For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಸಲಹೆಗಳು: ಇದು ಯಾವುದೂ ಕೆಲಸಕ್ಕೆ ಬಾರದ ಸಂಗತಿಗಳು!

|

ಪ್ರಣಯ ಎನ್ನುವುದು ಜೀವ ಸಂಕುಲದ ಒಂದು ನೈಸರ್ಗಿಕವಾದ ಕ್ರಿಯೆ. ಆದರೆ ಅದು ಮನುಷ್ಯ ಕುಲಕ್ಕೆ ಒಂದು ಪವಿತ್ರ, ಗುಪ್ತ ಹಾಗೂ ರಸಿಕತೆಯಿಂದ ಕೂಡಿರುತ್ತದೆ ಎಂದು ಹೇಳಬಹುದು. ಮನುಷ್ಯ ಪ್ರೀತಿಯ ಜೀವನದಿಂದ ಪ್ರಣಯವನ್ನು ಅನುಭವಿಸುತ್ತಾನೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ಮನುಷ್ಯ ವಿಶೇಷ ಸ್ಥಾನವನ್ನು ನೀಡಿದ್ದಾನೆ. ಅದನ್ನು ಪಡೆಯಬೇಕು ಎಂದರೆ ಹಿಂದೂ ಧರ್ಮದಲ್ಲಿ ವಿವಾಹ ಎನ್ನುವ ಬಂಧನಕ್ಕೆ ಒಳಗಾಗಬೇಕು. ನಂತರ ಸಂಸಾರವನ್ನು ಪ್ರಾರಂಭಿಸುವುದರ ಮೂಲಕ ತನ್ನದೇ ಆದ ಕುಟುಂಬ, ಸಂಗಾತಿ, ಮಕ್ಕಳನ್ನು ಪಡೆಯುತ್ತಾನೆ. ನಂತರ ಜೀವನದ ಉದ್ದಕ್ಕೂ ಕರ್ತವ್ಯಗಳನ್ನು ನಡೆಸುತ್ತಾ ಸಾಗಬೇಕು.

ಜೀವನದಲ್ಲಿ ತಾನು ಅನುಭವಿಸುವ ಪ್ರೀತಿಯ ಜೀವನ ಅಥವಾ ಕುಟುಂಬವು ತಾನು ಬಯಸಿದ ವ್ಯಕ್ತಿಯೊಂದಿಗೆ ಆಗಿರಬೇಕು. ಆ ವ್ಯಕ್ತಿಯು ಬಹಳ ಪ್ರಣಯ ಪೂರ್ವಕವಾಗಿ ಇರಬೇಕು ಎನ್ನುವಂತಹ ಕನಸುಗಳನ್ನು ಕಾಣುತ್ತಾರೆ. ಅದಕ್ಕಾಗಿಯೇ ವಯಸ್ಸಿಗೆ ಬಂದ ವ್ಯಕ್ತಿಯ ಕನಸು ಹಾಗೂ ಆಸೆಗಳು ಕಲ್ಪನೆಯಿಂದ ಕೂಡಿರುತ್ತವೆ. ಅವು ವಾಸ್ತವಕ್ಕೆ ಬಹಳ ದೂರವಾಗಿರುವ ಸಾಧ್ಯತೆಗಳೇ ಹೆಚ್ಚೆಂದು ಹೇಳಬಹುದು. ಅದರಲ್ಲೂ ಇತ್ತೀಚೆಗೆ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳಲ್ಲಿ ಹರಿ ಬಿಡುವ ಪ್ರಣಯದ ಚಿತ್ರಗಳು ಹಾಗೂ ವೀಡಿಯೋಗಳು ಸಾಕಷ್ಟು ಸುಳ್ಳು ಸಂದೇಶವನ್ನು ನೀಡುತ್ತವೆ. ಅವುಗಳಲ್ಲಿ ತೋರುವ ಸಂಗತಿಗಳು ಸತ್ಯಕ್ಕೆ ಸಾಕಷ್ಟು ದೂರವಾಗಿರುತ್ತವೆ.

