For Quick Alerts
ALLOW NOTIFICATIONS  
For Daily Alerts

ಪ್ರೀತಿ ಉಳಿಸಿಕೊಳ್ಳುವ ಕೊನೆ ಪ್ರಯತ್ನ: 123 ದಿನಗಳ ಕಾಲ ಕೋಳದಲ್ಲಿ ಬಂಧಿಯಾದ ಜೋಡಿ

|

ಒಂದು ಹುಡುಗ-ಹುಡುಗಿ ಪ್ರೀತಿಯಲ್ಲಿ ಬೀಳುವಾಗ ಅಥವಾ ಮದುವೆ ಆಗುವಾಗ ತಮ್ಮ ಇಷ್ಟ-ಕಷ್ಟಗಳು ಎಷ್ಟು ಹೋಲಿಕೆಯಾಗುತ್ತವೆ ಎಂಬುದನ್ನು ನೋಡುವುದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ಮುರಿದು ಬೀಳುತ್ತಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಕೈಗೆ ಕೋಳ ಹಾಕಿಕೊಂಡು ಸುಮಾರು ನಾಲ್ಕು ತಿಂಗಳುಗಳ ಕಾಲ ಜೊತೆಗೇ ಇದ್ದರು. ಕೇಳೋಕೆ ಆಶ್ಚರ್ಯ ಆಗ್ತಾ ಇದಿಯಾ? ಏನಿದು ಕೋಳದ ಹಿಂದಿರುವ ಪ್ರೇಮ್ ಕಹಾನಿ ಎಂಬುದನ್ನು ಇಲ್ಲಿ ಹೇಳಿದ್ದೇವೆ, ನೋಡಿ.

ಯಾರಿದು ಜೋಡಿ?:

ಯಾರಿದು ಜೋಡಿ?:

ಪೂರ್ವ ಉಕ್ರೇನ್‌ನ ಖಾರ್ಕಿವ್ ಎಂಬಲ್ಲಿನ ಅಲೆಕ್ಸಾಂಡರ್ ಕುಡ್ಲೆ ಮತ್ತು ವಿಕ್ಟೋರಿಯಾ ಪುಸ್ಟೊವಿಟೋವಾ ಎಂಬ ಜೋಡಿ ಈ ವರ್ಷದ ಪ್ರೇಮಿಗಳ ದಿನದಂದು ತಮ್ಮನ್ನು ಕೈಕೋಳದ ಮೂಲಕ ಪರಸ್ಪರ ಬೆಸೆದುಕೊಂಡಿದ್ದರು. ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿ ತೂಗಾಡುತ್ತಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಜೋಡಿ ನಡೆಸಿದ ಕಡೇ ಪ್ರಯತ್ನ ಇದಾಗಿತ್ತು.

ಕೋಳ ಹಾಕಿಕೊಂಡೇ ಜೀವನ :

ಕೋಳ ಹಾಕಿಕೊಂಡೇ ಜೀವನ :

ಪ್ರೇಮಿಗಳ ದಿನದಂದು ಕೈಗೆ ಕೋಳ ಹಾಕಿಕೊಂಡ ಈ ಜೋಡಿ, ಪ್ರಯೋಗದ ಉದ್ದಕ್ಕೂ ಅವರು ಜೊತೆಯಾಗಿಯೇ ಜೀವಿಸಿದ್ದರು. ಶಾಪಿಂಗ್‌ಗೆ ಹೋಗುವುದು, ಆಹಾರ ಸೇವಿಸುವುದು, ಸಿಗರೇಟ್ ವಿರಾಮ, ಶೌಚಾಲಯ, ಸ್ನಾನಗೃಹ ಹೀಗೆ ಎಲ್ಲ ಖಾಸಗಿ ಕ್ಷಣಗಳಲ್ಲೂ ಅವರು ಒಟ್ಟೊಟ್ಟಿಗೇ ಬದುಕಿದ್ದಾರೆ.

123 ದಿನದ ನಂತರ ಬೇರೆಯಾದ ಜೋಡಿ:

123 ದಿನದ ನಂತರ ಬೇರೆಯಾದ ಜೋಡಿ:

