For Quick Alerts
ALLOW NOTIFICATIONS  
For Daily Alerts

ಬ್ರೇಕಪ್ ನಿಂದ ಸಂಬಂಧವನ್ನು ಉಳಿಸಿಕೊಳ್ಳಲು ಈ ಪ್ರಯತ್ನಗಳನ್ನು ಟ್ರೈ ಮಾಡಿ

|

ಈಗಿನ ಕಾಲದಲ್ಲಿ ಬ್ರೇಕಪ್ ಎನ್ನುವುದು ಬಹಳ ಸರಳವಾಗಿ ಆಗುವಂತದ್ದು. ಮೊದಮೊದಲು ಎಲ್ಲವೂ ಚೆನ್ನಾಗಿದ್ದು, ಬರುಬರುತ್ತಾ ಇಬ್ಬರಲ್ಲೂ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಕೊನೆಗೆ ದೂರವಾಗುವ ಮೂಲಕ ಸಂಬಂಧ ಕೊನೆಗೊಳ್ಳುವುದು. ಒಂದು ವೇಳಿ ನಿಮ್ಮ ಸಂಬಂಧವನ್ನು ಕೊನೆಗೊಳಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಕೊನೆಯ ಬಾರಿಗೆ ಪ್ರಯತ್ನಿಸಬಹುದಾದ ಕೆಲವು ವಿಷಯಗಳಿವೆ. ಇದನ್ನು ಪ್ರಯತ್ನ ಮಾಡುವುದು ಉತ್ತಮ. ಏಕೆಂದರೆ ಸಂಬಂಧವೆಂಬುದು ಅಷ್ಟು ಬೇಗ ಕಳೆದುಕೊಳ್ಳುವುದಕ್ಕೇ ಸಾಧ್ಯವಾಗುವುದಿಲ್ಲ. ನಿಮ್ಮ ಕೈಲಾದ ಪ್ರಯತ್ನವನ್ನು ನೀವು ಮಾಡಿ, ಅನಂತರದಲ್ಲಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ನಿಮ್ಮ ನಿರ್ಧಾರವನ್ನು ತೆಗೆದು ಕೊಳ್ಳಿ.

ಸಂಬಂಧ ಬ್ರೇಕ್ ಮಾಡುವ ಮುನ್ನ ಸಂಬಂಧ ಉಳಿಸಲು ಈ ಕೆಳಗಿನ ಪ್ರಯತ್ನಗಳನ್ನು ಮಾಡಬಹುದು:

​ಪರಸ್ಪರರ ಆಪಾದನೆ ಮಾಡಿಕೊಳ್ಳುವುದನ್ನು ತಪ್ಪಿಸಿ:

​ಪರಸ್ಪರರ ಆಪಾದನೆ ಮಾಡಿಕೊಳ್ಳುವುದನ್ನು ತಪ್ಪಿಸಿ:

ಪ್ರತಿಯೊಂದು ಸಂಬಂಧದಲ್ಲಿಯು ಪರಸ್ಪರ ಆಪಾದನೆ ಎನ್ನುವುದು ಇದ್ದೇ ಇರುತ್ತದೆ. ನೀನು ಮಾಡಿದ್ದೀಯಾ ಅದಕ್ಕೆ ನಾನು ಮಾಡಿದ್ದು ಎಂದು ಆಪಾದಿಸಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಹೆಚ್ಚಿನ ಸಂಬಂಧಗಳು ಹಾಳಾಗಿರುವುದು ಪರಸ್ಪರ ಆಪಾದನೆಯ ಮೂಲಕವೇ. ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಸಂಗಾತಿಯನ್ನು ಪದೇಪದೇ ದೂಷಿಸುವುದು ಇದಕ್ಕೆ ಕಾರಣವಾಗುತ್ತದೆ. ಅಲ್ಲದೆ ಈ ರೀತಿಯ ಸಮಸ್ಯೆಗಳಲ್ಲಿ ಪರಸ್ಪರರಲ್ಲಿ ನಾನೇ ಗೆಲ್ಲಬೇಕು ಎನ್ನುವ ಭಾವನೆ ಇರಬಾರದು. ವಾದ ಮಾಡುವ ಗೆಲ್ಲುವ ಬದಲು ಪರಸ್ಪರ ಮಾತಾಡಿ, ನಿಮ್ಮ ನಡುವೆ ಇರುವ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಿ.

