For Quick Alerts
ALLOW NOTIFICATIONS  
For Daily Alerts

ಪ್ರೀತಿ, ಪ್ರೇಮ, ವಿರಹ -ಸಂಬಂಧದಲ್ಲಿ ಹಾಲು-ಜೇನುವಿದ್ದಂತೆ!

ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ...

By Arshad
|

ಸಂಗಾತಿಗಳ ನಡುವಣ ಸಂಬಂಧ ಗಟ್ಟಿಯಾಗಲು ಕೇವಲ ದೈಹಿಕ ಆಕರ್ಷಣೆ ಸಾಲದು, ಬದಲಿಗೆ ವಿಶ್ವಾಸ, ಪ್ರೀತಿ, ಭರವಸೆ ಮೊದಲಾದವೂ ಇರಬೇಕು. ಅಂತೆಯೇ ಕೊಂಚ ದೂರವೂ ಸಹಾ. ಪ್ರೇಮವೆಂದರೆ ಇಡಿಯ ದಿನ ಒಬ್ಬರಿಗೊಬ್ಬರು ಗೋಂದಿನಂತೆ ಅಂಟಿಕೊಂಡಿರುವುದೂ ಅಲ್ಲ, ಈ ಹೊತ್ತಿನಲ್ಲಿ ತಮ್ಮ ಸಂಗಾತಿ ಏನು ಮಾಡುತ್ತಿದ್ದಾರೆ ಎಂಬುದನ್ನು ಸತತವಾಗಿ ಗಮನಿಸುತ್ತಿರುವುದೂ ಅಲ್ಲ. ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!

ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಸಂಗಾತಿ ಎಲ್ಲಿರುತ್ತಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುವುದು ಸುಲಭವಾಗಿರುವುದರಿಂದ ಈ ಕ್ರಿಯೆ ಹೊಸ ರೀತಿಯಲ್ಲಿ ಸಂಬಂಧದ ನಡುವೆ ಹುಳಿ ಹಿಂಡಬಹುದು. ಆದ್ದರಿಂದಲೇ ಹಿರಿಯರು ಸಂಬಂಧ ಗಟ್ಟಿಗೊಳ್ಳಲು ವಿರಹದ ಅಗತ್ಯವನ್ನೂ ಎತ್ತಿ ಹಿಡಿದಿದ್ದರು.

ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ ಎಂದು ಕಂಡುಕೊಳ್ಳಲಾಗಿದೆ. ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ದಂಪತಿಗಳ ನಡುವಣ ವಿರಸ, ಸಂಗಾತಿಯ ಮಹತ್ವ, ಕೊಂಚಕಾಲದ ಬಳಿಕ ಲಭ್ಯವಾಗುವ ಸ್ಪರ್ಶಸುಖ ಮೊದಲಾದವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮಾತ್ರವೇ ಅಲ್ಲ ಸ್ವಾರಸ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದನ್ನೇ ಅಲ್ಲವೇ ಬೇಂದ್ರೆಯವರು 'ಕಾಯೋದ್ರಾಗಿನ ಸುಖ ಕೂಡೂದ್ರಾಗ ಇಲ್ಲ' ಎಂದು ಹೇಳಿರುವುದು! ಬನ್ನಿ, ಈ ಸ್ವಾರಸ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ...

ಮಾಹಿತಿ #1

ಮಾಹಿತಿ #1

ಯಾವಾಗ ನಿಮ್ಮ ಸಂಗಾತಿ ನಿಮ್ಮ ಕಣ್ಣಿನಿಂದ ದೂರಾಗುತ್ತಾರೋ, ಆಗ ಅವರನ್ನು ಕಾಯುವ, ಬರಮಾಡಿಕೊಳ್ಳುವ ಕಾತುರ ನಿಮ್ಮ ದೇಹದಲ್ಲಿ ಕೆಲವಾರು ರಾಸಾಯನಿಕ ಕ್ರಿಯೆಗಳು ಜರುಗುತ್ತವೆ.

ಮಾಹಿತಿ #1

ಮಾಹಿತಿ #1

ಸಂಗಾತಿಯ ಇರದಿರುವಿಕೆಯನ್ನು ಮೆದುಳು ಒಂದು ಶೂನ್ಯದಂತೆ ಪರಿಗಣಿಸಿ ಇತರ ಕೆಲಸಗಳಲ್ಲಿ ಉತ್ಸಾಹವನ್ನು ಕಡಿಮೆ ಮಾಡುತ್ತದೆ.

