Just In
Don't Miss
- News
ಮೈಸೂರು ಸೇರಿ 50ಕ್ಕೂ ಹೆಚ್ಚು ನಗರಗಳಲ್ಲಿ ಫ್ಲಿಪ್ ಕಾರ್ಟ್ ದಿನಸಿ ಸೇವೆ
- Automobiles
ತಂದೆಯ 60ನೇ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಗ
- Sports
ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವುದು ನನ್ನ ಸುದೀರ್ಘ ಕಾಲದ ಕನಸು: ಸೂರ್ಯಕುಮಾರ್ ಯಾದವ್
- Movies
'ಜೀವನದಲ್ಲಿ ಉತ್ತಮ ಪ್ರಯಾಣಿಕ' ಯಾರೆಂದು ಹೇಳಿದ ನಟ ಜಗ್ಗೇಶ್
- Finance
ಮಾರ್ಚ್ 02ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಬಂಧದಲ್ಲಿ ಈ ಸೂಚನೆಗಳಿದ್ದರೆ ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಿಲ್ಲ ಎಂದರ್ಥ
ಒಂದು ಸಂಬಂಧವನ್ನು ಉಳಿಸಿಕೊಂಡು ಮುಂದುವರಿಸಬೇಕಾದರೆ ಪ್ರೀತಿ ಮಾತ್ರವೇ ಸಾಕಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ.ನಂಬಿಕೆ, ಪ್ರಾಮಾಣಿಕತೆಯು ಸಂಬಂಧದ ಮೂಲವಾಗಿದೆ. ಇವುಗಳು ಇಲ್ಲದೇ ಇದ್ದರೆ ಖಂಡಿತ ಆ ಸಂಬಂಧ ದುರ್ಬಲವಾಗಿರುತ್ತದೆ. ಇನ್ನು ಗೌರವಿಸುವ ವಿಚಾರಕ್ಕೆ ಬಂದರೆ ಕೇವಲ ಒನ್ ವೇ ಆಗಿದ್ದರೆ ಸಾಲದು. ಪರಸ್ಪರರ ನಡುವಿನ ಗೌರವ ಬಹಳ ಮುಖ್ಯವಾಗಿರುತ್ತದೆ. ಹಿಂದಿನದ್ದೊಂದು ಗಾದೆಯೇa ಇಲ್ಲವೇ ಗೌರವ ಕೊಟ್ಟು, ಗೌರವ ಪಡೆದುಕೊಳ್ಳಿ ಎಂದು!
ಹಾಗೆಯೇ ಒಂದು ಸಂಬಂಧದಲ್ಲಿ ನೀವು ಅವರಿಗೆ ಗೌರವ ಕೊಡುವುದು ಮತ್ತು ಅವರು ನಿಮಗೆ ಗೌರವ ಕೊಡುವುದು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಗೌರವವಿಲ್ಲದ ಸಂಬಂಧ ಖಂಡಿತ ಉತ್ತಮವಾಗಿರಲು ಅಸಾಧ್ಯ.
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಿಲ್ಲ ಎಂದು ನಿಮಗೆ ಅನ್ನಿಸುತ್ತಿರಬಹುದು.ಅಗೌರವದ ಭಾವನೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.ಆದರೂ ನಿಮಗಿನ್ನು ಗೊಂದಲವಿದ್ದು ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಾರೋ ಇಲ್ಲವೋ ಎಂದು ನೀವು ತಿಳಿಯಲು ಬಯಸುತ್ತೀರಾದರೆ ನಿಮಗೆ ನಾವು ಸಹಾಯ ಮಾಡುತ್ತೇವೆ. ನಾವಿಲ್ಲಿ 12 ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ. ಈ ಅಂಶಗಳಿಂದ ನೀವು ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.ಮುಂದೆ ಓದಿ.

