For Quick Alerts
ALLOW NOTIFICATIONS  
For Daily Alerts

ಹುಡುಗ-ಹುಡುಗಿಯರು 18 ವರ್ಷ ದಾಟಿದ ಮೇಲೆ ಮಾಡಬಾರದ ಕೆಲಸಗಳು

|

ಹುಚ್ಚು ಕೋಡಿ ಮನಸ್ಸು, ಹದಿನಾರರ ವಯಸ್ಸು ಎಂಬ ನಾಣ್ಣುಡಿಯಂತೆ, ಹದಿಹರೆಯದ ವಯಸ್ಸಿನಲ್ಲಿ ಪ್ರತಿಯೊಬ್ಬ ಹುಡುಗ-ಹುಡುಗಿಯರು ಸಾಕಷ್ಟು ತಪ್ಪುಗಳನ್ನು ಮಾಡಿರುತ್ತಾರೆ. ಆದರೆ 18 ವರ್ಷ ತುಂಬಿದ ಮೇಲೂ ಇಂತಹ ತಪ್ಪುಗಳನ್ನು ಮಾಡುವುದು ಸರಿಯಲ್ಲ. ಇದು ಹದಿಹರೆಯದಿಂದ ವಯಸ್ಕರ ವರ್ಗಕ್ಕೆ ಕಾಲಿಡುತ್ತಿರುವ ಸಮಯ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ತಪ್ಪು ನಿರ್ಧಾರವು ಅವನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದು ಹುಡುಗನಾಗಲಿ ಅಥವಾ ಹುಡುಗಿಯಾಗಲಿ, ಇಬ್ಬರೂ 18 ನೇ ವಯಸ್ಸಿನ ನಂತರ ಈ ತಪ್ಪುಗಳನ್ನು ಮಾಡಬಾರದು.

ಹುಡುಗ-ಹುಡುಗಿಯರು 18 ನೇ ವಯಸ್ಸಿನ ನಂತರ ಮಾಡಬಾರದ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಅಧ್ಯಯನದ ಕಡೆಗೆ ನಿರ್ಲಕ್ಷ್ಯ:

ಅಧ್ಯಯನದ ಕಡೆಗೆ ನಿರ್ಲಕ್ಷ್ಯ:

18 ನೇ ವಯಸ್ಸು ಅಂದರೆ ಯುವಕರು ತಮ್ಮ ವೃತ್ತಿಜೀವನಕ್ಕೆ ಕಾಲಿಡುವ ಹಂತ. ಆದರೆ ಈ ಸಮಯದಲ್ಲಿ ಅವರು ಅಧ್ಯಯನದ ಕಡೆಗೆ ನಿರ್ಲಕ್ಷ್ಯ ವಹಿಸಿ, ತಮ್ಮ ಗಮನವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ. ಇದರಿಂದ ಸಮಯ ವ್ಯರ್ಥವಾಗುವುದು. ಇದು ಅವರ ಭವಿಷ್ಯದ ವಿಚಾರದಲ್ಲಿ ತಪ್ಪು ನಿರ್ಧಾರವಾಗಬಹುದು. ಆದ್ದರಿಂದ ಹುಡುಗ-ಹುಡುಗಿ ಇಬ್ಬರೂ ಈ ವಯಸ್ಸಿನಲ್ಲಿ ಎಲ್ಲದರಲ್ಲೂ ಸಮತೋಲನವನ್ನು ಕಾಯ್ದುಕೊಂಡು, ಅವರ ಅಧ್ಯಯನದತ್ತ ಗಮನ ಹರಿಸಬೇಕು.

ವ್ಯರ್ಥ ಖರ್ಚು:

ವ್ಯರ್ಥ ಖರ್ಚು:

ಈ ವಯಸ್ಸಿನಲ್ಲಿ ಹುಡುಗರು ಮತ್ತು ಹುಡುಗಿಯರು ಮನಬಂದಂತೆ ಹಣವನ್ನು ಖರ್ಚು ಮಾಡುತ್ತಾರೆ. ಅದು ಅವರ ಪೋಷಕರಿಂದ ಪಡೆದ ಹಣ. ಅದೇನಾಗಲೀ, ತಮ್ಮ ಹಣ ಅಥವಾ ಪೋಷಕರ ಹಣವಾಗಲಿ, ಹುಡುಗ ಮತ್ತು ಹುಡುಗಿ ಇಬ್ಬರೂ ದುಂದು ವೆಚ್ಚದಲ್ಲಿ ತೊಡಗಬಾರದು. ಅವರ ಪಾಕೆಟ್ ಮನಿಯನ್ನು ಅಗತ್ಯವಿರುವ ವಸ್ತುಗಳ ಮೇಲೆ ಮಾತ್ರ ಖರ್ಚು ಮಾಡುವುದು ಒಳ್ಳೆಯದು.

