For Quick Alerts
ALLOW NOTIFICATIONS  
For Daily Alerts

ಅವನಲ್ಲಿ ಇಂತಹ ಗುಣಗಳಿದ್ದರೆ, ಆತ ಮೋಸ ಮಾಡುತ್ತಿದ್ದಾನೆ ಎಂದರ್ಥ!!

By Hemanth
|

ಲಿವ್ ಇನ್ ರಿಲೇಷನ್ ಎನ್ನುವ ಪದ ಕೇಳಿದರೆ ಹೆಚ್ಚಿನ ಸಂಪ್ರದಾಯವಾದಿಗಳು ಈಗಲೂ ಉರಿದು ಬೀಳುತ್ತಾರೆ. ಭಾರತದಲ್ಲಿ ಇದನ್ನು ಬಹುಪಾಲು ಜನರು ಒಪ್ಪಿಕೊಳ್ಳುವುದು ಇಲ್ಲ. ಆದರೆ ಹಿಂದಿಕ್ಕಿಂತ ನಮ್ಮಲ್ಲಿ ಹಲವಾರು ಸಂಪ್ರದಾಯಗಳು ಬದಲಾಗುತ್ತಾ ಬಂದಿದೆ. ಇದರಲ್ಲಿ ಪ್ರಮುಖವಾಗಿ ಎಂದರೆ ಹಿಂದೆ ಯಾವುದೇ ಸಂಪ್ರದಾಯಸ್ಥ ಮನೆಯ ಹೆಣ್ಣು ಅಥವಾ ಗಂಡು ಪ್ರೀತಿಸುವಂತಿರಲಿಲ್ಲ, ಅದರಲ್ಲೂ ಜತೆಯಾಗಿ ತಿರುಗುವುದಂತೂ ದೂರದ ಮಾತು.

ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ ಎನ್ನುವುದಕ್ಕೆ ಈಗ ಸಂಪ್ರದಾಯಸ್ಥ ಮನೆಯ ಗಂಡು ಹಾಗೂ ಹೆಣ್ಣು ಮಕ್ಕಳು ಪ್ರೀತಿಸುವುದು, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಬದುಕುವುದನ್ನು ಕಾಣಬಹುದು. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಕೆಲವೊಂದು ವಿಚಾರಗಳು ನಿಜವಾಗಿಯೂ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದರಲ್ಲಿ ಗಂಡು ಹಾಗೂ ಹೆಣ್ಣು ಪರಸ್ಪರ ಅರ್ಥ ಮಾಡಿಕೊಳ್ಳುವ ಅವಕಾಶವಿದೆ.

ಇಲ್ಲಿ ಇನ್ನೊಂದು ಸಮಸ್ಯೆಯೆಂದರೆ ತಮಗೆ ಬೋರ್ ಆದಾಗ ಹೆಣ್ಣು ಅಥವಾ ಗಂಡು ತಮ್ಮ ಸಂಗಾತಿಯನ್ನು ಬಿಟ್ಟು ಹೋಗುವುದು. ಇದು ಸಮಾಜಕ್ಕೆ ದೊಡ್ಡ ಮಾರಕ. ಕೆಲವೊಂದು ಸಲ ಹುಡುಗ ಅಥವಾ ಹುಡುಗಿ ಇನ್ನೊಂದು ಸಂಬಂಧದಲ್ಲಿ ಬೀಳುವುದು ದೊಡ್ಡ ಅಪಾಯ. ಆದರೆ ಹೆಚ್ಚಾಗಿ ಹುಡುಗಿಯರು ಇದರಲ್ಲಿ ತಮಗೆ ಮೋಸ ಆಗುತ್ತಿದೆ ಎಂದು ತಿಳಿಯಲು ತುಂಬಾ ಹೆಣಗಾಡುತ್ತಾರೆ. ತನಗೆ ಮೋಸ ಆಗಿದೆ ಎಂದು ತಿಳಿಯುವ ಹೊತ್ತಿಗೆ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿರುವುದು.

ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಹುಡುಗಿಯರಿಗೆ ಸಾಧ್ಯವಾಗದೆ ಇರುವ ಕಾರಣದಿಂದ ಅನಾಹುತಗಳು ಸಂಭವಿಸುವುದು. ಆದರೆ ಅಪಾಯ ಬರುವ ಮೊದಲೇ ಅದನ್ನು ತಿಳಿದುಕೊಂಡರೆ ಅದು ಸೂಕ್ತ. ಇದಕ್ಕೆ ಹುಡುಗಿಯರು ತಮಗೆ ಮೋಸ ಆಗುತ್ತಿದೆ ಎಂದು ತಿಳಿಯುವುದು ಹೇಗೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಅರಿತುಕೊಂಡು ನೀವು ಹುಡುಗ ಮೋಸ ಮಾಡುತ್ತಿದ್ದಾನೆಯಾ ಎಂದು ತಿಳಿಯಬಹುದು....