1. ನೀವು ಹೇಳುವ ವಿಚಾರದ ಬಗ್ಗೆ ನಿಮ್ಮ ಸಂಗಾತಿ ಗಮನ ಕೊಡದೇ ಇರುವುದು
ಪ್ರತಿಯೊಬ್ಬರೂ ಕೂಡ ನಾವು ಹೇಳುವುದನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು ಎಂದು ಬಯಸುತ್ತೇವೆ. ಆದರೆ ನೀವು ಮಾತನಾಡುವಾಗ ನಿಮ್ಮ ಸಂಗಾತಿ ಗಮನವೇ ಕೊಡುತ್ತಿಲ್ಲವೇ? ಅದಕ್ಕೆ ಹಲವು ಕಾರಣಗಳಿರಬಹುದು.ಆದರೆ ಪದೇ ಪದೇ ಪುನರಾವರ್ತನೆಯಾದರೆ ಖಂಡಿತ ಅವರು ನಿಮ್ಮನ್ನು ಗೌರವಿಸುತ್ತಿಲ್ಲವೆಂದೇ ಅರ್ಥ.ನೀವು ಒತ್ತಾಯಪೂರ್ವಕವಾಗಿ ಅವರಲ್ಲಿ ನಿಮ್ಮ ಮಾತಿನ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಕೇಳಿಕೊಂಡರೂ ಕೂಡ ಅವರು ಅದರ ಬಗ್ಗೆ ಕಾಳಜಿ ತೆಗೆದುಕೊಂಡಿಲ್ಲವೆಂದರೆ ಅವರಿಗೆ ನಿಮ್ಮ ಬಗ್ಗೆ ಗೌರವವಿಲ್ಲ ಎಂದರ್ಥ.

2. ನಿಮ್ಮ ಸಲಹೆಯನ್ನು ನಿಮ್ಮ ಸಂಗಾತಿ ಕೇಳಿಸಿಕೊಳ್ಳುವುದಿಲ್ಲ
ಬೇರೆಯವರ ಸಲಹೆಯನ್ನು ಒಬ್ಬ ವ್ಯಕ್ತಿ ಸ್ವೀಕರಿಸುತ್ತಾರೆ ಎಂದರೆ ಆ ವ್ಯಕ್ತಿಯ ಅಭಿಪ್ರಾಯಕ್ಕೆ ಬೆಲೆ ಇದೆ ಎಂದರ್ಥ. ಆದರೆ ಒಂದು ವೇಳೆ ಬೆಲೆ ಇರುವ ಸಲಹೆ ನೀಡಿದಾಗಲೂ ಕೂಡ ಆ ಸಲಹೆಯನ್ನು ಸ್ವೀಕರಿಸದೇ ಇದ್ದಲ್ಲಿ ಎಸ್ ನೀವು ಅಂದುಕೊಳ್ಳುವುದು ನಿಜ. ಆ ವ್ಯಕ್ತಿ ನಿಮ್ಮನ್ನು ಗೌರವಿಸುವುದಿಲ್ಲ ಎಂದೇ ಅರ್ಥ. ಕೆಲವು ಸಲ ಕೆಲವರ ಸಲಹೆಯನ್ನು ಹಲವು ಕಾರಣಗಳಿಂದ ಸ್ವೀಕರಿಸದೇ ಇರುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಸಲಹೆಯನ್ನು ಪದೇ ಪದೇ ಸ್ವೀಕರಿಸದೇ ಇದ್ದಲ್ಲಿ ಖಂಡಿತ ನಿಮ್ಮ ಮೇಲಿನ ಅಗೌರವದ ಕಾರಣದಿಂದಲೇ ಸರಿ.