ಮಾಹಿತಿ #2

ಮಾಹಿತಿ #2

ಈ ಶೂನ್ಯವನ್ನು ತುಂಬಿಕೊಳ್ಳಲು ಮೆದುಳಿಗೆ ಹೊಸ ವಿಚಾರಗಳು ಬೇಕಾಗುತ್ತವೆ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಪುಳಕಿತಗೊಳ್ಳುತ್ತಾರೆ.

ಮಾಹಿತಿ #2

ಮಾಹಿತಿ #2

ಅಂದರೆ ಶೂನ್ಯವು ಸಂಗಾತಿಯ ಬಗೆಗಿನ ಒಳ್ಳೆಯ ಅಭಿಪ್ರಾಯಗಳನ್ನೇ ಹೆಚ್ಚು ತುಂಬಿಕೊಳ್ಳುವ ಮೂಲಕ ಸಂಗಾತಿಯ ಬಗ್ಗೆ ಗೌರವ ಹೆಚ್ಚುತ್ತದೆ. (ವ್ಯತಿರಿಕ್ತವಾಗಿ ಹಳಸುತ್ತಿರುವ ಸಂಬಂಧದಲ್ಲಿ ಈ ಜಾಗವನ್ನು ಸಂಗಾತಿಯ ಋಣಾತ್ಮಕ ಸಂಗತಿಗಳೇ ಆವರಿಸಿಕೊಳ್ಳುತ್ತವೆ)

ಮಾಹಿತಿ #3

ಮಾಹಿತಿ #3

ಈ ಶೂನ್ಯದ ಅವಧಿ ಹೆಚ್ಚಾದಷ್ಟೂ ಸಂಗಾತಿಯ ಬಗ್ಗೆ ಉತ್ತಮ ಅಭಿಪ್ರಾಯಗಳು ತುಂಬಿಕೊಳ್ಳುವುದು ಹೆಚ್ಚುತ್ತಾ ಹೋಗುವ ಮೂಲಕ ನಿಮ್ಮ ಸಂಗಾತಿಯ ಬಗ್ಗೆ ಗೌರವ, ತನ್ಮೂಲಕ ಪ್ರೀತಿಯೂ ಹೆಚ್ಚುತ್ತಾ ಹೋಗುತ್ತದೆ.

ಮಾಹಿತಿ #4

ಮಾಹಿತಿ #4

ವಿಶೇಷವಾಗಿ ಪುರುಷರು ತಮ್ಮ ಸಂಗಾತಿಯಿಂದ ದೂರವಿದ್ದಾಗ ಮೆದುಳಿನ ಶೂನ್ಯಭಾಗ ಸಂಗಾತಿಯ ಬಗ್ಗೆ ಯೋಚಿಸುತ್ತಲೇ ಮಲಗುವ ಕಾರಣ ಸ್ವಪ್ನಸ್ಖಲನಕ್ಕೆ ಒಳಗಾಗುತ್ತಾರೆ.

ಮಾಹಿತಿ #5

ಮಾಹಿತಿ #5

ಆದ್ದರಿಂದ ಪ್ರೀತಿಯನ್ನು ಹೆಚ್ಚಿಸಲು ಕೊಂಚ ವಿರಹವೂ ಅಗತ್ಯ ಎಂದು ಮನಃಶಾಸ್ತ್ರಜ್ಞರು ತಿಳಿಸುತ್ತಾರೆ.

ಮಾಹಿತಿ #5

ಮಾಹಿತಿ #5

ಅಂತೆಯೇ ಅತಿ ಹೆಚ್ಚು ಹತ್ತಿರವಿರುವ ದಂಪತಿಗಳ ನಡುವೆಯೂ ಪ್ರೀತಿ ಕಡಿಮೆಯಾಗಿರುವುದು ಕಂಡುಬಂದಿದೆ. ಆಹಾರದಿಂದ ಕೊಂಚ ಕಾಲ ದೂರವಿದ್ದಾಗ ಹಸಿವು ಹೆಚ್ಚುವಂತೆಯೇ ಪ್ರೀತಿಪಾತ್ರರಿಂದ ಆಗಾಗ ದೂರವಿರುವ ಮೂಲಕ ಪ್ರೀತಿಯೂ ಹೆಚ್ಚುತ್ತದೆ ಎಂದು ಸಾಬೀತುಪಡಿಸಲಾಗಿದೆ.

English summary

The Concept Of Missing And Kissing

There is a concept called 'missing and kissing'. Some relationship experts claim that the process of missing and kissing can actually strengthen the bond a bit. Also, it could kill boredom, make the couple realise each other's value, helps experience the absence of a person and also makes physical touch enjoyable again after a period of monotony. Let us discuss further.
X
Desktop Bottom Promotion