For Quick Alerts
ALLOW NOTIFICATIONS  
For Daily Alerts

ಪ್ರೇಮಕಥೆ: ಕೊನೆಗೂ ಆ ವಿಧಿ ಇಬ್ಬರೂ ಪ್ರೇಮಿಗಳನ್ನು ಒಂದು ಮಾಡಿತು!

By Arshad
|

ವಿವಾಹಗಳು ಸ್ವರ್ಗದಲ್ಲಿ ಜರುಗುತ್ತವಂತೆ. ಭಾರತದ ಮಟ್ಟಿಗೆ ವಿವಾಹವೆಂದರೆ ಇಬ್ಬರು ವ್ಯಕ್ತಿಗಳು ತಮ್ಮ ಮುಂದಿನ ಜೀವನವನ್ನು ಜೊತೆಯಾಗಿ ಕಳೆಯಲು ಪ್ರತಿಜ್ಞೆ ಕೈಗೊಳ್ಳುವ ವಿಧಿಗಿಂತಲೂ ಮಿಗಿಲಾಗಿ ಪ್ರತಿಷ್ಠೆಯನ್ನು ಪ್ರಕಟಿಸುವ ಒಂದು ಅವಕಾಶವೇ ಆಗಿದೆ. ಓರ್ವ ತಂದೆ ತನ್ನ ಮಕ್ಕಳ ವಿವಾಹಕ್ಕಾಗಿ ಇಡಿಯ ಜೀವಮಾನ ದುಡಿದು ಸಂಗ್ರಹಿಸಿ ಒಂದೇ ದಿನದಲ್ಲಿ ಖರ್ಚು ಮಾಡಬೇಕಾಗಿ ಬರುತ್ತದೆ, ಅದೂ ಅನಾವಶ್ಯಕ ಆಡಂಬರ ಹಾಗೂ ಪ್ರದರ್ಶನಗಳಿಗಾಗಿ!

ಈ ಆಡಂಬರ ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆ ಬಹಳ ಹಿಂದಿನಿಂದಲೂ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಆದರೆ ವಾಸ್ತವದಲ್ಲಿ ಭಾರತದ ಮಟ್ಟಿಗೆ ವಿವಾಹವೆಂದರೆ ಇದು ಇಬ್ಬರು ವ್ಯಕ್ತಿಗಳ ನಡುವಣ ಸಂಬಂಧಕ್ಕಿಂತಲೂ ಎರಡು ಕುಟುಂಬಗಳ ನಡುವಣ ಸಂಬಂಧವೆಂದೇ ತಿಳಿದುಕೊಳ್ಳಬಹುದು ಹಾಗೂ ವಿವಾಹ ಸಮಾರಂಭದಲ್ಲಿ ಸಮಾನಮನಸ್ಕರಾದ ವ್ಯಕ್ತಿಗಳು ಆಗಮಿಸಿ ಸಂಭ್ರಮದ ಕ್ಷಣಗಳನ್ನು ಹಂಚಿಕೊಳ್ಳುವ ಜೊತೆಗೇ ಮುಂದಿನ ದಿನಗಳ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದೂ ಆಗುತ್ತದೆ. ಇದೇ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಒಂದು ಮದುವೆ ಆದರೆ ಎರಡು ಮದುವೆಗಳಿಗೆ ಮುನ್ನುಡಿಯೂ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇನ್ನೂ ಅವಿವಾಹಿತರಾಗಿರುವ ಯುವಕರು ಮತ್ತು ಯುವತಿಯರು ವಿವಾಹ ಸಮಾರಂಭದಲ್ಲಿ ಹಾಜರಿರಲು ಆಗಮಿಸಿದ ಸಂದರ್ಭದಲ್ಲಿ ಪರಸ್ಪರ ಆಕರ್ಷಣೆಗೆ ಒಳಗಾಗುತ್ತಾರೆ. ಹೀಗೇ ಒಂದು ಮದುವೆಗೆ ಆಗಮಿಸಿದ್ದ ಪ್ರವಾಲಿ ಎಂಬ ಯುವತಿ ಮತ್ತು ಮಾಯಾಂಕ್ ಎಂಬ ಯುವಕರ ನಡುವೆಯೂ ನಡೆಯಿತು. ಇಬ್ಬರೂ ತಮ್ಮ ತಮ್ಮ ಸಹೋದರ, ಸಹೋದರಿಯರ ವಿವಾಹ ಸಂದರ್ಭಕ್ಕೆಂದು ಆಗಮಿಸಿದ್ದಾಗ ಇಬ್ಬರೂ ಪರಸ್ಪರ ಆಕರ್ಷಿತರಾದರು. ಮುಂದೇನಾಯಿತು? ಇಲ್ಲಿ ಅಂಕುರಗೊಂಡ ಪ್ರೀತಿ ಬೆಳೆಯಿತೇ, ಹೆಮ್ಮರವಾಯಿತೇ? ವಿವಾಹ ಸಾಧ್ಯವಾಯಿತೇ? ಎಂಬ ವಿವರಗಳಿಗಾಗಿ ಮುಂದೆ ಓದಿ....