​ಜಗಳವನ್ನು ಆಗಲೇ ಸರಿಪಡಿಸಿಕೊಳ್ಳಿ:

​ಜಗಳವನ್ನು ಆಗಲೇ ಸರಿಪಡಿಸಿಕೊಳ್ಳಿ:

ಅನೇಕ ದಂಪತಿಗಳ ನಡುವೆ ಜಗಳವಾಗುವುದಕ್ಕೆ ಪ್ರಮುಖ ಕಾರಣವೆಂದರೆ ಅವರು ಇದುವರೆಗೆ ತಮ್ಮ ನಡುವೆ ಆಗಿರುವ ಜಗಳಗಳು ಮತ್ತು ಮನಸ್ತಾಪಗಳನ್ನು ಸರಿಪಡಿಸಿಕೊಳ್ಳದೆ ಸಂಬಂಧಗಳಲ್ಲಿ ಇರುವುದಾಗಿದೆ. ಯಾವುದೇ ರೀತಿಯ ಜಗಳ ಮತ್ತು ಮನಸ್ತಾಪಗಳು ಉಂಟಾದಾಗ ಅವುಗಳನ್ನು ಅದೇ ಸಮಯದಲ್ಲಿ ಪರಿಹರಿಸಿಕೊಳ್ಳಬೇಕು ,ಅವುಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಯಲು ಬಿಡಬಾರದು. ಆದ್ದರಿಂದ ಯಾವುದೇ ರೀತಿಯ ಜಗಳವನ್ನು ಅಲ್ಲೇ ಬಗೆಹರಿಸುವುದರಿಂದ ಮುಂದೊಂದು ದಿನ ಆಗುವ ಸಂಘರ್ಷವನ್ನು ನೀವು ತಪ್ಪಿಸಬಹುದು. ಆದ್ದರಿಂದ ನಿಮ್ಮ ಜೀವನದಲ್ಲಿ ಹಿಂದಿನ ಯಾವುದಾದರೂ ಜಗಳಗಳು ಮತ್ತು ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.

​ಪ್ರಸ್ತುತ ವಿಷಯದ ಬಗ್ಗೆ ಗಮನಹರಿಸಿ:

​ಪ್ರಸ್ತುತ ವಿಷಯದ ಬಗ್ಗೆ ಗಮನಹರಿಸಿ:

ಜೀವನದಲ್ಲಿ ಪ್ರತಿಯೊಂದು ದಿನವೂ ಹೊಸ ದಿನವಾಗಿರುತ್ತದೆ. ಜೀವನದಲ್ಲಿ ಒಂದೊಂದು ದಿನಕ್ಕೆ ಒಂದೊಂದು ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಆದ್ದರಿಂದ ಪ್ರಸ್ತುತ ಜೀವನದಲ್ಲಿ ಜೀವಿಸುವುದನ್ನು ಕಲಿಯಿರಿ. ಯಾವುದನ್ನೇ ಆಗಲಿ ಅಥವಾ ಯಾರ ಬಗ್ಗೆಯು ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಬಾರದು. ನಿಮ್ಮ ಸಂಬಂಧದಲ್ಲಿ ನಿಮ್ಮ ಬೇಡಿಕೆಗಳು ಮತ್ತು ನಿಮ್ಮ ಸಂಗಾತಿಯ ಬೇಡಿಕೆಗಳು ಎರಡಕ್ಕೆ ನೀವು ಬೆಲೆ ನೀಡಿ.

