For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ನಿಮ್ಮತನವನ್ನು ಉಳಿಸಿಕೊಳ್ಳಲು ಇಲ್ಲಿದೆ ಪರಿಹಾರ

|

ಸಂಬಂಧ ಎನ್ನುವುದು ಕೇವಲ ಒಬ್ಬರಿಂದ ಸಾಧ್ಯವಿಲ್ಲ ಎರಡು ಜೀವಗಳು, ಮನಸ್ಸು ನೀಡಿ ಒಂದಾಗುವಂತಹ ಅನುಬಂಧ. ಇದನ್ನು ಕೇವಲ ಒಬ್ಬರಿಂದ ನಿಭಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ. ಸಂಬಂಧದಲ್ಲಿ ಇರುವ ಇಬ್ಬರು ಕೂಡ ಸರಿಯಾದ ನಿರ್ಧಾರ, ಬದ್ಧತೆ, ನಂಬಿಕೆ ಇತ್ಯಾದಿಗಳನ್ನು ಸಮಾನಾಗಿ ಹೊಂದಿದ್ದರೆ ಮಾತ್ರ ಆ ಸಂಬಂಧವು ಉತ್ತಮವಾದ ರೀತಿಯಲ್ಲಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅರ್ಧದಲಿ ಕೊನೆಯಾಗುವ ಸಂಭವವೇ ಹೆಚ್ಚು.

ಕೆಲವೊಂದು ಸಂಬಂಧಗಳಲ್ಲಿ ಈ ಜವಾಬ್ದಾರಿ ಅಥವಾ ಸಂಬಂಧ ಉಳಿಸಿಕೊಳ್ಳುವ ಹೊಣೆಯನ್ನು ಒಬ್ಬರೇ ಹೊರುವುದುಂಟು. ಅದು ಗಂಡಿರಲಿ ಅಥವಾ ಹೆಣ್ಣಿರಲಿ ಸಂಬಂಧದ ಸಂಪೂರ್ಣ ಭಾರವನ್ನು ಒಬ್ಬರೇ ಹೊತ್ತು ಕೊಂಡಿರುತ್ತಾರೆ. ಎಲ್ಲವನ್ನು ಒಬ್ಬರೇ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಯುತ್ತಾ ಇರುತ್ತಾರೆ. ಆದರೆ ಇದು ಸರಿಯಲ್ಲ. ಯಾಕಂದ್ರೆ ಆವೇಳೆ ಅವರು ಸಂಪೂರ್ಣವಾಗಿ ಅದರಲ್ಲಿ ತಮ್ಮನ್ನು ತಾವು ಮುಳುಗಿಸಿಕೊಂಡು ಮತ್ತು ತಮ್ಮತನವನ್ನೇ ಕಳೆದುಕೊಂಡಿರುತ್ತಾರೆ.

ಸಂಬಂಧವು ಜೋಡೆತ್ತಿನಂತೆ ಯಾವಾಗಲೂ ಸರಾಗವಾಗಿ ಮುಂದೆ ಸಾಗುತ್ತಿರಬೇಕು. ಸಂಬಂಧ ಅಥವಾ ಸಂಸಾರ ಎಂಬ ಗಾಡಿ ಮುಂದೆ ಹೋಗಬೇಕಾದರೆ ಎರದೂ ಎತ್ತುಗಳು ಒಟ್ಟಿಗೆ ಹೆಜ್ಜೆ ಹಾಕಬೇಕು. ಕೇವಲ ಒಂದು ಎತ್ತಿನಿಂದ ಮುಂದೆ ಹೋಗಲು ಸಾಧ್ಯವಿಲ್ಲ. ಹಾಗಂತ ನಾ ಮುಂದೆ ತಾ ಮುಂದು ಎಂಬ ಅಹಂ ಕೂಡ ಗಾಡಿಯನ್ನು ಸರಿಯಾದ ದಾರಿಯಲ್ಲಿ ಕೊಂಡೊಯುವುದಿಲ್ಲ. ಅದೇ ರೀತಿ ಈ ಸಂಬಂಧ ಯಾವಾಗಲೂ ನೀವಿಬ್ಬರು ಸಂತೋಷ ಹಾಗೂ ದುಃಖದಲ್ಲಿ ಭಾಗಿಯಾಗಬೇಕು. ಹೀಗಾದರೆ ಮಾತ್ರ ಸಂಬಂಧವು ಚೆನ್ನಾಗಿರಲು ಸಾಧ್ಯವಾಗುವುದು. ಅದು ಹೇಗೆ ಈ ಕೆಳಗಿನ ವಿಧಾನದ ಮೂಲಕ ತಿಳಿಯಿರಿ.

