Just In
Don't Miss
- News
ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಲಿಕ್ಕೆ ಬರಲಿದ್ದಾರೆ KSRP ಪೊಲೀಸ್
- Finance
ಅಸ್ಸಾಂನ ತೈಲ ಸಂಸ್ಕರಣಾ ಘಟಕ ಮಾರಾಟ ಮಾಡಿದ ಬಿಪಿಸಿಎಲ್: 9,876 ಕೋಟಿ ರೂ.
- Sports
ಭಾರತ vs ಇಂಗ್ಲೆಂಡ್: ಇತಿಹಾಸದಲ್ಲಿ ವೇಗಿಗಳಿಗೆ ಹಾಗೂ ಸ್ಪಿನ್ನರ್ಗಳಿಗೆ ಮೊಟೇರಾ ಪಿಚ್ ಸಹಕಾರ ಹೇಗಿತ್ತು?
- Education
WCD Vijayapura Recruitment 2021: ಅಂಗನವಾಡಿಯಲ್ಲಿ 134 ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಹ್ಯುಂಡೈ ಅಲ್ಕಾಜರ್ 7 ಸೀಟರ್ ಎಸ್ಯುವಿ ಬಿಡುಗಡೆ ಮಾಹಿತಿ ಬಹಿರಂಗ
- Movies
ನಾಮಿನೇಷನ್ನಲ್ಲಿ ಶಂಕರ್ ಅಶ್ವಥ್ ಟಾರ್ಗೆಟ್: 11 ಮತ ಬಿದ್ದರೂ ಸೇಫ್ ಆಗಿದ್ದು ಏಕೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಜವಾದ ಪ್ರಿಯಕರ ನಿಮಗಾಗಿ ಇದನ್ನು ಮಾಡುತ್ತಾನೆ
ಸಂಬಂಧದ ವಿಚಾರದಲ್ಲಿ ಎಲ್ಲಾ ಪುರುಷರೂ ಕೂಡ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದರಲ್ಲಿ ನಿಪುಣರು ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಕಠಿಣ ಸ್ವಭಾವದವರಾಗಿರಬಹುದು ಅಥವಾ ಭಾವನಾತ್ಮಕವಾಗಿ ನಡೆದುಕೊಳ್ಳದೇ ಇರಬಹುದು. ಹಾಗಂದ ಮಾತ್ರಕ್ಕೆ ಅವರು ಪ್ರೀತಿಸುವ ವ್ಯಕ್ತಿಯ ಬಗ್ಗೆ ಅವರು ಭಾವನೆಗಳನ್ನೇ ಹೊಂದಿಲ್ಲ ಎಂಬುದು ದಿಟವಲ್ಲ.
ವಾಸ್ತವವಾಗಿ ಅವರು ತಮ್ಮ ಭಾವನೆಗಳನ್ನು ಪದಗಳಲ್ಲಿ ಹೇಳಿ ತೋರಿಸಿಕೊಳ್ಳುವುದಿಲ್ಲ ಬದಲಾಗಿ ಕೆಲವು ರೀತಿಯ ಕಾರ್ಯಗಳ ಮೂಲಕ ತೋರಿಸಿಕೊಳ್ಳುತ್ತಾರೆ. ಇದು ನಿಮ್ಮ ಸಂಬಂಧದಲ್ಲೂ ನಡೆಯುತ್ತಿರಬಹುದು. ನಿಮ್ಮ ಗೆಳೆಯ ತಮ್ಮ ಪ್ರೀತಿಯ ಬಗ್ಗೆ ನಿಮ್ಮ ಬಳಿ ಬಾಯಿಬಿಟ್ಟು ಹೇಳದೇ ಇರಬಹುದು ಆದರೆ ಅವರು ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಸುತ್ತಿರುತ್ತಾರೆ ಮತ್ತು ಆ ಪ್ರೀತಿಯ ಉದ್ದೇಶದಿಂದಾಗಿ ಏನನ್ನಾದರೂ ನಿಮಗಾಗಿ ಮಾಡುತ್ತಿರುತ್ತಾರೆ.
ಒಂದು ವೇಳೆ ನಿಮ್ಮ ಗೆಳೆಯ ನಿಮ್ಮ ಪ್ರೀತಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬೇಕು ಎಂಬ ಕುತೂಹಲ ನಿಮಗಿದ್ದರೆ ಈ ಲೇಖನವನ್ನೊಮ್ಮೆ ಓದಿ. ಹೌದು ನಾವಿಲ್ಲಿ ನಿಮ್ಮ ಗೆಳೆಯ ಬಾಯಿ ಬಿಟ್ಟು ಹೇಳದೇ ಇದ್ದರೂ ಅವರು ನಿಮ್ಮನ್ನು ಬಹಳವಾಗಿ ಪ್ರೀತಿಸುತ್ತಿರುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಿದ್ದೇವೆ.

