For Quick Alerts
ALLOW NOTIFICATIONS  
For Daily Alerts

ಆನ್‌ಲೈನ್ ಡೇಟಿಂಗ್‌ನಲ್ಲಿ ಮಾಡುವಾಗ ಹೀಗೆಲ್ಲಾ ಮಾಡಲೇಬಾರದು

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮುಖಾಂತರ ಸಂಬಂಧ ಬೆಳೆಸುವವರ ಸಂಖ್ಯೆ ಅಧಿಕವಾಗಿದೆ. ಆನ್‌ಲೈನ್‌ನಲ್ಲಿ ಪರಿಚಯವಾಗಿ, ಡೇಟಿಂಗ್ ಮಾಡಿ, ನಂತರ ಮದುವೆಯಾಗುವ ಎಷ್ಟೋ ಜನರಿದ್ದಾರೆ, ಅದೇ ರೀತಿ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿ ಮೋಸ ಹೋದವರೂ ಇದ್ದಾರೆ.

ಆದ್ದರಿಂದ ಆನ್‌ಲೈನ್‌ ಡೇಟಿಂಗ್‌ ಬಗ್ಗೆ ತುಂಬಾ ಎಚ್ಚರವಾಗಿರಬೇಕು. ಅದರಲ್ಲೂ ಈ ಕೋವಿಡ್‌ 19 ಬಂದ ಮೇಲೆ ಆನ್‌ಲೈನ್‌ ಡೇಟಿಂಗ್‌ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ನಾವಿಲ್ಲಿ ಆನ್‌ಲೈನ್ ಡೇಟಿಂಗ್ ಮಾಡುವುದಾದರೆ ಏನು ಮಾಡಬೇಕು, ಏನನ್ನು ಮಾಡಲೇಬಾರದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ನಿಮಗೆ ಮ್ಯಾಚ್ ಅನಿಸಿದವರಿಗೆ ಮೆಸೇಜ್ ಮಾಡಿ

ನಿಮಗೆ ಮ್ಯಾಚ್ ಅನಿಸಿದವರಿಗೆ ಮೆಸೇಜ್ ಮಾಡಿ

ಡೇಟಿಂಗ್‌ ಆ್ಯಪ್‌ನಲ್ಲಿ ನೋಡುವಾಗ ನಿಮಗೆ ಸೂಕ್ತ ಅನಿಸಿದ ಪ್ರೊಫೈಲ್ ಸಿಕ್ಕರೆ ತಕ್ಷಣ ಮೆಸೇಜ್ ಮಾಡಿ. ಹೇಗೆ ಅವರ ಜೊತೆ ಮಾತನಾಡುವುದು ಎಂಬ ಗೊಂದಲ ಉಂಟಾಗುವುದು ಸಹಜ. ಒಂದು ಅಧ್ಯಯನವು ಪುರುಷರು ಊಟ ಆಯ್ತಾ, ಕಾಫಿ ಆಯ್ತಾ ಈ ರೀತಿಯ ಪ್ರಶ್ನೆಗಳನ್ನು ಕೇಳುವ ಮುಖಾಂತರ ಸಂವಹನ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ಬರುವ ಸಾಧ್ಯತೆ ಶೇ. 73ರಷ್ಟು ಇದೆ ಎಂದಿದೆ. ಈ ರೀತಿಯ ಪ್ರಶ್ನೆಗಳನ್ನು ಕೇಳಿದರೆ ಕನಿಷ್ಠ ಪಕ್ಷ ಪ್ರತಿಕ್ರಿಯೆಯಾದರೂ ಬರುವುದು.