ಕಲ್ಪನೆಯ ವಿಷಯಗಳೆಲ್ಲವೂ ಸತ್ಯವಲ್ಲ!

ಕಲ್ಪನೆಯ ವಿಷಯಗಳೆಲ್ಲವೂ ಸತ್ಯವಲ್ಲ!

ಬಹುತೇಕ ಜನರು ಸಂಭೋಗದ ವಿಷಯದಲ್ಲಿ ತಾವು ನೋಡಿದ ವೀಡಿಯೋ ಅಥವಾ ಚಿತ್ರದ ರೀತಿಯಲ್ಲಿಯೇ ಇರುತ್ತವೆ ಎಂದು ಭಾವಿಸುವರು. ಕೆಲವರು ತಮ್ಮ ಸಂಗಾತಿಯಿಂದ ಆ ರೀತಿಯ ಪ್ರಣಯ ಸುಖ ದೊರೆಯದೆ ಇದ್ದಾಗ ಸಂಗಾತಿಯೇ ಪ್ರಣಯದ ವಿಷಯವನ್ನು ತಿಳಿದಿಲ್ಲ ಎಂದು ಭಾವಿಸುತ್ತಾರೆ. ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳು ಹಿಂಸೆಯ ಮೂಲಕ ಸಂಭೋಗ ಹೊಂದುವ ಪ್ರಯತ್ನವನ್ನು ಮಾಡುತ್ತಾರೆ. ಇದು ಸಾಮಾಜಿಕವಾಗಿ ಅಪರಾಧ ಎನಿಸಿಕೊಳ್ಳುವುದು. ನಾವು ಅಂದುಕೊಂಡಿರುವುದು ಅಥವಾ ಕಲ್ಪನೆಯ ವಿಷಯಗಳೆಲ್ಲವೂ ಸತ್ಯವಲ್ಲ ಎನ್ನುವುದನ್ನು ಮೊದಲು ಅರಿಯಬೇಕು.

ಲೈಂಗಿಕತೆ ಅಥವಾ ಸಂಭೋಗ

ಲೈಂಗಿಕತೆ ಅಥವಾ ಸಂಭೋಗ

ಲೈಂಗಿಕತೆ ಅಥವಾ ಸಂಭೋಗ ಎನ್ನುವುದು ಸಾಮಾನ್ಯವಾಗಿ ಕುತೂಹಲ ಹಾಗೂ ರೋಮಾಂಚಕ ಅನುಭವವನ್ನು ನೀಡುವ ಸಂಗತಿ ಎಂದು ಭಾವಿಸುತ್ತಾರೆ. ರೋಮಾಂಚಕವಾದ ಅನುಭವವನ್ನು ತಾವು ಪಡೆಯಬೇಕು ಎನ್ನುವ ಭಾವನೆಗೆ ಒಳಗಾಗುವುದು ಸಹಜ. ಅದಕ್ಕಾಗಿ ಜನರು ಕೆಲವು ಟ್ರಿಕ್‍ಗಳನ್ನು ಉಪಯೋಗಿಸಿದರೆ ಇನ್ನಷ್ಟು ಸಂತೋಷ ದೊರೆಯಬಹುದು ಎನ್ನುವ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಹಾಗಾಗಿ ಜನರಿಗೆ ಹೇಳುವ ಒಂದು ಸಲಹೆ ಎಂದರೆ ನೀವು ತಿಳಿದಿರುವ ಅನೇಕ ತಪ್ಪು ಸಂಗತಿಗಳನ್ನು ನಿಮ್ಮ ಸಂಭೋಗ ಕ್ರಿಯೆಯಲ್ಲಿ ಅನುಸರಿಸದಿರಿ. ಕೆಲವು ತಂತ್ರಗಳು ಯಾವುದೇ ಪ್ರಯೋಜನವನ್ನು ನೀಡದು ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ನಿಜ, ಲೈಂಗಿಕತೆಗೆ ಅಥವಾ ಸಂಭೋಗಕ್ಕೆ ಸಂಬಂಧಿಸಿದಂತೆ ಅನೇಕ ತಪ್ಪು ಕಲ್ಪನೆಗಳು ನಮ್ಮಲ್ಲಿವೆ. ಹಾಗಾದರೆ ಆ ತಪ್ಪು ಕಲ್ಪನೆಗಳು ಯಾವವು? ಯಾವ ಸಂಗತಿಗಳು ಲೈಂಗಿಕ ಕ್ರಿಯೆಯಲ್ಲಿ ಅನುಪಯುಕ್ತವಾಗಿರುತ್ತವೆ? ಅದು ಹೇಗೆ ತಪ್ಪು ಕಲ್ಪನೆಯನ್ನು ಮೂಡಿಸುವುದು ಎನ್ನುವಂತಹ ವಿಷಯಗಳ ಕುರಿತು ಬೋಲ್ಡ್ ಸ್ಕೈ ಇನ್ನಷ್ಟು ಮಾಹಿತಿಯನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