1. ಅವನು ನಿಮ್ಮನ್ನು ಹೊಗಳುತ್ತಾನೆ
ನಿಜವಾದ ಪ್ರೀತಿ ಇರುವ ಗೆಳೆಯ ನಿಮ್ಮ ಶ್ರಮಕ್ಕೆ ಮತ್ತು ನೀವು ಮಾಡಿದ ಯಾವುದೇ ಕೆಲಸಕ್ಕೆ ಮತ್ತು ನಿಮ್ಮ ಗುಣವನ್ನು ಹೊಗಳುತ್ತಾನೆ. ಮಹಿಳೆಯರ ನೋಟ ಮತ್ತು ದೈಹಿಕ ನೋಟವನ್ನು ಹೊಗಳುವ ಸ್ವಭಾವವು ಪುರುಷರಲ್ಲಿ ಅಧಿಕವಾಗಿ ಇದ್ದರೂ ಕೂಡ ನಿಮ್ಮನ್ನ ಪ್ರೀತಿಸುವ ವ್ಯಕ್ತಿ ನಿಮ್ಮನ್ನ ಆಕರ್ಷಿಸುವುದಕ್ಕಾಗಿ ಹೊಗಳುವುದಿಲ್ಲ. ನಿಮ್ಮನ್ನ ಪ್ರೋತ್ಸಾಹಿಸುವ ಸಲುವಾಗಿ ಆತ ನಿಮ್ಮನ್ನು ಪ್ರಶಂಸಿಸುತ್ತಾನೆ. ಸುಖಾಸುಮ್ಮನೆ ಆತ ನಿಮ್ಮನ್ನು ಪ್ರಶಂಸಿಸುವುದಿಲ್ಲ ಬದಲಾಗಿ ಆತ ನಿಮ್ಮ ಕೆಲಸವನ್ನು ಮನಃಪೂರ್ವಕವಾಗಿ ಒಪ್ಪಿರುತ್ತಾನೆ. ಆತನಿಗೆ ನೀವು ಗ್ರೇಟ್ ವ್ಯಕ್ತಿ ಎಂದು ತಿಳಿದಿರುತ್ತದೆ ಮತ್ತು ಅದಕ್ಕಾಗಿಯೇ ಆತ ನಿಮ್ಮನ್ನು ಪ್ರಶಂಸಿಸುತ್ತಾನೆ.

2. ಅವನು ನಿಮ್ಮನ್ನ ಗೌರವಿಸುತ್ತಾನೆ
ನಿಮ್ಮ ಮೇಲೆ ನಿಜವಾಗಲೂ ಪ್ರೀತಿ ಇರುವ ವ್ಯಕ್ತಿಯು ನಿಮ್ಮನ್ನ ಗೌರವಿಸುತ್ತಾನೆ. ಆತ ಯಾವಾಗಲೂ ನಿಮ್ಮೊಂದಿಗೆ ನೂತನವಾಗಿ ವರ್ತಿಸುತ್ತಾರೆ.ನಿಮ್ಮ ಆಲೋಚನೆ, ಅಭಿಪ್ರಾಯಗಳಿಗೆ ಆತ ಯಾವಾಗಲೂ ಕೂಡ ಗೌರವ ನೀಡುತ್ತಾನೆ. ಯಾವುದೋ ಒಂದು ವಿಚಾರದಲ್ಲಿ ನೀವು ಉತ್ತಮರಲ್ಲದೇ ಇದ್ದರೂ ಕೂಡ ಆತ ನಿಮ್ಮನ್ನು ತೆಗಳುವುದಾಗಲೀ ಅಥವಾ ನಿಮ್ಮಿಂದ ಅಸಾಧ್ಯ ಎಂದು ನಿಮ್ಮನ್ನ ನಿರುತ್ಸಾಹಿಸುವುದಾಗಲೀ ಮಾಡುವುದಿಲ.ಇದು ಆತ ನಿಜವಾಗಿಯೂ ನಿಮ್ಮನ್ನ ಪ್ರೀತಿಸುತ್ತಾನೆ ಎಂಬುದನ್ನು ತಿಳಿಸುತ್ತದೆ. ಕೇವಲ ನೀವು ಮಾತ್ರವಲ್ಲ ಆತ ಇತರೆ ಮಹಿಳೆಯರನ್ನೂ ಕೂಡ ಗೌರವಿಸುತ್ತಾನೆ. ನೀವು ಯಾವತ್ತೂ ಕೂಡ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಅಥವಾ ಯಾವುದೇ ಮಹಿಳೆಗೆ ಅಗೌರವ ತೋರುವುದನ್ನು ಆತನಿಂದ ಗಮನಿಸುವುದಿಲ್ಲ.