3. ನಿಮ್ಮ ಸಂಗಾತಿ ಉದ್ದೇಶಪೂರ್ವಕವಾಗಿ ಇತರರೊಂದಿಗೆ ಚಲ್ಲಾಟವಾಡುತ್ತಾರೆ
ನಿಮ್ಮ ಸಂಗಾತಿ ಬೇರೆಯವರ ಜೊತೆಗೆ ಚಲ್ಲಾಟವಾಡುತ್ತಿರಬಹುದು ಮತ್ತು ನೀವದನ್ನು ಈ ಹಿಂದೆ ಕಡೆಗಣಿಸಿರಬಹುದು. ಆದರೆ ಹೀಗೆ ಒಂದು ಸಂಬಂಧದಲ್ಲಿ ಚಲ್ಲಾಟವಾಡುವಿಕೆ ಖಂಡಿತ ಉತ್ತಮ ಸಂಬಂಧದ ಲಕ್ಷಣವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.ಒಂದು ವೇಳೆ ನಿಮ್ಮ ಸಂಗಾತಿಯು ನಿಮ್ಮ ಸ್ನೇಹಿತೆ/ತ ರ ಜೊತೆಗೆ ಅಥವಾ ಇನ್ಯಾವುದೇ ಇತರ ಸ್ನೇಹಿತರ ಜೊತೆಗೆ ಚಲ್ಲಾಟವಾಡುತ್ತಿದ್ದರೆ ಖಂಡಿತ ಅದು ನಿಮ್ಮ ಸಂಬಂಧಕ್ಕೆ ಅಗೌರವ ಸೂಚಿಸುವ ಲಕ್ಷಣಗಳಲ್ಲಿ ಒಂದಾಗಿರುತ್ತದೆ.

4. ನಿಮ್ಮ ಇಷ್ಟ ಮತ್ತು ಇಷ್ಟವಿಲ್ಲದ ವಿಚಾರಗಳಿಗೆ ಅವರು ಬೆಲೆ ಕೊಡುವುದಿಲ್ಲ
ಸಂಗಾತಿಗಳು ಪರಸ್ಪರರ ಇಷ್ಟ ಮತ್ತು ಇಷ್ಟಪಡದ ವಿಚಾರಗಳನ್ನು ನೋಡಿಕೊಳ್ಳುವುದು ಸರ್ವೇಸಾಮಾನ್ಯ. ಅವರು ಹಾಗೆ ಕಾಳಜಿ ತೆಗೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಪ್ರೀತಿ ಮತ್ತು ಗೌರವ. ನಿಮ್ಮ ಇಷ್ಟ ಮತ್ತು ಇಷ್ಟಪಡದ ವಿಚಾರವನ್ನು ಕಡೆಗಾಣಿಸುವುದು ಮತ್ತು ನಿಮ್ಮ ನಿರ್ಧಾರಗಳು, ಅಭಿಪ್ರಾಯಗಳು ಮತ್ತು ಯೋಚನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದು ಇತ್ಯಾದಿ ಸಂಬಂಧದಲ್ಲಿ ಅಗೌರವ ಇರುವುದರ ಲಕ್ಷಣವಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಬೆಲೆ ನೀಡದಿರುವಿಕೆಯು ಖಂಡಿತ ಆತ/ಅವಳು ನಿಮ್ಮನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ.

5. ತಪ್ಪಾಗಿರುವ ವಿಚಾರಕ್ಕೆ ನಿಮ್ಮ ಸಂಗಾತಿ ನಿಮ್ಮನ್ನೇ ಯಾವಾಗಲೂ ದೂಷಿಸುತ್ತಾರೆ
ಯಾವುದೇ ಕೆಲಸ ಇರಲಿ, ವಿಚಾರವಿರಲಿ ಅದರಲ್ಲಿ ತಪ್ಪಾಗಿದ್ದಲ್ಲಿ ಆ ತಪ್ಪನ್ನು ಯಾವಾಗಲೂ ನಿಮ್ಮ ಸಂಗಾತಿ ನಿಮ್ಮದೇ ಎಂದು ದೂಷಿಸುತ್ತಾರೆಯೇ? ಹಾಗಾದ್ರೆ ಖಂಡಿತ ಅದು ಅವರು ನಿಮಗೆ ತೋರಿಸುತ್ತಿರುವ ಅಗೌರವವೇ ಸರಿ. ಪದೇ ಪದೇ ಇಂತಹ ಘಟನೆಗಳು ಮರುಕಳಿಸಿ ನಿಮಗೆ ಬೇಸರವಾಗುತ್ತಿದ್ದರೆ ಒಮ್ಮೆ ಯಾಕೆ ಹೀಗಾಗುತ್ತಿದೆ ಎಂಬ ಬಗ್ಗೆ ಯೋಚಿಸಿ. ಬ್ಲೇಮ್ ಗೇಮ್ ನ್ನು ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮೊಡನೆ ಆಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿ. ತನ್ನ ತಪ್ಪನ್ನೂ ಕೂಡ ನಿಮ್ಮ ಮೇಲೆಯೇ ಹೊರಿಸಿ ನಿಮ್ಮನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಮ್ಮ ಸಂಗಾತಿ ನಿಲ್ಲಿಸುತ್ತಿದ್ದಾರಾದರೆ ನೀವು ಅವರಿಂದ ಅಗೌರವಕ್ಕೆ ತುತ್ತಾಗುತ್ತಿದ್ದೀರಿ ಎಂದರ್ಥ.