ಆತನೊಬ್ಬ ಸ್ಫುರದ್ರೂಪಿ ಯುವಕ

ಆತನೊಬ್ಬ ಸ್ಫುರದ್ರೂಪಿ ಯುವಕ

ಭಾರತದ ಖ್ಯಾತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಸಿಸುತ್ತಿರುವ ಮಾಯಾಂಕ್ ತನ್ನ ಜೀವನದಲ್ಲಿ ಎರಡೇ ವಿಷಯಗಳ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದ್ದ. ತನ್ನ ಕಾಯಕ (ವೃತ್ತಿಜೀವನ) ಹಾಗೂ ತನ್ನ ಕಾಯ. ಕಾಯವನ್ನು ಹುರಿಗಟ್ಟಿಸಲು ಆತ ಸದಾ ನಿಯಮಿತವಾಗಿ ವ್ಯಾಯಾಮಶಾಲೆಗೆ ಭೇಟಿ ನೀಡುತ್ತಿದ್ದ ಹಾಗೂ ಸ್ವಾಭಾವಿಕವಾಗಿಯೇ ಹಲವು ಮಹಿಳೆಯರ ಆಕರ್ಷಣೆಯ ಕೇಂದ್ರವಾಗಿದ್ದ. ಆದರೆ ಮಾಯಾಂಕ್ ನಿಗೆ ಮಹಿಳೆಯರು ಎಂದರೆ ಯಾವುದೇ ಆಸಕ್ತಿ ಇರಲಿಲ್ಲ ಹಾಗೂ ತಾನಾಯಿತು, ತನ್ನ ಕೆಲಸವಾಯಿತು ಎಂದುಕೊಂಡು ಎಂದೂ ಯಾವುದೇ ಯುವತಿಯನ್ನು ಆತ ಕಾಫಿಗೂ ಕರೆದಿರಲಿಲ್ಲ.