3. ಅವನು ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಳುತ್ತಾನೆ
ನಿಮ್ಮ ಹುಡುಗ ನಿಮ್ಮನ್ನ ಪ್ರೀತಿಸುತ್ತಾನೆ ಎಂಬುದನ್ನು ಸೂಚಿಸುವ ಮತ್ತೊಂದು ಪ್ರಮುಖ ಚಿಹ್ನೆ ಇದು. ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಆತ ತೆಗೆದುಕೊಳ್ಳುವ ನಿರ್ಧಾರಗಳಿಗಾಗಿ ನಿಮ್ಮಿಂದ ಆತ ಪಡೆದುಕೊಳ್ಳುತ್ತಾನೆ. ಯಾಕೆಂದರೆ ಆತ ನಿಮಗೆ ಬೆಲೆ ಕೊಡುತ್ತಿರುತ್ತಾನೆ ಮತ್ತು ಆತನ ಜೀವನದ ಪ್ರಮುಖ ಭಾಗ ನೀವು ಎಂಬುದು ಆತನಿಗೆ ತಿಳಿದಿರುತ್ತದೆ. ಕೇವಲ ಇದು ಮಾತ್ರವೇ ಅಲ್ಲ ಬದಲಾಗಿ ನೀವು ನೀಡಿದ ಸಲಹೆಯಲ್ಲಿ ಯಾವುದು ಬೆಸ್ಟ್ ಎಂಬುದನ್ನು ಆತ ಮನದಟ್ಟು ಮಾಡಿಕೊಳ್ಳುತ್ತಾನೆ.

4. ನೀವು ಯಾವ ರೀತಿ ಇರುತ್ತೀರೋ ಅದೇ ರೀತಿಯಾಗಿ ನಿಮ್ಮನ್ನ ಆತ ಸ್ವೀಕರಿಸುತ್ತಾನೆ
ಒಂದು ವೇಳೆ ಆತ ನಿಮ್ಮನ್ನ ನಿಜವಾಗಿಯೂ ಪ್ರೀತಿಸುತ್ತಿದ್ದಾನಾದರೆ ನಿಮ್ಮನ್ನ ಬದಲಾಯಿಸುವುದಕ್ಕೆ ಆತ ಪ್ರಯತ್ನಿಸುವುದೇ ಇಲ್ಲ. ನೀವು ಯಾವ ರೀತಿ ಇದ್ದೀರೋ ಅದೇ ರೀತಿಯಾಗಿ ಆತ ನಿಮ್ಮನ್ನ ಸ್ವೀಕರಿಸುತ್ತಾನೆ. ನಿಮ್ಮಲ್ಲಿ ಆತ ಹಲವು ತಪ್ಪುಗಳನ್ನು ಗಮನಿಸಿದರೂ ಕೂಡ ಆತ ನಿಮ್ಮ ಗುಣವನ್ನು ಬದಲಾಯಿಸಿಕೊಳ್ಳುವಂತೆ ಹೇಳುವುದಿಲ್ಲ. ನೀವೆಷ್ಟು ವಿಶೇಷ ಮತ್ತು ಸುಂದರ ಎಂಬುದನ್ನು ಆತ ನಿಮಗೆ ಅರ್ಥೈಸುತ್ತಾನೆ. ನಿಜ ಹೇಳಬೇಕು ಎಂದರೆ ಒಂದು ಸಂಬಂಧದಲ್ಲಿ ಇಬ್ಬರ ನಡುವಿನ ತಪ್ಪುಗಳನ್ನು ಎಷ್ಟು ಸುಂದರವಾಗಿ ನೀವು ಸ್ವೀಕರಿಸುತ್ತೀರಿ ಎಂಬುದು ಬಹಳ ಮುಖ್ಯವಾಗಿರುವ ಅಂಶವಾಗಿರುತ್ತದೆ.