ಸಂಭೋಗ ಕ್ರಿಯೆಯಲ್ಲಿ ಹೆಚ್ಚಿನ ಶಬ್ದ ಮಾಡುವುದು

ಸಂಭೋಗ ಕ್ರಿಯೆಯಲ್ಲಿ ಹೆಚ್ಚಿನ ಶಬ್ದ ಮಾಡುವುದು

ಸಂಭೋಗ ನಡೆಸುವಾಗ ನರಳುವಂತೆ ಮಾಡುವುದು ಅಥವಾ ಕೂಗಿಕೊಳ್ಳುವುದು ಅಸಹಜವಾದ ಸಂಗತಿ. ನರಳುವುದರಿಂದ ಅಥವಾ ಕೂಗಿಕೊಳ್ಳುವುದರಿಂದ ಪ್ರಣಯದಿಂದ ಯಾವುದೇ ರೀತಿಯ ಹೆಚ್ಚಿನ ಸಂತೋಷ ಅಥವಾ ಅನುಭವ ಸಿಗದು. ಅದೊಂದು ಅನುಪಯುಕ್ತವಾದ ಕ್ರಿಯೆಯಾಗಿರುತ್ತದೆ. ಸಂಗಾತಿ ನರಳುವಂತೆ ಮಾಡುವುದು ಅಥವಾ ಕೂಗುವುದು ವೀಡಿಯೋ ಚಿತ್ರಗಳಲ್ಲಿ ಜನರನ್ನು ಆಕರ್ಷಿಸಲು ಅಥವಾ ಅವರಲ್ಲಿ ಹೆಚ್ಚಿನ ತವಕವನ್ನು ಉಂಟುಮಾಡಲು ಅನುಸರಿಸುವ ಕ್ರಮ. ಅದನ್ನು ನಿಜ ಜೀವನದಲ್ಲಿ ಅನುಸರಿಸುವುದು ಅಥವಾ ಅಪೇಕ್ಷಿಸುವುದು ಅನುಚಿತವಾದ ಸಂಗತಿಯಾಗಿರುತ್ತದೆ. ಹಾಗೊಮ್ಮೆ ಸಂಭೋಗ ಕ್ರಿಯೆಯಲ್ಲಿ ಕೂಗುವುದು ಅಥವಾ ನರಳುವಂತೆ ನಿಜ ಜೀವನದಲ್ಲಿ ನಡೆಸಿದರೆ ಅದು ಸಂಗಾತಿಯ ಮಾನಸಿಕ ಭಾವನೆಯಲ್ಲಿ ನಿರುತ್ಸಾಹ ಮೂಡಿಸುವಂತೆ ಮಾಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