6. ನಿಮ್ಮ ಭಾವನೆಗಳಿಗೆ ನಿಮ್ಮ ಸಂಗಾತಿ ಯಾವಾಗಲೂ ಬೇಸರ ಮಾಡುತ್ತಾರೆ
ಉದ್ದೇಶಪೂರ್ವಕವಲ್ಲದೆ ಕೆಲವೊಮ್ಮೆ ನೀವು ನಿಮ್ಮ ಸಂಗಾತಿಗೆ ನಿಮ್ಮ ಸಂಗಾತಿ ನಿಮಗೆ ನೋವುಂಟು ಮಾಡಿರಬಹುದು. ಸ್ವಲ್ಪ ಸಮಯದ ನಂತರ ಸಂಗಾತಿಯ ಬಳಿ ಕ್ಷಮೆ ಕೇಳುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಂಡಿರಬಹುದು ಮತ್ತು ಪುನಃ ಅದೇ ರೀತಿಯ ಘಟನೆ ಪುನಾರಾವರ್ತನೆಯಾಗದಂತೆ ತಡೆಯುವುದು ಬಹಳ ಒಳ್ಳೆಯದು. ಆದರೆ ಯಾವಾಗ ನಿಮ್ಮ ಸಂಗಾತಿಯು ಪದೇ ಪದೇ ನಿಮ್ಮನ್ನು ದುಃಖಿಸುತ್ತಲೇ ಇರುತ್ತಾರೆ ಮತ್ತು ನಿಮ್ಮಿಂದ ದೂರಹೋಗಲು ಪ್ರಯತ್ನಿಸುತ್ತಾರೋ ಆಗ ಅದು ನಿಮಗೆ ಅವರು ತೋರುವ ಅಗೌರವವಾಗಿರುತ್ತದೆ. ಅವರು ನಿಮ್ಮ ಭಾವನೆಗೆ ಬೇಸರ ಪಡಿಸಿದ ನಂತರವೂ ಕೂಡ ಯಾವುದೇ ಪಶ್ಚಾತ್ತಾಪ ಅನುಭವಿಸದೇ ತಾವೇ ಬೆಸ್ಟ್ ಎಂಬಂತೆ ವರ್ತಿಸುತ್ತಿದ್ದರೆ ಖಂಡಿತ ಅದು ನಿಮ್ಮ ಮೇಲಿನ ಅಗೌರವದ ಕಾರಣದಿಂದಲೇ ಆಗಿರುತ್ತದೆ.

