್ಲಿ ಕೆಲವು ಆದರ್ಶಗಳನ್ನು ಕಂಡುಕೊಳ್ಳಲಾಗದೇ ಹಿಂದಿನ ಪ್ರೀತಿಯ ವ್ಯಕ್ತಿಯನ್ನು ಮಾನಸಿಕವಾಗಿ ಮೋಹಿಸುವುದನ್ನು ಮುಂದುವರೆಸಬಹುದು. ಹೆಚ್ಚಿನವರು ದೈಹಿಕ ಸಂಪರ್ಕವಿಲ್ಲದ ಸಂಬಂಧವನ್ನು ವ್ಯಭಿಚಾರವೆಂದು ಒಪ್ಪುವುದಿಲ್ಲ.

  ಮಾನಸಿಕ ವ್ಯಭಿಚಾರ

  ಮಾನಸಿಕ ವ್ಯಭಿಚಾರ

  ವಾಸ್ತವವಾಗಿ ಮನಃಶಾಸ್ತ್ರಜ್ಞರ ಪತಿ ಪತ್ನಿಯರ ನಡುವೆ ದೈಹಿಕ ಸಂಬಂಧದ ಅನ್ಯೋನ್ಯತೆ ಕೇವಲ 9% ಮಾತ್ರವೇ ಇದ್ದು ಉಳಿದ 91% ಅನ್ಯೋನ್ಯತೆ ಮಾನಸಿಕವಾಗಿಯೇ ಆಗಿದೆ. (ಇದೇ ಕಾರಣಕ್ಕೇ ಅಲ್ಲವೇ, ವಿದೇಶಗಳಲ್ಲಿ ನೆಲೆಸಿರುವ ಪತಿಯರು ಪತ್ನಿಯರಿಂದ ದೂರವಿದ್ದೂ ಸುಖಸಂಸಾರವನ್ನು ನಡೆಸುತ್ತಿರುವುದು).ಆದ್ದರಿಂದ ಮಾನಸಿಕವಾಗಿ ಪರಪುರುಷನನ್ನು ಮೋಹಿಸುವುದು ಅತ್ಯಂತ ಘೋರವಾದ ವಿಷಯವಾಗಿದ್ದು ಇದರ ಬಗ್ಗೆ ತಿಳಿದುಬಂದರೆ ಸಂಸಾರದಲ್ಲಿ ಬಿರುಕು ಮೂಡಬಹುದು.

  ಹಿಂದಿನ ಪ್ರೀತಿಯ ಬಗೆಗಿನ ವಿಮರ್ಶೆ

  ಹಿಂದಿನ ಪ್ರೀತಿಯ ಬಗೆಗಿನ ವಿಮರ್ಶೆ

  ವಿವಾಹ ಪೂರ್ವ ಸಂಬಂಧಗಳ ಮತ್ತೆ ಮಾತನಾಡುವುದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ವಿಷಯಗಳು ಹಿಂದಿನ ವ್ಯಕ್ತಿಯನ್ನು ಮತ್ತು ಇಂದಿನ ವ್ಯಕ್ತಿಯೊಂದಿಗೆ ಹೋಲಿಸಿಕೊಳ್ಳುವ ಮೂಲಕ ಹಿರಿಮೆ ಅಥವಾ ಕೀಳರಿಮೆಯನ್ನು ವೈಭವೀಕರಿಸುವಂತಾಗುತ್ತದೆ. ಆದ್ದರಿಂದ ಹಿಂದಿನ ಸಂಬಂಧದ ವ್ಯಕ್ತಿಯ ಬಗ್ಗೆ ಸರ್ವಥಾ ಮಾತು ತೆಗೆಯದಿರುವುದೇ ಉತ್ತಮ. ಅದರಲ್ಲೂ ಇಬ್ಬರಲ್ಲೊಬ್ಬರಿಗೆ ಇದು ಎರಡನೆಯ ಮದುವೆಯಾಗಿದ್ದರೆ ಪೂರ್ವ ಪತಿ ಅಥವಾ ಪತ್ನಿಯ ಬಗ್ಗೆ ಚಕಾರವನ್ನೂ ಎತ್ತದಿರುವುದೇ ಉತ್ತಮ.