Most Read: ಸೆಕ್ಸ್ ಬಳಿಕ ಪುರುಷರು ಮಾಡುವ ಎಡವಟ್ಟಿನ ಕೆಲಸಗಳು, ಇದನ್ನು ಈಗಲೇ ನಿಲ್ಲಿಸಿ

ರಸ್ತೆ ಮಾರ್ಗದಲ್ಲಿ ಸಂಭೋಗ

ರಸ್ತೆ ಮಾರ್ಗದಲ್ಲಿ ಸಂಭೋಗ

ಕಾರ್ ಪ್ರಯಾಣ ಮಾಡುವುದರ ಮೂಲಕ ಲಾಂಗ್ ಡ್ರೈವ್ ಹೋಗುವುದು, ಹೋಗುವಾಗ ಸಂಭೋಗ ನಡೆಸುವುದು ಅತ್ಯಂತ ಅತ್ಯಾಕರ್ಷಕವಾಗಿ ನಿಮಗೆ ಕಾಣಬಹುದು. ಆದರೆ ಕಾರು ಓಡಿಸುತ್ತಾ ಆರೀತಿಯಲ್ಲಿ ಮೈಮರೆಯುವಂತೆ ಸಂಭೋಗ ನಡೆಸುವುದು ಎಂದರೆ ಅಪಘಾತಕ್ಕೆ ಒಳಗಾಗುವುದರಲ್ಲಿ ಸಂದೇಹವಿಲ್ಲ. ಸಿನಿಮಾ ಅಥವಾ ವೀಡೀಯೋ ಚಿತ್ರಗಳಲ್ಲಿ ಅವರು ಏನು ಪ್ರದರ್ಶಿಸುತ್ತಾರೆ ಅದು ನಿಜ ಜೀವನದಲ್ಲಿ ಕೆಲಸ ಮಾಡುವುದಿಲ್ಲ. ಹಾಗಾಗಿ ಇಂತಹ ಕೃತ್ಯ ಎಸಗುವ ಮುನ್ನ ಅಥವಾ ಇಂತಹ ಸಾಹಸವನ್ನು ಕೈಗೊಳ್ಳುವ ಮುಂಚೆ ನಿಮ್ಮ ಸುರಕ್ಷತೆಯ ಬಗ್ಗೆ ಯೋಚಿಸುವುದನ್ನು ಮರೆಯದಿರಿ.

ಕಚ್ಚುವುದು ಮತ್ತು ಗೀರುವುದು

ಕಚ್ಚುವುದು ಮತ್ತು ಗೀರುವುದು

ಕೆಲವರು ಸಂಭೋಗ ನಡೆಸುವಾಗ ಸಾಕಷ್ಟು ಕ್ರೂರತೆಯನ್ನು ತೋರುವುದು, ಸಂಗಾತಿಗೆ ಹಿಸೆಯ ರೀತಿಯಲ್ಲಿ ಸಂಭೋಗ ನಡೆಸುವುದು, ಕಚ್ಚುವುದು ಹಾಗೂ ತಮ್ಮ ಆತುರವನ್ನು ತಡೆಯಲಾರದವರಂತೆ ಗೀರುವುದು ಎಲ್ಲವೂ ಅನುಚಿತ ರೀತಿಯ ಸಂಭೋಗ ಎನಿಸಿಕೊಳ್ಳುತ್ತದೆ. ಈ ರೀತಿಯ ಸಂಭೋಗ ನಡೆಸಿದರೆ ಪ್ರಣಯದ ಸುಖ ದೊರೆಯುವುದಕ್ಕಿಂತ ಹೆಚ್ಚು ನೋವು ಹಾಗೂ ಬೇಸರ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನೀವು ನಡೆಸುವ ಲೈಂಗಿಕ ಕ್ರಿಯೆ ಅಥವಾ ಸಂಭೋಗವು ಸಂಗಾತಿಗೆ ರೋಮಾಂಚನ ಹಾಗೂ ಖುಷಿಯನ್ನು ನೀಡುವಂತಿರಬೇಕು. ನೋವು ಹಾಗೂ ಅಸಹ್ಯದಿಂದ ಕೂಡಿರಬಾರದು ಎನ್ನುವುದು ನೆನಪಿಟ್ಟುಕೊಳ್ಳಿ.