7. ನಿಮಗಾಗಿ ನಿಮ್ಮ ಸಂಗಾತಿ ಸಮಯ ಮೀಸಲಿಡುವುದೇ ಇಲ್ಲ
ಆರೋಗ್ಯಕರವಾದ ಸಂಬಂಧದಲ್ಲಿ ಸಂಗಾತಿಗಳಿಬ್ಬರೂ ಕೂಡ ಯಾವುದೇ ಕೆಲಸದಲ್ಲಿ ಸಮನಾಗಿ ಪಾಲ್ಗೊಳ್ಳುತ್ತಾರೆ ಮತ್ತು ಒಂದೇ ರೀತಿಯಾಗಿ ಶ್ರಮ ವಹಿಸುತ್ತಾರೆ.ಸಂಬಂಧದಲ್ಲಿ ಬೇಸರ ಕಳೆಯುವುದಕ್ಕೆ ಯಾವಾಗಲೂ ನೀವೊಬ್ಬರೆ ಪ್ಲಾನ್ ಮಾಡುವುದಲ್ಲ. ಇಬ್ಬರಲ್ಲೂ ಹೊಂದಾಣಿಕೆಯ ಅಗತ್ಯವಿರುತ್ತದೆ. ಸಂಬಂಧದಲ್ಲಿ ಉತ್ತಮ ಜೀವಂತಿಕೆ ಇರಬೇಕು ಎಂದರೆ ಇಬ್ಬರೂ ಸಮನಾಗಿ ಸಮಯ ವ್ಯಯಿಸುವುದು ಅತ್ಯವಶ್ಯಕ. ಆದರೆ ನಿಮ್ಮ ಸಂಗಾತಿ ಯಾವಾಗಲೂ ಕೂಡ ಬ್ಯುಸಿಯಾಗಿದ್ದು ನಿಮಗಾಗಿ ಸಮಯ ಮೀಸಲಿಡುವುದಕ್ಕೆ ಇಚ್ಛಿಸುವುದೇ ಇಲ್ಲವಾದರೆ, ನೀವು ಮಾಡಿರುವ ಪ್ಲಾನ್ ನಲ್ಲಿ ಭಾಗವಹಿಸುವುದಕ್ಕೆ ಬಯಸುವುದೇ ಇಲ್ಲವಾದಲ್ಲಿ ಖಂಡಿತ ಅವರಿಗೆ ನಿಮ್ಮ ಸಂಬಂಧದ ಮೇಲೆ ಗೌರವವಿಲ್ಲ ಎಂದು ಭಾವಿಸಬಹುದು.

8. ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಸಂಗಾತಿಯ ಆಶ್ಚರ್ಯಕರ ವರ್ತನೆ
ಅಗೌರವವಾಗಿ ಕಾಣುವಿಕೆಯಲ್ಲಿ ಅತ್ಯಂತ ಕೆಟ್ಟದ್ದೆಂದರೆ ಸಾರ್ವಜನಿಕ ಸ್ಥಳದಲ್ಲಿ ಅವರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು. ಸಾರ್ವಜನಿಕ ಸ್ಥಳದಲ್ಲಿ ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮೊಡನೆ ಕಿರಿಕ್ ಮಾಡುವುದು, ಕೈ ಮಾಡುವುದು ಅಥವಾ ಜಗಳಕ್ಕಿಳಿಯುವುದು ಮಾಡಿದರೆ ಅದಕ್ಕಿಂತ ಅಗೌರವ ತೋರುವಿಕೆ ಮತ್ತೊಂದಿಲ್ಲ. ನಿಮ್ಮನ್ನು ಬೆಲೆಯಿಲ್ಲದ ವಸ್ತುವಿನಂತೆ ಪರಿಗಣಿಸಿ ಕೆಟ್ಟದಾಗಿ ನಡೆಸಿಕೊಳ್ಳುವಿಕೆಯು ಖಂಡಿತ ನಿಮ್ಮ ಆತ್ಮಗೌರವಕ್ಕೆ ಅವರು ನೀಡುವ ಧಕ್ಕೆಯಾಗಿರುತ್ತದೆ.ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಸಂಗಾತಿಯು ತಪ್ಪು ಮಾಡಿ ನಿಮ್ಮನ್ನು ಅಗೌರವದಿಂದ ನಡೆಸಿದರೆ ಅಲ್ಲಿಯೇ ಅವರನ್ನು ಜಗಳಕ್ಕಿಳಿದು ಸರಿಪಡಿಸುವುದಕ್ಕೆ ಮುಂದಾಗದಿರಿ. ಬದಲಾಗಿ ವಯಕ್ತಿಕ ಜಾಗ ತಲುಪಿದ ಮೇಲೆ ಸಮಸ್ಯೆ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಆಲೋಚಿಸಿ.

9. ನಿಮ್ಮ ಸಂಗಾತಿ ಅವರ ಪ್ಲಾನ್ ಗಳಲ್ಲಿ ಯಾವಾಗಲೂ ನಿಮ್ಮನ್ನು ದೂರವಿಟ್ಟಿರುತ್ತಾರೆ
ನೀವಿಬ್ಬರೂ ಸಂಗಾತಿ ಆಗಿರುವುದರಿಂದಾಗಿ ನಿಮ್ಮೆಲ್ಲಾ ಭವಿಷ್ಯದ ಯೋಜನೆಗಳಲ್ಲಿ ನಿಮ್ಮ ಸಂಗಾತಿಯನ್ನು ಸೇರಿಸಿರುವುದು ಬಹಳ ಮುಖ್ಯವಾಗುತ್ತದೆ. ನಿಜ ಹೇಳಬೇಕು ಎಂದರೆ ಇಬ್ಬರೂ ಒಟ್ಟಿಗೆ ಸೇರಿ ಪ್ಲಾನ್ ಮಾಡಿಕೊಳ್ಳುವುದು ಬಹಳ ಒಳ್ಳೆಯದು ಮತ್ತು ಆ ಪ್ಲಾನ್ ನಲ್ಲಿ ಇಬ್ಬರೂ ಸಮನಾಗಿರುವುದು ಬಹಳ ಮುಖ್ಯ. ಆದರೆ ಒಂದು ವೇಳೆ ನಿಮ್ಮ ಸಂಗಾತಿಯ ತನ್ನ ಪ್ಲಾನ್ ನಲ್ಲಿ ಯಾವಾಗಲೂ ನಿಮ್ಮನ್ನು ದೂರವಿಟ್ಟಿರುತ್ತಾರೆ ಎಂದಾದರೆ ಖಂಡಿತ ಅವರು ನಿಮಗೆ ಅಗೌರವ ತೋರುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು.

10. ನಿಮ್ಮ ಸಂಗಾತಿ ನಿಮ್ಮನ್ನು ನಿಂದಿಸುತ್ತಾರೆ
ಯಾವುದೇ ಸಂಬಂಧಕ್ಕೆ ಮಾನಸಿಕ, ದೈಹಿಕ ಅಥವಾ ಯಾವುದೇ ರೀತಿಯ ನಿಂದನೆಯೂ ಕೂಡ ಒಳ್ಳೆಯದಲ್ಲ. ನೀವು ಯಾರಿಗಾದರೂ ಯಾವಾಗಲಾದರೂ ನಿಂದಿಸಿದರೆ ಅವನು/ಳು ತನ್ನ ಗೌರವ ಮತ್ತು ವಿಶ್ವಾಸವನ್ನು ಕಳೆದುಕೊಳ್ಳಬಹುದು. ದಂಪತಿಗಳು ಮುದ್ದಾದ ಮತ್ತು ತಮಾಷೆಯ ಹೆಸರುಗಳಿಂದ ಕರೆಯುವ ಸಾಕಷ್ಟು ಸನ್ನಿವೇಶಗಳಿರುತ್ತದೆ.ಒಬ್ಬರಿಗೊಬ್ಬರು ಕಾಳೆಲೆದುಕೊಳ್ಳುವುದಕ್ಕೆ ಸಾಕಷ್ಟು ಕಾರಣಗಳಿರುತ್ತದೆ ಆದರೆ ಇದು ಪದೇ ಪದೇ ಮರುಕಳಿಸುತ್ತಿದ್ದರೆ ಖಂಡಿತ ಅವರು ನಿಮ್ಮನ್ನು ಅಗೌರವಿಸುತ್ತಿದ್ದಾರೆ ಎಂದು ಅಂದುಕೊಳ್ಳಬಹುದು. ಸಂಗಾತಿಗಳ ನಡುವೆ ನಿಂದಿಸುವಿಕೆ ಕೇವಲ ಕಾಲೆಳೆದು ಮುದ್ದಿಸುವಂತಿರಬೇಕೇ ವಿನಃ ಅದು ನೋವುಂಟು ಮಾಡುವ ಉದ್ದೇಶಪೂರ್ವದ ಯೋಜನೆಯಾಗಿದ್ದರೆ ಆ ಸಂಬಂಧದಲ್ಲಿ ಏನೋ ತಪ್ಪಾಗಿದೆ ಎಂದೇ ಅರ್ಥ.