5. ನಿಮ್ಮ ಪ್ರೀತಿಪಾತ್ರರೊಡನೆ ಸಮಯ ಕಳೆಯುವುದಕ್ಕೆ ಆತನೂ ಬಯಸುತ್ತಾನೆ
ಯಾವಾಗ ನಿಮ್ಮನ್ನ ಆತ ಪ್ರೀತಿಸಲು ಪ್ರಾರಂಭಿಸುತ್ತಾನೋ ಆಗ ನಿಮ್ಮ ಜೀವನದ ಪ್ರಮುಖರ ಬಗ್ಗೆ ಆತನೂ ಮಹತ್ವ ನೀಡುತ್ತಾನೆ. ನಿಮ್ಮ ಪ್ರೀತಿಪಾತ್ರರೊಡನೆ ಸಮಯ ವ್ಯಯಿಸುವುದಕ್ಕೆ ಆತನೂ ಕೂಡ ಬಯಸುತ್ತಾನೆ. ಉದಾಹರಣೆಗೆ ನಿಮ್ಮ ಕುಟುಂಬದ ಸದಸ್ಯರನ್ನು ಆತ ಭೇಟಿ ನೀಡುತ್ತಾನೆ ಮತ್ತು ಕುಟುಂಬದ ಕಾರ್ಯಕ್ರಮಗಳಲ್ಲಿ ಆತ ಭಾಗವಹಿಸುತ್ತಾನೆ. ನಿಮ್ಮ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಮತ್ತು ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ಎಂದರೆ ಆತನಿಗೂ ಇಷ್ಟವೆನಿಸುತ್ತದೆ.

6. ನಿಮ್ಮ ಕನಸುಗಳಿಗೆ ಆತ ಬೆಂಬಲಿಸುತ್ತಾನೆ
ನಿಮ್ಮ ಕನಸುಗಳನ್ನು ಸಾಕಾರಗೊಳಿಸುವುದನ್ನು ನಿಲ್ಲಿಸುವ ಬದಲಾಗಿ ಅಥವಾ ನಿಮ್ಮ ಕರಿಯರ್ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಹೇಳುವ ಬದಲಾಗಿ ನಿಜವಾಗಲೂ ಪ್ರೀತಿಸುವ ವ್ಯಕ್ತಿ ನಿಮ್ಮ ಕನಸುಗಳಿಗೆ ಬೆಂಬಲ ನೀಡುತ್ತಾನೆ. ಆತ ನಿಮ್ಮ ಜೀವನದ ದೊಡ್ಡ ಸಪೋರ್ಟ್ ಸಿಸ್ಟಮ್ ಆಗಿರುತ್ತಾನೆ ಮತ್ತು ಯಾವಾಗಲೂ ಕೂಡ ಪ್ರೋತ್ಸಾಹ ನೀಡುತ್ತಾನೆ. ನಿಮ್ಮ ಕನಸುಗಳನ್ನು ಬಿಟ್ಟು ಬಿಡು ಎಂದು ಎಂದಿಗೂ ಹೇಳುವುದಿಲ್ಲ ಮತ್ತು ನಿಮ್ಮ ಕರಿಯರ್ ನಲ್ಲಿ ಉತ್ತುಂಗಕ್ಕೆ ಏರಲು ಸಹಾಯ ಮಾಡುತ್ತಾನೆ.