ಭ್ರಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು:

ಭ್ರಮೆಯಿಂದ ನಿರ್ಧಾರ ತೆಗೆದುಕೊಳ್ಳುವುದು:

ಈ ವಯಸ್ಸು ತುಂಬಾ ಸೂಕ್ಷ್ಮವಾಗಿದೆ. ಅದು ಹುಡುಗ ಅಥವಾ ಹುಡುಗಿಯಾಗಲಿ, ಭ್ರಮೆಯನ್ನು ನಂಬಿ ತಪ್ಪು ಕ್ರಮಗಳನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಹುಡುಗ ಮತ್ತು ಹುಡುಗಿಯರು ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ನೀವು ಯಾವುದೇ ನಿರ್ಧಾರ ಅಥವಾ ಕ್ರಮ ತೆಗೆದುಕೊಳ್ಳುವ ಮೊದಲು, ಅದರ ಬಗ್ಗೆ ಹತ್ತು ಬಾರಿ ಯೋಚಿಸಿ.

ಪ್ರೀತಿ ವಿಚಾರದಲ್ಲಿ ಜಾಗೃತರಾಗಿರಿ:

ಪ್ರೀತಿ ವಿಚಾರದಲ್ಲಿ ಜಾಗೃತರಾಗಿರಿ:

ಹುಡುಗ-ಹುಡುಗಿಯರು ಈ ವಯಸ್ಸಿಗೆ ಬಂದ ಕೂಡಲೇ ಪ್ರೀತಿ, ಪ್ರೇಮ ಎಂದು ಪರಸ್ಪರ ವಿರುದ್ಧ ಲಿಂಗಗಳತ್ತ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ. ನಿಮ್ಮ ವಿಚಾರದಲ್ಲೂ ಈ ರೀತಿಯ ಏನಾದರೂ ನಡೆಯುತ್ತಿದ್ದರೆ, ತುಂಬಾ ಹುಷಾರಾಗಿರಿ. ಪ್ರೀತಿ ಮಾಡುವುದು ತಪ್ಪಲ್ಲ, ಆದರಿಂದ ಇದರಿಂದ ಇತರ ಸಂಬಂಧಗಳನ್ನು ದೂರತಳ್ಳುವುದು, ಅಧ್ಯಯನವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನಿಮ್ಮ ಭವಿಷ್ಯ ಹಾಳಾಗುತ್ತದೆ.

ವೃತ್ತಿಜೀವನದತ್ತ ಗಮನ ಹರಿಸದೇ ಇರುವುದು:

ವೃತ್ತಿಜೀವನದತ್ತ ಗಮನ ಹರಿಸದೇ ಇರುವುದು:

18 ವರ್ಷದ ನಂತರ ಮಕ್ಕಳ ಮೂಲ ಶಿಕ್ಷಣ ಪೂರ್ಣಗೊಂಡಿರುವುದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ತಮ್ಮ ವೃತ್ತಿಜೀವನದ ಬಗ್ಗೆ ನಿರ್ಲಕ್ಷ್ಯ ವಹಿಸುವ ಬದಲು, ಹುಡುಗ ಮತ್ತು ಹುಡುಗಿ ಇಬ್ಬರೂ ತಮ್ಮ ಜೀವನವನ್ನು ಮುಂದೆ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡಬೇಕು. ಭವಿಷ್ಯ ಚೆನ್ನಾಗಿರಬೇಕಾದರೆ ಉದ್ಯೋಗ ಅತ್ಯಮೂಲ್ಯವಾಗಿ ಬೇಕೇ ಬೇಕು. ಆದ್ದರಿಂದ ಅದರ ಮಹತ್ವ ಅರಿತು ವರ್ತಿಸುವುದು ಮುಖ್ಯ.

English summary

Relationship Tips for Teens: Boys and Girls Should Not Do These Things at the age of 18 in Kannada

Here we talking about Relationship Tips for Teens: Boys and Girls Should Not Do These Things at the age of 18 in Kannada, read on
Story first published: Wednesday, June 9, 2021, 17:29 [IST]
X
Desktop Bottom Promotion