ಮಾತನಾಡಲು ವಿಷಯವೇ ಸಿಗದಿರುವುದು

ಮಾತನಾಡಲು ವಿಷಯವೇ ಸಿಗದಿರುವುದು

ನೀವಿಬ್ಬರು ಮಾತನಾಡಲು ಹೀಗಿಗ ತುಂಬಾ ಕಡಿಮೆ ವಿಷಯಗಳು ಸಿಗುತ್ತಾ ಇದೆ. ಆರಂಭದಲ್ಲಿ ನೀವಿಬ್ಬರು ಎಷ್ಟು ಮಾತನಾಡಿದರೂ ವಿಷಯಗಳಿಗೆ ಕೊರತೆ ಆಗುತ್ತಾ ಇರಲಿಲ್ಲ. ಆದರೆ ದಿನಗಳು ಕಳೆದಂತೆ ಅದೇ ವಿಷಯಗಳ ಬಗ್ಗೆ ಮಾತನಾಡುವುದು ತುಂಬಾ ಕಡಿಮೆಯಾಗಿದೆ. ಇದರಿಂದ ನಿಮ್ಮ ಪ್ರಿಯತಮನಿಗೆ ಬೋರ್ ಆಗಬಹುದು ಮತ್ತು ನಿಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಬಹುದು. ನಿಮ್ಮಿಬ್ಬರ ಮಧ್ಯೆ ಮಾತುಕತೆ ಕಡಿಮೆಯಾದಾಗ ಆತನಿಗೆ ಮೋಸ ಮಾಡಲು ದಾರಿಯಾಗುವುದು.

ನೀವು ಮೊದಲಿನ ಹಾಗೆ ಇಲ್ಲ!

ನೀವು ಮೊದಲಿನ ಹಾಗೆ ಇಲ್ಲ!

ಇದು ಕೆಟ್ಟ ವಿಚಾರವೇನಲ್ಲ, ಸಮಯ ಕಳೆದಂತೆ ಜೀವನದಲ್ಲಿ ಪ್ರೌಢರಾಗುತ್ತಾ ಬದಲಾವಣೆಗಳು ಬರುವುದು. ಇದು ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುವುದು. ಬದಲಾವಣೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಬದಲಾವಣೆ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಹಾಗೂ ಭಾವನಾತ್ಮಕವಾಗಿಯೂ ಆಗುವುದು. ಸಮಾಜದಲ್ಲಿ ಇದನ್ನು ಎಲ್ಲರೂ ಒಪ್ಪಿಕೊಳ್ಳುವರು. ನೀವು ಮೊದಲು ಹೇಗಿದ್ದೀರೋ ಆಗ ನಿಮ್ಮನ್ನು ಪ್ರೀತಿಸಿದ ವ್ಯಕ್ತಿ ಈಗಲೂ ಪ್ರೀತಿಸುವುದನ್ನು ಮುಂದುವರಿಸಬೇಕೆಂದಿಲ್ಲ. ನಿಮ್ಮ ಬದಲಾಗಿರುವ ವ್ಯಕ್ತಿತ್ವದಿಂದ ಆತ ಬದಲಾವಣೆ ಬಯಸಬಹುದು ಮತ್ತು ಇದರಿಂದ ಆತ ನಿಮಗೆ ಮೋಸ ಮಾಡಬಹುದು.