ಬಹಿರ್ಮುಖಿ ಪ್ರವಾಲಿ

ಬಹಿರ್ಮುಖಿ ಪ್ರವಾಲಿ

ಇನ್ನೊಂದು ಕಡೆಯಲ್ಲಿ, ಪ್ರವಾಲಿ ಎಂಬ ಈ ಯುವತಿ ಬಹಿರ್ಮುಖಿ ಸ್ವಭಾವ ಹೊಂದಿದ್ದು ನಾಲ್ಕು ಜನರ ನಡುವೆ ಸದಾ ಮಾತುಕತೆ, ನಗು ಮತ್ತು ಮುಕ್ತ ಮನಸ್ಸಿನಿಂದ ಕಾಲ ಕಳೆಯ ಬಯಸುತ್ತಿದ್ದಳು. ಈಕೆಗೆ ಹೆಚ್ಚಿನ ಸಂಖ್ಯೆಯ ಸ್ನೇಹಿತರಿದ್ದರು ಹಾಗೂ ಇವರಲ್ಲಿ ಹಲವರು ಯುವಕರೂ ಆಗಿದ್ದರು. ಆಕೆ ಫ್ಯಾಶನ್ ತರಬೇತಿ ಕೇಂದ್ರದಲ್ಲಿ ಕಲಿಯುತ್ತಿದ್ದ ದಿನಗಳಿಂದಲೂ ಆಕೆ ಓರ್ವನಲ್ಲದಿದ್ದರೆ ಇನ್ನೋರ್ವ ಸ್ನೇಹಿತನಿದ್ದೇ ಇರುತ್ತಿದ್ದ. ಅತ್ಯಂತ ಚೆಲುವೆಯಾಗಿದ್ದ ಈಕೆಯೊಂದಿಗೆ ಒಡನಾಟ ಹೊಂದಲು ಬಯಸುತ್ತಿದ್ದ ಸ್ನೇಹಿತರಿಗೇನೂ ಬರವಿಲ್ಲದಿದ್ದ ಕಾರಣ ಈಕೆ ಒಂಟಿಯಾಗಿದ್ದ ಸಮಯವೇ ಇಲ್ಲ ಎಂದು ಹೇಳಬಹುದು.

ಇಬ್ಬರ ಭೇಟಿಗೆ ಗ್ರಹಗತಿಗಳೇ ನಿರ್ಧರಿಸಿದ್ದವು

ಇಬ್ಬರ ಭೇಟಿಗೆ ಗ್ರಹಗತಿಗಳೇ ನಿರ್ಧರಿಸಿದ್ದವು

ಪ್ರವಾಲಿ ತನ್ನ ಅಕ್ಕನ ವಿವಾಹ ಸಂದರ್ಭದಲ್ಲಿ ಭಾಗವಹಿಸಲು ತಿಂಗಳುಗಟ್ಟಲೆಯಿಂದ ತುದಿಗಾಲಿನಲ್ಲಿ ಕಾಯುತ್ತಿದ್ದಳು. ಆಕೆಯ ಭಾವನ ಬಾರಾತ್ ಅಥವಾ ಮದುಮಗನ ಸವಾರಿ ಆಕೆಯ ಮನೆಗೆ ಬಂದಾಗ ಆಕೆಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ ಈ ಬಾರಾತ್ ನಲ್ಲಿ ಈಕೆಯ ಕನಸಿನ ರಾಜಕುಮಾರನೂ ಇದ್ದುದು ಆಕೆಗೆ ಮೊದಲು ತಿಳಿದೇ ಇರಲಿಲ್ಲ.

