For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಸಂಬಂಧದಲ್ಲಿ ಪುರುಷರು ಬಯಸೋದು ಇವುಗಳನ್ನಷ್ಟೇ..

|

ಸಂಬಂಧದಲ್ಲಿ ಗಂಡು-ಹೆಣ್ಣು ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಇಬ್ಬರಲ್ಲಿ ಹೊಂದಾಣಿಕೆಯೊಂದಿದ್ದರೆ, ಒಬ್ಬರನ್ನೊಬ್ಬರು ಅರಿಯುವ ಮನಸ್ಥಿತಿ ಇದ್ದರೆ ಅವರು ಹಾಲು-ಜೇನಿನಂತೆ ಬದುಕುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಬಂಧ ಉಳಿಸಿಕೊಳ್ಳುವಲ್ಲಿ, ಸುಖವಾಗಿ ಜೀವನ ಮಾಡಲು ಇಬ್ಬರೂ ಸಮನಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಆದರೆ ಸಂಬಂಧದಲ್ಲಿ ಮಹಿಳೆಯರು ಸಮರ್ಪಣೆ ಮತ್ತು ತ್ಯಾಗ ಮಾಡುತ್ತಾರೆ; ಪುರುಷರು ತುಂಬಾ ಸುಲಭವಾಗಿ ಬೇರೆ ಸಂಬಂಧಗಳಿಗೆ ಜಿಗಿಯುತ್ತಾರೆ ಮತ್ತು ಅದೇ ಸರಾಗತೆಯಿಂದ ಅದರಿಂದ ಹೊರಬರುತ್ತಾರೆ ಅನ್ನೋ ಮಾತಿದೆ.

ಆದರೆ ಪುರುಷರು ಬೇರೆ ಸಂಬಂಧಗಳಿಗೆ ಹಾರಲು ಸಾಕಷ್ಟು ಕಾರಣಗಳಿರುತ್ತವೆ. ಅದರಲ್ಲಿ ಹುಡುಗಿಯರ ಪಾತ್ರವೂ ಇದ್ದೇ ಇರುತ್ತದೆ. ಪುರುಷರ ಆಸೆಗೆ ತಕ್ಕಂತೆ ಹುಡುಗಿಯರು ಇರದೇ ಇರಬಹುದು, ಮೊದಲಿದ್ದ ಆಸಕ್ತಿ ಸಂಬಂದದಲ್ಲಿ ಮುಂದಿನ ದಿನಗಳಲ್ಲಿ ಕಾಣದೇ ಇರಬಹುದು, ಅಥವಾ ಪುರುಷನಿಗೇ ಆಕೆಯ ಸನಿಹ ಸಾಕಾಗಿರಬಹುದು. ಹೀಗೆ ಕಾರಣ ಹಲವಾರಿರುತ್ತವೆ.

ಆದರೂ ಕೆಲವು ತಜ್ಞರ ಪ್ರಕಾರ ಪುರುಷರಿಗೆ ಅಗತ್ಯವಾದ ಅವಶ್ಯಕತೆಗಳು ಒದಗಿಸಿದರೆ, ಅವರ ಆಸೆಗಳನ್ನು ಪೂರೈಸಿದರೆ ಅವರೂ ಸಂಬಂಧದಲ್ಲಿ ದೀರ್ಘಕಾಲದವರೆಗೂ ಅಂದರೆ ಶಾಶ್ವತವಾಗಿ ಇರುತ್ತಾರೆ. ಅಂದಹಾಗೇ ಸಂಬಂದದಲ್ಲಿ ಹುಡುಗರು ಮಹಿಳೆಯರಿಂದ ಅಥವಾ ತನ್ನ ಸಂಗಾತಿಯಿಂದ ಏನೆಲ್ಲಾ ಬಯಸುತ್ತಾರೆ ಎಂಬುದನ್ನು ಈ ಕೆಳಗೆ ಹೇಳಿದ್ದೇವೆ. ಇವುಗಳನ್ನು ಅರಿತರೆ ನಿಮ್ಮ ಸಂಗಾತಿಯ ಜೊತೆಗೆ ದೀರ್ಘಕಾಲದವರೆಗೂ ಬಹಳ ಸಂತೋಷದಿಂದ ಜೀವನ ಸಾಗಿಸಬಹುದು.