7. ಆತ ನಿಮಗಾಗಿ ಅಡುಗೆ ಮಾಡುತ್ತಾನೆ
ನಿಮ್ಮ ಮೇಲೆ ಪ್ರೀತಿಗೆ ಬಿದ್ದಿರುವ ವ್ಯಕ್ತಿಯು ಮಾಡುವ ಬಹಳ ಸಿಹಿಯಾದ ಕೆಲಸ ಇದು. ಹೌದು ಆತ ನಿಮಗಾಗಿ ಅಡುಗೆ ಮಾಡುತ್ತಾನೆ. ಹಾಗಂತ ನಿಮ್ಮ ಸಂಗಾತಿ ನಿಮಗೆ ಅಡುಗೆ ಮಾಡಿ ಬಡಿಸದೇ ಇದ್ದಲ್ಲಿ ಆತ ನಿಮ್ಮನ್ನು ಪ್ರೀತಿಸುವುದಿಲ್ಲ ಎಂದು ನಾವು ಹೇಳುತ್ತಿಲ್ಲ. ಬಹಳಷ್ಟು ಪುರುಷರು ಅಡುಗೆಯಲ್ಲಿ ನಳಮಹಾರಾಜರೇನೂ ಆಗಿರುವುದಿಲ್ಲ ಆದರೆ ಒಂದು ವಿಭಿನ್ನ ಖುಷಿಗಾಗಿ ನಿಮ್ಮ ಸಂತೋಷಕ್ಕಾಗಿ ಅಡುಗೆ ಮಾಡಲು ಪ್ರಯತ್ನಿಸಬಹುದು ಅಥವಾ ಹೊಸ ರುಚಿಯನ್ನು ನಿಮಗಾಗಿ,ನಿಮ್ಮ ಖುಷಿಗಾಗಿ ಆರ್ಡರ್ ಮಾಡಿ ತರಿಸಲೂ ಬಹುದು.

8. ಆತ ನಿಮ್ಮನ್ನು ನಂಬುತ್ತಾನೆ
ನಂಬಿಕೆ ಇಲ್ಲದೆ ಯಾವುದೇ ಸಂಬಂಧವೂ ಕೂಡ ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ನೀವು ನಿಮ್ಮ ಸಂಗಾತಿಯನ್ನು,ನಿಮ್ಮ ಸಂಗಾತಿ ನಿಮ್ಮನ್ನ ನಂಬದೇ ಇದ್ದಲ್ಲಿ ಖಂಡಿತ ನಿಮ್ಮ ಸಂಬಂಧ ದೀರ್ಘಾವಧಿ ಇರಲು ಅಸಾಧ್ಯವಾಗುತ್ತದೆ. ಯಾವ ವ್ಯಕ್ತಿಯು ನಿಮ್ಮ ನಿಜವಾಗಿಯೂ ಪ್ರೀತಿಸುತ್ತಾನೋ ಆತ ನಿಮ್ಮನ್ನ ಬಹಳವಾಗಿ ನಂಬುತ್ತಾನೆ. ನಿಮ್ಮ ಬಗ್ಗೆ ಬೇರೆಯವರು ಯಾರಾದರೂ ಕೆಟ್ಟದಾಗಿ ಹೇಳಿದರೂ ಕೂಡ ಆತ ತನ್ನ ಆಲೋಚನೆಗೆ ಬದ್ಧನಾಗಿರುತ್ತಾನೆ ಮತ್ತು ನಿಮ್ಮ ಮೇಲೆ ನಂಬಿಕೆ ಇಟ್ಟಿರುತ್ತಾನೆ.

9. ಆತ ಎಂದಿಗೂ ನಿಮ್ಮೊಂದಿಗೆ ಬ್ಲೇಮ್ ಗೇಮ್ ಆಡಲಾರ
ಆತ ತನ್ನ ಅಹಂಕಾರಕ್ಕೆ ಹೆಚ್ಚು ಬೆಲೆ ನೀಡಲಾರ. ಒಂದು ವೇಳೆ ಆತ ಏನಾದರೂ ತಪ್ಪು ಎಸಗಿದರೆ ಆತ ನಿಮ್ಮ ಬಳಿ ಕ್ಷಮೆ ಕೇಳುತ್ತಾನೆಯೇ ಹೊರತು ತಪ್ಪಿನ ಉಸ್ತುವಾರಿಯನ್ನು ನಿಮಗೆ ವಹಿಸಿ ಬ್ಲೇಮ್ ಗೇಮ್ ಆಡುವುದಿಲ್ಲ. ನಿನ್ನಿಂದಲೇ ಹೀಗಾಗಿದ್ದು ಎಂಬ ಪದ ಬಳಕೆ ಆತನಿಂದ ಎಂದಿಗೂ ಆಗುವುದಿಲ್ಲ. ಆತನ ತಪ್ಪುಗಳಿಗೆ ಎಂದಿಗೂ ಆತನೇ ಜವಾಬ್ದಾರಿ ವಹಿಸುತ್ತಾನೆ.