​ನಿಮ್ಮ ಗುರಿಯ ಜೊತೆಗೆ ಸಂಗಾತಿಯನ್ನು ಬೆಂಬಲಿಸಿ:

​ನಿಮ್ಮ ಗುರಿಯ ಜೊತೆಗೆ ಸಂಗಾತಿಯನ್ನು ಬೆಂಬಲಿಸಿ:

ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವವರಿಗೆ ಬೆಂಬಲವು ಎಲ್ಲದಕ್ಕಿಂತಲೂ ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಈ ಸಂಬಂಧದಲ್ಲಿ ಯಾವಾಗಲೂ ತುಂಬಾ ಸೂಕ್ಷ್ಮ ಹಾಗೂ ಬೆಂಬಲವಾಗಿರುವುದು ಅತೀ ಅಗತ್ಯವಾಗಿರುತ್ತದೆ. ಜೀವನದಲ್ಲಿ ಸಂಗಾತಿಯು ತುಂಬಾ ಕಠಿಣ ಸಮಯವನ್ನು ಎದುರಿಸುತ್ತಲಿದ್ದರೆ ಆಗ ನೀವು ಅವರಿಗೆ ಬೆಂಬಲವಾಗಿ ನಿಂತುಕೊಂಡು, ಪ್ರೋತ್ಸಾಹ ನೀಡಿ. ಆದರೆ ಈ ವೇಳೆ ನೀವು ನಿಮ್ಮ ಗುರಿಯನ್ನು ಬದಿಗಿಡಬೇಕಾಗಿಲ್ಲ. ಹೀಗೆ ಆದರೆ ಆಗ ಮುಂದೆ ಸಂಬಂಧವು ಬಿಗಡಾಯಿಸುವುದು ಮತ್ತು ಆರಂಭದಲ್ಲಿ ಇರುವಂತಹ ಹೊಂದಾಣಿಕೆಯು ಇರದು. ಆದ್ದರಿಂದ ನಿಮ್ಮ ಗುರಿಯೊಂದಿಗೆ ಅವರನ್ನು ಬೆಂಬಲಿಸಿ.

​ನಿಮ್ಮ ಆದ್ಯತೆಗಳ ಜೊತೆ ಸಂಗಾತಿ ಕಡೆಗೂ ಗಮನ ನೀಡಿ:

​ನಿಮ್ಮ ಆದ್ಯತೆಗಳ ಜೊತೆ ಸಂಗಾತಿ ಕಡೆಗೂ ಗಮನ ನೀಡಿ:

ಸಂಗಾತಿಯ ಆದ್ಯತೆಗಳಿಗೆ ಗಮನ ನೀಡುವುದು ಅಗತ್ಯವೆಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಆದರೆ ನೀವು ಈ ವೇಳೆ ನಿಮ್ಮ ಆದ್ಯತೆಗಳನ್ನು ಕಡೆಗಣಿಸಬಾರದು. ನಿಮ್ಮ ಆದ್ಯತೆ ಕಡೆಗಣಿಸಿಕೊಂಡು ಸಂಗಾತಿಗಾಗಿ ಶ್ರಮಿಸಿದರೆ ಅಲ್ಲಿ ನಿಮಗೆ ತೃಪ್ತಿ ಇರಲಾರದು. ನಿಮ್ಮ ಭಾಂದವ್ಯವು ಉತ್ತಮವಾಗಿದ್ದು, ಬಲಿಷ್ಠವಾಗಿದ್ದರೆ ಆಗ ನೀವು ಸರಿಯಾಗಿ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಬಹುದು. ಆಗ ಅವರು ನಿಮ್ಮ ಪ್ರಯತ್ನವನ್ನು ಖಂಡಿತವಾಗಿಯೂ ಒಪ್ಪುತ್ತಾರೆ.

