ಇವರೊಂದಿಗೆ ಜೀವನ ಸಾಗಿಸುವುದು ತುಂಬಾನೇ ಕಷ್ಟವಿದೆ!

By: Deepu
Subscribe to Boldsky

ಜೀವನದ ಬಗ್ಗೆ ಯಾವಾಗಲೂ ಧನಾತ್ಮಕ ಭಾವನೆಯನ್ನು ಹೊಂದಿರಬೇಕು. ಇದರಿಂದ ಯಾವುದೇ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ. ಧನಾತ್ಮಕ ಜೀವನವು ನಮ್ಮನ್ನು ಗುರಿಯೆಡೆಗೆ ತಲುಪಿಸುವುದು. ಆದರೆ ಕೆಲವು ಮಂದಿ ತುಂಬಾ ನಕಾರಾತ್ಮಕವಾಗಿರುತ್ತದೆ. ಅವರು ಜೀವನದ ಬಗ್ಗೆ ಕೂಡ ನಕಾರಾತ್ಮಕವಾದ ಚಿಂತನೆ ಮಾಡುತ್ತಾ ಇರುತ್ತಾರೆ. ಇಂತವರನ್ನು ನಿರಾಶವಾದಿಗಳೆಂದು ಕರೆಯಲಾಗುತ್ತದೆ.  

Is She A 'Negative Nancy'?

ಈ ಮನಸ್ಥಿತಿಯ ವ್ಯಕ್ತಿಗಳೊಂದಿಗೆ ಜೀವನ ಸಾಗಿಸುವುದು ತುಂಬಾ ಕಷ್ಟದ ಕೆಲಸ. ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಇಂತಹ ಸಂಬಂಧದಲ್ಲಿ ಮುಂದುವರಿದರೆ ಜೀವನ ಹಿಂಡಿಹಿಪ್ಪೆಯಾಗುವುದರಲ್ಲಿ ಸಂಶಯವೇ ಇಲ್ಲ. ಮಹಿಳೆಯರು ಮಾತ್ರ ನಿರಾಶವಾದಿ ಆಗಿರುತ್ತಾರೆ ಎನ್ನುವ ಮಾತಿದೆ. 

Is She A 'Negative Nancy'?
 

ಆದರೆ ಪುರುಷರು ಕೂಡ ನಿರಾಶವಾದಿಗಳಿರುತ್ತಾರೆ. ನಿರಾಶವಾದಿಗಳೆಂದು ಕಂಡು ಹಿಡಿಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯುವ. ಆಕೆ ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ಅತಿಯಾಗಿ ಯೋಚಿಸುತ್ತಾ ಇದ್ದರೆ ನೀವು ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸುವ ವ್ಯಕ್ತಿಯೊಂದಿಗೆ ಜೀವನ ಸಾಗಿಸುತ್ತಿದ್ದೀರಿ ಎಂದರ್ಥ. 

Is She A 'Negative Nancy'?
 

ಆತ ಅಥವಾ ಆಕೆ ಏನಾದರೂ ವಿಷಯವನ್ನು ಮುಚ್ಚಿಡುತ್ತಾ ಇರುತ್ತಾಳೆ/ನೆ. ಎದುರಿನ ವ್ಯಕ್ತಿ ನಿಮ್ಮೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡುತ್ತಿಲ್ಲವೆಂದು ನಿಮಗನಿಸುತ್ತದೆ ಮತ್ತು ಆಕೆ/ ಆತ ನಿಮ್ಮಿಂದ ಏನೋ ಮುಚ್ಚಿಡುತ್ತಿದ್ದಾಳೆ/ನೆ. 

Is She A 'Negative Nancy'?
 