ಅನಿರೀಕ್ಷಿತ ರೀತಿಯಲ್ಲಿ ಬೆರಳನ್ನು ಅಂಟಿಸುವುದು

ಅನಿರೀಕ್ಷಿತ ರೀತಿಯಲ್ಲಿ ಬೆರಳನ್ನು ಅಂಟಿಸುವುದು

ಕೆಲವರು ಸಂಗಾತಿಯೊಂದಿಗೆ ಅಥವಾ ಪ್ರೇಯಸಿಯೊಂದಿಗೆ ಸುತ್ತಾಟ ಅಥವಾ ಡೇಟಿಂಗ್ ಹೊಂದಿರುವಾಗ ಸಾಕಷ್ಟು ಕೀಟಲೆ ಅಥವಾ ಪ್ರಣಯಕ್ಕೆ ಪ್ರಚೋದಿಸುವ ಕೆಲಸವನ್ನು ಕೈಗೊಳ್ಳುತ್ತಾರೆ. ಅದರಲ್ಲಿ ತಮ್ಮ ಕೈ ಬೆರಳುಗಳಿಂದ ಸಂಗಾತಿಗೆ ಪ್ರಣಯಕ್ಕೆ ಪ್ರೇರೇಪಿಸುವುದು, ಲೈಂಗಿಕ ಕ್ರಿಯೆಗೆ ಉತ್ತೇಜನ ನೀಡುವಂತೆ ಬೆರಳುಗಳನ್ನು ಬಳಸುವುದು ಮಾಡುತ್ತಾರೆ. ಈ ರೀತಿಯ ಕ್ರಿಯೆಯಿಂದ ಸಂಗಾತಿ ಉತ್ತೇಜನಗೊಳ್ಳುವ ಬದಲು ಇತರರ ದೃಷ್ಟಿಯಿಂದ ಅನುಚಿತ ವರ್ತನೆ ಎಂದು ತೋರಿಸಿಕೊಳ್ಳುವುದು. ಹಾಗಾಗಿ ಸಾಮಾಜಿಕ ಕ್ಷೇತ್ರದಲ್ಲಿ ಇರುವಾಗ ನಿಮ್ಮ ವರ್ತನೆ ಸೂಕ್ತ ರೀತಿಯಲ್ಲಿ ಇರಲಿ.

ಆದೇಶಗಳನ್ನು ಮಾಡದಿರಿ

ಆದೇಶಗಳನ್ನು ಮಾಡದಿರಿ

ನೀವು ಬಯಸಿದಾಗ ಅಥವಾ ನಿಮಗೆ ಬೇಕೆನಿಸಿದಾಗ ಸಮಭೋಗ ನಡೆಸಲು ನಿಮ್ಮ ಸಂಗಾತಿಗೆ ಆದೇಶದ ಮೂಲಕ ಹೇಳಬಾರದು. ಪ್ರಭಲವಾಗಿ ಅಥವಾ ಒತ್ತಾಯ ಪೂರ್ವಕವಾಗಿ ನಡೆಸುವ ಲೈಂಗಿಕ ಕ್ರಿಯೆಯು ಸಂತೋಷವನ್ನು ಅಥವಾ ಖುಷಿಯನ್ನು ನೀಡದು. ಸಂಗಾತಿಗಳು ಅಥವಾ ಪಾಲುದಾರರು ಪರಸ್ಪರ ಒಪ್ಪಿ ನಡೆಸುವ ಲೈಂಗಿಕ ಕ್ರಿಯೆಯು ಹೆಚ್ಚಿನ ಸಂತೋಷ ಹಾಗೂ ಖುಷಿಯನ್ನು ನೀಡುವುದು.

ಫೋರ್ಕ್ ಬಳಸುವುದರ ಮೂಲಕ ಪ್ರಣಯಕ್ಕೆ ಕರೆಯುವುದು

ಫೋರ್ಕ್ ಬಳಸುವುದರ ಮೂಲಕ ಪ್ರಣಯಕ್ಕೆ ಕರೆಯುವುದು

ಕೆಲವು ವ್ಯಕ್ತಿಗಳು ಫೋರ್ಕ್ ಬಳಸುವುದರ ಮೂಲಕ ತಮ್ಮ ಲೈಂಗಿಕ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಫೋರ್ಕ್ ನಿಂದ ಸಂಗಾತಿಯ ದೇಹದ ಕೆಲವು ಅಂಗಗಳನ್ನು ಒತ್ತುವುದು, ಸಂಭೋಗ ನಡೆಸಲು ಪ್ರೇರೇಪಿಸುವ ಕೆಲಸವನ್ನು ನಡೆಸುತ್ತಾರೆ. ಈ ರೀತಿ ಮೊನಚಾದ ವಸ್ತುಗಳನ್ನು ಬಳಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು ಅಥವಾ ನಡೆಸುವುದು ಸಂಗಾತಿಗೆ ಅಪಾಯ ಹಾಗೂ ನೋವನ್ನುಂಟುಮಾಡುವುದು. ಇದರಿಂದ ಯಾವುದೇ ರೀತಿಯ ಸಂತೋಷ ದೊರೆಯದು.