ಕೊನೆಗೂ ಆಕೆ ಆತನನ್ನು ನೋಡಿದಳು

ಕೊನೆಗೂ ಆಕೆ ಆತನನ್ನು ನೋಡಿದಳು

ಬಾರಾತ್ ಮನೆಗೆ ಆಗಮಿಸಿದ ತಕ್ಷಣ ಮನೆಯ ಹಿರಿಯರೆಲ್ಲರೂ ಬೀಗರನ್ನು ಸ್ವಾಗತಿಸುವ ಕ್ರಿಯೆಯಲ್ಲಿ ನಿರತರಾಗಿದ್ದರು. ಎಲ್ಲರಂತೆಯೇ ಪ್ರವಾಲಿಗೂ ತನ್ನದೇ ಆದ ಜವಾಬ್ದಾರಿಗಳಿದ್ದು ಇದರಿಂದಾಗಿ ಆಕೆ ಆ ಗುಂಪಿನಲ್ಲಿದ್ದ ಮಾಯಾಂಕ್ ನನ್ನು ಗಮನಿಸಲು ಸಾಧ್ಯವಾಗಿರಲಿಲ್ಲ. ಆದರೆ ಸಂಜೆಯ ಹೊತ್ತಿನಲ್ಲಿ, ವಿವಾಹದ ಮುಖ್ಯ ವಿಧಿಗಳೆಲ್ಲಾ ಮುಗಿದ ಬಳಿಕ ವಿವಾಹ ಮಂಟಪದ ಬಳಿ ನವವಿವಾಹಿತರಾಗಿದ್ದ ತನ್ನ ಅಕ್ಕ ಮತ್ತು ಭಾವನವರ ಛಾಯಾಚಿತ್ರವನ್ನು ತೆಗೆಯಲು ಆಕೆ ತನ್ನ DSLR ಕ್ಯಾಮೆರಾವನ್ನು ಯಾವ ಕೋನದಿಂದ ತೆಗೆದರೆ ಅತ್ಯುತ್ಯಮವಾಗಿರುತ್ತದೆ ಎಂದು ಪರಿಶೀಲಿಸುತ್ತಿದ್ದಾಗ, ಅದೇ ಕ್ಷಣದಲ್ಲಿ ಮಾಯಾಂಕ್ ಸಹಾ ತನ್ನ DSLR ಕ್ಯಾಮೆರಾದಿಂದ ಅತ್ಯುತ್ತಮ ಚಿತ್ರ ತೆಗೆಯಲು ಯತ್ನಿಸುತ್ತಿದ್ದ. ಈ ಯತ್ನದಲ್ಲಿ ಆತ ಅಲ್ಲಿದ್ದವರನ್ನೆಲ್ಲಾ ಕೊಂಚ ಒರಟಾಗಿಯೇ ದೂಡುತ್ತಿದ್ದ. ಈ ಒರಟಾಟಿಕೆಯನ್ನು ಗಮನಿಸಿದ ಪ್ರವಾಲಿಗೆ ಈ ವ್ಯಕ್ತಿಯ ನಡವಳಿಕೆ ಕೊಂಚವೂ ಹಿಡಿಸಲಿಲ್ಲ.

 ಪ್ರೇಮಹಕ್ಕಿಯ ಕಲರವ

ಪ್ರೇಮಹಕ್ಕಿಯ ಕಲರವ

ಆದರೆ ಮಾಯಾಂಕ್ ಈಕೆಯ ಛಾಯಾಚಿತ್ರ ತೆಗೆಯುವ ಕೌಶಲವನ್ನು ಗಮನಿಸಿದ ಹಾಗೂ ತಕ್ಷಣವೇ ಆಕೆಯ ಕೌಶಲ್ಯವನ್ನು ಮೆಚ್ಚಿಕೊಂಡ. ಇದುವರೆಗೆ ವಿವಾಹಕ್ಕೆ ಬಂದಿದ್ದ ಯುವತಿಯರೆಲ್ಲಾ ಫೋಟೋ ತೆಗೆಸಿಕೊಳ್ಳಲು ದುಂಬಾಲು ಬೀಳುತ್ತಿದ್ದುದನ್ನು ಗಮನಿಸಿದ್ದ ಮಾಯಾಂಕ್ ಗೆ ಈಗ ಛಾಯಾ ಚಿತ್ರ ತೆಗೆಯಲು ತನ್ನ ಕೌಶಲವನ್ನು ಬಳಸುತ್ತಿದ್ದ ಹಾಗೂ ಅಪ್ರತಿಮ ಸುಂದರಿಯಾಗಿದ್ದ ಯುವತಿಯನ್ನು ಕಂಡಾಗ ಈತನಿಗೆ ಅಚ್ಚರಿಯ ಜೊತೆಗೇ ಸಂತೋಷವೂ ಉಂಟಾಗಿತ್ತು. ಛಾಯಾಚಿತ್ರಕ್ಕಾಗಿ ಜನರನ್ನು ಆಕೆ ಹೇಗೆ ಹುರುದುಂಬಿಸುತ್ತಿದ್ದಳು ಎಂಬುದನ್ನು ಕಂಡ ಬಳಿಕವಂತೂ ಆತ ಆಕೆಯನ್ನು ಮಾತನಾಡಿಸದೇ ಇರಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದ.