ಮೊದಮೊದಲು ವಿರೋಧ ವ್ಯಕ್ತಪಡಿಸಿದ್ದ ಪುಸ್ಟೊವಿಟೋವಾ ಕೋಳ ತೆಗೆಯುವಾಗ ಕಣ್ಣೀರು ಹಾಕಿದ್ದರು. ಬರೋಬ್ಬರಿ 123 ದಿನಗಳವರೆಗೆ ಕೋಳದೊಂದಿಗೆ ಜೀವಿಸಿದ ಜೋಡಿ, ಕಳೆದ ಗುರುವಾರ ಎಲ್ಲಾ ಮಾಧ್ಯಮ ಮಿತ್ರರ ಎದುರು ಕೋಳವನ್ನು ಒಡೆದು ಪರಸ್ಪರ ಸ್ವತಂತ್ರರಾಗಿದ್ದಾರೆ. ಇಬ್ಬರೂ ಬೇರೆ ಬೇರೆಯಾಗಿ ಬದುಕುವ ನಿರ್ಧಾರ ಮಾಡಿದ್ದು, ಇಬ್ಬರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಅವರು, 'ಈ ಪ್ರಯೋಗ ನಮಗೆ ಸಾಕಷ್ಟು ಸತ್ಯಗಳನ್ನು ಬಹಿರಂಗಗೊಳಿಸಿದೆ, ಇಂತಹ ಸಾಹಸಕ್ಕೆ ಯಾವ ಜೋಡಿಯೂ ಕೈ ಹಾಕಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಯೋಗದಿಂದ ಕಲಿತ ಪಾಠ:

ಪ್ರಯೋಗದಿಂದ ಕಲಿತ ಪಾಠ:

‘ಇದರ ಮೂಲಕ ನಾವು ಒಳ್ಳೆ ಪಾಠ ಕಲಿತಿದ್ದೇವೆ. ಉಕ್ರೇನ್‌ ಜೋಡಿಯಾಗಲಿ, ವಿದೇಶದಲ್ಲಿರುವ ಯಾವುದೇ ಜೋಡಿಗಳಾಗಲಿ ಈ ಪ್ರಯೋಗ ಮಾಡದೇ ಇರುವುದು ಉತ್ತಮ. ವೈಯಕ್ತಿಕ ಜೀವನ ಎಂಬುದು ಬಹಳ ಮುಖ್ಯ. ಎಲ್ಲ ಸಂದರ್ಭದಲ್ಲೂ ನಾವು ಒಟ್ಟಿಗೆ ಇದ್ದೆವು. ಆದರೆ, ಒಂದು ದಿನವು ಕುಡ್ಲೆಗೆ ಸಂಬಂಧ ಕೊನೆಯಾಗುತ್ತಿರುವುದರ ಬಗ್ಗೆ ಯಾವುದೇ ನೋವಿರಲಿಲ್ಲ, ಒಂದು ಬಾರಿಯೂ ‘ಐ ಮಿಸ್‌ ಯು‘ ಎಂಬ ಮಾತನ್ನು ಆತ ಆಡಲಿಲ್ಲ. ಆದರೆ, ಅವನಿಂದ ಆ ಮಾತು ಕೇಳಲು ನಾನು ಸದಾ ಕಾತರಿಸುತ್ತಿದ್ದೆ,‘ ಎಂದು 29 ವರ್ಷದ ಪುಸ್ಟೊವಿಟೋವಾ ಹೇಳಿಕೊಂಡಿದ್ದಾರೆ.

'ನಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಡೆಸಿದ ಈ ಪ್ರಯತ್ನಕ್ಕಾಗಿ ನನಗೇನೂ ವಿಷಾದವಿಲ್ಲ. ಇದರಿಂದ ನನಗೆ ಗೊತ್ತಾಗಿದ್ದೇನೆಂದರೆ, ನಾವಿಬ್ಬರೂ ಸಮಾನ ಮನಸ್ಕರಲ್ಲ. ನಾವು ಸಂಪೂರ್ಣ ಭಿನ್ನರಾಗಿದ್ದೇವೆ ಎಂಬುದು', ಎಂದು ಕುಡ್ಲೆ ಹೇಳಿದ್ದಾರೆ.

ಕೋಳ ಹರಾಜಾಕುವ ನಿರ್ಧಾರ:

ಕೋಳ ಹರಾಜಾಕುವ ನಿರ್ಧಾರ:

ಈ ಜೋಡಿ ತಾವು ತೊಟ್ಟಿದ್ದ ಕೈಕೋಳವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ ಹಣ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ. ಬಂದ ಹಣದ ಒಂದು ಭಾಗವನ್ನು ದಾನ ಮಾಡಲು ಚಿಂತಿಸಿದ್ದಾರೆ. ಅಷ್ಟೇ ಅಲ್ಲ, ಹೆಚ್ಚು ಕಾಲ ಒಟ್ಟಿಗೆ ಇದ್ದ ಜೋಡಿ ಎಂಬ ಹೆಗ್ಗಳಿಕೆಗೆ ಇವರಿಬ್ಬರು ಪಾತ್ರರಾಗಿದ್ದಾರೆ.

English summary

Couple Handcuffed To One Another For 123 Days, Splits Up Immediately After Cutting Chain

Here we talking about Title: Couple Handcuffed To One Another For 123 Days, Splits Up Immediately After Cutting Chain, read on
Story first published: Saturday, June 19, 2021, 20:00 [IST]
X