ನಾಲಿಗೆಯನ್ನು ಅತಿಯಾಗಿ ಬಳಸುವುದು

ನಾಲಿಗೆಯನ್ನು ಅತಿಯಾಗಿ ಬಳಸುವುದು

ಸಂಗಾತಿಗೆ ಚುಂಬಿಸುವುದರಿಂದ ಸಂಗಾತಿಯ ಮನಸ್ಸು ಪ್ರಣಯಕ್ಕೆ ಪ್ರೇರಣೆಯನ್ನು ಪಡೆದುಕೊಳ್ಳುವುದು. ಅದು ಒಂದು ಮಿತಿಯಲ್ಲಿ ಇರಬೇಕು. ಅದನ್ನು ಬಿಟ್ಟು ನಾಲಿಗೆಯಿಂದ ಕಿವಿಯೊಳಗೆ ಸ್ಪರ್ಶಿಸುವುದು ಅಥವಾ ಸಂಗಾತಿಯ ಇತರ ದೇಹದ ಅಂಗಗಳಿಗೆ ನಾಲಿಗೆಯಿಂದಲೇ ಪ್ರಚೋದನೆ ನೀಡುವುದು ಅನುಚಿತವಾಗಿರುತ್ತದೆ. ಇದರಿಂದ ಯಾವುದೇ ಸಂತೋಷ ದೊರೆಯದು. ಜೊತೆಗೆ ಅಸಹನೀಯತೆಯನ್ನುಂಟುಮಾಡುವುದು.

ಕೂದಲು ಎಳೆಯುವುದು

ಕೂದಲು ಎಳೆಯುವುದು

ಮೃದುವಾಗಿ ಕೂದಲನ್ನು ಎಳೆಯುವುದರ ಮೂಲಕ ಸಂಗಾತಿಯನ್ನು ಚೇಡಿಸುವುದು ಅಥವಾ ಅವರೊಂದಿಗೆ ಮುದ್ದಾಡುವುದು ಒಂದು ಬಗೆಯ ಸಂತೋಷ ಹಾಗೂ ಖುಷಿಯು ಲಭ್ಯವಾಗುವದು. ಅದೇ ಗಟ್ಟಿಗಾಗಿ ಕೂದಲು ಎಳೆಯುವುದು, ಬಲವಂತವಾಗಿ ಪ್ರಣಯಕ್ಕೆ ಆಹ್ವಾನಿಸುವುದು ಸಂಗಾತಿಗೆ ಹೆಚ್ಚು ನೋವನ್ನು ಉಂಟುಮಾಡುತ್ತದೆ. ಇಂತಹ ಕೃತ್ಯದಿಂದ ಸಂಗಾತಿ ನಿಮ್ಮೆಡೆಗೆ ಮೋಹ ಪರವಶವಾಗುವ ಬದಲು ಸಿಟ್ಟಿನ ಭಾವನೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ.