ಒಗ್ಗೂಡಿದ ಧೈರ್ಯ

ಒಗ್ಗೂಡಿದ ಧೈರ್ಯ

ಇದುವರೆಗೂ ಓರ್ವಳೂ ಯುವತಿಯೊಂದಿಗೆ ನೇರವಾಗಿ ಮಾತಾಡಿಲ್ಲದಿದ್ದ ಮಾಯಾಂಕ್ ನಿಗೆ ಈಗ ಈ ಹೊಸ ಯುವತಿಯೊಂದಿಗೆ ಮಾತನಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಯಾವಾಗ ಹೃದಯದಲ್ಲಿ ಪ್ರೇಮಾಂಕುರವಾಯ್ತೋ, ಧೈರ್ಯವೂ ಆ ಪ್ರೇಮವೇ ನೀಡುತ್ತದಂತೆ. ಮರುದಿನ, ಆತನ ಅತ್ತಿಗೆಯ (ಅಂದರೆ ಪ್ರವಾಲಿಯ ಅಕ್ಕ) ' ಬಿದಾಯಿ' ಕಾರ್ಯಕ್ರಮದಲ್ಲಿ (ವಧು ತಾಯಿ ಮನೆಯಿಂದ ಪತಿಯ ಮನೆಗೆ ಹೊರಡುವುದು) ಈತ ಪ್ರವಾಲಿಯನ್ನು ನೇರವಾಗಿ ಭೇಟಿಯಾಗಿ ಆಕೆಯೊಂದಿಗೆ ಮಾತುಕತೆ ಪ್ರಾರಂಭಿಸಿದ.

ಆದರೆ ಈ ಸಮಯದ ಸೂಕ್ತವಾಗಿರಲಿಲ್ಲ

ಆದರೆ ಈ ಸಮಯದ ಸೂಕ್ತವಾಗಿರಲಿಲ್ಲ

ವಿವಾಹದ ಬಳಿಕ ಪ್ರತಿ ಹೆಣ್ಣಿಗೂ ತನ್ನ ಪತಿಯ ಮನೆಗೆ ಹೋಗುವುದು ಅನಿವಾರ್ಯವಾಗಿದ್ದು ತವರುಮನೆಯನ್ನು ಬಿಟ್ಟು ಹೊರಡುವ ಆ ಕ್ಷಣ ಮನೆಯ ಎಲ್ಲಾ ಸದಸ್ಯರಿಗೆ ದುಃಖದಾಯಕವಾದ ಕ್ಷಣವಾಗಿರುತ್ತದೆ. ಈ ಸಮಯದಲ್ಲಿ ಮನೆಯ ಯಾವುದೇ ಸದಸ್ಯರನ್ನು ಮಾತನಾಡಿಸುವುದು, ವಿಶೇಷವಾಗಿ ಪ್ರಣಯದ ಮಾತುಗಳನ್ನು ಆಡುವುದು ತರವೇ ಅಲ್ಲ. ಈ ತಪ್ಪು ಸಮಯದಲ್ಲಿ ಪ್ರವಾಲಿಯನ್ನು ಮಾತನಾಡಬಯಸಿದ ಮಾಯಾಂಕ್ ನಿಗೆ ಈ ಕ್ಷಣ ಸೂಕ್ತವಲ್ಲ ಎಂದು ಆಗ ಹೊಳೆದಿರಲೇ ಇಲ್ಲ. ಹಾಗಾಗಿ ಆಕೆಯ ಪ್ರತಿಕ್ರಿಯೆ ತೀಕ್ಷ್ಣವಾಗಿಯೇ ಇತ್ತು.