11. ಸಂಗಾತಿಯ ಬಗ್ಗೆ ಪದೇ ಪದೇ ಕೆಟ್ಟದಾಗಿ ಮಾತನಾಡುವುದು
ಯಾರನ್ನಾದರೂ ಕೆಟ್ಟದಾಗಿಸುವಿಕೆಯು ಖಂಡಿತ ಸಭ್ಯವಾದ ಕೆಲಸ ಅಲ್ಲವೇ ಅಲ್ಲ. ಸಂಗಾತಿಯ ಇಂತಹ ವರ್ತನೆಯಿಂದ ನೀವು ಬೇಸರಗೊಂಡಿರಬಹುದು. ಇಂತಹ ಸಂದರ್ಬದಲ್ಲಿ ನೀವು ವಿಚಾರವನ್ನು ಅವರೊಂದಿಗೆ ಸೂಕ್ಷ್ಮವಾಗಿ ಚರ್ಚೆ ಮಾಡಿ. ನಿಮ್ಮ ಸಂಗಾತಿಯ ಕೆಲವು ಗುಣಲಕ್ಷಣಗಳನ್ನು ನೀವು ಇಷ್ಟಪಡದ ಕಾರಣ ಅವರನ್ನು ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ. ಇದು ನೀವು ನಿಮ್ಮ ಸಂಗಾತಿಯನ್ನು ಅಗೌರವದಿಂದ ಕಾಣುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

12. ಸಂಗಾತಿಯು ಯಾವಾಗಲೂ ನಿಮ್ಮನ್ನು ಟೀಕಿಸುತ್ತಾರೆಯೇ?
ಎಲ್ಲರದರಲ್ಲೂ ಸರಿಯಾಗಿರುವವರು ಯಾರೂ ಇಲ್ಲ. ಸಮಯ ಅಷ್ಟೇ. ಸರಿಯಾದ ರೀತಿಯ ಟೀಕೆಯು ನಿಮ್ಮನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸುವಲ್ಲಿ ನೆರವು ನೀಡಬಹುದು. ಆರೋಗ್ಯಕರವಾಗಿರುವ ಸಂಬಂಧದಲ್ಲಿ ಒಬ್ಬರಿಗೊಬ್ಬರ ಬೆಂಬಲವಿರುತ್ತದೆ ಮತ್ತು ಪ್ರೋತ್ಸಾಹಿಸುವ ಗುಣಸ್ವಭಾವವಿರುತ್ತದೆ. ಆದರೆ ನಿಮ್ಮ ಸಂಗಾತಿಯು ಯಾವಾಗಲೂ ಕೂಡ ನಿಮ್ಮ ಆಲೋಚನೆ, ಅಭಿಪ್ರಾಯ, ಪ್ರದರ್ಶನ ಮತ್ತು ಆಯ್ಕೆಗಳ ಬಗ್ಗೆ ಟೀಕೆಯನ್ನೇ ಮಾಡುತ್ತಿರುತ್ತಾರಾದರೆ ನಿಮ್ಮನ್ನು ಅವರು ಅಗೌರವದಿಂದ ನಡೆಸುತ್ತಿದ್ದಾರೆ ಎಂದು ಊಹಿಸಬಹುದು. ನಿಮ್ಮ ಸಂಗಾತಿ ಸಾಕಷ್ಟು ತೀರ್ಪುಗಾರ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ನಿಮ್ಮ ಅವರು ಗೌರವದಿಂದ ಕಾಣುತ್ತಿಲ್ಲ ಎಂಬುದು ಟೀಕೆಯಿಂದ ಅರ್ಥವಾಗುತ್ತದೆ.