Most Read: ಲೈಂಗಿಕ ಸಮಸ್ಯೆಗೆ, ಮಾತ್ರೆಗಳು ಬೇಕಾಗಿಲ್ಲ! ಈ ಟಿಪ್ಸ್ ಅನುಸರಿಸಿ

ಅತ್ಯಂತ ಕೊಳಕಾಗಿ ಮಾತನಾಡುವುದು

ಅತ್ಯಂತ ಕೊಳಕಾಗಿ ಮಾತನಾಡುವುದು

ಕೆಲವರು ಕೊಳಕು ಮಾತನಾಡುವುದರ ಮೂಲಕ ಅಥವಾ ಸಂಭೋಗಕ್ಕೆ ಸಂಬಂಧಿಸಿದಂತೆ ಅಸಭ್ಯವಾಗಿ ಮಾತನಾಡಿದರೆ ವಿರುದ್ಧ ಲಿಂಗದವರು ಅಥವಾ ಸಂಗಾತಿಯು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎಂದುಕೊಳ್ಳುವರು. ಆದರೆ ಅದು ತಪ್ಪಾದ ಸಂಗತಿ. ಒಮ್ಮೆ ಮಾತನಾಡಿದ ಶಬ್ದಗಳನ್ನು ಪುನಃ ಹಿಂಪಡೆಯಲು ಸಾಧ್ಯವಿಲ್ಲ. ಕೊಳಕು ಶಬ್ದಗಳನ್ನು ಬಳಸುವುದರಿಂದ ನಿಮ್ಮ ವ್ಯಕ್ತಿತ್ವದ ಮಟ್ಟ ಕೆಳಗಾಗುವುದೇ ಹೊರತು ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡದು.

ಆಕ್ರಮಣ ರೀತಿಯಲ್ಲಿ ಹೊಡೆಯುವುದು:

ಆಕ್ರಮಣ ರೀತಿಯಲ್ಲಿ ಹೊಡೆಯುವುದು:

ಕೆಲವರು ತಮ್ಮ ಸಂಗಾತಿಯ ಪೃಷ್ಠದ ಮೇಲೆ ಹೊಡೆಯುವುದನ್ನು ಅಥವಾ ಗಿಲ್ಲುವುದು ಲೈಂಗಿಕತೆಗೆ ಆಹ್ವಾನಿಸುವ ಅಥವಾ ಪ್ರೀತಿಯ ಸಂಕೇತ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಕೆಲವೊಮ್ಮೆ ಸಂಭೋಗ ಕ್ರಿಯೆ ನಡೆಸುವಾಗ ಆಕ್ರಮಣ ರೀತಿಯಲ್ಲಿ ಹೊಡೆಯುತ್ತಾರೆ. ಹಾಗೆ ಹೊಡೆಯುವುದು ಲೈಂಗಿಕ ಕ್ರಿಯೆಗೆ ಯಾವುದೇ ಪ್ರಚೋದನೆ ಅಥವಾ ಸಂತೋಷವನ್ನು ನೀಡದು. ಬದಲಿಗೆ ಸಂಗಾತಿಗೆ ನೋವು ಹಾಗೂ ಅಸಹನೀಯ ಭಾವನೆ ಕೆರಳುವುದು. ಹಾಗಾಗಿ ನೀವು ವೃಷ್ಠದ ಮೇಲೆ ಹೊಡೆದುಕೊಳ್ಳುವುದು ಪರಸ್ಪರ ಒಪ್ಪಿಗೆ ಇದ್ದರೆ ನಿಧಾನವಾಗಿ ಮಾಡಿ ಅಥವಾ ನಿರ್ದಿಷ್ಟವಾಗಿರಲಿ. ನಿಮ್ಮ ವರ್ತನೆಯು ಸಂಗಾತಿಗೆ ಮೃದು ಹಾಗೂ ಆಕರ್ಷಣೆಯ ರೂಪದಲ್ಲಿ ಇರಬೇಕೆ ಹೊರತು ನೋವು ಹಾಗೂ ಅಸಹನೀಯತೆಯಿಂದ ಕೂಡಿರಬಾರದು. ಆಗ ನಿಮ್ಮ ಸಂಭೋಗ ಕ್ರಿಯೆ ಅಥವಾ ಲೈಂಗಿಕ ಜೀವನ ಹೆಚ್ಚು ಸಂತೋಷ ಹಾಗೂ ಖುಷಿಯಿಂದ ಕೂಡಿರುವುದು.

English summary

popular sex tips that dont actually work

We all know some or the other trick to make sex even more exciting and fun. Sometimes, however, the tricks that we think work wonders actually don’t do a thing. We’ve rounded up five such sex tips that are extremely popular, but don’t really work the way they’re meant to.
X
Desktop Bottom Promotion