ಕಲ್ಮಶವಿಲ್ಲದ ಪ್ರೀತಿ:

ಕಲ್ಮಶವಿಲ್ಲದ ಪ್ರೀತಿ:

ಸಂಬಂಧದಲ್ಲಿ ಸಾಮಾನ್ಯವಾಗಿ ಪುರುಷರು ಕಲ್ಮಶವಿಲ್ಲದ ಪ್ರೀತಿಯನ್ನು ಬಯಸುತ್ತಾರೆ. ಯಾವುದೇ ಲಾಭವಿಲ್ಲದ ನಿಷ್ಕಲ್ಮಶ ಪ್ರೀತಿಯನ್ನು ಬಯಸುತ್ತಾರೆ. ಪ್ರೀತಿ ಅವರನ್ನು ಜೀವನದಲ್ಲಿ ಏನೂ ಬೇಕಾದರೂ ಸಾಧಿಸುವ ಛಲ ಬರುತ್ತದೆ. ಯಾಕಂದ್ರೆ ಆ ಪ್ರೀತಿ ಎಲ್ಲದಿಕ್ಕೂ ಭದ್ರ ಬುನಾದಿಯಾಗಿದೆ. ನಿಮ್ಮ ದುಬಾರಿ ಉಡುಗೊರೆಯಾಗಲೀ ಅಥವಾ ಬೇರೆನನ್ನೂ ನಿರೀಕ್ಷೆ ಮಾಡುವುದಿಲ್ಲ. ನಿಮ್ಮ ಪ್ರೀತಿ ಹಾಗೂ ಸಮಯವನ್ನಷ್ಟೇ ಹುಡುಗರು ಬಯಸುತ್ತಾರೆ. ಯಾಂತ್ರಿಕ ಜೀವನ ವಿಧಾನವು ಅವರಿಗೆ ಬೇಸರ ಮತ್ತು ನಿರಾಶೆಯನ್ನುಂಟುಮಾಡುವುದು ಪುರುಷರ ಸಾಮಾನ್ಯ ಸ್ವಭಾವವಾಗಿದೆ. ಅವರು ನೀರಿನಲ್ಲಿ ಹರಿಯುವ ಎಲೆಯಂತೆ ಜೀವನವನ್ನು ಬಯಸುತ್ತಾರೆ. ಪ್ರೀತಿಯ ಮುಕ್ತ ಹರಿವಿನಲ್ಲಿ ಪರಿಸ್ಥಿತಿಗಳನ್ನು ಹಾಗೂ ಅಡೆತಡೆಗಳನ್ನು ಎದುರಿಸಲು ಪುರುಷರಿಗೆ ಯಾರಾದರೂ ಸಂಗಾತಿ ಬೇಕೆನಿಸುತ್ತದೆ. ನೀವು ಆಗ ಪುರುಷರಿಗೆ ಪ್ರೀತಿ ಕೊಟ್ಟು, ಅವರ ಮನಸಿನ ನೋವುಗಳನ್ನು ನಿವಾರಿಸುವಂತಹ ಕಾರ್ಯದಲ್ಲಿ ತೊಡಗಬೇಕು ಎಂದು ಅವರು ಭಾವಿಸುತ್ತಾರೆ.

ಸ್ನೇಹ ಮತ್ತು ಸಂವಹನ:

ಸ್ನೇಹ ಮತ್ತು ಸಂವಹನ:

ಜೀವನದಲ್ಲಿ ಸರ್ವಾಧಿಕಾರಿಯಾಗುವ ಬದಲು, ಪುರುಷರು ನಿಜವಾದ ಸ್ನೇಹಕ್ಕಾಗಿ ಮತ್ತು ಸಂಬಂಧಗಳಲ್ಲಿ ಮುಕ್ತ ಸಂವಹನಕ್ಕಾಗಿ ಪಾಲುದಾರರನ್ನು ಹುಡುಕುತ್ತಾರೆ. ಅನೇಕ ಪುರುಷರು ಸಂಬಂಧಗಳಲ್ಲಿ ತೊಡಗಿದಾಗ ತನ್ನ ಸಂಗಾತಿಯಲ್ಲಿ ಉತ್ತಮ ಸ್ನೇಹಿತನನ್ನು ಹುಡುಕುತ್ತಾರೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಸ್ನೇಹಪರ ಅಂಶವು ಮನಸ್ಸನ್ನು ತೆರೆಯಲು ಮತ್ತು ಸಕ್ರಿಯ ಸಂವಹನದ ಮೂಲಕ ಜೀವನವನ್ನು ಹಂಚಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ತಮ್ಮ ಸಂಗಾತಿ ಗೆಳತಿಯಾಗಿರಬೇಕು. ಎಲ್ಲ ವಿಚಾರವನ್ನು ಹಂಚಿಕೊಳ್ಳಲು ಒಬ್ಬ ಗೆಳೆಯನಂತೆ ಇರಬೇಕು, ಆಖೆಯು ಒಳ್ಳೆಯ ಗೆಳೆತಿಯಂತೆ ಪ್ರತಿಯೊಂದು ಮಾತುಗಳಿಗೂ ಸ್ಪಂದಿಸಬೇಕು, ತರಲೆ ಮಾತುಗಳು, ತುಂಟತನ ಎಲ್ಲವೂ ಬೇಕೆಂದು ಬಯಸುತ್ತಾರೆ.

