For Quick Alerts
ALLOW NOTIFICATIONS  
For Daily Alerts

ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ

|

ಮನುಷ್ಯನ ಮನಸ್ಥಿತಿ ಎನ್ನುವುದು ಮರದಲ್ಲಿರುವ ಮರ್ಕಟವಿದ್ದಂತೆ. ಒಮ್ಮೆ ಇದ್ದಾಗ ಮತ್ತೊಮ್ಮೆ ಇರುವುದಿಲ್ಲ. ಅದೇ ರೀತಿ ಕೆಲವರ ವರ್ತನೆ ಕೂಡ ಇರುವುದು. ಇವರೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಅದರಲ್ಲೂ ಹೆಣ್ಣು ಮಕ್ಕಳ ಮನಸ್ಸಂತೂ ಇನ್ನೂ ವಿಚಿತ್ರ. ಈ ಕ್ಷಣ ನಗುತ್ತಿದ್ದರೆ, ಅರೆ ಘಳಿಗೆಯಲ್ಲಿ ಅಳುತ್ತಿರುತ್ತಾರೆ. ಇವರು ಯಾವ ಸಂದರ್ಭದಲ್ಲಿ ಹೇಗೆ ಇರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಕಠಿಣ. ಅದರಲ್ಲೂ ನಿಮ್ಮ ಪ್ರೇಯಸಿಯು ಇಂತಹ ಮನಸ್ಥಿತಿ ಹೊಂದಿದ್ದರೆ ಆಗ ಅವರನ್ನು ನಿಭಾಯಿಸುವುದು ತುಂಬಾ ಸವಾಲಿನ ಕೆಲಸ. ಯಾಕೆಂದರೆ ಅವರ ಮನಸ್ಥಿತಿ ತಿಳಿದುಕೊಂಡು ನೀವು ವ್ಯವಹರಿಸಬೇಕಾಗುತ್ತದೆ. ನಿಮಗೆ ಸಂಬಂಧದ ಆರಂಭದಲ್ಲಿ ಇದು ತುಂಬಾ ಕಠಿಣ ಹಾಗೂ ಹುಚ್ಚು ಹಿಡಿಸುತ್ತಿದೆ ಎಂದು ಅನಿಸಬಹುದು. ಆದರೆ ನೀವು ಬಳಿಕ ಇದಕ್ಕೆ ಹಾಗೆ ಹೊಂದಿಕೊಂಡು ಹೋಗಬಹುದು. ಇದು ಹೇಗೆ ಎಂಬುದನ್ನು ಈ ಕೆಳಗೆ ನೀಡಿದ್ದೇವೆ.

ನಿಮ್ಮ ಸಂಗಾತಿಯನ್ನು ಸಮಾಧಾನ ಪಡಿಸುವ ಮಾರ್ಗ ಇಲ್ಲಿದೆ:

ನಿಮ್ಮ ಸಂಗಾತಿಯ ಸನ್ನಿವೇಶವನ್ನು ಒಪ್ಪಿಕೊಳ್ಳಿ:

ನಿಮ್ಮ ಸಂಗಾತಿಯ ಸನ್ನಿವೇಶವನ್ನು ಒಪ್ಪಿಕೊಳ್ಳಿ:

ನಿಮ್ಮ ಸಂಗಾತಿ ಹೀಗೆ ಆಡುತ್ತಿರುವುದನ್ನು ಮೊದಲು ನೀವು ಒಪ್ಪಿಕೊಳ್ಳಿ. ಅದರ ಜೊತೆಗೆ ಆಕೆಯ ಭಾವನೆಗಳ ಮೇಲೆ ನಿಮಗೆ ಯಾವುದೇ ರೀತಿಯ ನಿಯಂತ್ರಣವಿಲ್ಲ ಎನ್ನುವುದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಪ್ರೇಯಸಿ ಅಷ್ಟೇ ಅಲ್ಲ, ಯಾರೇ ಆದರೂ ಅವರ ಭಾವನೆಗಳ ಮೇಲೆ ನೀವು ನಿಯಂತ್ರಣ ಸಾಧಿಸಲು ಆಗುವುದಿಲ್ಲ. ಕೆಲವರಿಗೆ ತಮ್ಮ ಭಾವನೆಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಇನ್ನು ಬೇರೆಯವರ ಭಾವನೆಗಳು ದೂರದ ಮಾತು. ಆದ್ದರಿಂದ ಆಕೆಯನ್ನು ಒಪ್ಪೊಕೊಳ್ಳಿ.

ಆಕೆಯ ಭಾವನೆಗಳಿಗೂ ಗೌರವ ಕೊಡಿ:

ಆಕೆಯ ಭಾವನೆಗಳಿಗೂ ಗೌರವ ಕೊಡಿ:

ನಿಮ್ಮ ಸಂಗಾತಿಯ ಭಾವನೆಗಳೂ ಯಾವಾಗಲೂ ತುಂಬಾ ಹುಚ್ಚುತನದ್ದು ಎಂದು ನೀವು ಭಾವಿಸಿದರೆ ಅದು ಖಂಡಿತವಾಗಿಯೂ ತಪ್ಪು. ಕೆಲವೊಂದು ಸಲ ನೀವು ಆಕೆಗೆ ತನ್ನದೇ ಆಗಿರುವ ಭಾವನೆಗಳಲ್ಲಿ ಇರಲು ಬಿಡಿ. ಆಕೆಯ ಭಾವನೆಗಳನ್ನು ಸುಧಾರಣೆ ಮಾಡುವುದು ನಿಮ್ಮ ಕೆಲಸವಲ್ಲ. ಬದಲಾಗಿ ಅದನ್ನು ಒಪ್ಪಿಕೊಂಡು ಜೀವನ ಮಾಡುವುದೇ ನಿಜವಾದ ಪ್ರೀತಿ.