 ನಿಮ್ಮ ಖಾಸಗಿ ವಿವರವನ್ನು ಮೊದಲಿಗೇ ಬಹಿರಂಗ ಮಾಡಬೇಡಿ

ನಿಮ್ಮ ಖಾಸಗಿ ವಿವರವನ್ನು ಮೊದಲಿಗೇ ಬಹಿರಂಗ ಮಾಡಬೇಡಿ

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ, ನಿಮ್ಮ ಸಂಬಳ ಎಷ್ಟಿದೆ, ಎಷ್ಟು ಆಸ್ತಿದೆ ಇದರ ಬಗ್ಗೆ ಮಾಹಿತಿ ಬಿಟ್ಟುಕೊಡಬೇಡಿ. ಆನ್‌ಲೈನ್‌ ಸುಲಭವಾಗಿ ಸಂಬಂಧ ಬೆಳೆಸಬಹುದು ಆದರೆ ಸಂಬಂಧ ಬೆಳೆಸುವುದು ಕಷ್ಟ. ಆದ್ದರಿಂದ ವಿಷಯದಲ್ಲಿ ತುಂಬಾನೇ ಎಚ್ಚರವಹಿಸಿ. ಅವರು ಕೇಳಿದರು ಅಂತ ಹಣ ಹಾಕುವುದು ಮಾಡಬೇಡಿ, ಒಂದು ವೇಳೆ ಇಂಥವರನ್ನು ನಂಬಲು ಹೋದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ನೀವು ನೀವಾಗಿರಿ

ನೀವು ನೀವಾಗಿರಿ

ಆನ್‌ಲೈನ್ ಪರಿಚಯವಾದಾಗ ಅವರಿಗೆ ನಿಮ್ಮ ಬಗ್ಗೆ ಏನೂ ಗೊತ್ತಿರಲ್ಲ ಅಂತ ನಿಮ್ಮ ಬಗ್ಗೆ ಸುಳ್ಳು ಹೇಳಲು ಹೋಗಬೇಡ. ಉದಾಹರಣೆಗೆ ನಿಮ್ಮ ಕೆಲಸ ಇದರ ಬಗ್ಗೆ ಸುಳ್ಳು ಹೇಳಬೇಡಿ. ನೀವು ಯಾರನ್ನಾದರೂ ಆಕರ್ಷಿಸಲು ಬಯಸಿದರೆ ವೃತ್ತಿ ಬಗ್ಗೆ ನಿಜವನ್ನೇ ಹೇಳಿ, ನಿಮ್ಮನ್ನು ಇಷ್ಟಪಟ್ಟು ಬರುವವರ ಜೊತೆ ಡೇಟಿಂಗ್ ಮಾಡಿ. ಯಾರನ್ನೋ ಮೆಚ್ಚಿಸಲು ಸುಳ್ಳು ಹೇಳಿದರೆ ಸತ್ಯ ತಿಳಿದಾಗ ಅವರು ಜೊತೆಗೆ ನಿಲ್ಲುವುದಿಲ್ಲ ಎನ್ನುವುದು ನೆನಪಿರಲಿ.

ರಿಪ್ಲೈ ಬರದಿದ್ದರೆ ಕೋಪ ಪಡಬೇಡಿ

ರಿಪ್ಲೈ ಬರದಿದ್ದರೆ ಕೋಪ ಪಡಬೇಡಿ

ನಿಮಗೆ ಯಾರಾದರೂ ಇಷ್ಟವಾಗಿ ಅವರಿಗೆ ನೀವು ಮೆಸೇಜ್ ಕಳುಹಿಸಿದಾಗ ಅವರಿಂದ ರಿಪ್ಲೈ ಬರದಿದ್ದಾಗ ಕೋಪಗೊಳ್ಳುವುದು, ನಿರಾಸೆ ಪಡುವುದು ಇದರಲ್ಲಿ ಅರ್ಥವಿಲ್ಲ, ಬದಲಿಗೆ ಮತ್ತೊಂದು ಸರಿಹೊಂದುವ ಪ್ರೊಫೈಲ್ ನೋಡುವುದು ಜಾಣತನ.