​ನಿಮಗಾಗಿ ಹಾಗೂ ಅವರಿಗೋಸ್ಕರ ಸಮಯವಿರಲಿ:

​ನಿಮಗಾಗಿ ಹಾಗೂ ಅವರಿಗೋಸ್ಕರ ಸಮಯವಿರಲಿ:

ವೈಯಕ್ತಿಕ ಜೀವನ ಎಲ್ಲರಿಗೂ ಮುಖ್ಯವಾಗಿರುತ್ತದೆ. ಎಲ್ಲರೂ ಪ್ರತ್ಯೇಕ ಜಾಗವನ್ನು ಇದಕ್ಕಾಗಿ ಬಯಸುತ್ತಾರೆ. ಎಲ್ಲಾ ಸಮಯದಲ್ಲೂ ಸಂಗಾತಿಯ ಹಿಂದೆಂದೇ ಇರಬೇಕೆಂದಿನಿಲ್ಲ, ಸಂಬಂಧದಲ್ಲಿ ನಿಮ್ಮ ವೈಯಕ್ತಿಕತೆಯನ್ನು ಕೂಡ ಗೌರವಿಸಬೇಕು. ಹೀಗಾಗಿ ನೀವು ನಿಮಗೋಸ್ಕರ ಸಮಯವನ್ನು ಕೂಡ ಮೀಸಲಿಡಬೇಕು ಮತ್ತು ಸಂಗಾತಿಗೆ ಕೂಡ ಅವರದ್ದೇ ಆಗಿರುವಂತಹ ಸಮಯ ನೀಡಬೇಕಾಗುತ್ತದೆ. ಸಂಬಂಧದಲ್ಲಿ ಕೆಲವು ಗಡಿಗಳನ್ನು ಹಾಕಿಕೊಂಡು ಮುಂದೆ ಸಾಗಬೇಕು. ಆ ಗಡಿಯನ್ನು ಇಬ್ಬರೂ ಎಂದಿಗೂ ದಾಟಬಾರದು.

ಅವರನ್ನು ಪ್ರೀತಿಸುವ ಜೊತೆಗೆ, ನಿಮ್ಮನ್ನು ನೀವು ಪ್ರೀತಿಸಲು ಮರೆಯಬೇಡಿ:

ಅವರನ್ನು ಪ್ರೀತಿಸುವ ಜೊತೆಗೆ, ನಿಮ್ಮನ್ನು ನೀವು ಪ್ರೀತಿಸಲು ಮರೆಯಬೇಡಿ:

ಸಂಬಂಧದಲ್ಲಿ ಸಂಗಾತಿಯನ್ನು ಪ್ರೀತಿಸುವುದು ಪ್ರಮುಖವಾಗ್ರುತ್ತದೆ. ಆದರೆ ಕೇವಲ ಪ್ರೀತಿ ಮಾತ್ರ ಪ್ರಮುಖ ಅಂಶವೆಂದು ಹೆಚ್ಚಿನವರು ಭಾವಿಸಿರುತ್ತಾರೆ. ಇದು ನಿಜವಾದರೂ, ಸಂಗಾತಿಗಳನ್ನು ಪ್ರೀತಿಸುವ ಜತೆಗೆ ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ನಿಮ್ಮನ್ನು ನೀವು ಆರೈಕೆ ಮಾಡದೆ, ನಿಮ್ಮ ಭಾವನೆಗಳನ್ನು ಕಡೆಗಣಿಸಿದರೆ ಆಗ ನೀವು ಖಂಡಿತವಾಗಿಯೂ ನಿಮ್ಮನ್ನು ನೀವು ಮರೆತುಬಿಡುವಿರಿ. ನಿಮ್ಮನ್ನು ನೀವೇ ಪ್ರೀತಿಸದಿದ್ದರೆ ಮತ್ತೊಬ್ಬರು ಪ್ರೀತಿಸಬೇಕು ಎಂದು ನಿರೀಕ್ಷಿಸುವುದು ನಿಮ್ಮ ಮೂರ್ಖತನದ ಕೆಲಸವಾಗುತ್ತದೆ.