ವೃತ್ತಿಗೆ ಆದ್ಯತೆ

ವೃತ್ತಿಗೆ ಆದ್ಯತೆ

ಇದು ಇಬ್ಬರಲ್ಲೂ ನಡೆಯಬಹುದಾಗಿದೆ. ವೃತ್ತಿ ಬದುಕಿನಲ್ಲಿ ಅದೆಷ್ಟು ವ್ಯಸ್ತರಾಗಿರುವಿರಿ ಎಂದರೆ ನೀವು ಅವರ ಇರುವಿಕೆಯನ್ನೇ ಮರೆಯುವಿರಿ. ಆತ ಕೂಡ ಇದೇ ರೀತಿ ತನ್ನ ವೃತ್ತಿಯಲ್ಲಿ ಹೆಚ್ಚು ಸಮಯ ವ್ಯಯಿಸುವ ಮೂಲಕ ನಿಮಗೆ ಸಮಯ ನೀಡಲು ಸಾಧ್ಯವಾಗದೆ ಇರಬಹುದು. ಇನ್ನೊಂದು ಕಡೆಯಲ್ಲಿ ಆತ ಅಥವಾ ಆಕೆ ವೃತ್ತಿಯಲ್ಲಿ ಹೆಚ್ಚು ಸಾಧನೆ ಮಾಡಿದಾಗ ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. (ನೀವು ವೃತ್ತಿಯಲ್ಲಿ ಉನ್ನತಿ ಪಡೆದರೆ ಆಗ ಆತನ ಪುರುಷ ಅಹಂಗೆ ಪೆಟ್ಟು ಬೀಳುವುದು. ಇದರಿಂದ ಆತ ನಿಮಗೆ ಮೋಸ ಮಾಡಲು ಮುಂದಾಗಬಹುದು.)

ಬದ್ಧತೆಯ ಭೀತಿ

ಬದ್ಧತೆಯ ಭೀತಿ

ಹುಡುಗರು ಯಾವಾಗಲೂ ಎಲ್ಲವೂ ಸರಿಯಾಗಿದ್ದಾಗ ಅದನ್ನು ತುಂಬಾ ಆನಂದಿಸುವರು. ಪರಿಸ್ಥಿತಿ ಕೆಟ್ಟದಾದಾಗ ಅವರು ಯೂಟರ್ನ್ ತೆಗೆದುಕೊಳ್ಳುವರು. ನಿಮ್ಮನ್ನು ಆತನ ಮನೆಯವರು ಒಪ್ಪಿಕೊಳ್ಳುವುದಿಲ್ಲ ಇಂತಹ ಹಲವಾರು ಕಾರಣಗಳನ್ನು ಅವರು ಹೇಳಬಹುದು. ಇದರಿಂದ ಆತ ನಿಮಗೆ ಮೋಸ ಮಾಡಲು ಆರಂಭಿಸಬಹುದು. ಇದು ವೈಯಕ್ತಿಕವಾಗಿ ಯಾವುದೇ ಸಮಸ್ಯೆಯಲ್ಲ, ಬದ್ಧತೆಯ ಭೀತಿ ಮತ್ತು ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು ಹಾಕುವುದು ಇದಕ್ಕೆ ಕಾರಣವಾಗಿದೆ.

ದೈಹಿಕ ಆಕರ್ಷಣೆ ಕಳೆದುಕೊಂಡಿದ್ದೀರಾ?

ದೈಹಿಕ ಆಕರ್ಷಣೆ ಕಳೆದುಕೊಂಡಿದ್ದೀರಾ?

ವಯಸ್ಸಾಗುತ್ತಾ ಹೋದಂತೆ ದೇಹವು ತನ್ನ ಸೌಂದರ್ಯ ಕಳೆದುಕೊಳ್ಳುವುದು ಸಹಜ. ನೀವು ಕೆಲವು ವರ್ಷದಲ್ಲಿ ಹೆಚ್ಚಿನ ತೂಕ ಏರಿಸಿಕೊಂಡಿರಬಹುದು ಅಥವಾ ಕಳೆದುಕೊಂಡಿರಬಹುದು.(ಬೇರೆ ಯಾವುದೋ ಕಾರಣಕ್ಕೆ ನಿಮ್ಮ ದೇಹದಲ್ಲಿ ಬದಲಾವಣೆಗಳು ಆಗಿರಬಹುದು). ಆದರೆ ಹುಡುಗರು ಇದನ್ನು ಇಷ್ಟಪಡುವುದಿಲ್ಲ. ನಿಮ್ಮ ದೈಹಿಕ ಸೌಂದರ್ಯ ನೋಡಿ ಆತ ನಿಮ್ಮತ್ತ ಆಕರ್ಷಿತನಾಗಿದ್ದರೆ ಖಂಡಿತವಾಗಿಯೂ ಆತ ನಿಮಗೆ ಮೋಸ ಮಾಡುತ್ತಾನೆ. ಯಾಕೆಂದರ ಆತನಿಗೆ ನಿಮ್ಮ ಮೇಲಿನ ಆಸಕ್ತಿ ಕಳೆದುಹೋಗುವುದು.

ಇಬ್ಬರು ದೂರ... ದೂರ...

ಇಬ್ಬರು ದೂರ... ದೂರ...