 ಓಪನ್ ಮೈಂಡ್ ಆಗಿರಿ

ಓಪನ್ ಮೈಂಡ್ ಆಗಿರಿ

ಆನ್‌ಲೈನ್‌ ಡೇಟಿಂಗ್ ಮಾಡುವಾಗ ಅವರ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ, ಓಪನ್ ಮೈಂಡ್ ಆಗಿರಿ, ಯಾರಿಗೆ ಗೊತ್ತು ನಿಮಗೆ ಸಿಕ್ಕಿರುವುದು ಅತ್ಯುತ್ತಮವಾದ ಪಾರ್ಟನರ್‌ ಆಗಬಹುದಾದ ಗುಣವುಳ್ಳ ವ್ಯಕ್ತಿಯಾಗಿರಬಹುದು. ಆನ್‌ಲೈನ್ ಡೇಟಿಂಗ್‌ನಲ್ಲಿ ಸಿಕ್ಕ ಮಾತ್ರಕ್ಕೆ ಅವರ ಬಗ್ಗೆ ನೆಗೆಟಿವ್ ಚಿಂತನೆ ಬೇಡ.

ಹೌದು/ಇಲ್ಲ ಈ ರೀತಿಯ ಪ್ರಶ್ನೆ ಕೇಳಬೇಡಿ

ಹೌದು/ಇಲ್ಲ ಈ ರೀತಿಯ ಪ್ರಶ್ನೆ ಕೇಳಬೇಡಿ

ಆಸಕ್ತಿಕರವಾಗಿ ಮಾತನ್ನು ಮುಂದುವರೆಸಿ. ಯೆಸ್, ನೋ ಎಂದು ಹೇಳುವ ರೀತಿಯ ಪ್ರಶ್ನೆ ಕೇಳುತ್ತಿದ್ದರೆ ಅವರಿಗೂ ಬೋರ್ ಆಗುವುದು.

 ಗೌರವ ನೀಡಿ

ಗೌರವ ನೀಡಿ

ಚಿಕ್ಕ-ಪುಟ್ಟ ತಮಾಷೆ ಓಕೆ ಆದರೆ ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡಬೇಡಿ, ಅವರನ್ನು ಗೌರವದಿಂದ ಕಾಣಿ. ನೀವು ಆಫ್‌ಲೈನ್‌ನಲ್ಲಿ ಮದುವೆಯಾಗ ಬಯಸುವವರನ್ನು ನ ನೋಡಲು ಹೋದಾಗ ಹೇಗೆ ಗೌರವದಿಂದ ಕಾಣುತ್ತೀರೋ ಅದೇ ರೀತಿ ಗೌರವಿಸಿ.

 ಅವರು ತಿರಸ್ಕರಿಸಿದರೆ?

ಅವರು ತಿರಸ್ಕರಿಸಿದರೆ?

ಚಿಂತಿಸಬೇಡಿ, ಆನ್‌ಲೈನ್‌ನಲ್ಲಿ ನಿಮಗೆ ಮ್ಯಾಚ್‌ ಆಗುವ ಒಬ್ಬರಾದರೂ ಸಿಕ್ಕೇ ಸಿಗುತ್ತಾರೆ. ಹುಡುಕಿ. ಬೇಸರ ಪಡುವುದು, ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಬಯಸುವುದು ಇವೆಲ್ಲಾ ಮಾಡಿದರೆ ಅದರಿಂದ ನಿಮಗೇ ಹಾನಿ. ನೀವು ಬಯಸಿದಂಥ ವ್ಯಕ್ತಿ ಸಿಗದಿದ್ದರೆ ಡೋಂಟ್ ವರಿ ಪ್ರಯತ್ನ ಮುಂದುವರಿಸಿ...

English summary

The Dos and Don'ts of Online Dating in Kannada

Many of us are online trying to find a new relationship. Here we have given The dos and don'ts of online dating, have a look.
X
Desktop Bottom Promotion