10. ನಿಮ್ಮ ವಿಶೇಷ ಭಾವನೆಗಾಗಿ ಆತ ಏನನ್ನಾದರೂ ಮಾಡುತ್ತಾನೆ
ನಿಮ್ಮ ವಿಶೇಷ ಭಾವನೆಗಾಗಿ ನಿಮ್ಮನ್ನ ಪ್ರೀತಿಸುವ ವ್ಯಕ್ತಿ ಏನನ್ನಾದರೂ ವಿಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಾರೆ. ನಿಮಗಾಗಿ ನಿಮ್ಮ ಹುಡುಗ ವಿಶೇಷವಾಗಿ ಮಾಡುವುದನ್ನು ನೀವು ಗಮನಿಸಿದರೆ ಖಂಡಿತ ಆತ ನಿಮ್ಮನ್ನ ಬಹಳವಾಗಿ ಪ್ರೀತಿಸುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆತನ ಪ್ರೀತಿಯನ್ನು ನಿಮಗೆ ತೋರಿಸುವುದಕ್ಕಾಗಿ ಆತ ಎಂದಿಗೂ ಸೋಲುವುದಿಲ್ಲ. ರಸ್ತೆ ಬದಿಯಲ್ಲಿ ನಡೆಯುವಾಗ ಆತ ನಿಮ್ಮ ಕೈಹಿಡಿದು ನಡೆಸುತ್ತಾನೆ. ನೀವು ಕುಳಿತುಕೊಳ್ಳುವುದಕ್ಕೆ ಆತ ಖುರ್ಚಿ ಬಿಟ್ಟುಕೊಡುತ್ತಾನೆ. ಬಾಗಿಲ ಬಳಿ ಬಂದಾಗ ಆತ ನಿಮಗಾಗಿ ಬಾಗಿಲು ತೆರೆಯುತ್ತಾನೆ. ಅಂದರೆ ವಿಶೇಷ ಕಾಳಜಿ ನಿಮ್ಮ ಬಗ್ಗೆ ಆತನಿಗೆ ಇದ್ದೇ ಇರುತ್ತದೆ.

11. ಆತ ನಿಮ್ಮ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಗಳ ಬಗ್ಗೆ ಜಾಗೃತೆ ವಹಿಸುತ್ತಾನೆ
ಇದಕ್ಕಿಂತ ಉತ್ತಮ ಚಿಹ್ನೆ ಇನ್ಯಾವುದಿರಲು ಸಾಧ್ಯ ಹೇಳಿ. ನಿಮ್ಮ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಗಳನ್ನು ಒಬ್ಬ ವ್ಯಕ್ತಿ ಕಾಳಜಿ ತೆಗೆದುಕೊಳ್ಳುತ್ತಾನೆ ಎಂದರೆ ಆತ ನಿಮ್ಮನ್ನ ಬಹಳಾಗಿ ಪ್ರೀತಿಸುತ್ತಾನೆ ಎಂದೇ ಅರ್ಥ. ನೀವು ಪ್ರೀತಿಸುವ ಮತ್ತು ದ್ವೇಷಿಸುವ ವಿಚಾರಗಳ ಬಗ್ಗೆ ಆತ ಯಾವಾಗಲೂ ಕೂಡ ಗಮನವಿಡುತ್ತಾನೆ. ನಿಮ್ಮ ಪ್ರೀತಿಯ ಚಾಕಲೇಟ್ ಮತ್ತು ಹೂವುಗಳನ್ನು ಆತ ಖರೀದಿಸುತ್ತಾನೆ. ನೀವು ಮಲಗಿರುವಾಗ ಲೈಟ್ ಆನ್ ಮಾಡಿ ಕಿರಿಕಿರಿ ಮಾಡುವ ಸ್ವಭಾವ ಖಂಡಿತ ಆತನದ್ದಾಗಿರುವುದಿಲ್ಲ.

12. ತನ್ನ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳಲು ಆತನಗಿ ಮುಜುಗರವಿರುವುದಿಲ್ಲ
ತನ್ನ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಆತ ಬಯಸುತ್ತಾನೆ. ಇದು ಆತ ನಿಮ್ಮನ್ನ ಆಳವಾಗಿ ಪ್ರೀತಿಸುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಆತ ನಿಮ್ಮನ್ನ ಆತನ ಹೃದಯಕ್ಕೆ ಹತ್ತಿರವಾದ ವ್ಯಕ್ತಿ ಎಂದು ಭಾವಿಸಿರುತ್ತಾನೆ. ಅದೇ ಕಾರಣಕ್ಕಾಗಿ ತನ್ನ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವುದಕ್ಕೆ ಆತನಿಗೆ ಮುಜುಗರವಿರುವುದಿಲ್ಲ.