ನಿಮ್ಮ ಸಂಬಂಧವು ಆರಂಭವಾದ ದಿನಗಳಲ್ಲಿ ನೀವಿಬ್ಬರು ಒಂದೇ ನಗರ ಮತ್ತು ಊರಿನಲ್ಲಿ ಇದ್ದೀರಿ. ಅದೇ ಸಂಬಂಧವು ಬೆಳೆದಂತೆ ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಬೇರೆ ನಗರಕ್ಕೆ ಹೋಗಬೇಕಾಗಿ ಬರಬಹುದು. ಇದರಿಂದ ಸಂಬಂಧದ ಮೇಲೆ ತುಂಬಾ ಒತ್ತಡ ಬೀಳುವುದು ಮತ್ತು ಇದನ್ನು ನಿಭಾಯಿಸಲು ಹೆಚ್ಚಿನವರಿಗೆ ಸಾಧ್ಯವಾಗಲ್ಲ. ಇಂತಹ ಸಂದರ್ಭದಲ್ಲಿ ಹುಡುಗ ಯಾವಾಗಲೂ ಮೋಸ ಮಾಡುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

ಪ್ರಿಯತಮ ನಿಮಗಿಂತಲೂ ಸುಂದರ

ಪ್ರಿಯತಮ ನಿಮಗಿಂತಲೂ ಸುಂದರ

ನಿಮ್ಮ ಪ್ರಿಯತಮನಿಗೆ ಹೋಲಿಸಿದರೆ ನಿಮ್ಮ ಸೌಂದರ್ಯವು ಅಷ್ಟಕಷ್ಟೇ ಇರುವುದು. ಆತ ನಿಮ್ಮನ್ನು ಪ್ರೀತಿಸುತ್ತಾ ಇರುವುದು ನಿಮ್ಮ ಕನಸು ನನಸಾದಂತೆ ಮಾಡಿದೆ. ನಿಮ್ಮೊಂದಿಗೆ ಸಂಬಂಧದಲ್ಲಿ ಇರಲು ಪ್ರಿಯತಮ ಹೆಚ್ಚಿನ ಹೊಂದಾಣಿಕೆ ಮಾಡಿಕೊಂಡಿದ್ದಾನೆ ಎಂದು ನಿಮಗೂ ತಿಳಿದಿದೆ. ಆದರೆ ಇದು ಸದಾ ಕಾಲ ಹೀಗೆ ಇರಲು ಸಾಧ್ಯವಿಲ್ಲ. ಬಲವಂತದಿಂದ ಆತ ನಿಮ್ಮೊಂದಿಗೆ ಇರಬಹುದು. ಸಮಯ ಕಳೆದಂತೆ ಆತ ನಿಮ್ಮನ್ನು ಬಿಟ್ಟು ಬೇರ ಹುಡುಗಿಯನ್ನು ಹುಡುಕಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ಎಚ್ಚರವಾಗಿರುವುದು ಅಗತ್ಯ.

 ಆತ ಪ್ಲೇ ಬಾಯ್ (ಚಪಲಚೆನ್ನಿಗ)!

ಆತ ಪ್ಲೇ ಬಾಯ್ (ಚಪಲಚೆನ್ನಿಗ)!

ಇದು ಕೇಳಲು ತುಂಬಾ ವಿಚಿತ್ರವೆನಿಸಿದರೂ ಕೆಲವು ಹುಡುಗರು ಯಾವಾಗಲೂ ಹುಡುಗಿಯರಿಗೆ ಮೋಸ ಮಾಡುವುದನ್ನು ಎದುರು ನೋಡುತ್ತಾ ಇರುತ್ತಾರೆ. ಅವರು ಒಬ್ಬಳು ಹುಡುಗಿಯೊಂದಿಗೆ ಯಾವತ್ತೂ ನಿಲ್ಲುವುದಿಲ್ಲ. ನಿಮ್ಮ ಪ್ರಿಯತಮ ಈಗಾಗಲೇ 6-7 ಹುಡುಗಿಯರಿಗೆ ಮೋಸ ಮಾಡಿದ್ದಾನೆಂದು ತಿಳಿದರೆ ಆಗ ನಿಮಗೂ ಇದೇ ಪರಿಸ್ಥಿತಿ ಬರಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು.

English summary

Is Your Boyfriend Cheating On You, But Why?

As the years pass on, a lot of changes are being noted in the social scene. One notable change in this regard is the wider acceptance of relationships. Till a generation ago it was unfathomable that guys and girls of decent households will date each other. Living in together before marriage was a strict 'no-no'. These days the situation is different. With a number of stay in options available for people of opposite sex to live together, it is easier than ever before to get into a relationship.
X
Desktop Bottom Promotion