​ಅವರ ಹವ್ಯಾಸಗಳ ಮಧ್ಯೆ, ನಿಮ್ಮ ಹವ್ಯಾಸಗಳನ್ನು ದೂರ ಮಾಡಬೇಡಿ:

​ಅವರ ಹವ್ಯಾಸಗಳ ಮಧ್ಯೆ, ನಿಮ್ಮ ಹವ್ಯಾಸಗಳನ್ನು ದೂರ ಮಾಡಬೇಡಿ:

ಸಂಬಂಧವೆಂದ ಮೇಲೆ ಅಲ್ಲಿ ಜತೆಯಾಗಿ ಸಾಗಲೇಬೇಕು. ಅವರ ಕೆಲವೊಂದು ಅಭಿರುಚಿ, ಹವ್ಯಾಸಗಳನ್ನು ನೀವು ಕೂಡ ಒಪ್ಪಿಕೊಳ್ಳಬೇಕು. ಅದೇ ರೀತಿ ಅವರು ಕೂಡ. ನಿಮ್ಮ ಹವ್ಯಾಸಗಳನ್ನು ಸಹ ಒಪ್ಪಿಕೊಂಡು ಅದರಲ್ಲಿ ಪಾಲ್ಗೊಳ್ಳಬೇಕು. ನೀವು ಅವರ ಹವ್ಯಾಸಗಳಲ್ಲಿ ಭಾಗಿಯಾಗಲು ಹೋಗಿ ನಿಮ್ಮ ಹವ್ಯಾಸಗಳನ್ನು ಮರೆತುಬಿಡಬಾರದು. ನಿಮ್ಮ ಹವ್ಯಾಸಗಳಿಗೆ ಕೂಡ ಮಹತ್ವ ನೀಡಿ. ಸಂಬಂಧದಿಂದಾಗಿ ನಿಮ್ಮ ಆಸಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ.

​ಮಾತು ಕೇಳಿ, ಹಾಗೆ ನಿಮ್ಮ ಮಾತನ್ನು ಅವರು ಆಲಿಸಲಿ:

​ಮಾತು ಕೇಳಿ, ಹಾಗೆ ನಿಮ್ಮ ಮಾತನ್ನು ಅವರು ಆಲಿಸಲಿ:

ಉತ್ತಮ ಹಾಗೂ ಸಂತೋಷದ ಸಂಬಂಧಕ್ಕೆ ಸಂವಹನವು ಅತೀ ಅಗತ್ಯವಾಗಿರುತ್ತದೆ. ಆದರೆ ಇದು ಏಕಮುಖವಾಗಿರಬಾರದು. ನೀವು ಸಂಗಾತಿಯ ಮಾತನ್ನು ಕೇಳುತ್ತಲಿದ್ದರೆ, ಆಗ ಅವರು ಕೂಡ ನಿಮ್ಮ ಮಾತನ್ನು ಕೇಳಬೇಕು. ಸಂಬಂಧವೆನ್ನುವುದು ಇಬ್ಬರಿಂದ ಮಾತ್ರ ಮುಂದುವರಿಯಲು ಸಾಧ್ಯ. ಕೇವಲ ಒಬ್ಬ ವ್ಯಕ್ತಿಯೇ ನಿರ್ಧಾರ ತೆಗೆದುಕೊಳ್ಳುತ್ತಲಿದ್ದರೆ, ಆಗ ಖಂಡಿತವಾಗಿಯೂ ಇದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು. ನೀವು ಆಲಿಸುವಂತೆ ನಿಮ್ಮ ಸಂಗಾತಿಯೂ ನಿಮ್ಮ ಮಾತುಗಳನ್ನು ಆಲಿಸಬೇಕು, ಅದಕ್ಕೆ ಗೌರವ ನೀಡಬೇಕು. ಆಗ ಸಂಬಂಧ ಹಾಲು ಜೇನಿನಂತಿರುವುದು.

English summary

Tips On How Not To Lose Yourself In A Relationship

Here are some things, After getting into a new relationship, that you can do too make sure you don't lose yourself, have a look.
Story first published: Friday, January 1, 2021, 12:00 [IST]
X