ಎರಡು ದಿನಗಳ ಬಳಿಕ ಹೊಳೆದ ವಿಷಯ

ಎರಡು ದಿನಗಳ ಬಳಿಕ ಹೊಳೆದ ವಿಷಯ

ಮಾಯಾಂಕ್ ನೊಂದಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎರಡು ದಿನಗಳ ಬಳಿಕ ಆಕೆಗೆ ನಿಧಾನವಾಗಿ ತನಗೆ ಹಾಗೆ ನಡೆದುಕೊಳ್ಳಬಾರದಿತ್ತು ಎನಿಸತೊಡಗಿತು. ಅಲ್ಲದೇ ತನ್ನ ಸೌಂದರ್ಯಕ್ಕೆ ಮರುಳಾಗಿ ತನ್ನ ಸ್ನೇಹ ಬಯಸುತ್ತಿದ್ದಂತಹ ಯುವಕರಂತಲ್ಲ ಈ ಯುವಕ ಎಂದೆನಿಸತೊಡಗಿತು. ಅಲ್ಲದೇ ಆ ಬಳಿಕ ಆತ ತನ್ನನ್ನು ಸಂಪರ್ಕಿಸಲು ಯತ್ನಿಸಲೂ ಇಲ್ಲವಲ್ಲ ಎಂದು ಆಗ ಆಕೆಗೆ ಹೊಳೆಯಿತು. ಆ ಕ್ಷಣದಿಂದ ಆಕೆ ಆತನನ್ನೊಮ್ಮೆ ಭೇಟಿಯಾಗಬೇಕೆಂದು ಹಾಗೂ ಸ್ನೇಹವನ್ನು ಪಡೆಯಬೇಕೆಂದು ನಿರ್ಧರಿಸಿದಳು.

ಆತನ ದೂರವಾಣಿ ಸಂಖ್ಯೆ ಪಡೆಯುವುದು ಆಕೆಗೆ ಕಷ್ಟವಾಗಲಿಲ್ಲ

ಆತನ ದೂರವಾಣಿ ಸಂಖ್ಯೆ ಪಡೆಯುವುದು ಆಕೆಗೆ ಕಷ್ಟವಾಗಲಿಲ್ಲ

ಆಕೆಯ ಬಹಿರ್ಮುಖಿ ಸ್ವಭಾವದ ಕಾರಣ ಆತನ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಆಕೆಗೆ ಕಷ್ಟವೇನೂ ಆಗಲಿಲ್ಲ. ಅಷ್ಟಕ್ಕೂ ಅವಳಕ್ಕನ ಮೈದುದನೇ ಆಗಿದ್ದರಿಂದ ಆಕೆಯೂ ಸಂತೋಷವಾಗಿಯೋ ಈ ವಿವರ ಒದಗಿಸಿದಳು. ಬಳಿಕ, ಒಂದು ಭಾನುವಾರ ಮಧ್ಯಾಹ್ನ ಆಕೆ ಆತನ ಮೊಬೈಲಿಗೆ ಸಂದೇಶಗೊಂದನ್ನು ಕಳಿಸಿ ಸಂಭಾಷಣೆಗೆ ಆಹ್ವಾನಿಸಿದಳು.

ಅತ್ತ, ಮಾಯಾಂಕ್ ನ ಅಹಂಭಾವ ಕೆರಳಿತ್ತು

ಅತ್ತ, ಮಾಯಾಂಕ್ ನ ಅಹಂಭಾವ ಕೆರಳಿತ್ತು

ಇದಕ್ಕೂ ಮುನ್ನ ಆತ ನಡೆಸಿದ ಯತ್ನಗಳಿಗೆ ಆಕೆ ಯಾವುದೇ ಸ್ಪಂದನೆ ನೀಡದೇ ಇದ್ದುದ್ದು ಮಾಯಾಂಕ್ ನ ಅಹಂಭಾವವನ್ನು ಕೆರಳಿಸಿತ್ತು. ಅಷ್ಟಕ್ಕೂ, ಆತ ಮಾತನಾಡಬಯಸಿದ, ಸ್ನೇಹ ಪಡೆಯಬಯಸಿದ ಪ್ರಥಮ ಯುವತಿಯೇ ಆಕೆಯಾಗಿದ್ದಳು. ಅಂದು ಆಕೆಯ ತಿರಸ್ಕಾರದ ಬಳಿಕ ತಾನೆಂದೂ ಆಕೆಯನ್ನು ಮಾತನಾಡಿಸಲು ಯತ್ನಿಸುವುದಿಲ್ಲ ಎಂದು ನಿರ್ಧರಿಸಿದ್ದ. ಆದರೆ ಪ್ರೇಮ ಎಂತಹ ಕಲ್ಲುಹೃದಯವನ್ನೇ ಕರಗಿಸುತ್ತದಂತೆ, ಮಾಯಾಂಕ್ ನ ಹೃದಯವೇನೂ ಕಲ್ಲಾಗಿರಲಿಲ್ಲ. ಆಕೆಯ ಸಂದೇಶ ಬಂದಾಗ ಆತನ ಹೃದಯವೂ ಕರಗಿತು, ಆತ ಸಂತೋಷಪಟ್ಟ.