ನಿಮ್ಮ ಭಾವನೆಗಳ ಮೇಲೆ ಹಿಡಿತವಿರಲಿ:

ನಿಮ್ಮ ಭಾವನೆಗಳ ಮೇಲೆ ಹಿಡಿತವಿರಲಿ:

ಇದು ಬಹಳ ಮುಖ್ಯ. ಸಂಗಾತಿ ಅಥವಾ ಪ್ರೇಯಸಿಯು ಒಂದು ಭಾವನೆಯಲ್ಲಿದ್ದಾಳೆ ಎಂದಾದರೆ, ಆಗ ನೀವು ಕೂಡ ಇದೇ ಮನಸ್ಥಿತಿಯಲಿ ಇರಬೇಕು ಎಂದೇನಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಆಕೆ ತುಂಬಾ ಅಸಂತೋಷದಿಂದ ಇದ್ದರೆ, ನೀವು ಆಕೆಯ ಬದಿಯಲ್ಲಿ ಕುಳಿತುಕೊಂಡು ಬೇಸರ ಪಡಬೇಕಾಗಿಲ್ಲ. ನಿಮ್ಮ ಭಾವನೆಗಳು ಹಿಡಿತದಲ್ಲಿರಲಿ. ಇದನ್ನು ಹೇಳಿದಷ್ಟು ಸುಲಭವಾಗಿ ಮಾಡಲಾಗದು. ಆದರೆ ಜೀವನ ಹಾಗೂ ಪರಿಸ್ಥಿತಿಯ ಬಗ್ಗೆ ನಿಮ್ಮ ನಿಲುವು ಮುಖ್ಯವಾಗಿರುವುದು. ಶಾಂತವಾಗಿದ್ದುಕೊಂಡು ಆ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಆಕೆ ತುಂಬಾ ಅಸಮಾಧಾನದಿಂದ ಇದ್ದರೂ ಉತ್ಸಾಹದಿಂದ ಇರುವಂತೆ ಪ್ರೇರೇಪಿಸಿ. ಧನಾತ್ಮಕ ಮನಸ್ಥಿತಿಯು ಆಕೆಯನ್ನು ಖಂಡಿತವಾಗಿಯೂ ಬದಲಾಯಿಸುವುದು.

ಆಕೆಯ ಮನಸ್ಥಿತಿಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ:

ಆಕೆಯ ಮನಸ್ಥಿತಿಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ:

ನಿಮ್ಮ ಸಂಗಾತಿಯ ಮನಸ್ಥಿತಿ ಆಕೆಯ ಸಂದರ್ಭಕ್ಕನುಗುಣವಾಗಿ ಇರುತ್ತದೆ. ಆದರೆ ಅದನ್ನು ನಿಮ್ಮ ವೈಯಕ್ತಿಕತೆ ತೆಗೆದುಕೊಳ್ಳುವುದು ತಪ್ಪು. ಆಕೆಯ ಮನಸ್ಥಿತಿ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಆದರೆ ಅದನ್ನು ನಿರ್ಲಕ್ಷ್ಯಗೊಳಿಸಿದರೆ ಉತ್ತಮ. ಆಕೆ ಎಲ್ಲದಕ್ಕೂ ನಿಮ್ಮನ್ನು ದೂರುವಳು. ಆದರೆ ನೀವು ಇದನ್ನು ವೈಯಕ್ತಿಕವಾಗಿ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಆಕೆಯ ಮನಸ್ಥಿತಿಯು ಸರಿಯಾದ ವೇಳೆ ಮಾತನಾಡಿ ಮತ್ತು ಶಾಂತಿಯಿಂದ ಮಾತನಾಡಿ. ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೀವು ಆಕೆಯನ್ನು ದೂರುವುದಕ್ಕಾಗಿ ಮಾತನಾಡಲು ಹೋಗಬೇಡಿ. ಅದು ತಪ್ಪಾಗುತ್ತದೆ.

ಗಡಿಗಳನ್ನು ನಿರ್ಮಿಸಿ:

ಗಡಿಗಳನ್ನು ನಿರ್ಮಿಸಿ:

ಯಾವುದೇ ಸಂಬಂಧವಾದರೂ ಅಲ್ಲೊಂದು ಮಿತಿ ಅಥವಾ ಗಡಿಗಳು ಇರಲೇಬೇಕು. ಆಗ ಮಾತ್ರ ಅದು ಸುಗಮವಾಗಿ ಸಾಗಲು ನೆರವಾಗುವುದು. ನೀವು ಆಕೆಯ ಯಾವ ನಡವಳಿಕೆ ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ಆಕೆಯ ಮೇಲೆ ನಿಮ್ಮ ಪ್ರೀತಿಯು ಎಲ್ಲಾ ಸಮಯದಲ್ಲಿ ಇರುವುದು ಎಂಬುದನ್ನು ಅರ್ಥ ಮಾಡಿಸಿ. ಆದರೆ ಆಕೆ ಮನಬಂದಂತೆ ನಿಮ್ಮ ಮೇಲೆ ಕೋಪ ಮಾಡಲು ಅಥವಾ ದೂರಲು ಸಾಧ್ಯವಿಲ್ಲ ಎನ್ನುವುದನ್ನು ನೀವು ಕಡ್ಡಿಮುರಿದಂತೆ ಆಕೆಗೆ ತಿಳಿಸಿಬಿಡಿ.

English summary

How To Deal With Your Girlfriend's Or Wife's Mood Swings In Kannada

Here we told about How to Deal With Your Girlfriend's or Wife's Mood Swings in Kannada, have a look
Story first published: Friday, January 22, 2021, 14:28 [IST]
X
Desktop Bottom Promotion