  ಹಿಂದಿನ ಸಂಬಂಧದ ವ್ಯಕ್ತಿಯ ಗುಣಗಾನ!

  ಹಿಂದಿನ ಸಂಬಂಧದ ವ್ಯಕ್ತಿಯ ಗುಣಗಾನ!

  ಕೆಲವರಿಗೆ ತಮ್ಮ ಹಿಂದಿನ ಸಂಬಂಧದ ಅಥವಾ ವಿಚ್ಚೇದನಕ್ಕೂ ಮೊದಲಿನ ಪತಿ ಅಥವಾ ಪತ್ನಿಯ ಗುಣಗಾನ ಮಾಡುವ ಅಭ್ಯಾಸವಿರುತ್ತದೆ. ಈ ಗುಣಗಾನ ಇವರಿಗೆ ಅತೀವ ಸಂತೋಷ ತಂದುಕೊಟ್ಟರೂ ಇವರ ಸಂಗಾತಿಗೆ ಸಹಿಸಲಸಾಧ್ಯವಾಗುತ್ತದೆ.

  ಹಿಂದಿನ ಸಂಬಂಧದ ವ್ಯಕ್ತಿಯ ಗುಣಗಾನ!

  ಹಿಂದಿನ ಸಂಬಂಧದ ವ್ಯಕ್ತಿಯ ಗುಣಗಾನ!

  ಆ ಗುಣಗಾನದಿಂದ ಕಿರಿಕಿರಿಯುಂಟಾಗುತ್ತಿದ್ದರೂ ತಮ್ಮ ಈಗಿನ ಸಂಬಂಧದಲ್ಲಿ ಹುಳಿ ಹಿಂಡಬಾರದೆಂಬ ಏಕೈಕ ಕಾರಣಕ್ಕೆ ಇವರು ಸುಮ್ಮನಿರುತ್ತಾರೆ. ಆದರೆ ಒಂದು ವೇಳೆ ಇದು ಹೆಚ್ಚುತ್ತಾ ಹೋದರೆ ಅಸಮಾಧಾನ ಒಂದು ದಿನ ಜ್ವಾಲಾಮುಖಿಯಾಗಿ ಸಿಡಿದು ಸಂಬಂಧದಲ್ಲಿ ಒಡಕು ಮೂಡಿಸಬಹುದು.

  ಕೌಟುಂಬಿಕ ಕಲಹಗಳು

  ಕೌಟುಂಬಿಕ ಕಲಹಗಳು

  ಇಬ್ಬರಲ್ಲೊಬ್ಬರ ಮನೆಯಲ್ಲಿ ಯಾವುದಾದರೊಂದು ಕಲಹ ಮೂಡಿದ್ದು ಇದರಿಂದ ಆ ಮನೆಯಲ್ಲಿ ಅಶಾಂತಿಯುಂಟಾಗಿದ್ದರೆ ಇದು ಇನ್ನೊಬ್ಬರಿಗೆ ಹಿಂಸಿಯ ವಿಷಯವಾಗಿ ಪರಿಗಣಿಸಬಹುದು. ಈ ಸ್ಥಿತಿಯಲ್ಲಿ ಆ ಮನೆಯ ಕಲಹಗಳ ಬಗ್ಗೆ ಸಂಗಾತಿಯಲ್ಲಿ ವಿಚಾರಿಸದಿರುವುದೇ ಸೂಕ್ತ.

   

  English summary

  Controversial Topics In Relationships

  Some people don't discuss certain important topics before starting a relationship whereas some people discuss even the ugliest of the topics. Both the approaches may not work well. Then what could work? It is up to you and your partner. It depends upon how well you mingle with each other and how comfortable you are. Now, let us discuss certain topics that might seem touchy and volatile.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more