ಮೊಳಕೆಯೊಡೆದ ಪ್ರೇಮ

ಮೊಳಕೆಯೊಡೆದ ಪ್ರೇಮ

ಮೊಬೈಲಿನಲ್ಲಿ ಬಂದ ಸಂದೇಶಕ್ಕೆ ಮಾರುತ್ತರ ನೀಡಿದ ಆತನಿಗೆ ಬಳಿಕ ಸಂದೇಶಗಳ ಸರಮಾಲೆಯೇ ಬರತೊಡಗಿತು. ನಿಧಾನವಾಗಿ ಪರಸ್ಪರ ಮೊಬೈಲಿನಲ್ಲಿ ಮಾತನಾಡಲೂ ತೊಡಗಿದರು. ನಿಧಾನವಾಗಿ ವಾರಾಂತ್ಯಗಳಲ್ಲಿ ಜೊತೆಯಾಗಿ ಕಳೆಯಲೂ ತೊಡಗಿದರು. ಇಬ್ಬರ ಜೋಡಿಯನ್ನು ಗಮನಿಸಿದವರು ಇಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತಿದ್ದೀರಿ ಎಂದು ಪ್ರೇರೇಪಿಸತೊಡಗಿದರು. ಹೀಗೇ, ಈ ಸಂತೋಷದ ದಿನಗಳು ಮೂರು ವರ್ಷಗಳ ಕಾಲ ಮುಂದುವರೆಯಿತು. ಈ ಅವಧಿಯಲ್ಲಿ ಇಬ್ಬರೂ ಪರಸ್ಪರರಲ್ಲಿ ತಮ್ಮ ಜೀವನಸಂಗಾತಿಯನ್ನು ಕಂಡುಕೊಂಡಿದ್ದರು.

ಕುಟುಂಬದವರಿಗೆ ಹೇಳುವ ಸಮಯವೂ ಬಂದಿತ್ತು

ಕುಟುಂಬದವರಿಗೆ ಹೇಳುವ ಸಮಯವೂ ಬಂದಿತ್ತು

ಪರಸ್ಪರ ಪರಿಚಯವಾದ ಮೂರು ವರ್ಷಗಳ ಬಳಿಕ, ಯಾವಾಗ ಪ್ರವಾಲಿಯ ಮನೆಯವರೂ ಆಕೆಯ ವಿವಾಹದ ಬಗ್ಗೆ ಪ್ರಸ್ತಾಪವೆತ್ತತೊಡಗಿದೊಡನೆ, ಇಬ್ಬರಿಗೂ ತಕ್ಷಣವೇ ತಮ್ಮ ಸಂಬಂಧದ ಬಗ್ಗೆ ತಮ್ಮ ಮನೆಯವರಲ್ಲಿ ಅರಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಅಲ್ಲದೇ ಮಾಯಾಂಕ್ ಗುಜರಾತ್‌ನ ಸಂಪ್ರದಾಯವಾದಿ ಕುಟುಂಬಕ್ಕೆ ಸೇರಿದ ಯುವಕನಾಗಿದ್ದರಿಂದ ಇಬ್ಬರ ಮನೆಯವರಿಂದಲೂ ವಿರೋಧ ಎದುರಿಸಬೇಕಾಗಿ ಬರಬೇಕೆಂದು ಇಬ್ಬರೂ ನಿರೀಕ್ಷಿಸಿದ್ದರು.