ಅನ್ಯೋನ್ಯವಾಗಿರುವುದನ್ನು ಹೆಚ್ಚಿಸಿ:

ಅನ್ಯೋನ್ಯವಾಗಿರುವುದನ್ನು ಹೆಚ್ಚಿಸಿ:

ದೈಹಿಕ ವಾತ್ಸಲ್ಯವನ್ನು ಹೆಚ್ಚಿಸುವುದು ನಿಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಕಳೆದುಹೋದ ದೈಹಿಕ ವಾತ್ಸಲ್ಯವನ್ನು ಹೆಚ್ಚಿಸಲು ನಿಮ್ಮ ಸಂಗಾತಿಯೊಂದಿಗೆ ರಾತ್ರಿ ಸ್ಪೆಷಲ್ ಡಿನ್ನರ್, ಒಟ್ಟಿಗೆ ಚಲನಚಿತ್ರ ನೋಡುವುದು ಮತ್ತು ಹೊರಹೋಗುವುದು ಮುಂತಾದ ರೀತಿಯ ಯೋಜನೆಗಳನ್ನು ರೂಪಿಸಿ ಕೊಳ್ಳಿ. ಇದು ನಿಮ್ಮ ಸಂಬಂಧದಲ್ಲಿ ಸಂತೋಷ ಮತ್ತು ಶಾಂತತೆಯನ್ನು ನೀಡುತ್ತದೆ. ಅನ್ಯೋನ್ಯವಾಗಿರುವೂದು ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಮತ್ತು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಬಿಡುಗಡೆ ಮಾಡುತ್ತದೆ.

 ಒಟ್ಟಿಗೆ ಸಮಯವನ್ನು ಕಳೆಯಿರಿ:

ಒಟ್ಟಿಗೆ ಸಮಯವನ್ನು ಕಳೆಯಿರಿ:

ಪ್ರತಿದಿನ ನೀವು ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ನೀವು ಪ್ರತಿದಿನವೂ ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದರಿಂದ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ಆದ್ದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಕನಿಷ್ಠ ದಿನವೊಂದಕ್ಕೆ 30 ನಿಮಿಷಗಳನ್ನು ಕಳೆಯಿರಿ. ಆರೋಗ್ಯ ಮತ್ತು ಅನಾರೋಗ್ಯ ಎರಡರ ಸಂದರ್ಭದಲ್ಲಿಯೂ ನೀವಿಬ್ಬರೂ ಪರಸ್ಪರ ಜೊತೆಯಲ್ಲಿ ಇರಬೇಕು.

​ಪ್ರಾಮಾಣಿಕತೆಯಿಂದ ಮಾತನಾಡಿ:

​ಪ್ರಾಮಾಣಿಕತೆಯಿಂದ ಮಾತನಾಡಿ:

ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಭಾವನೆಗಳು ಮತ್ತು ಪ್ರತಿಕ್ರಿಯೆಗಳ ಬಗ್ಗೆ ನೀವು ಪ್ರಾಮಾಣಿಕರಾಗಿದ್ದಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.ನಿರ್ದಿಷ್ಟ ಸನ್ನಿವೇಶದ ಬಗ್ಗೆ ನಿಮಗೆ ಏನನ್ನಿಸಿತು ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ಸಂವಹನ ನಡೆಸಿ ಮತ್ತು ಅವುಗಳನ್ನು ನೇರವಾಗಿ ಹೇಳಲು ಪ್ರಯತ್ನಿಸಿ.ಇಂತಹ ಸಮಯದಲ್ಲಿ ನೀವು ಅವರೊಂದಿಗೆ ನಡೆಸಿದ ಹಿಂದಿನ ಜಗಳಗಳು ಅಥವಾ ಯಾವುದೇ ದುಃಖಕರ ಸಂಗತಿಗಳನ್ನು ಮಾತನಾಡಬೇಡಿ.

English summary

Things you Both Should do Before Breaking up With your Partner in Kannada

Here we talking about Things you Both Should do Before Breaking up With your Partner in Kannada, read on
Story first published: Thursday, June 24, 2021, 17:26 [IST]
X
Desktop Bottom Promotion