ಕೆಟ್ಟ ವಿಷಯ ಹಾಗೂ ಗಾಳಿಸುದ್ದಿಗಳ ಬಗ್ಗೆಯೇ ಆಕೆ ಅಥವಾ ಆತ ಮಾತನಾಡುತ್ತಿರುತ್ತಾನೆ/ಳೆ. ನಿಮಗೆ ಕೆಟ್ಟ ಸುದ್ದಿಯನ್ನು ನೀಡಿ ನಿರಾಶೆ ಮಾಡಿದರೆ ಆ ವ್ಯಕ್ತಿಗೆ ತುಂಬಾ ಖುಷಿಯಾಗುತ್ತದೆ.

ಆಕೆ ಅಥವಾ ಆತ ಭೂಮಿ ಮೇಲಿನ ಪ್ರತಿಯೊಂದನ್ನು ಟೀಕಿಸುತ್ತಾ ಇರುತ್ತಾನೆ/ಳೆ. ಜಗತ್ತಿನ ಬಗ್ಗೆ ಕೆಟ್ಟ ಸುದ್ದಿಗಳನ್ನೇ ನಿಮಗೆ ತಿಳಿಸಿ ನಿಮ್ಮ ದಿನವನ್ನೂ ಹಾಳು ಮಾಡುತ್ತಾನೆ/ಳೆ.

Is She A 'Negative Nancy'?
 

ಜೀವನ ಎಷ್ಟು ಅನ್ಯಾಯ ಮಾಡುತ್ತಿದೆ ಎಂದು ಆಕೆ ಯಾವಾಗಲೂ ದೂರುತ್ತಾ ಇರಬಹುದು. ಆಕೆ ಅಥವಾ ಆತ ಯಾವಾಗ ನೋಡಿದರೂ ಬೇಸರದಿಂದ ಇರಬಹುದು.

ನೀವು ಯಾವುದೇ ಚರ್ಚೆಯನ್ನು ಆರಂಭಿಸಿದರೂ ಆತ/ಆಕೆ ಅದರ ಬಗ್ಗೆ ನಕಾರಾತ್ಮಕವಾಗಿರುವುದನ್ನು ಹೇಳಲು ಆರಂಭಿಸುತ್ತಾಳೆ/ನೆ. ಇಂತಹ ವ್ಯಕ್ತಿಗಳು ನೀವು ಮಾತುಕತೆಯನ್ನು ಇಷ್ಟಪಡುತ್ತಾ ಇದ್ದೀರಾ ಎಂದು ತಿಳಿಯಲು ಬಯಸುವುದಿಲ್ಲ. ಇಂತಹ ಮಾತುಗಳನ್ನು ಕೇಳಲು ನಿಮಗೆ ಇಷ್ಟವಿದೆಯಾ ಎಂದು ತಿಳಿದುಕೊಳ್ಳದೆ ತನ್ನದೇ ಮಾತನ್ನು ಮುಂದುವರಿಸುತ್ತಾರೆ. 

Is She A 'Negative Nancy'?
 

ಇಂತಹ ನಿರಾಶವಾದಿ ಜತೆ ನೀವಿದ್ದರೆ ನಿಮ್ಮಲ್ಲಿ ಇರುವುದು ಎರಡನೇ ಆಯ್ಕೆಗಳು. ಜೀವನದ ಬಗ್ಗೆ ಆ ವ್ಯಕ್ತಿಗೆ ಇರುವ ನಕಾರಾತ್ಮಕ ಅಂಶವನ್ನು ಹೋಗಲಾಡಿಸಿ ಧನಾತ್ಮಕವಾಗಿರುವಂತೆ ಮಾಡುವುದು. ಇಲ್ಲವೆಂದಾದರೆ ಆ ವ್ಯಕ್ತಿಯಿಂದ ದೂರವಿದ್ದು ನಿಮ್ಮ ಬದುಕನ್ನು ಸಾಗಿಸುವುದು.

English summary

Is She A 'Negative Nancy'?

A negative Nancy is a person who constantly sends out negative vibes by being pessimistic about life in general. Such a person can be toxic in relationships. We all know that negative attitude can ruin life and when you are with such a person in a relationship, you may have tough time emotionally as well a physically.
Story first published: Tuesday, December 6, 2016, 23:31 [IST]
Please Wait while comments are loading...
Subscribe Newsletter