ಆದರೆ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು

ಆದರೆ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು

ಆದರೆ ಇಬ್ಬರೂ ನಿರೀಕ್ಷಿಸಿದುದಕ್ಕೂ ವ್ಯತಿರಿಕ್ತವಾದ ಪ್ರತಿಕ್ರಿಯೆ ವ್ಯಕ್ತಗೊಂಡಿತ್ತು. ಮಾಯಾಂಕ್ ನ ಮನೆಯವರಿಗೆ ಪ್ರವಾಲಿಯನ್ನು ಸೊಸೆಯಾಗಿ ಸ್ವೀಕರಿಸಲು ಯಾವುದೇ ಅಭ್ಯಂತರವಿರಲಿಲ್ಲ, ಬದಲಿಗೆ ಅವರಿಗೂ ತುಂಬಾ ಸಂತೋಷವೇ ಆಗಿತ್ತು. ಪ್ರವಾಲಿಯ ಮನೆಯವರೂ ಒಪ್ಪಿಗೆ ನೀಡಿದರು. ಆದರೆ ಈ ಸಂಬಂಧದಿಂದ ಅತ್ಯಂತ ಹೆಚ್ಚು ಸಂತುಷ್ಟರಾದ ದಂಪತಿಗಳೆಂದರೆ ಪ್ರವಾಲಿಯ ಅಕ್ಕ-ಭಾವ ಆಗಿದ್ದರು.

ಆ ದೊಡ್ಡ ದಿನ ಕಡೆಗೂ ಬಂದಿತ್ತು

ಆ ದೊಡ್ಡ ದಿನ ಕಡೆಗೂ ಬಂದಿತ್ತು

ಇಂದು, ಗುರುಹಿರಿಯರ ಆಶೀರ್ವಾದದೊಂದಿಗೆ ಪ್ರವಾಲಿ ಮತ್ತು ಮಾಯಾಂಕ್ ವಿವಾಹಬಂಧನಕ್ಕೆ ಒಳಗಾಗಿದ್ದಾರೆ ಹಾಗೂ ಎರಡೂ ಕುಟುಂಬಗಳ ಸದಸ್ಯರು ಮತ್ತೊಮ್ಮೆ ಒಂದೆಡೆ ಸೇರಿದ್ದಾರೆ. ಹಿಂದಿನ ಮದುವೆಯಲ್ಲಿಯೇ ಈ ವಿವಾಹ ಅಂಕುರಗೊಂಡಂತೆ ಈ ವಿವಾಹದಲ್ಲಿಯೂ ಮುಂದಿನ ಇನ್ನೊಂದು ವಿವಾಹ ಅಂಕುರಗೊಳ್ಳಬಹುದು. ಇದೇನೂ ಇಂದು ನಿನ್ನೆಯ ಕಥೆಯಲ್ಲ, ನೂರಾರು ವರ್ಷಗಳಿಂದ ನಡೆದ ವಿವಾಹಗಳೆಲ್ಲವೂ ಹಿಂದಿನ ವಿವಾಹದಿಂದ ಪ್ರಭಾವಿತವಾಗಿವೆ ಎಂದೇ ತಿಳಿದುಕೊಳ್ಳಬಹುದು. ಅಂದಹಾಗೆ, ನವದಂಪತಿಗಳಿಗೆ ನಮ್ಮ ಹಾರ್ದಿಕ ಅಭಿನಂದನೆಗಳು ಮತ್ತು ಮುಂದಿನ ಜೀವನ ಸುಖಕರ ಮತ್ತು ಯಶಸ್ವಿಯಾಗಿರಲಿ ಎಂದು ಹಾರೈಸುತ್ತೇವೆ.

English summary

Love Story: How Destiny Connects Two People

Marriages are made in heaven, or so they say. However, in the Indian context, marriages are celebrated in all pomp and show. In fact, it will not be an exaggeration to say that a father saves up a lifetime of his earnings to be able to afford the dream marriage for his daughter. Whether this is a good thing or not is something that remains controversial. However, the fact is that Indian marriages are where you meet a lot of people who are from similar background as that of you.
Story first published: Monday, March 5, 2018, 12:48 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more