ಸಂಬಂಧದಲ್ಲಿ ಉತ್ತಮ ಸ್ನೇಹವನ್ನು ಬೆಳೆಸುವ ದಂಪತಿಗಳು ಪ್ರಣಯ ಮತ್ತು ಸಂತೋಷವನ್ನು ಆನಂದಿಸುವ ಸಾಧ್ಯತೆ ಹೆಚ್ಚು. ಪತಿ ಎಲ್ಲಾ ನಿಯಂತ್ರಣ ಮತ್ತು ಎಲ್ಲ ನಿರ್ಧರಿಸುವ ಅಧಿಕಾರದ ಪಾತ್ರವನ್ನು ವಹಿಸಿಕೊಳ್ಳಬೇಕಾದ ಸಮಯ ಕಳೆದುಹೋಗಿದೆ, ಆದರೆ ಹೆಂಡತಿ ಮೌನವಾಗಿರುತ್ತಾಳೆ ಮತ್ತು ಎಲ್ಲರೂ ಸ್ವೀಕರಿಸುವ ಪಾಲುದಾರನಾಗಿರುತ್ತಾಳೆ. ಇಂದು ಉತ್ತಮ ಕುಟುಂಬಗಳು ಆಳವಾದ ಸ್ನೇಹವನ್ನು ಆಧರಿಸಿದ ಪಾಲುದಾರರ ಒಕ್ಕೂಟವಾಗಿದೆ ಮತ್ತು ಸಂವಹನ ತಂತ್ರಗಳನ್ನು ಎಂದಿಗೂ ಕೆರಳಿಸುವುದಿಲ್ಲ.

ಬೆಂಬಲ ಮತ್ತು ಪ್ರೋತ್ಸಾಹ:

ಬೆಂಬಲ ಮತ್ತು ಪ್ರೋತ್ಸಾಹ:

ಸಂಬಂಧದಲ್ಲಿರುವ ಪ್ರತಿಯೊಬ್ಬ ಪಾಲುದಾರನು ಪರಸ್ಪರ ಬೆಂಬಲಿಸಬೇಕು ಮತ್ತು ತಮ್ಮನ್ನು ಪ್ರೋತ್ಸಾಹಿಸಬೇಕು. ಪುರುಷರು ನಿರಂತರ ಬೆಂಬಲ ಮತ್ತು ನಿರಂತರ ಪ್ರೋತ್ಸಾಹಕ್ಕೆ ವ್ಯಸನಿಯಾಗಿದ್ದಾರೆ. ಸ್ರೀಯರು ಅವರನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಮತ್ತು ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬೆಂಬಲವನ್ನು ನೀಡುವ ಮೂಲಕ ಸತತವಾಗಿ ಬೆನ್ನು ತಟ್ಟಬೇಕಾಗುತ್ತದೆ. ಎಲ್ಲಾ ಪುರುಷರು ಸಂಬಂಧಗಳಲ್ಲಿ ಪಾಲುದಾರರ ಬೆಂಬಲಕ್ಕಾಗಿ ಶ್ರಮಿಸುತ್ತಾರೆ ಮತ್ತು ಅವರಿಗೆ ಸಾಕಷ್ಟು ಬೆಂಬಲ ಸಿಗದಿದ್ದಾಗ ಅವರು ಮತ್ತೊಂದು ಸಂಬಂಧದ ಬಗ್ಗೆ ಯೋಚಿಸಬಹುದು.

ಬದ್ಧತೆ ಮತ್ತು ನಿಷ್ಠೆ:

ಬದ್ಧತೆ ಮತ್ತು ನಿಷ್ಠೆ:

ಸಂಬಂಧಗಳಲ್ಲಿ ಪುರುಷರು ಅತ್ಯಂತ ಬದ್ಧತೆ ಮತ್ತು ನಿಷ್ಠೆಯನ್ನು ಹುಡುಕುತ್ತಾರೆಂದು ಹೇಳಬೇಕಾಗಿಲ್ಲ. ಯಾವುದೇ ವ್ಯಕ್ತಿಯಾದರು ತಮ್ ಹುಡುಗಿ ಕೇವಲ ತಮ್ಮ ಸ್ವಂತ, ತನ್ನನ್ನು ಬಿಟ್ಟು ಯಾರಿಗೂ ಸೇರಿಲ್ಲ ಎಂಬ ಭಾವನೆಯನ್ನು ಬೆಳಸಿಕೊಂಡಿರುತ್ತಾರೆ. ಮಹಿಳೆಯರು ತಮ್ಮ ಸಂಗಾತಿಗೆ ಯಾವಾಗಲೂ ಬದ್ಧತೆ ಹಾಗೂ ನಿಷ್ಠೆಯಿಂದ ಇರಬೇಕು. ಇದು ಕೇವಲ ಮಹಿಳೆಯರಿಗಷ್ಟೇ ಸೀಮಿತವಲ್ಲ. ಇಬ್ಬರ ಪಾತ್ರವೂ ಬಹುಮುಖ್ಯವಾಗಿರುತ್ತದೆ. `ರೋಮಿಂಗ್-ಐ' ಹೊಂದಿರುವ ಮಹಿಳೆಯರನ್ನು ಎಂದಿಗೂ ಪುರುಷರು ಒಪ್ಪಿಕೊಳ್ಳುವುದಿಲ್ಲ.

ಲೈಂಗಿಕತೆ:

ಲೈಂಗಿಕತೆ:

ಸಂಬಂಧಗಳಲ್ಲಿ ಪ್ರಗತಿ ಸಾಧಿಸಲು ಜನರಿಗೆ ಸಹಾಯ ಮಾಡುವಲ್ಲಿ ಲವ್ ಮೇಕಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಸಂಬಂಧಗಳಲ್ಲಿ, ವಿಶೇಷವಾಗಿ ವೈವಾಹಿಕ ಜೀವನದಲ್ಲಿ ಲೈಂಗಿಕತೆಯ ಸರಿಯಾದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಅನೇಕ ದಂಪತಿಗಳು ವಿಫಲರಾಗುತ್ತಾರೆ. ಲೈಂಗಿಕತೆಯನ್ನು ಕೆಟ್ಟ ವಿಚಾರ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ; ಆದರೆ ಸಂಬಂಧಗಳಲ್ಲಿ ಅಗತ್ಯವಾದ ಹಾರ್ಮೋನೈಜರ್. ಇದು ಪುರುಷರು ಮತ್ತು ಮಹಿಳೆಯರನ್ನು ತುಂಬಾ ಆಳವಾಗಿ ಪ್ರೀತಿಸುವಂತೆ ಮಾಡುತ್ತದೆ. ಅನೇಕ ಜನರು ಲೈಂಗಿಕತೆಯನ್ನು ಮಕ್ಕಳನ್ನು ಸಂತಾನೋತ್ಪತ್ತಿ ಮಾಡುವ ಎಂದು ಪರಿಗಣಿಸುತ್ತಾರೆ. ವಾಸ್ತವವಾಗಿ, ಸಂತಾನೋತ್ಪತ್ತಿಯು ಪ್ರೀತಿಯ ಒಂದು ಭಾಗವಾಗಿದೆ. ಲವ್ ಮೇಕಿಂಗ್ ಎಂಬ ಹೆಸರು ಎರಡು ಜನರ ನಡುವೆ ಪ್ರೀತಿ ಮತ್ತು ವಾತ್ಸಲ್ಯವನ್ನು ರೂಪಿಸುತ್ತಿದೆ. ಪ್ರತಿಯೊಂದು ಸಂಬಂಧವು ಅದರಲ್ಲಿರುವ ಲೈಂಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ದಂಪತಿಗಳೂ ಇದನ್ನು ನಿರಾಕರಿಸುವುದು ದೊಡ್ಡ ತಪ್ಪಾಗಿ ವಿರಸಕ್ಕೆ ಕಾರಣವಾಗುತ್ತದೆ. ಲೈಂಗಿಕ ಬಯಕೆಗಳು ಪುರುಷರು ಮತ್ತು ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ, ಆದರೆ ಅವುಗಳನ್ನು ಅನುಸರಿಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಯಾರನ್ನೂ ಒತ್ತಡಕ್ಕೊಳಪಡಿಸಬಾರದು. ಲೈಂಗಿಕ ಸ್ವಭಾವದಲ್ಲಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳುವುದು ಸಂತೋಷದ ಜೀವನಕ್ಕೆ ಉತ್ತಮ ದಾರಿ.

English summary

Things Men Want In A Relationship

Some men easily shift into other relationship, because they did not get any happiness with gir, they always have some desires so here we told about Things Men Want In A Relationship, have a look.
X